ಕರ್ನಾಟಕ ರಾಜ್ಯ ಸರ್ಕಾರದ ಕಾರ್ಮಿಕ ಮಂಡಳಿಯು ರಾಜ್ಯದ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ನೀಡಿ ಇದರ ಆಧಾರದ ಮೇಲೆ ಅನೇಕ ಕಲ್ಯಾಣ ಯೋಜನೆಗಳ ನೆರವನ್ನು ನೀಡಿದೆ. ಕಾರ್ಮಿಕರ ಕಾರ್ಡ್ ಪಡೆದಿರುವ ಕಾರ್ಮಿಕ ಮಾತ್ರನ್ನಲ್ಲದೆ ಆತನ ಕುಟುಂಬವು ಕೂಡ ಸರ್ಕಾರದಿಂದ ಆರೋಗ್ಯ, ಶಿಕ್ಷಣ, ಪಿಂಚಣಿಯು ಸೇರಿದಂತೆ ಅನೇಕ ವಿಚಾರಗಳೊಂದಿಗೆ ರಿಯಾಯಿತಿಯನ್ನು ಪಡೆಯುತ್ತದೆ.
ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಇವುಗಳಲ್ಲಿ ಒಂದಾದ 2023-24 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಕೂಡ ಅರ್ಜಿ ಆಹ್ವಾನಿಸಲಾಗಿದ್ದು ಇದಕ್ಕೆ ಯಾರು ಅರ್ಹರು? ಏನೆಲ್ಲಾ ದಾಖಲೆಗಳನ್ನು ನೀಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ಪೂರ್ತಿ ವಿವರಕ್ಕಾಗಿ ಲೇಖನವನ್ನು ಕೊನೆಯವರೆಗೂ ಪೂರ್ತಿ.
ಯೋಜನೆಯ ಹೆಸರು:- ಕಾರ್ಮಿಕರ ಕಾರ್ಡ್ ವಿದ್ಯಾರ್ಥಿ ವೇತನ(Labour Card Scholarship)
ಅರ್ಹತೆಗಳು:-
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ತಂದೆ ಅಥವಾ ತಾಯಿ ಕಟ್ಟಡ ಕಾರ್ಮಿಕರಾಗಿದ್ದು ಕಾರ್ಮಿಕ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡು ಒಂದು ವರ್ಷ ಪೂರೈಸಿರಬೇಕು ಮತ್ತು ಮಂಡಳಿಯಿಂದ ನೀಡಲಾಗುವ ಗುರುತಿನ ಚೀಟಿಯಾದ ಲೇಬರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಲೇಬೇಕು.
* ಕಾರ್ಮಿಕರ ಮಾಸಿಕ ಆದಾಯವು ರೂ.35,000 ಕ್ಕಿಂತ ಕಡಿಮೆ ಇಡಬೇಕು
* ಕಳೆದ ವರ್ಷದ ಪರೀಕ್ಷೆಯಲ್ಲಿ ವಿದ್ಯಾರ್ಥಿಯು ಕನಿಷ್ಠ 50% ಫಲಿತಾಂಶದೊಂದಿಗೆ ಉತ್ತೀರ್ಣರಾಗಿರಬೇಕು, SC / ST ವಿದ್ಯಾರ್ಥಿಗಳು 45% ಫಲಿತಾಂಶದೊಂದಿಗೆ ಉತ್ತೀರ್ಣರಾಗಿರಬೇಕು
* ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ರಾಜ್ಯದ ನಿವಾಸಿಯಾಗಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುವುದು
ಸಿಗುವ ಸಹಾಯಧನ:-
* 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುವವರಿಗೆ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
* ಆಯಾ ತರಗತಿ ಅನುಗುಣವಾಗಿ ವಿದ್ಯಾರ್ಥಿ ವೇತನ ನಿಗದಿಪಡಿಸಲಾಗಿದೆ ಮತ್ತು ಪ್ರತಿ ವರ್ಷವೂ ಕೂಡ ಈ ಮೊತ್ತವು ಪರಿಷ್ಕೃತವಾಗಿರುತ್ತದೆ. ಆ ಪ್ರಕಾರವಾಗಿ ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ಮೊತ್ತವು ಇಂತಿದೆ.
* 1 ರಿಂದ 4ನೇ ತರಗತಿ – ರೂ.1000
* 5 ರಿಂದ 8ನೇ ತರಗತಿ – ರೂ.2500
* 9 ಮತ್ತು 10ನೇ ತರಗತಿ – ರೂ.3000
* ಪ್ರಥಮ ಹಾಗೂ ದ್ವಿತೀಯ ವರ್ಷದ PUC, ITI, ಡಿಪ್ಲಮೋ – ರೂ.4,600
* ಪದವಿ – ರೂ.6,000
* ಸ್ನಾತಕೋತ್ತರ ಪದವಿ, B.E, B.Tec – ರೂ.10,000
* ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ರೂ.10,000
* LLB, LLM – ರೂ.10,000
* ಮೆಡಿಕಲ್ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ರೂ.11,000
* D.ed / B.ed – ರೂ.4600
* Phd / M.phill – ರೂ.11,000
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಪೋಷಕರ ಲೇಬರ್ ಕಾರ್ಡ್
* ಪೋಷಕರ ಉದ್ಯೋಗ ಪ್ರಮಾಣ ಪತ್ರ ಅಥವಾ ಇತ್ತೀಚಿನ ಸಂಬಳದ ಚೀಟಿ
* ವಿದ್ಯಾರ್ಥಿಯ ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್
* ಕಳೆದ ವರ್ಷದ ಅಂಕಪಟ್ಟಿ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಯಾವುದೇ ಸೇವಾ ಸಿಂಧು ಕೇಂದ್ರಗಳಲ್ಲಿ ಅಥವಾ ವೈಯಕ್ತಿಕವಾಗಿ ನೀವೇ ಅರ್ಜಿ ಸಲ್ಲಿಸಬಹುದು
* SSP ಪೋರ್ಟಲ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿಯು ತಿಳಿಸಿದೆ.
* https://kbocwwb.karnataka.gov.in ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವೆಬ್ ಸೈಟ್ ಗೆ ಭೇಟಿ ಕೊಡಿ
* ಮೊದಲಿಗೆ ಕೇಳಲಾಗುವ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಪೂರಕ ದಾಖಲೆಗಳ ಸಂಖ್ಯೆ ಅಥವಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
ಅಂತಿಮವಾಗಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ
* ಇದರಲ್ಲಿ ನೀಡಿರುವ ರೆಫೆರೆನ್ಸ್ ನಂಬರ್ ಮೂಲಕ ನೀವು ನಿಮ್ಮ ಅರ್ಜಿ ಸ್ಟೇಟಸ್ ಟ್ರಾಕ್ ಮಾಡಿ ತಿಳಿದುಕೊಳ್ಳಬಹುದು.
* ಈ ಯೋಜನೆ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಾಗಿ ಇಲಾಖೆ ಅಧಿಕೃತ ಆದ https://kalwbapps.karnataka.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟ ಹೆಚ್ಚಿನ ಮಾಹಿತಿ ಪಡೆಯಿರಿ.
* ವಿದ್ಯಾರ್ಥಿ ವೇತನದ ಜೊತೆಗೆ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ / ಉಚಿತ ಟ್ಯಾಬ್ ಮತ್ತು ಲ್ಯಾಪ್ಟಾಪ್ ವಿತರಣೆ ಇತ್ಯಾದಿ ಸೌಲಭ್ಯಗಳು ಕೂಡ ದೊರೆಯುತ್ತದೆ. ತಪ್ಪದೇ ವಿದ್ಯಾರ್ಥಿಗಳು ಇದೆಲ್ಲದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಶೇರ್ ಕೂಡ ಮಾಡಿ.