Sewing Machine:-
ಹೆಣ್ಣು ಮಕ್ಕಳು ಕೂಡ ಸ್ಮಾವಲಂಬಿಗಳಾಗಿ ಬದುಕಬೇಕು, ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಆದರೆ ಎಲ್ಲಾ ಹೆಣ್ಣು ಮಕ್ಕಳು ವಿದ್ಯಾವಂತರಾಗಿರುವುದಿಲ್ಲ ಮತ್ತು ವಿದ್ಯಾವಂತರಾಗಿದ್ದರು ಎಲ್ಲರಿಗೂ ಪಟ್ಟಣ-ನಗರ ಪ್ರದೇಶಗಳಿಗೆ, ದೂರದ ಕಚೇರಿ / ಕೆಲಸದ ಸ್ಥಳಗಳಿಗೆ ಪ್ರಯಾಣ ಮಾಡಿ ಉದ್ಯೋಗ ಮಾಡುವಂತಹ ಅವಕಾಶ ಹಾಗೂ ಅನುಕೂಲತೆಗಳು ಇರುವುದಿಲ್ಲ.
ಆದರೂ ಕೂಡ ಇರುವ ಸೌಕರ್ಯವನ್ನೇ ಬಳಸಿಕೊಂಡು ತಮ್ಮ ಪ್ರತಿಭೆಯಿಂದ ಮೇಲ್ಬರುವ ಬಗ್ಗೆ ಚಿಂತಿಸುವ ಹೆಣ್ಣು ಮಕ್ಕಳಿಗೆ ಸರ್ಕಾರದ ಅನೇಕ ಯೋಜನೆಗಳು ಅನುಕೂಲತೆ ಮಾಡಿಕೊಡುತ್ತವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಹಳ ಆಸಕ್ತಿವುಳ್ಳ ಟೈಲರಿಂಗ್ ಕ್ಷೇತ್ರವನ್ನು ಆರಿಸಿಕೊಂಡರೆ.
ಸರ್ಕಾರದ ಕಡೆಯಿಂದ ಉಚಿತ ಹೊಲಿಗೆ ಯಂತ್ರದ ಜೊತೆಗೆ ಸರ್ಕಾರದ ಇನ್ನಿತರ ಯೋಚನೆಗಳ ಪ್ರಯೋಜನಗಳು ಕೂಡ ಸಿಗುತ್ತವೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯ ಸರ್ಕಾರವು ಬಡ ಹೆಣ್ಣು ಮಕ್ಕಳಿಗಾಗಿ ಉಚಿತ ಹೋಲಿಗೆ ಯಂತ್ರ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಮತ್ತು ಅರ್ಹರಿಂದ ಅರ್ಜಿ ಕೂಡ ಆಹ್ವಾನ ಮಾಡಿದೆ.
ಈ ಸುದ್ದಿ ಓದಿ:- Farmer: ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ರೈತರಿಗೆ ಗುಡ್ ನ್ಯೂಸ್.!
ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶದ ಗಡುವು ಮುಕ್ತಾಯಗೊಳ್ಳಲು ಸಮೀಪಿಸಿತ್ತು ಆದರೆ ಮಾಹಿತಿ ಕೊರತೆಯಿಂದ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಹಲವರು ಆಸಕ್ತಿ ಇದ್ದರೂ ಅರ್ಜಿ ಸಲ್ಲಿಸಲು ಸಮಸ್ಯೆ ಆಗಿರಬಹುದು ಎಂಬುದನ್ನು ಮನಗಂಡ ಸರ್ಕಾರವು ಇನ್ನಷ್ಟು ದಿನಗಳವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ ದಿನಾಂಕ ವಿಸ್ತರಣೆ ಮಾಡಿದೆ.
ಈ ಬಾರಿ ತಪ್ಪದೆ ರಾಜ್ಯದ ಹೆಣ್ಣು ಮಕ್ಕಳು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿ ಎನ್ನುವುದು ಈ ಅಂಕಣದ ಆಶಯ. ಇದರೊಂದಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು? ಇತರೆ ಕಂಡಿಷನ್ ಗಳೇನು? ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು? ಇತ್ಯಾದಿ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಉಚಿತ ಹೊಲಿಗೆ ಯಂತ್ರ ಯೋಜನೆ
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಅರ್ಜಿ ಸಲ್ಲಿಸುವ ಮಹಿಳೆಯು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
* ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷ ಮೇಲ್ಪಟ್ಟು 49 ವರ್ಷದ ಒಳಗಿರಬೇಕು
* ಕುಟುಂಬದ ಆದಾಯವು ರೂ 12,000 ಕ್ಕಿಂತ ಕಡಿಮೆ ಇರಬೇಕು
* ಟೈಲರಿಂಗ್ ತರಬೇತಿ ಪಡೆದಿದ್ದು ಈ ಕ್ಷೇತ್ರದಲ್ಲಿ ಉದ್ಯಮ ಮಾಡುವಷ್ಟು ಪ್ರತಿಭಾನ್ವಿತರಾಗಿರಬೇಕು
*ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳಿಂದ ಬರುವ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ಯೋಜನೆಯ ಅಧಿಕೃತ ವೆಬ್ಸೈಟ್ ರಾಷ್ಟ್ರೀಯ ಪೋರ್ಟಲ್ ಆಫ್ ಇಂಡಿಯಾ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು
* ಅರ್ಜಿ ಫಾರಂ ಲಿಂಕ್ ಕ್ಲಿಕ್ ಮಾಡಿ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಅಪ್ಲಿಕೇಶನ್ ಹಾಕುವ ಪ್ರಕ್ರಿಯೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪಡೆದುಕೊಳ್ಳಿ.
ಬೇಕಾಗುವ ದಾಖಲೆಗಳು:-
* ಅಭ್ಯರ್ಥಿಯ ಆಧಾರ್ ಕಾರ್ಡ್ ಪ್ರತಿ
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ವಯಸ್ಸಿನ ಧೃಡೀಕರಣ ಪ್ರಮಾಣ ಪತ್ರ
* ಟೈಲರಿಂಗ್ ತರಬೇತಿ ಪಡೆದಿರುವ ಪ್ರಮಾಣ ಪತ್ರ
* ಅಂಗವಿಕಲ ಅಥವಾ ಇನ್ನಿತರ ಯಾವುದೇ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದರೆ ಸಂಬಂಧಪಟ್ಟ ಪ್ರಮಾಣ ಪತ್ರ
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಸಹಿ ಮತ್ತು
* ಇನ್ನಿತರ ಪ್ರಮುಖ ದಾಖಲೆಗಳು.
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಸೆಪ್ಟೆಂಬರ್, 2024.