Teacher: 5,267 ಶಿಕ್ಷಕರ ನೇಮಕಾತಿ ಆಸಕ್ತರು ಅರ್ಜಿ ಹಾಕಿ.!

Teacher

ಭವಿಷ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರಾಗುವ (GPSTR recruitment) ಕನಸು ಹೊಂದಿರುವ ಆಕಾಂಕ್ಷಿಗಳಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿಯೊಂದಿದೆ. ಅದೇನೆಂದರೆ, ಕಲ್ಯಾಣ ಕರ್ನಾಟಕ ಭಾಗದ (KK) ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ.

ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿ ಕೇಳಿಕೊಳ್ಳಲಾಗಿತ್ತು. 2024-25 ನೇ ಸಾಲಿನ ಬಜೆಟ್ ಮಂಡನೆ ಸಮಯದಲ್ಲೂ ಕೂಡ ಸರ್ಕಾರ ಈ ಕುರಿತು ಭರವಸೆ ನೀಡಿತ್ತು. ಅಂತೆಯೇ ಇದೀಗ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮಂಜೂರಾತಿ ಆದೇಶ ಸಿಕ್ಕಿದೆ.

WhatsApp Group Join Now
Telegram Group Join Now

ಪ್ರಾರ್ಥಮಿಕ ಹಂತದಿಂದ ಪ್ರೌಢ ಶಿಕ್ಷಣದವರೆಗೆ ಎಲ್ಲಾ ಹಂತಗಳಲ್ಲಿ ಹೆಚ್ಚುವರಿ ಶಿಕ್ಷಕರ ಅವಶ್ಯಕತೆ ವಿಚಾರವನ್ನು ಮನಗಂಡ ಸರ್ಕಾರವು ಈ ಭಾಗದಲ್ಲಿ ಗುಣಾತ್ಮಕ ಶಿಕ್ಷಣವನ್ನು ಖಾತ್ರಿಗೊಳಿಸಲು ಹೊಸ ಶಿಕ್ಷಕರ ನೇಮಕಾತಿ ಮೂಲಕ ಕ್ರಮ ಕೈಗೊಂಡಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟಾರೆಯಾಗಿ ಪ್ರಾಥಮಿಕ ಶಾಲೆ ಪ್ರೌಢಶಾಲೆ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಸೇರಿದಂತೆ 6,584 ಶಿಕ್ಷಕರ ಕೊರತೆ ಇದೆ ಆದರೆ ಈಗ ಹೊರಡಿಸಿರುವ ನೇಮಕಾತಿ ಆದೇಶದ ಅನುಮತಿ ಪತ್ರದಲ್ಲಿ 80% ಹುದ್ದೆಗಳನ್ನು ಭರ್ತಿಗೊಳಿಸುವ ನಿರ್ಧಾರಕ್ಕೆ ಸರ್ಕಾರ ಬಂದಿದ್ದು ಕ್ರಮ ಕೈಗೊಂಡಿದೆ.

ಈ ಮೇಲೆ ತಿಳಿಸಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸುವುದರ ಜೊತೆಗೆ ಶಿಕ್ಷಕರ ಕೊರತೆಗಳನ್ನು ನೀಗಿಸಿ ಆ ಭಾಗದಲ್ಲಿ ಶಿಕ್ಷಣ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎನ್ನುವ ಮಹತ್ವಕಾಂಕ್ಷೆಯಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ಈ ಆದೇಶಕ್ಕೆ ಸಂಬಂಧಿಸಿದಂತೆ ಹಣಕಾಸು ಅಂದಾಜು ಮತ್ತು ಮುಂದಿನ ಆದೇಶದ ಬಗ್ಗೆಯೂ ಕೂಡ ಮಾಹಿತಿ ಹಂಚಿಕೊಂಡಿರುವ ಶಿಕ್ಷಣ ಇಲಾಖೆಯು ಈ ನೇಮಕಾತಿಯ ಪೂರ್ವ ಪ್ರಕ್ರಿಯೆ ಪೂರ್ತಿಗೊಂಡ ಬಳಿಕ ಹಣಕಾಸಿನ ಅಂದಾಜಿನ ಬಗ್ಗೆ ಚರ್ಚಿಸಿ ಪೂರಕ ಪ್ರಸ್ತಾವನೆಯೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ನೇಮಕಾತಿಯ ಅಧಿಕೃತ ಅಂತಿಮ ಆದೇಶ ಹೊರಡಿಸುವ ಮೊದಲೇ ಎಲ್ಲಾ ಬಾಹ್ಯ ಅಂಶಗಳನ್ನು ಕೂಡ ಗಮನಿಸಿ ಸರ್ಕಾರದ ನಿಯಮದ ಪ್ರಕಾರವಾಗಿಯೇ ಅನುಮೋದನೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಹೊಸ ಆದೇಶದ ಪ್ರಕಾರವಾಗಿ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರ ಹುದ್ದೆ ನೇಮಕಾತಿ ವಿವರ ಹೀಗಿದೆ ನೋಡಿ.
* ಪ್ರಾರ್ಥಮಿಕ ಶಾಲಾ ಶಿಕ್ಷಕರು (1 ರಿಂದ 5ನೇ ತರಗತಿವರೆಗೆ) – 4,424 ಹುದ್ದೆಗಳು
* ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6‌ರಿಂದ 8ನೇ ತರಗತಿವರೆಗೆ) – 78 ಹುದ್ದೆಗಳು
* ದೈಹಿಕ ಶಿಕ್ಷಣ ಶಿಕ್ಷಕರು (ಗ್ರೇಡ್ – 2) – 380 ಹುದ್ದೆಗಳು

ಸಾಕಷ್ಟು ವರ್ಷಗಳಿಂದ ಶಿಕ್ಷಕರ ನೇಮಕಾತಿ ನೋಟಿಫಿಕೇಶನ್ ಗಾಗಿ ರಾಜ್ಯದ ಲಕ್ಷಾಂತರ ಆಕಾಂಕ್ಷಿಗಳು ಕಾಯುತ್ತಿದ್ದರು. ಇದೀಗ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ಆಗುತ್ತಿರುವುದು ಹಾಗೂ ಮುಂಬರುವ ದಿನಗಳಲ್ಲಿ ಉಳಿಕೆ ವೃಂದದ ಹಾಗೂ ಇತರೆ ಭಾಗದಲ್ಲೂ ಅಗತ್ಯ ಶಿಕ್ಷಕರ ನೇಮಕಾತಿ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವ ಮಾಹಿತಿ ಹಂಚಿಕೊಂಡಿರುವುದರಿಂದ ಅನೇಕರ ಕನಸು ನೆರವೇರುವ ಸಂದರ್ಭವಾಗಿದೆ. ಹೀಗಾಗಿ ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ಹೆಚ್ಚಿನ ಸ್ನೇಹಿತರೊಂದಿಗೆ ಶೇರ್ ಮಾಡಿ ತಯಾರಿಯನ್ನು ಚುರುಕಿಗೊಳಿಸುತ್ತಾ ಜಾಗೃತಿ ಮೂಡಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment