Property
ಒಟ್ಟು ಕುಟುಂಬದ ಆಸ್ತಿ ಅಥವಾ ತಂದೆ ಗಳಿಸಿದ ಆಸ್ತಿಯನ್ನು ಕುಟುಂಬದ ಎಲ್ಲಾ ಸದಸ್ಯರು ಹೇಗೆ ಹಂಚಿಕೊಳ್ಳಬೇಕು? ಯಾವೆಲ್ಲ ವಿಧಾನದ ಮೂಲಕ ಹಂಚಿಕೊಳ್ಳಬೇಕು? ಈ ಸಂದರ್ಭದಲ್ಲಿ ಯಾವ ದಾಖಲೆಗಳು ಬೇಕಾಗುತ್ತದೆ? ಸರ್ ರಿಜಿಸ್ಟರ್ ಕಚೇರಿಯಲ್ಲಿ ಈ ಉಪ ನೊಂದಣಿ ಪ್ರಕ್ರಿಯೆ ಕಾನೂನು ಬದ್ಧವಾಗಿ ಹೇಗೆ ನಡೆಯುತ್ತದೆ?
ಒಂದು ವೇಳೆ ಆ ಆಸ್ತಿ ಮೇಲೆ ಸಾಲ ಇದ್ದರೆ ವಿಲೇವಾರಿ ಹೇಗೆ ಮಾಡಬೇಕು? ಮತ್ತು ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥನ ಪಾತ್ರವೇನು? ಎನ್ನುವ ಎಲ್ಲಾ ಬಹಳ ಮುಖ್ಯವಾದ ವಿಚಾರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ವಿಚಾರವಾಗಿ ಕೆಲವು ಪ್ರಮುಖ ಸಂಗತಿಗಳು:-
* ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡಿ ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ ಇದಕ್ಕೆ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಆಗಿರುತ್ತದೆ. ಪಿತ್ರಾರ್ಜಿತ ಆಸ್ತಿಯನ್ನು ವಿಲೇವಾರಿ ಮಾಡುವ ಸಂಬಂಧದಲ್ಲಿ ವಂಶಾವಳಿ ಪ್ರಮಾಣ ಪತ್ರವೂ ಕೂಡ ಬೇಕಾಗಿರುವುದರಿಂದ ಆ ಕುಟುಂಬದ ಹೆಣ್ಣು ಮಕ್ಕಳು ಮತ್ತು ಸೊಸೆಯಂದಿರ ಹೆಸರನ್ನು ಸೇರಿಸಬೇಕು ಈ ವಿಚಾರದಲ್ಲಿ ಅವರ ಅನುಮತಿ ಸಹ ಅಷ್ಟೇ ಮುಖ್ಯವಾಗುತ್ತದೆ.
* ಒಂದು ವೇಳೆ ಆಸ್ತಿ ಮೇಲೆ ಸಾಲ ಇದ್ದರೆ ಪ್ರಕ್ರಿಯೆ ಇನ್ನಷ್ಟು ಜಟಿಲವಾಗುತ್ತದೆ
* ಆದರೆ ಸ್ವಯಾರ್ಜಿತ ಆಸ್ತಿಯನ್ನು ಪಾಲು ಮಾಡುವಾಗ ಇಷ್ಟು ಸಮಸ್ಯೆ ಬರುವುದಿಲ್ಲ. ಯಾಕೆಂದರೆ ಇದು ಆಸ್ತಿ ಮಾಲಿಕನ ಸ್ವಂತ ದುಡಿಮೆ ಆಗಿರುವುದರಿಂದ ಆತ ಇಚ್ಛೆಪಟ್ಟವರಿಗೆ ಇದನ್ನು ವಿಲೇವಾರಿ ಮಾಡಬಹುದು. ಒಂದು ವೇಳೆ ಆತ ತನ್ನ ಪಾಲಿನ ಆಸ್ತಿಯನ್ನು ಮತ್ತೊಬ್ಬರಿಗೆ ವಿಲ್ ಮಾಡದೆ ವರ್ಗಾವಣೆಯನ್ನು ಮಾಡದೆ ಮೃ’ತಪಟ್ಟಿದ್ದಲ್ಲಿ ಆಗ ಆತನ ಎಲ್ಲಾ ವಾರಸುದಾರರಿಗೂ ಈ ಆಸ್ತಿಯಲ್ಲಿ ಹಕ್ಕಿರುತ್ತದೆ.
ವರ್ಗಾವಣೆ ಪ್ರಕ್ರಿಯೆ:-
* ತಂದೆ ಆಸ್ತಿಯನ್ನು ಪಾಲು ಮಾಡಿಕೊಳ್ಳುವ ಸಂದರ್ಭದಲ್ಲಿ ಹಿರಿಯರ ಪಾತ್ರ ಬಹಳ ಪ್ರಧಾನವಾದದ್ದು. ಮನೆಯ ಹಿರಿಯರ ಸಮ್ಮುಖದಲ್ಲಿ ಎಲ್ಲರೂ ಕೂಡ ಕುಳಿತು ಚರ್ಚೆ ಮಾಡಿ ಒಂದು ಒಪ್ಪಂದ ಪತ್ರ ಮಾಡಿಕೊಳ್ಳಬೇಕು ಹಾಗೂ ಬಿಳಿ ಹಾಳೆ ಮೇಲೆ ಅಥವಾ ಸ್ಟ್ಯಾಂಪ್ ಪೇಪರ್ ಮೇಲೆ ಬರೆದು ಎಲ್ಲರೂ ಸಹಿ ಹಾಕಿರಬೇಕು. ಈ ಮಾತುಕತೆ ಪ್ರಕಾರ ಎಲ್ಲರೂ ನಡೆದುಕೊಂಡರೆ ಮುಂದಿನ ಕಾರ್ಯಗಳು ಸರಾಗವಾಗಿ ನಡೆಯುತ್ತವೆ.
* ಕುಟುಂಬದ ಎಲ್ಲಾ ಸದಸ್ಯರು ಸೇರಿ ಚರ್ಚೆ ಮಾಡಿ ಯಾರಿಗೆ ಎಷ್ಟು ಪಾಲು ಹೋಗಬೇಕು ಯಾರಿಗೆ ಯಾವ ಭಾಗ ಹೋಗಬೇಕು ಎಂದು ಒಪ್ಪಂದ ಮಾಡಿಕೊಂಡು ಒಂದು ಒಮ್ಮತದ ನಿರ್ಧಾರಕ್ಕೆ ಬಂದ ನಂತರ ರೆವೆನ್ಯೂ ನಕ್ಷೆಗೆ ಅರ್ಜಿ ಹಾಕಬೇಕು. ಮತ್ತು ಇದರಲ್ಲಿ ನೀವು ದಾನದ ಮೂಲಕ ಅಥವಾ ವಿಭಾಗದ ಮೂಲಕ ಯಾವ ರೀತಿ ಅನುಸರಿಸಿ ಪಾಲು ಮಾಡಿಕೊಳ್ಳುತ್ತಿದ್ದೀರಾ ಎನ್ನುವುದನ್ನು ಕೂಡ ತಿಳಿಸಿರಬೇಕು.
* ಈ ಅರ್ಜಿಯನ್ನು ನಾಡಕಚೇರಿಯಲ್ಲಿ ಸಲ್ಲಿಸಬೇಕು ನಂತರ ಒಂದು ಗೊತ್ತು ಪಡಿಸಿದ ದಿನಾಂಕದಂದು ಭೂಮಾಪಕರು ಅಳತೆ ಮಾಡಿ, ಇಲಾಖೆಗೆ ವರದಿ ಸಲ್ಲಿಸಿದ ನಂತರ IIE ನಕ್ಷೆ ಪ್ರಿಂಟ್ ತೆಗೆದುಕೊಳ್ಳಬೇಕು
* ಇದಾದ ಮೇಲೆ ಜಮೀನು ರಿಜಿಸ್ಟರ್ ಪ್ರಕ್ರಿಯೆ ನಡೆಯುತ್ತದೆ. IIE ನಕ್ಷೆ , ಆಧಾರ್ ಕಾರ್ಡ್, ವಂಶಾವಳಿ ಪ್ರಮಾಣ ಪತ್ರ ಮತ್ತು 2 ಜನ ಸಾಕ್ಷಿಗಳೊಂದಿಗೆ ಉಪ ನೊಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಲಾಗುತ್ತದೆ. ಈ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.