Teacher 2,439 ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ.! SSLC, PUC ಆದವರು ಅರ್ಜಿ ಹಾಕಿ.!

Teacher

ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗೆ ಈ ಲೇಖನದ ಮೂಲಕ ಒಂದು ಸಿಹಿ ಸುದ್ದಿಯನ್ನು ನೀಡಲು ಬಯಸುತಿದ್ದೇವೆ. ಅದೇನೆಂದರೆ, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬೃಹತ್ ಸಂಖ್ಯೆಯಲ್ಲಿ ಅಂಗನವಾಡಿ ಟೀಚರ್ (Anganwadi teachers recruitment) ಹಾಗೂ ಸಹಾಯಕಿಯರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಮಹಿಳೆಯರಿಗೆ ಮೀಸಲಾದಂತಹ ಕ್ಷೇತ್ರವಿದು ಎನ್ನಬಹುದು, ಅಲ್ಲದೇ ಮಹಿಳೆಯರಿಗೆ ತಾವು ವಾಸಿಸುವ ವ್ಯಾಪ್ತಿಯಲ್ಲಿ ಉದ್ಯೋಗ ಮಾಡುವ ಅವಕಾಶವೂ ಕೂಡ ಸಿಗುವುದರಿಂದ ಈ ಹುದ್ದೆ ಅನೇಕರ ಕನಸು. ನೀವು ಕೂಡ ಈ ಬಗ್ಗೆ ಆಸಕ್ತರಾಗಿದ್ದರೆ.

WhatsApp Group Join Now
Telegram Group Join Now

ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು? ಅಭ್ಯರ್ಥಿಗಳ ಆಯ್ಕೆಯ ಮಾನದಂಡಗಳೇನು? ಇತ್ಯಾದಿ ನೇಮಕಾತಿ ಸಂಬಂಧಿಸಿದ ಪ್ರಮುಖ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- Ration Card : ರೇಷನ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ಸೇರ್ಪಡೆ ಆಗಿದಿಯೇ ಇಲ್ಲವೇ ಈ ರೀತಿ ಚೆಕ್ ಮಾಡ್ಕೊಳಿ.!
ನೇಮಕಾತಿ ಸಂಸ್ಥೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಹುದ್ದೆ ಹೆಸರು:-
* ಅಂಗನವಾಡಿ ಕಾರ್ಯಕರ್ತೆಯರು
* ಅಂಗನವಾಡಿ ಸಹಾಯಕಿಯರು

ಒಟ್ಟು ಹುದ್ದೆಗಳ ಸಂಖ್ಯೆ:- 2,439 ಹುದ್ದೆಗಳು

ಜಿಲ್ಲಾವಾರು ವಿಭಾಗ:-

* ಮಂಡ್ಯ – 341
* ದಕ್ಷಿಣ ಕನ್ನಡ – 335
* ರಾಯಚೂರು – 391
* ರಾಮನಗರ – 216
* ಉಡುಪಿ – 193
* ಗದಗ – 196
* ವಿಜಯನಗರ – 297
* ಬಳ್ಳಾರಿ – 102
* ಯಾದಗಿರಿ – 490

ಶೈಕ್ಷಣಿಕ ವಿದ್ಯಾರ್ಹತೆ:-

* ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗಳಿಗೆ PUC ಪೂರ್ಣಗೊಳಿಸಿದ, SSLC ಯಲ್ಲಿ ಪ್ರಥಮ ಭಾಷೆ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಅಭ್ಯಾಸ ಮಾಡಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಅಂಗನವಾಡಿ ಸಹಾಯಕಿಯರು ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾದ ಮಹಿಳೆಯರು ಅರ್ಜಿ ಸಲ್ಲಿಸಬಹುದು

ವಯೋಮಿತಿ:-

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 19 ವರ್ಷಗಳು
* ಗರಿಷ್ಠ ವಯೋಮಿತಿ 35 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ:-

* ಆಸಕ್ತ ಅಭ್ಯರ್ಥಿಗಳು ನೇರವಾಗಿ https://karnemakone.kar.nic.in website ಗೆ ಭೇಟಿ ನೀಡಿ ಆನ್ಲೈನ್ ವಿಧಾನದಲ್ಲಿಯೇ ಅರ್ಜಿ ಸಲ್ಲಿಸಬೇಕು
ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕವಾದ ಅರ್ಜಿ ಸಲ್ಲಿಸುವ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಆ ದಿನಾಂಕದೊಳಗೆ ಪೂರಕ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
* ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಪಡೆಯಿರಿ.

ಈ ಸುದ್ದಿ ಓದಿ:- Pradhan Mantri Ujjwala Yojana: ಉಚಿತ ಗ್ಯಾಸ್ ವಿತರಣೆ ಆಸಕ್ತರು ಅರ್ಜಿ ಸಲ್ಲಿಸಿ.!
ಆಯ್ಕೆ ವಿಧಾನ:-

* ಅರ್ಜಿ ಸಲ್ಲಿಸಿದವರ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇನ್ನಿತರ ಅರ್ಹತಾ ಮಾನದಂಡಗಳನ್ನು ಪರಿಗಣಿಸಿ ಜೇಷ್ಠತಾ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ಅಂಗಿಕೃತ ಸಂಸ್ಥೆಗಳಿಂದ ICC ಕೋರ್ಸ್ ಅಥವಾ ಡಿಪ್ಲೋಮೋ ಅಥವಾ JOC ಅಥವಾ NTT ಅಥವಾ ಅಂಗನವಾಡಿ ಚಟುವಟಿಕೆಗಳಿಗೆ ಸಂಬಂಧಪಟ್ಟ ಡಿಪ್ಲೋಮಾ ಪಡೆದವರು ಹಾಗೂ ನ್ಯೂಟ್ರಿಷನ್ / ಹೋಂ ಸೈನ್ಸ್ / ಒಂದು ವರ್ಷದ ನರ್ಸರಿ / ಪೂರ್ವ ಪ್ರಾಥಮಿಕ ತರಬೇತಿ ಪಡೆದಂತಹ ಅಭ್ಯರ್ಥಿಗಳಿಗೂ ಕೂಡ ಆದ್ಯತೆ ಇರುತ್ತದೆ

* ವಿಧವೆಯರು, ವಿ’ಚ್ಛೇ’ದಿ’ತರು, ಪರಿತ್ಯಕ್ತರು, ಆಸಿಡ್ ದಾಳಿಗೆ ತುತ್ತಾದವರು ಹಾಗೂ ಅಂಗವಿಕಲರಿಗೂ ಕೂಡ ಆದ್ಯತೆ ಇರುತ್ತದೆ
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿ ಒಳಗೆ ವಾಸವಿರಬೇಕು ಎನ್ನುವ ಕಂಡೀಶನ್ ಕೂಡ ಇದೆ ಹಾಗೂ ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕೂಡ ಒದಗಿಸಬೇಕಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment