Swavalambi Sarathi Scheme: ವಾಹನ ಖರೀದಿಗೆ ಸರ್ಕಾರದಿಂದ‌ 3 ಲಕ್ಷ ಸಹಾಯಧನ.!

Swavalambi Sarathi Scheme:

ಸ್ವಾವಲಂಬಿ ಸಾರಥಿ ಯೋಜನೆ(Swavalambi Sarathi Scheme)ಯ ಮೂಲಕ ಒಬ್ಬ ಕುಟುಂಬಸ್ಥ 4 ಚಕ್ರದ ವಾಹನ(four wheeler)ವನ್ನು ಖರೀದಿಸಲು(buy) ರಾಜ್ಯ ಸರ್ಕಾರ(State Govt)ವು ಸಬ್ಸಿಡಿ(Subsidy)ಯ ಮೂಲಕ ಆರ್ಥಿಕ ಸಹಾಯ(Financial assistance)ವನ್ನು ನೀಡುತ್ತಿದೆ.

ಈ ಸುದ್ದಿ ಓದಿ:- Annabhagya Yojana: ಪಡಿತರ ಫಲಾನುಭವಿಗಳಿಗೆ ಬಿಗ್‌ ಶಾಕ್ ಇನ್ಮುಂದೆ ನಿಮಗೆ 5 ಕೆಜಿ ಅಕ್ಕಿ ಹಣ ಸಿಗಲ್ಲ.!

ಅಷ್ಟೇ ಅಲ್ಲದೆ, ಈ ಯೋಜನೆಗೆ ಯಾವುದೇ ಕೆಳವರ್ಗ(lower class) ಮತ್ತು ಬಡ ರೇಖೆಗಿಂತ ಕೆಳಗಿರುವ ಕುಟುಂಬಸ್ಥರು ಈ ಯೋಜನೆ ಅಡಿಯಲ್ಲಿ 3 ಲಕ್ಷ ಸಬ್ಸಿಡಿಯನ್ನು ಪಡೆಯುವ ಮೂಲಕ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು.

WhatsApp Group Join Now
Telegram Group Join Now

ಹೌದು, ವಾಹನ ಖರೀದಿಸಲು ರಾಜ್ಯ ಸರ್ಕಾರದಿಂದ 3 ಲಕ್ಷ ರೂ. ಸಹಾಯಧನ ನೀಡುವ ಸ್ವಾವಲಂಬಿ ಸಾರಥಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಯುವ ಜನರು ಸ್ವಯಂ ಉದ್ಯೋಗ ಮಾಡಿ ಆರ್ಥಿಕವಾಗಿ ಸದೃಢರಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇಂದು ನಾವು ಈ ಯೋಜನೆಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇವೆ. ಕೊನೆವರೆಗೂ ಈ ಲೇಖನವನ್ನು ಓದಿ ಮಾಹಿತಿ ತಿಳಿದುಕೊಳ್ಳಿ.!

ಈ ಸುದ್ದಿ ಓದಿ:- Mudra Yojana : ನಿಮ್ಮ ಬಳಿ ಈ ದಾಖಲೆಗಳು ಇದ್ದರೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ಸಾಲ.!

ಈ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ಪಡೆದ ಟ್ಯಾಕ್ಸಿ /ಗೂಡ್ಸ್ ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ.ವರೆಗೆ, ಪ್ರಯಾಣಿಕ ಆಟೋ ರಿಕ್ಷಾ ಖರೀದಿ(Auto rickshaw purchase)ಸಲು ಗರಿಷ್ಠ 75 ಸಾವಿರ ರೂ. ಸಹಾಯಧನ(Subsidy) ನೀಡಲಾಗುತ್ತದೆ.

ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು. ಈ ಯೋಜನೆ ಅಡಿಯಲ್ಲಿ ಒಬ್ಬ ವ್ಯಕ್ತಿಯು ಕಾರು ಅಥವಾ ಗೂಡ್ ವಾಹನಗಳಂತಹ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಮೂಲಕಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು . ಈ ಯೋಜನೆಯ ವಿವರ ಹೀಗಿದೆ ನೋಡಿ.

ಯೋಜನೆಗೆ ಸಬ್ಸಿಡಿ ಪಡೆಯಲು ಬೇಕಾಗುವ ಅರ್ಹತೆಗಳು.?

– ಹಿಂದುಳಿದ ವರ್ಗ ಪ್ರ-1, 2A, 2B, 3A ಮತ್ತು 3B
– ಈ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರನು ಕನಿಷ್ಠ 21ರಿಂದ 45 ವರ್ಷದೊಳಗಿನ ನಿರುದ್ಯೋಗಿ ಆಗಿರಬೇಕು.
– ಅಷ್ಟೇ ಅಲ್ಲದೆ ಆ ಕುಟುಂಬಸ್ಥನ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಮೇಲ್ಪಟ್ಟಿರಬಾರದು.
– ಜೊತೆಗೆ ಆ ವ್ಯಕ್ತಿಯು ಸಾರಿಗೆ ಅಧಿಕಾರಿಯಿಂದ ನೀಡಲಾದ (DL) ಡ್ರೈವಿಂಗ್ ಲೈಸೆನ್ಸ್ ನನ್ನು ಹೊಂದಿರಬೇಕು.

– ಆ ಕುಟುಂಬದ ಯಾವುದೇ ಸದಸ್ಯನೋ ಸರಕಾರಿ ಉದ್ಯೋಗದ ಅಡಿಯಲ್ಲಿ, ಕಾರ್ಯನಿರ್ವಹಿಸಿದ ಬಾರದು.
– ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವ ಕುಟುಂಬಸ್ಥರು ಭಾರತದ ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಹಿಂದುಳಿದ ವರ್ಗದವರಾಗಿರಬೇಕು.
– ವಾಹನದ ಪರವಾನಗಿ: ಲಘುವಾಹನ /ಲೈಟ್
– ವಾಹನದ ವಿವರಗಳು: ಟೂರಿಸ್ಟ್ ಅಥವಾ ಗೂಡ್ಸ್ ವಾಹನಗಳು

ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು?

– ಆಧಾರ್ ಕಾರ್ಡ್
– ಬ್ಯಾಂಕ್ ಪಾಸ್ ಬುಕ್
– ಆದಾಯ ದೃಡೀಕರಣ ಪತ್ರ / ಜಾತಿ ದೃಢೀಕರಣ ಪತ್ರ
– (DL) ಡ್ರೈವಿಂಗ್ ಲೈಸೆನ್ಸ್
– ಫೋಟೋ
– ಮೊಬೈಲ್ ನಂಬರ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳಾದ ಆಗಸ್ಟ್ 30 2024 ಕೊನೆ ದಿನಾಂಕವಾಗಿದೆ. ಎಲ್ಲಾ ಮುಖ್ಯ ದಾಖಲೆಗಳನ್ನು ಹೊಂದಿಸಿಕೊಂಡು. ನಿಮ್ಮ ಹತ್ತಿರದ ಗ್ರಾಮ ಓನ್/ ಕರ್ನಾಟಕ ಓನ್/ ಬೆಂಗಳೂರು ಓನ್ ನಾಗರಿಕ ಸೇವ ಕೇಂದ್ರಗಳಲ್ಲಿ, ಈ ಯೋಜನೆಗೆ ನಿಮ್ಮ ದಾಖಲೆಗಳನ್ನು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಯಾವ ನಿಗಮದಲ್ಲಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಬಹುದು?

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ & ಅರೆ- ಅಲೆಮಾರಿ ಅಭಿವೃದ್ಧಿ ನಿಗಮ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment