Gold
ಚಿನ್ನ (Gold) ಮಹಿಳೆಯರ ಪ್ರಿಯವಾದ ವಸ್ತು. ಇಂದು ಆಭರಣಗಳನ್ನು ತೊಡುವುದಕ್ಕಿಂತ ಹೆಚ್ಚಾಗಿ ಹೂಡಿಕೆ ಮಾಡುವುದೇ ಹೆಚ್ಚಳವಾಗಿ ಬಿಟ್ಟಿದೆ. ಯಾಕಂದ್ರೆ, ಕಷ್ಟ ಕಾಲದಲ್ಲಿ ನೆರವಾಗುವುದೇ ಚಿನ್ನದ ಹೂಡಿಕೆ. ಅದೇ ರೀತಿ ಇದರ ಬೆಲೆ (Gold Price) ಯು ಕೂಡ ಯಾವತ್ತಿಗೂ ಕಡಿಮೆಯಾಗುದಿಲ್ಲ, ವರ್ಷದಿಂದ ವರ್ಷಕ್ಕೆ ಬೆಲೆ ಹೆಚ್ಚಾಗುತ್ತಲೆ ಸಾಗುತ್ತದೆ.
ಇನ್ನು ಚಿನ್ನಾಭರಣವನ್ನು ಹಿಂದಿನ ಕಾಲದಿಂದಲೂ ಹೆಚ್ಚಾಗಿ ಬಳಸಿಕೊಂಡೇ ಬರುತ್ತಿದ್ದಾರೆ. ಹಿಂದಿನ ಸಂಪ್ರದಾಯದಂತೆ ಚಿನ್ನವೂ ಅಗತ್ಯ ವಸ್ತು. ಹಾಗಾಗಿ, ಯಾವುದೇ ಶುಭ ಸಮಾರಂಭ ಇರುವುದಾದರೂ ಚಿನ್ನ,ಬೆಳ್ಳಿಗೆ ಅಧಿಕ ಪ್ರಶಾಸ್ತ್ಯ ನೀಡಲಾಗುತ್ತದೆ. ಇಂದು ಚಿನ್ನ ವರ್ಷಕ್ಕೆ ಕನಿಷ್ಠ ಶೇ. 8ರಿಂದ 25ರಷ್ಟು ಬೆಲೆ ಏರಿಕೆ ಮಾಡಿಕೊಂಡು ಬರುತ್ತಿರುವ ಅಪೂರ್ವ ವಸ್ತುವಾಗಿದ್ದು.
ಇಂದು ಬ್ಯಾಂಕ್‌ಗಳು ಕೂಡ ಚಿನ್ನದ ಸಾಲವನ್ನು ಅತೀ ಸುಲಭವಾಗಿ ನೀಡುತ್ತಿದೆ.ಹಾಗಾಗಿ, ಹೆಚ್ಚಿನ ಗ್ರಾಹಕರು ಸಾಲ ಮಾಡಿಯಾದರೂ ಚಿನ್ನದ ಹೂಡಿಕೆ ಮಾಡುತ್ತಾರೆ. ಇದೀಗ ದೇಶೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದ್ದು, ಜಾಗತಿಕ ಮಾರುಕಟ್ಟೆಯಲ್ಲಿಯು ಚಿನ್ನದ ಬೆಲೆ ದುಪ್ಪಟ್ಟು ಆಗಿದೆ.
ಈ ಸುದ್ದಿ ಓದಿ:- Sip: ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! 1000 ರೂ ಹೂಡಿಕೆ ಮಾಡಿ 2 ಲಕ್ಷ ಆದಾಯ ಗಳಿಸಿ.!
ಪ್ರಸ್ತುತ ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂಗೆ 75 ಸಾವಿರದ ಗಡಿ ದಾಟಿದೆ. ಆದರೆ, ಚಿನ್ನದ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, 2025ರ ಜೂನ್-ಜುಲೈ ಹೊತ್ತಿಗೆ 88 ಸಾವಿರದ ಗಡಿ ದಾಟಲಿದೆ ಎನ್ನಲಾಗಿದೆ.
ಹೌದು, ಅಮೆರಿಕದ ಫೈನಾನ್ಶಿಯಲ್ ಸರ್ವಿಸ್ ಫಮ್ರ್ ಸಿಟಿ ಬ್ಯಾಂಕ್‌ನನ ತಾಜಾ ವರದಿಯ ಪ್ರಕಾರ, 2025ರ ಮಧ್ಯದ ಹೊತ್ತಿಗೆ ಪ್ರತಿ ಔನ್ಸ್ ಚಿನ್ನದ ಬೆಲೆ 3 ಸಾವಿರ ಡಾಲರ್ಗೆ (2.5 ಲಕ್ಷ ರೂಪಾಯಿ) ತಲುಪಲಿದೆ. ಇದರ ಆಧಾರದಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ದರವು 88,450 ರೂ.ಗೆ ತಲುಪಲಿದೆ.
ಅಂದರೆ, ಈಗಿರುವ ದರಕ್ಕಿಂತ ಒಂದೇ ವರ್ಷದಲ್ಲಿ 22-23% ಹೆಚ್ಚಲಿದೆ. ಅಮೆರಿಕದ ಸೆಂಟ್ರಲ್ ಬ್ಯಾಂಕ್ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಇಳಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವರ್ಷಾಂತ್ಯದ ಹೊತ್ತಿಗೆ ಚಿನ್ನ ಮತ್ತು ಬೆಳ್ಳಿ ದರ ಏರಿಕೆಯಾಗಲಿದೆ ಎಂದು ವರದಿ ವಿವರಿಸಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಸುದ್ದಿ ಓದಿ:- Gas: ಗೃಹಿಣಿಯರಿಗೆ ಗುಡ್ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ 300 ರೂಪಾಯಿ ಇಳಿಕೆ.!
ಜೂನ್‌ನಲ್ಲಿ ಚಿನ್ನಾಭರಣ ರಫ್ತು ಇಳಿಕೆ
ದೇಶದ ಹರಳು ಮತ್ತು ಚಿನ್ನಾಭರಣ ರಫ್ತು ಜೂನ್ ತಿಂಗಳಲ್ಲಿ ಶೇಕಡ 13ರಷ್ಟು ಇಳಿಕೆಯಾಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತದ ನಡುವೆಯೂ ಜೂನ್‌ನಲ್ಲಿ 15,939 ಕೋಟಿ ಮೌಲ್ಯದ ರಫ್ತು ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 18,413 ಕೋಟಿ ಮೌಲ್ಯದ ಹರಳು ಮತ್ತು ಚಿನ್ನಾಭರಣ ರಫ್ತಾಗಿತ್ತು ಎಂದು ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ (ಜೆಜೆಇಪಿಸಿ) ತಿಳಿಸಿದೆ.
ಕತ್ತರಿಸಿದ ಮತ್ತು ಪಾಲಿಷ್ ಮಾಡಿದ ವಜ್ರಗಳ ರಫ್ತು ಮೌಲ್ಯವು 8,496 ಕೋಟಿ ರೂ. ಆಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ.25ರಷ್ಟು ಕಡಿಮೆಯಾಗಿದೆ. ಆದರೆ, ಚಿನ್ನಾಭರಣಗಳ ರಫ್ತು ಶೇ.8ರಷ್ಟು ಹೆಚ್ಚಾಗಿದ್ದು, 5074 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ರಫ್ತು ಮಾಡಲಾಗಿದೆ.
ಯಾಕಾಗಿ ಬೆಲೆ ಹೆಚ್ಚಳ?
ಹೆಚ್ಚಾಗಿ ಹಣದುಬ್ಬರ ಹೆಚ್ಚಾದಂತೆ, ಚಿನ್ನದ ಬೇಡಿಕೆಯು ಕೂಡ ಹೆಚ್ಚಾಗುತ್ತ ಹೋಗುತ್ತದೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಿಂದ ಬೃಹತ್ ಪ್ರಮಾಣ ದಲ್ಲಿ ಚಿನ್ನ ಖರೀದಿಯಾಗಿ ಇರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ. ಅದೇ ರೀತಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಚಿನ್ನದ ದರ ಹೆಚ್ಚಾಗಿದ್ದು, ಭೌತಿಕ ಚಿನ್ನದ ದರದದ ಬೆಲೆಯು ಹೆಚ್ಚಾಗಿದೆ. ಇನ್ನು ಡಾಲರ್, ಬಾಂಡ್ ಇಳುವರಿ ಕುಸಿತವಾಗಿದ್ದು ವಿಶ್ವದ ರಾಜಕೀಯ ಆರ್ಥಿಕ ಪರಿಸ್ಥಿತಿಯಿಂದಾಗಿಯು ಚಿನ್ನದ ಬೆಲೆ ಹೆಚ್ಚಾಗಿದೆ.