Mobile Sim Card:
ಹಿಂದಿನ ಕಾಲದಲ್ಲಿ ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎನ್ನುವ ಗಾದೆ ಪ್ರಚಲಿತದಲ್ಲಿತ್ತು. ಅದೇ ಗಾದೆಯನ್ನು ಈಗ ಮಾಡರ್ನ್ ಜಗತ್ತಿಗೆ ಬದಲಿಸಿ ಮಾಡಲು ಉದ್ಯೋಗ ಇಲ್ಲದಿದ್ದರೂ ಕೈಯಲ್ಲಿ ಮೊಬೈಲ್ ಎಂದು ಬದಲಿಸಬಹುದು. ಯಾಕೆಂದರೆ ಅಷ್ಟರ ಮಟ್ಟಕ್ಕೆ ಎಲ್ಲರ ಕೈಗಳಿಗೂ ಈ ಮೊಬೈಲ್ ಗಳು ಭದ್ರವಾಗಿ ಸೇರಿವೆ. ಒಂದು ಹಂತದಲ್ಲಿ ಮೊಬೈಲ್ ಇಲ್ಲದಿದ್ದರೆ ದಿನನಿತ್ಯದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಬದುಕನ್ನು ಈ ಮೊಬೈಲ್ ಗಳು ನಿಯಂತ್ರಣಕ್ಕೆ ತೆಗೆದುಕೊಂಡು ಬಿಟ್ಟಿವೆ ಎಂದೇ ಹೇಳಬಹುದು.
ಅಲಾರಾಂ, ಡೈರಿ, ಕ್ಯಾಮೆರಾ, ರೇಡಿಯೋ, ಟಿವಿ, ವಿಡಿಯೋ ಗೇಮ್ ಗಳು ಇತ್ಯಾದಿ ಮಾತ್ರವಲ್ಲದೆ ಸಂವಹನಕ್ಕಾಗಿ ಬಳಸಲಾಗುವ ಕರೆಗಳು, ಸಂದೇಶ ಇ-ಮೇಲ್ ವಾಟ್ಸಪ್ ಸೋಶಿಯಲ್ ಮೀಡಿಯಾ ಈ ಉದ್ದೇಶಗಳಿಗೂ ಮೊಬೈಲ್ ಬೇಕೇ ಬೇಕು, ಹಾಗೆಯೇ ಮೊಬೈಲ್ ಜೊತೆ ಅಷ್ಟೇ ಮುಖ್ಯವಾಗಿ ಸಿಮ್ ಕಾರ್ಡ್ ಕೂಡ ಬೇಕು.
ಹೀಗೆ ಮೊಬೈಲ್ ಬಳಕೆ ಮಾಡುವುದರೊಂದಿಗೆ ಪ್ರತಿಯೊಬ್ಬರು ಆಗಾಗ ಸರ್ಕಾರ ತರುವ ನಿಯಮಗಳ ಬಗ್ಗೆ ಗಮನವಿಟ್ಟು ತಿಳಿದುಕೊಳ್ಳಲೇಬೇಕು. ಟೆಲಿಕಾಂ ಉದ್ಯಮದ ಪ್ರತಿಯೊಂದು ನಿಯಂತ್ರಣವನ್ನು ನಿಯಂತ್ರಿಸುವ ಮತ್ತು ಜಾರಿಗೊಳಿಸುವ ಜವಾಬ್ದಾರಿ ಮತ್ತು ಅಧಿಕಾರವನ್ನು ಸರ್ಕಾರಿ ಸ್ವಾಮ್ಯದ TRAI ಸಂಸ್ಥೆ ಹೊಂದಿದೆ. ಈಗ TRAI ಗ್ರಾಹಕರ ಅನುಕೂಲತೆ ಉದ್ದೇಶದಿಂದ ಹೊಸದೊಂದು ನಿಯಮವನ್ನು ಜಾರಿಗೆ ತಂದಿದೆ.
ಇದು ಅನುಕೂಲದ ಜೊತೆಗೆ ಇನ್ನಷ್ಟು ಗ್ರಾಹಕರಿಗೆ ಹೊರೆ ಕೂಡ ಆಗುತ್ತಿದೆ ಎಂದು ಭಾವಿಸಲಾಗಿದೆ. ಒಂದು ವೇಳೆ ಈ ನಿಯಮ ತಿಳಿದುಕೊಳ್ಳದೆ ಇದ್ದಲ್ಲಿ ನಿಮ್ಮ ಜೇಬಿಗೂ ಕೂಡ ಕತ್ತರಿ ಬೀಳುವ ಸಾಧ್ಯತೆ ಇದೆ. ಹಾಗಾಗಿ ವಿಷಯ ಏನೆಂದು ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.
ಮೊಬೈಲ್ ಎಂದ ಮೇಲೆ ಈ ಮೇಲೆ ತಿಳಿಸಿದ ಎಲ್ಲಾ ಅನುಕೂಲತೆ ಪಡೆಯಲು ಆ ಮೊಬೈಲ್ ಗೆ ಸಿಮ್ ಕಾರ್ಡ್ ಕೂಡ ಹಾಕಲೇಬೇಕು ಇಲ್ಲವಾದಲ್ಲಿ ದೇಹಕ್ಕೆ ಉಸಿರು ಇಲ್ಲ ಎನ್ನುವ ರೀತಿ ಆಗಿ ಬಿಡುತ್ತದೆ. ಆದರೆ ಈಗ ಬಹುತೇಕ ಎಲ್ಲ ಮೊಬೈಲ್ ಗಳಲ್ಲಿ ಕೂಡ ಎರಡು ಸಿಮ್ ಗಳನ್ನು ಬಳಸುವ ಆಪ್ಷನ್ ಇದೆ. ಸಾಮಾನ್ಯವಾಗಿ ಮೊದಲಿಗೆ 2 ಆಪ್ಷನ್ ಇರುವುದರಿಂದ 2 ಸಿಮ್ ಕಾರ್ಡ್ ಖರೀದಿಸುತ್ತಾರೆ.
ಆದರೆ ಕೆಲವು ದಿನಗಳು ಕಳೆದ ಬಳಿಕ ಎರಡಕ್ಕೂ ಕೂಡ ರಿಚಾರ್ಜ್ ಮಾಡಿಸುವುದು ಹೊರೆಯಾಗುತ್ತದೆ ಎನ್ನುವ ಕಾರಣಕ್ಕೆ ಒಂದನ್ನು ಹಾಗೆ ಉಳಿಸಿ ಮತ್ತೊಂದನ್ನು ಮಾತ್ರ ರಿಚಾರ್ಜ್ ಮಾಡಿ ಬಳಸುತ್ತಾರೆ. ಹೀಗೆ ರಿಚಾರ್ಜ್ ಮಾಡಿಸಿಕೊಳ್ಳದೆ ಉಳಿಸಿಕೊಂಡ ಸಂಖ್ಯೆಗಳನ್ನು ಯಾವುದೋ ಒಂದು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬಳಸುತ್ತಾರೆ.
ನೀವು ಕೂಡ ಈ ರೀತಿಯಾಗಿ ಮಾಡುತ್ತಿದ್ದರೆ ಇನ್ನು ಮುಂದೆ ನಿಮಗೆ ದಂಡ ಬೀಡಬಹುದು. TRAI ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ದೀರ್ಘಕಾಲದವರೆಗೆ ರೀಚಾರ್ಜ್ ಮಾಡದ ಸಂಖ್ಯೆಯನ್ನು ರದ್ದುಗೊಳಿಸಿದ ನಂತರವೂ ಮೊಬೈಲ್ ಫೋನ್‌ನಲ್ಲಿ ಇಟ್ಟುಕೊಂಡಿರೆ ದಂಡ ವಸೂಲಿ ಮಾಡಲಾಗುತ್ತದೆ.
ಕಾರಣ ನೀವು ಖರೀದಿಸಿದ ಸಿಮ್ ಕಾರ್ಡ್ ಗೆ ರೀಚಾರ್ಜ್ ಮಾಡದೇ ಇರುವುದರಿಂದ ಆ ಕಂಪನಿಗೂ ಸಾಕಷ್ಟು ನಷ್ಟವಾಗುವ ಸಂಭವ ಇರುವುದರಿಂದ ಹೀಗೆ ನಿಯಮ ರೂಪಿಸಿ ದಂಡವನ್ನು ನವೀಕರಿಸುವ ಕೆಲಸ ಮಾಡಲಾಗುತ್ತಿದೆ. ಇದರೊಂದಿಗೆ ಮತ್ತೊಂದು ಮುಖ್ಯ ಕಾರಣ ಎಂದರೆ ಕೆಲವು ಪ್ರೀಮಿಯಂ ಮೊಬೈಲ್ ಸಂಖ್ಯೆಗಳ ಖರೀದಿಗೆ ಹರಾಜು ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿದುಬಂದಿದೆ.
ಕೆಲವು ಗಣ್ಯ ವ್ಯಕ್ತಿಗಳು ಅದೃಷ್ಟ ಸಂಖ್ಯೆ ಬಯಸಿ ಅದೇ ಸಂಖ್ಯೆಯನ್ನು ಆಯ್ಕೆ ಮಾಡಲು ಹರಾಜಿನಲ್ಲಿ ಭಾಗಿಯಾಗುತ್ತಾರೆ, ಇದರಲ್ಲಿ ನೀವು ಖರೀದಿಸಿ ಬಳಸದೆ ಉಳಿದ ಸಂಖ್ಯೆಯು ಸೇರಿರುವುದರಿಂದ ಕಂಪನಿಗೆ ನಷ್ಟವಾಗುತ್ತದೆ. ಇದನ್ನೆಲ್ಲ ಗಮನಿಸಿ ಹೊಸ ನಿಯಮ ಜಾರಿಗೆ ತರಲಾಗಿದೆ ಸಂಸ್ಥೆಯು ಅಧಿಕೃತವಾಗಿ ಜಾರಿಗೊಳಿಸಿದ ನಿಯಮಗಳ ಪ್ರಕಾರ ನೀವು ದೀರ್ಘಕಾಲದವರೆಗೆ ಸಕ್ರಿಯವಾಗಿರದ ಸಂಖ್ಯೆಯನ್ನು ಬಳಸಿದರೆ, ನೀವು ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ.
ಈ ವಿಚಾರದಲ್ಲಿ ಭಾರತದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ, ಸಿಂಗಾಪುರ, ಬೆಲ್ಜಿಯಂ, ಫಿನ್‌ಲ್ಯಾಂಡ್, ಯುನೈಟೆಡ್ ಕಿಂಗ್‌ಡಮ್, ಸ್ವಿಟ್ಜರ್ಲೆಂಡ್, ಪೋಲೆಂಡ್, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ಪ್ರಮುಖ ದೇಶಗಳಲ್ಲಿ ಕೂಡ ಈ ರೀತಿಯ ಸಿಮ್ ಕಾರ್ಡ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ನಿಯಮ ಜಾರಿಯಲ್ಲಿ ಇದೆ ಎನ್ನುವುದು ಕೂಡ ತಿಳಿದಿರಲಿ.