Site: ಸೈಟ್ ಖರೀದಿಗೂ ಸಿಗಲಿದೆ ಸಾಲ.! ಬಡ್ಡಿ ಎಷ್ಟು, ಸಾಲ ಎಷ್ಟು ಸಿಗುತ್ತೆ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

Site:

ಪ್ರತಿಯೊಬ್ಬರಿಗೂ ಜೀವನದಲ್ಲಿ ತಾನೊಂದು ಸ್ವಂತ ಸೂರು ಹೊಂದಬೇಕು ಎಂಬುದು ಕನಸಾಗಿರುತ್ತದೆ. ಅನೇಕ ಮಂದಿ ಉದ್ಯೋಗಕ್ಕೆ ಸೇರಿ ಒಂದೆರಡು ವರ್ಷಗಳಾದ ಬಳಿಕ ವೇತನವೂ ಏರಿಕೆಯಾಗುತ್ತದೆ. ಆಗ ಅವರಿಗೆ ಈ ಆಸೆ ಮೂಡುವುದು ಸ್ವಾಭಾವಿಕ. ನಗರ ಅಥವಾ ಪಟ್ಟಣಗಳಲ್ಲೊಂದು ಸೈಟ್‌ ಖರೀದಿಸಬೇಕು. ಅಲ್ಲೊಂದು ಸ್ವಂತ ಸೂರು ಕಟ್ಟಬೇಕು ಎಂಬ ಕನಸು ಅವರದ್ದಾಗಿರುತ್ತದೆ. ಇಂದಿನ ದಿನಗಳಲ್ಲಿ ಸೈಟ್‌ ಖರೀದಿ ಅಗ್ಗವೇನಲ್ಲ. ಅದಕ್ಕಾಗಿಯೇ ಲಕ್ಷಾಂತರ ರೂ. ಬೇಕಾಗುತ್ತದೆ.

ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ ಹಣದುಬ್ಬರ (Inflation) ದ ಸಮಸ್ಯೆಯನ್ನ ಪ್ರತಿಯೊಬ್ಬ ನಾಗರಿಕರು ಕೂಡ ಅನುಭವಿಸುತ್ತಿದ್ದಾರೆ ಎನ್ನಬಹುದು. ಆದರೆ, ಈ ದುಬಾರಿ ದುನಿಯಾದಲ್ಲಿಯೂ ಕೂಡ ತಮ್ಮದೇ ಆಗಿರುವ ಸ್ವಂತ ಮನೆ (Own house) ನಿರ್ಮಾಣ ಮಾಡಿಕೊಳ್ಳುವ ಕನಸು ಹಲವರಿಗೆ ಇರುತ್ತದೆ. ಯಾಕೆಂದರೆ ಒಂದೇ ಒಂದು ಮನೆ ಇದ್ದರೂ ಸಾಕು ಅದು ಒಬ್ಬ ವ್ಯಕ್ತಿಯ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಇರುವ ಆಸ್ತಿ ಆಗಿರುತ್ತದೆ ಎಂದು ಪರಿಗಣಿಸಲಾಗಿದೆ.

WhatsApp Group Join Now
Telegram Group Join Now

ಎಲ್ಲಾ ವಸ್ತುಗಳ ದರ ಜಾಸ್ತಿ ಆಗುತ್ತಿದ್ದ ಹಾಗೆ, ಭೂಮಿ ಬೆಲೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ನೀವು ಎಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ಸೈಟ್ ಖರೀದಿ (site purchase) ಮಾಡಲು ಅವಕಾಶ ಇದೆಯೋ ಅದರ ಮೇಲೆ ಹೂಡಿಕೆ ಮಾಡಿ ಸೈಟ್ ಖರೀದಿ ಮಾಡಿ ಇಟ್ಟುಕೊಂಡರೆ ಯಾವುದೇ ಸಮಯದಲ್ಲಿ ಅದನ್ನ ಹಣದ ರೂಪದಲ್ಲಿ ಬಳಸಿಕೊಳ್ಳಬಹುದು.

ಸೈಟ್ ಖರೀದಿ ದುಬಾರಿ!

ಒಂದು ಮನೆ ನಿರ್ಮಾಣ ಮಾಡಿಕೊಳ್ಳುವುದು ದುಬಾರಿ ಮಾತ್ರ ಅಲ್ಲ ಒಂದು ಸೈಟ್ ಖರೀದಿ ಮಾಡುವುದು ಕೂಡ ಈಗ ಸಾಕಷ್ಟು ದುಬಾರಿ ಆಗಿದೆ. ಸೈಟ್ನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಅದರಲ್ಲೂ ಮುಖ್ಯ ಸ್ಥಳದಲ್ಲಿ ಮಾಡುವುದಾದರೆ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬ (middle class family) ದವರು ಇಂತಹ ಸೈಟ್ ಖರೀದಿ ಮಾಡಲು ಎಂದಿಗೂ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ನೀವು ಸೈಟ್ ಖರೀದಿ ಮಾಡಬೇಕು ಅಂದ್ರೆ, ಅದಕ್ಕೆ ಯಾವುದಾದರೂ ಸಾಲ ಸೌಲಭ್ಯ (loan facility) ಇದೆಯಾ ಎನ್ನುವುದರ ಬಗ್ಗೆ ಯೋಚನೆ ಬರುವುದು ಸಹಜ. ಹೇಗೆ ಬ್ಯಾಂಕ್‌ಗಳಲ್ಲಿ ಸುಲಭವಾಗಿ ವೈಯಕ್ತಿಕ ಸಾಲ (personal loan) , ಗೃಹ ಸಾಲ (Home loan) ಸಿಗುತ್ತದೆಯೋ ಅದೇ ರೀತಿ ಸೈಟ್ ಖರೀದಿಗೂ ಕೂಡ ಸಾಲ ಸಿಗುತ್ತಾ ಎನ್ನುವ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.

HDFC ಸೈಟ್ ಲೋನ್!

ನೀವು ಪ್ರತಿ ತಿಂಗಳು 25,000 ಸಂಬಳ (salary) ಪಡೆದುಕೊಳ್ಳುವವರಾಗಿದ್ದರೆ, 15 ವರ್ಷಗಳ ಅವಧಿಗೆ ಮರುಪಾವತಿ ಮಾಡಬಹುದಾದ ಸಾಲ ತೆಗೆದುಕೊಳ್ಳಲು ಬಯಸಿದರೆ, 10,15,497 ರೂಪಾಯಿವರೆಗಿನ ಸಾಲ ಪಡೆದುಕೊಳ್ಳಬಹುದು. ಇದಕ್ಕೆ ಪ್ರತಿ ತಿಂಗಳು 10,000 ರೂ. ಗಳ EMI ಪಾವತಿಸಬೇಕು. ಈ ಸಾಲಕ್ಕೆ ಬಡ್ಡಿದರ 8.50% ನಿಂದ 9.15% ವರೆಗೆ ಇರುತ್ತದೆ.

ಸೈಟ್ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು !

ಸೈಟ್‌ ಲೋನ್‌ ಪಡೆಯಲು ಬೇಕಾಗುವ ದಾಖಲೆಗಳು ಯಾವುದು? ಕೆವೈಸಿ ದಾಖಲೆಗಳು ಬೇಕು. ಆದಾಯ ದಾಖಲಾತಿಗಳು, ಪ್ರಾಪರ್ಟಿ ಸಂಬಂಧಿತ ದಾಖಲೆಗಳು ಅವಶ್ಯಕ. ನೀವು ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ, ಕಳೆದ ಮೂರು ತಿಂಗಳಿನ ಸ್ಯಾಲರಿ ಸ್ಲಿಪ್‌, ಕಳೆದ 6 ತಿಂಗಳಿನ ಬ್ಯಾಂಕ್‌ ಸ್ಟೇಟ್‌ ಮೆಂಟ್‌, ಇತ್ತೀಚಿನ ಫಾರ್ಮ್-‌16 ಅಗತ್ಯ.

ಸ್ವಂತ ಉದ್ಯೋಗಿಯಾಗಿದ್ದರೆ ಕಳೆದ ಎರಡು ವರ್ಷಗಳ ಆದಾಯದ ರಿಟರ್ನ್‌, ಎರಡು ವರ್ಷಗಳ ಬ್ಯಾಲೆನ್ಸ್‌ ಶೀಟ್‌, 12 ತಿಂಗಳಿನ ಕರೆಂಟ್‌ ಅಕೌಂಟ್‌ ಸ್ಟೇಟ್‌ ಮೆಂಟ್‌ ಅಗತ್ಯ. ಎಚ್‌ಡಿಎಫ್‌ಸಿ ವೆಬ್‌ ಸೈಟ್‌ ಪ್ರಕಾರ ನಿವೇಶನ ಖರೀದಿ ಸಾಲಕ್ಕೆ 3000 ರೂ. ಅಥವಾ ಸಾಲದ ಮೊತ್ತದ 0.50% ಇದರಲ್ಲಿ ಯಾವುದು ಗರಿಷ್ಠವೋ ಅದು ಅನ್ವಯ.

ಇನ್ನು ಸ್ವಂತ ಉದ್ಯಮ ಮಾಡುತ್ತಿರುವವರು ಸೈಟ್ ಗಾಗಿ ಸಾಲ ತೆಗೆದುಕೊಳ್ಳುವುದಿದ್ದರೆ ಕಳೆದ ಎರಡು ವರ್ಷಗಳ ಐಟಿಆರ್ (ITR) ರಿಟರ್ನ್ ಮಾಡಿರುವ ಮಾಹಿತಿ ನೀಡಬೇಕು. ಎರಡು ವರ್ಷಗಳ ಬ್ಯಾಲೆನ್ಸ್ ಶೀಟ್ ಹಾಗೂ ಒಂದು ವರ್ಷದ ಚಾಲ್ತಿ ಖಾತೆಯ ಸ್ಟೇಟ್ಮೆಂಟ್ ಒದಗಿಸಬೇಕು.

ಹೆಚ್ ಡಿ ಎಫ್ ಸಿ ಬ್ಯಾಂಕ್ ಮಾತ್ರವಲ್ಲದೆ ಇತರ ಖಾಸಗಿ ಬ್ಯಾಂಕುಗಳು ಹಾಗೂ ಫೈನಾನ್ಸ್ ಗಳು ಕೂಡ ಗೃಹ ಸಾಲದ ಜೊತೆಗೆ ಸೈಟ್ ಲೋನ್ ಕೂಡ ಒದಗಿಸುತ್ತವೆ. ಇಂತಹ ಸಾಲಕ್ಕೆ ಪ್ರೋಸೆಸಿಂಗ್ ಪೀ ಜಾಸ್ತಿ ಇರುವುದಿಲ್ಲ. ಕೈಗೆಟಿಕುವ ಬಡ್ಡಿ ದರದಲ್ಲಿ, ಪ್ರಿ ಪೇಮೆಂಟ್ ಪೆನಾಲ್ಟಿ ಇಲ್ಲದೆ ಸೈಟ್ ಲೋನ್ ಖರೀದಿ ಮಾಡಬಹುದು. ಮರುಪಾವತಿ ಮಾಡಲು ದೀರ್ಘಾವಧಿಯ ಸಮಯ ಇರುತ್ತದೆ. 18 ರಿಂದ 65 ವರ್ಷ ವಯಸ್ಸಿನವರು ಸೈಟ್ ಲೋನ್ ಖರೀದಿಸಬಹುದು.

ಹೆಚ್‌ಡಿಎಫ್‌ಸಿ ಒಂದೇ ಅಲ್ಲ, ಹಲವು ಖಾಸಗಿ-ಸಾರ್ವಜನಿಕ ಬ್ಯಾಂಕ್‌ಗಳು ಹೋಮ್‌ ಲೋನ್‌ ಮಾತ್ರವಲ್ಲದೆ, ನಿವೇಶನ ಖರೀದಿಸಲು ಪ್ಲಾಟ್‌ ಲೋನ್‌ ನೀಡುತ್ತವೆ. ನೆನಪಿಡಿ, ಪ್ಲಾಟ್‌ ಲೋನ್‌ ಎಂದರೆ ಹೋಮ್‌ ಲೋನ್‌ ಅಲ್ಲ. ಎರಡಕ್ಕೂ ವ್ಯತ್ಯಾಸವಿದೆ. ಪ್ಲಾಟ್‌ ಲೋನ್‌ ಅನ್ನು ಆಕರ್ಷಕ ಬಡ್ಡಿ ದರದಲ್ಲಿ ಪಡೆಯಬಹುದು. ಅಫರ್ಡಬಲ್‌ ರಿಪೇಮೆಂಟ್‌ ಅವಧಿ ಇರುತ್ತದೆ.

ಪ್ರಿ-ಪೇಮೆಂಟ್‌ ಪೆನಾಲ್ಟಿ ಇರಲ್ಲ. ಪ್ರೊಸೆಸಿಂಗ್‌ ಫೀ ಕಡಿಮೆ ಇರುತ್ತದೆ. ದಾಖಲಾತಿಗಳು ಸೀಮಿತ. 18-65 ವರ್ಷ ವಯೋಮಿತಿಯ ಭಾರತೀಯರಿಗೆ ಈ ಲೋನ್‌ ಸಿಗುತ್ತದೆ. ಸೈಟ್‌ನ ಮಾಲಿಕತ್ವ ಕುರಿತ ಮೂಲ ದಾಖಲಾತಿಗಳನ್ನು ಬ್ಯಾಂಕ್‌ಗೆ ನೀಡಬೇಕಾಗಬಹುದು. ಸಾಲ ಮರುಪಾವತಿಯ ಬಳಿಕ ಬ್ಯಾಂಕ್‌ ಅವುಗಳನ್ನು ಮರಳಿಸುತ್ತದೆ. ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಪ್ಲಾಟ್‌ ಲೋನ್‌ ಬಡ್ಡಿ ದರಗಳನ್ನು ಹೋಲಿಸಿ, ನಿಮಗೆ ಬೆಸ್ಟ್‌ ಅನ್ನಿಸಿದ್ದನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸೈಟ್‌ ಖರೀದಿಗೆ ಸಾಲ ಪಡೆಯುವ ಮುನ್ನ ಈ ಎಲ್ಲಾ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment