Sukanya Samruddi Scheme
ಹೆಣ್ಣು ಮಕ್ಕಳ ಪೋಷಕರು ತಪ್ಪದೆ ತಿಳಿದುಕೊಳ್ಳಬೇಕಾದ ಮಾಹಿತಿ ಇದು.
ಸಣ್ಣ ಉಳಿತಾಯ ಯೋಜನೆಗಳು (Small Saving Schemes) ಭವಿಷ್ಯದಲ್ಲಿ ಬಹಳ ಅನುಕೂಲತೆ ತರುತ್ತದೆ. ಆದರೆ ನಾವು ಹೂಡಿಕೆ ಮಾಡುವ ಕ್ಷೇತ್ರ ಬಹಳ ಮುಖ್ಯವಾಗುತ್ತದೆ. ಯಾಕೆಂದರೆ ಭವಿಷ್ಯದ ಕನಸು ಹೊತ್ತಿ ಈಗಿರುವ ದುಡಿಮೆಯಲ್ಲಿ ಹಣ ಉಳಿಸುತ್ತಿರುವುದರಿಂದ ಆ ಹಣಕ್ಕೆ ಲಾಭದ ಜೊತೆಗೆ ಭದ್ರತೆಯ ಗ್ಯಾರೆಂಟಿಯೂ ಬೇಕಿರುತ್ತದೆ.
ಹೀಗಾಗಿ ಕೇಂದ್ರ ಸರ್ಕಾರವು (Central Government) ಅಂಚೆ ಕಛೇರಿ (Post office) ಮೂಲಕ ಬಡ ಹಾಗೂ ಸಾಮಾನ್ಯ ಜನರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳನ್ನು ಪ್ರತಿ ವರ್ಗಕ್ಕೂ ಅನುಕೂಲವಾಗುವ ರೀತಿಯಲ್ಲಿ ರೂಪಿಸಿದೆ.
ಇವುಗಳಲ್ಲಿ ಪ್ರಮುಖವಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSY), ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF), ನ್ಯಾಷನಲ್ ಪೆನ್ಷನ್ ಸ್ಕೀಮ್ (NPS) ಮುಂತಾದ ಸ್ಮಾಲ್ ಸೇವಿಂಗ್ ಸ್ಕೀಮ್ ಗಳನ್ನು ಪ್ರಮುಖವಾಗಿ ಹೆಸರಿಸಬಹುದು.
ಈ ಸುದ್ದಿ ಓದಿ:- ATM Pin : ನಿಮ್ಮ ATM ಪಿನ್ ಕೋಡ್ ಮರೆತು ಹೋಗಿದ್ಯಾ.? ಹೊಸ ಪಿನ್ ಸಂಖ್ಯೆ ರಚಿಸಲು ಜಸ್ಟ್ ಹೀಗೆ ಮಾಡಿ ಸಾಕು.!
ಇವುಗಳಲ್ಲಿ ದೇಶದಾದ್ಯಂತ ಬಹಳ ಖ್ಯಾತಿ ಹೊಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ (PM Narendra Modi) ಕನಸಿನ ಹೆಮ್ಮೆಯ ಯೋಜನೆಯಾದ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದಲೇ ರೂಪಿಸಲಾದ ಸುಕನ್ಯಾ ಸಮೃದ್ಧಿ ಯೋಜನೆ ಪ್ರಯೋಜವನ್ನು ಈಗ ದೇಶದ ಕೋಟ್ಯಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ದಾರೆ.
ಆದರೆ ಅಕ್ಟೋಬರ್ 1ರಿಂದ, ಈ ಜನಪ್ರಿಯ ಯೋಜನೆಯಲ್ಲಿ ಕೆಲ ಬದಲಾವಣೆಗಳಾಗುತ್ತಿದೆ. ಪ್ರತಿಯೊಬ್ಬರು ಹೆಣ್ಣು ಮಕ್ಕಳ ಪೋಷಕರು ಕೂಡ ಈ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ, ಅದರ ವಿವರ ಹೀಗಿದೆ ನೋಡಿ.
ಬದಲಾವಣೆಗಳು
1. ಸುಕನ್ಯಾ ಸಮೃದ್ಧಿ ಖಾತೆಯನ್ನು 10 ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಬೇಕಾಗಿರುತ್ತದೆ. ಆದರೆ ಈ ಖಾತೆಗೆ ನಿಯಮಗಳ ಪ್ರಕಾರವಾಗಿ ಆಕೆಯ ತಂದೆ / ತಾಯಿ ಈ ಖ ಹಣ ಹೂಡಿಕೆ ಮಾಡುತ್ತಿರುತ್ತಾರೆ ಅಥವಾ ಪೋಷಕರು ಖಾತೆ ತೆರೆದು ಹೂಡಿಕೆ ಮಾಡಬಹುದು.
ಆದರೆ ಈಗ ಇದರಲ್ಲಿ ನಿಯಮ ಬದಲಾಗಿದೆ ಆ ಹೆಣ್ಣು ಮಗುವಿನ ಹೆಸರಿನಲ್ಲಿ ಅವರ ಅಜ್ಜ ಅಥವಾ ಅಜ್ಜಿ ಪಾಲಕರಾಗಿ (Guardian) ಸುಕನ್ಯಾ ಸಮೃದ್ಧಿ ಖಾತೆ ತೆರೆದರೆ ಆ ಖಾತೆ ಸಿಂಧುವಾಗಿರುವುದಿಲ್ಲ, ಹೊಸದಾಗಿ ಖಾತೆ ತೆರೆಯುವಾಗ ಇದಕ್ಕೆ ಅವಕಾಶವೂ ಇರುವುದಿಲ್ಲ.
ಹೆಣ್ಣು ಮಗುವಿನ ತಂದೆ ಅಥವಾ ತಾಯಿಯ ಹೆಸರಿಗೆ ಖಾತೆಯ ಪಾಲಕತ್ವ ವರ್ಗಾವಣೆ ಆಗುತ್ತದೆ ಅಥವಾ ಕಾನೂನು ಪ್ರಕಾರ ಯಾರು ಪಾಲಕರಾಗಿರುತ್ತಾರೋ ಅವರಿಗೆ ವರ್ಗಾವಣೆ ಆಗುತ್ತದೆ. ಒಂದು ವೇಳೆ ಆ ಹೆಣ್ಣು ಮಗುವಿಗೆ ಅಜ್ಜ ಅಥವಾ ಅಜ್ಜಿ ಹೊರತುಪಡಿಸಿ ಬೇರೆ ಯಾರೂ ಪಾಲಕರು ಇಲ್ಲ ಎಂಬ ಸಂದರ್ಭ ಇದ್ದಾಗ ಮಾತ್ರ ಅವಕಾಶವಿರುತ್ತದೆ.
ಈ ಸುದ್ದಿ ಓದಿ:- UPI ಬಳಕೆದಾರರಿಗೆ ಶಾಕಿಂ’ಗ್ ನ್ಯೂಸ್.! ಇನ್ಮುಂದೆ ಡಿಜಿಟಲ್ ಪಾವತಿಗೆ ಶೇಕಡ 18%- GST ಟ್ಯಾಕ್ಸ್ ಕಡ್ಡಾಯ.!
2. ಒಂದು ಕುಟುಂಬದಲ್ಲಿ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಷ್ಟೇ ಸುಕನ್ಯಾ ಸಮೃದ್ಧಿ ಖಾತೆ ತೆರೆಯಲು ಅವಕಾಶ ಇರುತ್ತದೆ. ಆದರೆ ಒಂದು ವೇಳೆ ಎರಡನೇ ಮಗುವಿನ ಜನನ ಸಮಯದಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನಿಸಿದ್ದಾಗ ಮಾತ್ರ 3 ಹೆಣ್ಣು ಮಕ್ಕಳ ಹೆಸರಿನಲ್ಲೂ ಸುಕನ್ಯ ಸಮೃದ್ಧಿ ಖಾತೆ ತೆರೆಯಲು ಸರ್ಕಾರ ಅನುಮತಿ ಕೊಟ್ಟಿರುತ್ತದೆ.
ಹಾಗೆ ಒಂದು ಮಗುವಿನ ಹೆಸರಿನಲ್ಲಿ ಒಂದೇ ಖಾತೆ ತೆರೆಯಲು ಅವಕಾಶ ಇರುತ್ತದೆ. ಹೀಗಾಗಿ ಒಂದು ವೇಳೆ ಪೋಷಕರು ಮಾಹಿತಿ ಮರೆಮಾಚಿ ಒಂದು ಮಗುವಿನ ಹೆಸರಿನಲ್ಲಿ ಹೆಚ್ಚು ಖಾತೆಗಳನ್ನು ಅಥವಾ ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆ ಹೊಂದಿದ್ದರೆ ಮುಲಾಜಿಲ್ಲದೆ ಆ ಖಾತೆಗಳನ್ನು ರದ್ದುಪಡಿಸಲಾಗುತ್ತದೆ.