Sukanya Samruddi Scheme: ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರದ ವಿಶೇಷ ಯೋಜನೆ, ಕೇವಲ 10,000 ಹೂಡಿಕೆ ಮಾಡಿ ಸಾಕು 55 ಲಕ್ಷ ಗ್ಯಾರಂಟಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

Sukanya Samruddi Scheme

ಕೇಂದ್ರ ಸರ್ಕಾರದಿಂದ (Central Government) ದೇಶದ ಎಲ್ಲಾ ವರ್ಗದ ಜನತೆಗೂ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ನೀಡಲಾಗಿದೆ. ಇದರಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ (for girl child) ಭವಿಷ್ಯದ ದೃಷ್ಟಿಕೋನದಿಂದ 2015 ರಲ್ಲಿ ಜಾರಿಗೆ ತಂದ ಒಂದು ವಿಶೇಷ ಯೋಜನೆ ಎಂದರೆ ಸುಕನ್ಯಾ ಸಮೃದ್ಧಿ ಯೋಜನೆ (SSY).

ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಭೇಟಿ ಪಡಾವೋ ಭೇಟಿ ಬಚಾವೋ ಎನ್ನುವ ಧ್ಯೇಯದೊಂದಿಗೆ ದೇಶದಲ್ಲಿರುವ ಎಲ್ಲಾ ಹೆಣ್ಣು ಮಕ್ಕಳ ಭವಿಷ್ಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪರಿಚಯಿಸಿದರು. ಭಾರತೀಯ ಅಂಚೆ ಇಲಾಖೆಯಲ್ಲಿ ಲಭ್ಯವಿರುವ ಈ ಯೋಜನೆಯಲ್ಲಿ ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡಿ ಗರಿಷ್ಠ ರೂ.55 ಲಕ್ಷದವರೆಗೂ ಕೂಡ ರಿಟರ್ನ್ ಪಡೆಯಬಹುದಾಗಿದೆ. ಯೋಜನೆ ಕುರಿತ ಸಂಪೂರ್ಣ ವಿವರ ಹೀಗಿದೆ ನೋಡಿ.

WhatsApp Group Join Now
Telegram Group Join Now

ಯೋಜನೆಯ ಹೆಸರು:- ಸುಕನ್ಯಾ ಸಮೃದ್ಧಿ ಯೋಜನೆ…

ಯೋಜನೆ ಕುರಿತ ಪ್ರಮುಖ ಅಂಶಗಳು:-

● ಅಂಚೆ ಕಚೇರಿಯ ಯಾವುದೇ ಯೋಜನೆಗಳಾದರೂ ಕೂಡ ಭಾರತೀಯ ನಾಗರಿಕರಿಗೆ ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಅವಕಾಶ
● ಅಂತೆಯೇ ಭಾರತೀಯ ನಾಗರಿಕರಾದ 10 ವರ್ಷದ ಒಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಆಕೆಯ ಪೋಷಕರು ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು
● ವಾರ್ಷಿಕವಾಗಿ ರೂ.250 ಇಂದ ಗರಿಷ್ಠ ರೂ.1,50,000 ದ ವರೆಗೂ ಕೂಡ ನಿಮ್ಮ ಶಕ್ತಿಯನುಸಾರ ನಿಮ್ಮ ಹೆಣ್ಣು ಮಗಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಹಣ ಉಳಿತಾಯ ಮಾಡಬಹುದು.

● ಹೂಡಿಕೆ ಅವಧಿ 15 ವರ್ಷಗಳು ನಿಮ್ಮ ಮಗುವಿಗೆ 18 ವರ್ಷ ತುಂಬಿದ ಬಳಿಕ ಮದುವೆ ಅಥವಾ ವಿದ್ಯಾಭ್ಯಾಸ ಅಥವಾ ಉದ್ಯಮಕ್ಕೆ ನೆರವಾಗುವ ಉದ್ದೇಶದಿಂದ ಹಣವನ್ನು ವಿತ್ ಡ್ರಾ ಮಾಡಬಹುದು ಅಥವಾ ಅರ್ಧದಷ್ಟು ಹಣವನ್ನು 18 ವರ್ಷದಲ್ಲಿ ಹಿಂಪಡೆದು 21 ವರ್ಷದ ಬಳಿಕ ಪೂರ್ತಿ ಹಣವನ್ನು ಪಡೆದು ಖಾತೆ ಮುಚ್ಚಬಹುದು
● ವಾರ್ಷಿಕವಾಗಿ 8.2% ಬಡ್ಡಿದರವಿದೆ ಮತ್ತು ಪ್ರತಿ ತ್ರೈಮಾಸಿಕಗೊಮ್ಮೆ ಇದು ಪರಿಷ್ಕೃತವಾಗುತ್ತಿರುತ್ತದೆ.

ಈ ಸುದ್ದಿ ಓದಿ:- HSRP Number Plate: ವಾಹನ ಸವಾರರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ನಿಯಮ ಬದಲಾವಣೆ, ಹೊಸ ರೂಲ್ಸ್ ಏನು ನೋಡಿ.!

● ಉದಾಹರಣೆಯೊಂದಿಗೆ ಹೇಳುವುದಾದರೆ, ನೀವು ನಿಮ್ಮ ಮಗುವಿನ ಹೆಸರಿನಲ್ಲಿ ಪ್ರತಿ ತಿಂಗಳು ರೂ.10,000 ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ ಈ ಹಣವು 18 ಲಕ್ಷವಾಗಿರುತ್ತದೆ 8.2% ಬಡ್ಡಿ ದರದ ಅನ್ವಯ ನಿಮಗೆ ಬರುವ ಒಟ್ಟು ಮೊತ್ತವು ರೂ.55,46,118 ಇದರಲ್ಲಿ ರೂ.37,46,118 ಬಡ್ಡಿ ರೂಪದ ಲಾಭ ನಿಮ್ಮ ಮಗುವಿಗೆ ದೊರೆತಿರುತ್ತದೆ

● ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆ ಮಾತ್ರ ತೆರೆಯಲು ಅವಕಾಶ ಹಾಗೆ ದಂಪತಿಗಳ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿಗೆ ಮಾತ್ರ ಈ ಖಾತೆ ತೆರೆಯಲು ಅವಕಾಶ ಆದರೆ ಎರಡನೇ ಮಗುವಿನ ಜನನ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಮಾತ್ರ 3 ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಬಹುದು.

ಈ ಸುದ್ದಿ ಓದಿ:- Today Gold Price: ಆಭರಣ ಪ್ರಿಯರಿಗೆ ಬೇಸರದ ಸುದ್ದಿ.! ಚಿನ್ನದ ಬೆಲೆ ಮತ್ತೆ ಏರಿಕೆ.! ಪ್ರಸ್ತುತ ಗೋಲ್ಡ್‌ ರೇಟ್‌ ಎಷ್ಟಿದೆ ನೋಡಿ.!

● ಸುಕನ್ಯಾ ಸಮೃದ್ಧಿ ಖಾತೆಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಲು ಅವಕಾಶವಿದೆ
● ಒಂದು ವೇಳೆ ದೂರದೃಷ್ಟವಶಾತ್ ಆ ಹೆಣ್ಣು ಮಗು ಮ’ರ’ಣ ಹೊಂದಿದ್ದರೆ ನಿಯಮಗಳ ಪ್ರಕಾರ ದಾಖಲೆಗಳನ್ನು ಸಲ್ಲಿಸಿ ಪೋಷಕರು ಹಣ ಹಿಂಪಡೆಯಬಹುದು
● ಆದಾಯ ತೆರಿಗೆ ನೀತಿ ಸೆಕ್ಷನ್ 80C ಅಡಿ ವಿನಾಯಿತಿ ಕೂಡ ಇದೆ
● ಯಾವುದೇ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment