RTC Aadhaar link:
ಭೂಗಳ್ಳತನ, ಭೂಮಿಗೆ ಸಂಬಂಧಿಸಿದ ವಂಚನೆ ತಡೆಯಲು ರಾಜ್ಯ ಸರ್ಕಾರ(State Government) ಮುಂದಾಗಿದ್ದು, ಎಲ್ಲಾ ಜಮೀನು ಮಾಲೀಕರು(Land owner) ತಮ್ಮ ಜಮೀನಿಗೆ ಆಧಾರ್ ಕಾರ್ಡ್(Aadhar Card) ಜೋಡಣೆ ಕಡ್ಡಾಯಗೊಳಿಸಿದೆ. ಹೌದು, ಆರ್.ಟಿ.ಸಿಯೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಹಾಗಾದರೆ ಆರ್.ಟಿ.ಸಿ (RTC)ಯೊಂದಿಗೆ ಆಧಾರ್ ಲಿಂಕ್ ಎಲ್ಲಿ ಮಾಡುವುದು, ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನವೇನು, ಲಿಂಕ್ ಮಾಡಲು ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ನಕಲಿ ದಾಖಲೆ ಮೋಸದ ವ್ಯವಹಾರಗಳಿಂದ ನಿಮ್ಮ ಆಸ್ತಿ ರಕ್ಷಣೆಗಾಗಿ ಕೂಡಲೇ ಜಮೀನಿನ ದಾಖಲೆ(Land record)ಯ ಜೊತೆ ಆಧಾರ್ ಲಿಂಕ್ ಮಾಡುವಂತೆ ಸಚಿವ ಕೃಷ್ಣಬೈರೇಗೌಡ(Krishnabaire Gowda) ಸೂಚಿಸಿದ್ದಾರೆ.
ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿ:- Stenographer Recruitment: ಸ್ಟಾಫ್ ಸೆಲೆಕ್ಷನ್ ಕಮಿಷನ್ ಸ್ಟೆನೋಗ್ರಾಫರ್ ಬೃಹತ್ ನೇಮಕಾತಿ PUC ಆದವರು ಅರ್ಜಿ ಸಲ್ಲಿಸಿ.!
ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್ ಜೊತೆಗೆ ಜೋಡಿಸಲಾಗಿದೆ.
ಅಂದರೆ, ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ತಾಕೀತು ಮಾಡಿದರು. ಆರ್‌ಟಿಸಿಗಳನ್ನು ಆಧಾರ್‌ಗೆ ಲಿಂಕ್ ಮಾಡುವ ಮೂಲಕ ಯಾರದ್ದೋ ಜಮೀನನ್ನು ಮತ್ಯಾರೋ ಮಾರಾಟ ಮಾಡುವಂತಹ ವಂಚನೆಗಳನ್ನು ತಡೆಯಬಹುದು.
ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸಲು ಹಾಗೂ ಮ್ಯುಟೇಶನ್, ಇನ್ಪುಟ್ ಸಬ್ಸಿಡಿ ನೀಡುವುದಕ್ಕೂ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಆಧಾರ್ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಏನು ಎಂಬ ಕುರಿತು ಕ್ಯಾಂಪೇನ್ ಮಾಡಿ, ಇದರಿಂದ ಒಳ್ಳೆಯ ಸರಳ ಆಡಳಿತ ನೀಡಬಹುದು, ಅಧಿಕಾರಿಗಳ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿ:- Free Laptop: SSLC ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ.!
ಆಧಾರ್ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನವೇನು?
ರೈತರು ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವು ಲಾಭಗಳಿವೆ. ಸರ್ಕಾರದ ಸವಲತ್ತುಗಳು ಸಂಪೂರ್ಣವಾಗಿ ದೊರೆಯುತ್ತವೆ. ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆಗಳನ್ನು ತಡೆಯಬಹುದು. ಈ ಉದ್ದೇಶದಿಂದ ಜಮೀನು ಮಾಲೀಕರ ಪಹಣಿಗೆ ಆಧಾರ್ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.
ಲಿಂಕ್ ಮಾಡುಲು ಕೊನೆಯ ದಿನಾಂಕ
ಆರ್.ಟಿ.ಸಿಯೊಂದಿಗೆ ಆಧಾರ್ ಲಿಂಕ್ ಮಾಡಲು ಜುಲೈ ಅಂತ್ಯದವರೆಗೆ ಅಂದ್ರೆ, ಇಂದೇ ಕೊನೆಯ ಗಡುವಾಗಿದೆ. ಇಂದು ಎಲ್ಲಾ ರೈತರು ಕಡ್ಡಾಯವಾಗಿ ಆಧಾರ ಲಿಂಕ್ ಮಾಡಿಸಬೇಕು.
ಎಲ್ಲಿ ಲಿಂಕ್ ಮಾಡಿಸಬಹುದು?
ರೈತರು ಪಹಣಿಯೊಂದಿಗೆ ಆಧಾರ್ ಲಿಂಕ್ ಮಾಡದೇ ಇರುವವರು ಕೂಡಲೇ ತಾಲೂಕು ಪಂಚಾಯಿತಿಯ ವಿಲೇಜ್ ಅಕೌಂಟೆಂಟ್ ಅನ್ನು ಸಂಪರ್ಕಿಸಬಹುದಾಗಿದೆ.