Free Gas: ಪ್ರತಿ ಮನೆಗೆ ವರ್ಷಕ್ಕೆ 3 LPG ಸಿಲಿಂಡರ್ ಉಚಿತ ಬಂಪರ್ ಆಫರ್ ಘೋಷಿಸಿದ ಸರ್ಕಾರ.!

Free Gas

ಜೂನ್ 28, 2024ರ ಶುಕ್ರವಾರದಂದು ಮಹಾರಾಷ್ಟ್ರ ರಾಜ್ಯ ಸರ್ಕಾರವು ತನ್ನ 2024-25 ನೇ ಸಾಲಿನ ವಾರ್ಷಿಕ ಬಜೆಟ್ (Maharastra Budget) ಮಂಡಣೆ ಮಾಡಿದೆ. ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಬಜೆಟ್ ನಲ್ಲೂ ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಬಾರಿ ಸದ್ದು ಮಾಡಿದ್ದ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ (Guaranty Schemes) ಛಾಯೆ ಕಂಡು ಬಂದಿದೆ ಎಂದೇ ಹೇಳಬಹುದಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರ ಮನ ಓಲೈಕೆ ಮಾಡಲು ಈ ಬಾರಿ ಕರ್ನಾಟಕ ಗ್ಯಾರಂಟಿ ಯೋಜನೆ ಮಾದರಿಯ ಕೆಲವು ವಿಶೇಷವಾದ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎನ್ನುವ ಮಾತುಗಳಿವೆ. ಕರ್ನಾಟಕದಂತೆ ಮಹಿಳೆಯರು, ನಿರುದ್ಯೋಗಿಗಳು, ಗೃಹಿಣಿಯರು, ರೈತರು, ಹಿರಿಯ ನಾಗರಿಕರು, ಯುವಕರು ಸೇರಿದಂತೆ ಹೀಗೆ ಪ್ರತಿಯೊಂದು ವರ್ಗದ ಶ್ರೇಯಕ್ಕೆ ಅನುಕೂಲಕರವಾಗುವಂತಹ ಯೋಜನೆಗಳನ್ನು ಘೋಷಿಸಲಾಗಿದೆ.

WhatsApp Group Join Now
Telegram Group Join Now

ಮಾನ್ಯ ಡಿಸಿಎಂ ಮತ್ತು ಹಣಕಾಸು ಸಚಿವರು ಕೂಡ ಆಗಿರುವ ಅಜಿತ್ ಪವರ್ ರವರು ಈ ಬಜೆಟ್ ಮಂಡಿಸಿದರು. ಮಹಾರಾಷ್ಟ್ರ ಸರ್ಕಾರದ ಬಜೆಟ್ ಅಲ್ಲಿ ಘೋಷಿಸಿಕೊಂಡ ವಿಶೇಷ ಯೋಜನೆಗಳು ಯಾವುವು ಎನ್ನುವುದರ ವಿವರ ಹೀಗಿದೆ ನೋಡಿ:-

* ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ (PMIY) ಗ್ಯಾಸ್ ಕನೆಕ್ಷನ್ ಪಡೆದಂತಹ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ವರ್ಷಕ್ಕೆ 12 ಸಿಲಿಂಡರ್ ಗಳಿಗೆ ಪ್ರತಿ ಸಿಲಿಂಡರ್ ಮೇಲೆ ರೂ.300 ಸಬ್ಸಿಡಿ ಹಣ ಸಿಗುತ್ತಿರುವುದು, ಆ ಮೂಲಕ ವಾರ್ಷಿಕವಾಗಿ ಮೂರು ಸಿಲಿಂಡರ್ ಗಳ ಹಣ ಉಳಿತಾಯವಾಗಿ ಒಟ್ಟಾರೆ ಸರ್ಕಾರದಿಂದ 3 ಸಿಲಿಂಡರ್ ಉಚಿತ ಪಡೆದಂತಾಗಿರುವುದು ಎಲ್ಲರಿಗೂ ತಿಳಿದಿದೆ ಮತ್ತು ಇದು ದೇಶದಾದ್ಯಂತ ಅನ್ವಯವಾಗಿದೆ. ಇದೇ ಮಾದರಿಯ ಯೋಜನೆಯು ಮಹಾರಾಷ್ಟ್ರದಲ್ಲೂ ಘೋಷಣೆಯಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮಾತ್ರವಲ್ಲದೆ ಪ್ರತಿ ಕುಟುಂಬಗಳಿಗೂ ಅನ್ವಯವಾಗುವಂತೆ ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯಡಿ (CM Annapoorana Scheme) ಒಂದು ಕುಟುಂಬಕ್ಕೆ ವಾರ್ಷಿಕವಾಗಿ ಮೂರು ಉಚಿತ ಸಿಲಿಂಡರ್‌ ವಿತರಣೆ ಮಾಡಲಾಗುವುದು ಎಂದು ಘೋಷಿಸಿದೆ. ಈ ಮೂಲಕ 52 ಲಕ್ಷ ಕುಟುಂಬಗಳಿಗೆ ಲಾಭ ಸಿಗಲಿದೆ, ಅದರಲ್ಲೂ ಐದು ಜನ ಇರುವ ಅವಿಭಕ್ತ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವರು ಹೇಳಿದ್ದಾರೆ.

* ಕರ್ನಾಟಕದಲ್ಲಿ ಜಾರಿಯಲ್ಲಿರುವ ಕುಟುಂಬದ ಯಜಮಾನಿಗೆ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi) ಹೋಲುವಂತಹ ಯೋಜನೆಯನ್ನು ಕೂಡ ಘೋಷಿಸಲಾಗಿದೆ. ಮಹಾರಾಷ್ಟ್ರದ 21 ರಿಂದ 60 ವರ್ಷ ವಯೋಮಾನದ ಮಹಿಳೆಯರಿಗೆ ಮಾಸಿಕ ರೂ.1500 ಸಹಾಯಧನ ನೀಡುವ ಮುಖ್ಯಮಂತ್ರಿ ಮಾಝಿ ಲಡ್ಕಿ ಬೆಹನ್‌ (ಮುಖ್ಯಮಂತ್ರಿ ಪ್ರೀತಿಯ ಸಹೋದರಿ) ಯೋಜನೆ ಘೋಷಣೆ ಮಾಡಲಾಗಿದೆ. 2024ರ ಜುಲೈ ತಿಂಗಳಿನಿಂದಲೇ ಅನ್ವಯವಾಗುವಂತೆ ಅರ್ಹ ಮಹಿಳೆಯರ ಖಾತೆಗೆ ಸರಕಾರದ ಈ ಯೋಜನೆ ಹಣ ತಲುಪಲಿದೆ ಎಂದು ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವರು ಭರವಸೆ ನೀಡಿದರು

* ಕರ್ನಾಟಕದ ಯುವ ನಿಧಿ (YuvaNidhi Scheme) ಯೋಜನೆಯ ಮಾದರಿಯಲ್ಲಿ ನಿರುದ್ಯೋಗಿ ಯುವಕರಿಗೆ ಮುಖ್ಯಮಂತ್ರಿ ಯುವ ಕಾರ್ಯ ತರಬೇತಿ ಯೋಜನೆಯಡಿ ಮಾಸಿಕ ರೂ.10,000 ಸಹಾಯಧನ ಯೋಜನೆಯನ್ನು ಮಹಾರಾಷ್ಟ್ರ ಸರಕಾರ ಘೋಷಿಸಿದೆ.

* ರೈತರಿಗಾಗಿ (for Farmers) ಕೆಲ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ಬಾಕಿ ಮನ್ನಾ, ಹತ್ತಿ ಹಾಗೂ ಸೋಯಾಬಿನ್‌ ಬೆಳೆಗಾರರಿಗೆ ಹೆಕ್ಟೇರ್‌ಗೆ ರೂ.5000 ಸಹಾಯಧನ ನೀಡಲು ಸರಕಾರ ನಿರ್ಧರಿಸಿದೆ, ಈರುಳ್ಳಿ ಬೆಳೆಗಾರರ ನೆರವಿಗೆ ಧಾವಿಸಿರುವ ಸರಕಾರ, 85 ಸಾವಿರ ಕೋಟಿ ಸಹಾಯಧನ ಪ್ರಕಟಿಸಿದ್ದು, ಕ್ವಿಂಟಾಲ್‌ ಈರುಳ್ಳಿಯನ್ನು ರೂ.350 ಖರೀದಿಸುವ ಭರವಸೆ ನೀಡಿ ವಾರ್ಷಿಕ ಯೋಜನ ಪಟ್ಟಿಯಲ್ಲಿ ಸೇರಿಸಿದೆ

* ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕೂಡ ವಿಶೇಷ ಯೋಜನೆ ಸೇರಿಸಲಾಗಿದ್ದು ಜುಲೈ 1ರಿಂದಲೇ ಜಾರಿಗೆ ಬರುವಂತೆ ಹಾಲು ಉತ್ಪಾದಿಸುವ ರೈತರಿಗೆ ಪ್ರತಿ ಲೀಟರ್‌ಗೆ ರೂ.5 ಸಹಾಯಧನ ನೀಡುತ್ತೇವೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಆದ ಅಜಿತ್ ಪವಾರ್ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

* ಮುಂಬಯಿ, ಥಾಣೆ, ನವಿ ಮುಂಬಯಿಗಳಲ್ಲಿ ತೈಲ ಬೆಲೆ ಇಳಿಕೆ (Petrol diesel rate) ಮಾಡಿದೆ, ತೆರಿಗೆ ಕಡಿತದಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ 65 ಪೈಸೆ ಕಡಿಮೆಯಾದರೆ, ಡೀಸೆಲ್‌ ಬೆಲೆಯಲ್ಲಿ ಲೀಟರ್ ಗೆ ರೂ.2 ಕಡಿತ ಮಾಡಿದೆ.

* ಫಂಡರಾಪುರ ಯಾತ್ರಾರ್ಥಿಗಳಿಗೆ ರೂ.20,000 ಪ್ರೋತ್ಸಾಹ ಧನ ನೀಡುವುದಾಗಿ ಯೋಜನೆ ಘೋಷಣೆ ಮಾಡಲಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment