HSRP Number Plate: ಇಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಬೇಡ, ನಿಯಮ ಬದಲಾಯಿಸಿದ ಸರ್ಕಾರ.! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

 

ಕಳೆದೊಂದು ವರ್ಷದಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜನಸಾಮಾನ್ಯರ ಮಾತಿನಲ್ಲಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಒಂದು ಎಲ್ಲಾ ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಎನ್ನುವುದು. ಭಾರತ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಇಂತಹದೊಂದು ನಿಯಮವನ್ನು ಜಾರಿಗೆ ತಂದಿದ್ದು ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ಸಂಪೂರ್ಣವಾಗಿ ಈ ನಿಯಮ ಜಾರಿಗೆ ಬಂದಾಗಿದೆ.

WhatsApp Group Join Now
Telegram Group Join Now

ನಮ್ಮ ಕರ್ನಾಟಕ ರಾಜ್ಯದಲ್ಲೂ ಆಗಸ್ಟ್ 12, 2021 ರಿಂದ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲಾ ಬಗೆಯ ವಾಹನ ಮಾಲೀಕರುಗಳು ತಮ್ಮ ತಮ್ಮ ವಾಹನಗಳಿಗೆ ಸರ್ಕಾರದ ನಿಯಮದಂತೆ ಮೂರು ತಿಂಗಳ ಒಳಗಾಗಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿತ್ತು. ಮಾಹಿತಿ ಕೊರತೆ ಹಾಗೂ ಇನ್ನಿತರ ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿ ವಿಳಂಬ ಉಂಟಾದ್ದರಿಂದ ಪದೇಪದೇ ಮೂರು ಬಾರಿ ಈ ಕಾಲಾವಧಿಯನ್ನು ವಿಸ್ತರಿಸಲಾಗಿದೆ.

ಅಂತಿಮವಾಗಿ ಜೂನ್ 12, 2024ರ ಒಳಗೆ ಸರ್ಕಾರ ಅಂತಿಮವಾಗಿ ನೀಡಿದ್ದ ಸಮಯವೂ ಕೂಡ ಮುಗಿಯುತ್ತಿದ್ದು ಇನ್ನು ಮುಂದೆ ನಿಯಮ ಉಲ್ಲಂಘಿಸಿ HSRP ನಂಬರ್ ಪ್ಲೇಟ್ ಇಲ್ಲದೆ ರಸ್ತೆಗಳಿದರೆ ವಾಹನಗಳ ಮಾಲೀಕರಿಗೆ ದಂಡ ವಿಧಿಸುವುದು ಅಥವಾ ಪದೇ ಪದೇ ಪುನರಾವರ್ತನೆಯಾದರೆ ವಾಹನ ಸೀಜ್ ಮಾಡಲಾಗುವುದು ಎನ್ನುವ ಎಚ್ಚರಿಕೆ ಕೂಡ ನೀಡಿದೆ.

ಆದರೆ ಯಾವ ವಾಹನ ಸವಾರರು ಹೀಗೆ ತಮ್ಮ ವಾಹನದ ನಂಬರ್ ಬದಲಾಯಿಸಿಕೊಳ್ಳಬೇಕು ಮತ್ತು ಯಾರಿಗೆ ಇದರ ಅವಶ್ಯಕತೆ ಇಲ್ಲ ಹಾಗೂ ಯಾವ ಉದ್ದೇಶದಿಂದ ಈ ನಿಯಮ ಮಾಡಲಾಗಿದೆ ಎನ್ನುವುದನ್ನು ಪ್ರತಿಯೊಬ್ಬ ವಾಹನ ಸವಾರನು ಕೂಡ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಹಾಗಾಗಿ ಇಂದು ಈ ಲೇಖನದಲ್ಲಿ ಇಂಥಹ ಮುಖ್ಯವಾದ ವಿಷಯದ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಇಲಾಖೆಯು ದೇಶದ ಆಂತರಿಕ ಪದ್ಧತಿ ಹಾಗೂ ವಾಹನಗಳ ಸುರಕ್ಷತೆ ಉದ್ದೇಶದಿಂದಲೇ ಇಂತಹದೊಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ. HSRP ನಂಬರ್ ಪ್ಲೇಟ್ ನಲ್ಲಿ ಅಳವಡಿಸಿರುವ ಟೆಕ್ನಾಲಜಿ ಮೂಲಕ ವಾಹನಗಳ ಡಾಟ ಸಂಗ್ರಹಣೆ ಸಮರ್ಪಕವಾಗಿ ಮಾಡಬಹುದು ಮತ್ತು ಇಂತಹ ವಾಹನಗಳು ಕಳ್ಳತನವಾದರೆ ಸುಲಭವಾಗಿ ಪತ್ತೆ ಹಚ್ಚಬಹುದು ಹೀಗಾಗಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಳ್ಳತನ ವಾದ ನಿಮ್ಮ ವಾಹನ ಬಳಕೆಯಾಗುವುದನ್ನು ಕೂಡ ನೀವು ತಡೆಗಟ್ಟಬಹುದು.

HSRP ನಂಬರ್ ಪ್ಲೇಟ್ ಲೇಸರ್ ನಿಂದ ಕೆತ್ತಿದ ಕೋಡ್ ಹೊಂದಿದೆ ಇದು ಎಲ್ಲಾ ತರಹದ ವಾಹನವನ್ನು ಗುರುತಿಸಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದನ್ನು ನ’ಕ’ಲು ಮಾಡಲು ಅಥವಾ ತಿದ್ದಲು ಸಾಧ್ಯವಾಗುವುದಿಲ್ಲ. ಅಲ್ಯೂಮಿನಿಯಂ ಲೋಹದಿಂದ ತಯಾರಿಸಲಾಗುವ ಈ ವಾಹನಗಳ ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಲೇಟ್‌ಗಳ ಮೇಲೆ ಎಡ ಭಾಗದಲ್ಲಿ 20 mm x 20 mm ಗಾತ್ರವನ್ನು ಹೊಂದಿದ ಅಶೋಕ ಚಕ್ರದ ಕ್ರೋಮಿಯಂ ಹೊಲೊಗ್ರಾಮ್ ಸ್ಟಾಂಪಿಂಗ್ ಕೂಡ ಅಳವಡಿಸಲಾಗಿರುತ್ತದೆ.

ಈ ನಿಯಮದ ಪ್ರಕಾರವಾಗಿ ಯಾವ ಬಗೆಯ ವಾಹನದ ಮಾಲೀಕರು ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬೇಕು ಎಂದರೆ 2019ರ ಮೊದಲು ನೊಂದಣಿಗೊಂಡಿರುವ ಎಲ್ಲಾ ವಾಹನಗಳಿಗೂ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ.

ದ್ವಿ ಚಕ್ರ ವಾಹನಗಳು ಮಾತ್ರವಲ್ಲ ತ್ರಿಚಕ್ರ ವಾಹನಗಳು, ಮದ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಲಘು ಮೋಟಾರ್, ಕಾರುಗಳು ಸೇರಿದಂತೆ ಎಲ್ಲ ಹಳೆಯ ವಾಹನಗಳಿಗೂ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. 2019 ರ ನಂತರ ಖರೀದಿಸಿರುವ ವಾಹನಗಳಿಗೆ ಈಗಾಗಲಿ HSRP ನಂಬರ್ ಪ್ಲೇಟ್ ಅಳವಡಿಸಿರುವುದರಿಂದ ಯಾವುದೇ ಬದಲಾವಣೆ ಮಾಡಬೇಕಾದ ಅವಶ್ಯಕತೆ ಇಲ್ಲ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment