Svanidhi Scheme ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಸಿಗಲಿದೆ 80,000/-

Svanidhi Scheme

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ( P M Narendra Modi) ಕಳೆದೊಂದು ದಶಕದಿಂದ ದೇಶದಾದ್ಯಂತ ಹಲವಾರು ವಿಚಾರಗಳಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ್ದಾರೆ.ದೇಶದ ಪ್ರತಿಯೊಂದು ವರ್ಗದ ಏಳಿಗೆ ಬಗ್ಗೆ ದೂರ ದೃಷ್ಟಿಯಿಂದ ಚಿಂತಿಸಿ ಯೋಜನೆಗಳನ್ನು ರೂಪಿಸಿದ್ದಾರೆ. ಬಡ ಜನರ ಹಾಗೂ ಕಡಿಮೆ ಆದಾಯವುಳ್ಳ ಜನರಿಗಾಗಿ ರೂಪಿಸಿಲಾದ ಜನಪರ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು (PM Swanidhi Scheme) ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಯಾಕೆಂದರೆ ಈ ಯೋಜನೆಯಡಿ ರೂ.80000 ವರೆಗೂ ಕೂಡ ಯಾವುದೇ ಆಧಾರವಿಲ್ಲದಿದ್ದರೂ ಆಧಾರ್ ಕಾರ್ಡ್ ಮತ್ತು ಕೇಳಲಾಗುವ ಕಡಿಮೆ ದಾಖಲೆಗಳಿಂದ ಸಾಲ ಪಡೆಯಬಹುದು. ಏನೆಲ್ಲಾ ದಾಖಲೆ ಪತ್ರಗಳನ್ನು ನೀಡಬೇಕು? ಯಾರು ಅರ್ಜಿ ಸಲ್ಲಿಸಲು ಅರ್ಹರು ಮತ್ತು ಅಪ್ಲೈ ಮಾಡುವುದು ಹೇಗೆ? ಈ ಕುರಿತ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.

WhatsApp Group Join Now
Telegram Group Join Now
ಯೋಜನೆಯ ಹೆಸರು:- ಪ್ರಧಾನಮಂತ್ರಿ ಸ್ವನಿಧಿ ಯೋಜನೆ

ಯೋಜನೆಯ ಉದ್ದೇಶ:-

* ಕಡಿಮೆ ಆದಾಯ ಹೊಂದಿರುವ ಬೀದಿ ಬಳಿ ವ್ಯಾಪಾರಿಗಳಿಗೆ ವ್ಯವಹಾರವನ್ನು ಸ್ಥಿರಗೊಳಿಸಲು ಹಾಗೂ ವಿಸ್ತರಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ನೆರವಾಗುವುದು
*ಸಈ ಮೂಲಕ ಆರ್ಥಿಕ ಶ್ರೇಣಿಕರಣಕ್ಕೆ ಅವಕಾಶ ಒದಗಿಸುವುದು

ಅನುದಾನದ ಮೊತ್ತ :-
  • ಒಟ್ಟು ಮೂರು ಹಂತಗಳಲ್ಲಿ ಈ ಯೋಜನೆಯಡಿ ಸಾಲ ಮಂಜೂರು ಮಾಡಲಾಗುತ್ತದೆ
  • ಮೊದಲನೇ ಹಂತದಲ್ಲಿ ರೂ. 10,000
  • ಎರಡನೇ ಹಂತದಲ್ಲಿ ರೂ. 20,000 ಮತ್ತು
  • ಮೂರನೇ ಹಂತದಲ್ಲಿ ರೂ. 50,000 ದವರೆಗೆ ಸಾಲ ಪಡೆಯಬಹುದು
  • ವಾರ್ಷಿಕವಾಗಿ 7% ಬಡ್ಡಿದರದಲ್ಲಿ ಈ ಯೋಜನೆ ರೂಪಿಸಲಾಗಿದೆ ಮತ್ತು ಡಿಜಿಟಲ್ ಪೇಮೆಂಟ್ ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಗಳಿಗೆ ವಾರ್ಷಿಕವಾಗಿ ರೂ. 1200 ವರೆಗೆ ಕ್ಯಾಶ್ ಬ್ಯಾಕ್ ಆಫರ್ ಕೂಡ ನೀಡಲಾಗುತ್ತದೆ

ಅರ್ಜಿ ಸಲ್ಲಿಸಲು ಅರ್ಹತೆಗಳು:-

  • ಭಾರತದ ನಾಗರಿಕನಾಗಿರಬೇಕು
  • 18 ವರ್ಷ ಮೇಲ್ಪಟ್ಟವರಾಗಿರಬೇಕು
  • ಆಧಾರ್ ಕಾರ್ಡ್ ಹೊಂದಿರಬೇಕು
  • ಹಣ್ಣು, ಹೂವು, ತರಕಾರಿ, ಚಾಪೆ, ಉಡುಪು ಈ ರೀತಿ ಬೀದಿ ಬಳಿ ವ್ಯಾಪಾರ ಮಾಡುವಂತಹ ವ್ಯವಹಾರಗಳಲ್ಲಿ ತೊಡಗಿಕೊಂಡಿರಬೇಕು
    ಇದಕ್ಕೆ ಸಂಬಂಧಿಸಿದ ಇನ್ನಿತರ ದಾಖಲೆಗಳನ್ನು ಒದಗಿಸಬೇಕು

ಬೇಕಾಗುವ ದಾಖಲೆಗಳು:-

  •  ಅರ್ಜಿದಾರರ ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  •  ಬ್ಯಾಂಕ್ ಪಾಸ್ ಬುಕ್
  •  ಮೊಬೈಲ್ ನಂಬರ್
  •  ಇತ್ತೀಚಿನ ಭಾವಚಿತ್ರ
  • ಯೋಜನಾ ಘಟಕದ ವಿವರ.
  • ವಿಳಾಸ ಪುರಾವೆ

ಅಪ್ಲೈ ಮಾಡುವ ವಿಧಾನ:-

* ಯಾವುದೇ ಸರ್ಕಾರಿ ಬ್ಯಾಂಕ್ ಗಳಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ
* ದೇಶದಲ್ಲಿ ಮಾನ್ಯತೆ ಪಡೆದಿರುವಂತಹ ನಿಗಮಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

* ಮೊದಲಿಗೆ ಅರ್ಜಿ ಫಾರಂ ಪಡೆದು ಸರಿಯಾದ ಮಾಹಿತಿಗಳನ್ನು ತುಂಬಿಸಿ ಕೇಳಲಾದ ಸೂಕ್ತ ದಾಖಲೆಗಳ ಪುರಾವೆ ಪ್ರತಿ ಒದಗಿಸಿದರೆ ಅನುಮೋದನೆಯಾದ ನಂತರ ಸಾಲದ ಮೊತ್ತವು ನೇರವಾಗಿ ಅರ್ಜಿದಾರರ ಖಾತೆಗೆ ತಲುಪುತ್ತದೆ ಮತ್ತು ನಂತರ ನಿಯಮಗಳಿಗೆ ಅನುಸಾರವಾಗಿ ನೀವುಗೆ ನೀಡಿರುವ ಕಾಲಾವಕಾಶದ ಒಳಗೆ ಬಡ್ಡಿ ದರದ ಸಮೇತ ಸಾಲ ಮರುಪಾವತಿಸಿ ಮುಂದಿನ ಹಂತದ ಸಾಲ ಪಡೆದುಕೊಳ್ಳಬಹುದು. ಈ ಯೋಜನೆಯು ಅನೇಕರ ಪಾಲಿಗೆ ಪಾಲಿಗೆ ಪ್ರದಾನ ವಾಗಲಿದೆ ಹಾಗಾಗಿ ತಪ್ಪದೆ ಈ ಅತ್ಯುತ್ತಮ ಮಾಹಿತಿಯನ್ನು ಇತರರೊಂದಿಗೆ ಶೇರ್ ಮಾಡಿ.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment