Ration Card
ಇಂದು ದೇಶದಲ್ಲಿ ಬಹುತೇಕ ಕುಟುಂಬ ರೇಷನ್ ಕಾರ್ಡ್(ration card)ಗಳನ್ನು ಹೊಂದಿವೆ. ಇದು ಕೇಂದ್ರ ಸರ್ಕಾರದ ಬಹುದೊಡ್ಡ ಕೊಡುಗೆಯಾಗಿದೆ. ಇಂದು ration card ಅತ್ಯಂತ ಮಹತ್ವದ ದಾಖಲೆಯಾಗಿದ್ದು, ಬಡವರು ಈ ಕಾರ್ಡ್ ಮೂಲಕ ಹಲವು ಸೌಲಭ್ಯಗಳನ್ನ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿ:- Rent House: ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ಹೊಸ ರೂಲ್ಸ್.! ಬಾಡಿಗೆದಾರರಿಗೆ ಮತ್ತು ಮಾಲೀಕರಿಗೆ ಹೊಸ ನಿಯಮ.!
ಹೌದು, ಬಡವರಿಗಾಗಿಯೇ ಈ ವಿಶೇಷವಾಗಿ ಬಿಪಿಎಲ್(BPL) ಮತ್ತು ಅಂತ್ಯೋದಯ ಕಾರ್ಡ್(Antyodaya card) ಜಾರಿ ಮಾಡಲಾಗಿದ್ದು, ಈ ಮೂಲಕ ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಖಾತರಿ ಯೋಜನೆಗಳ ಲಾಭ ಪಡೆಯಲು ಈ ಪಡಿತರ ಚೀಟಿ ಅಗತ್ಯ. ಇಂದಿಗೂ ಅನೇಕ ಜನರು ಹೊಸದಾಗಿ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಅಂತಹವರಿಗಾಗಿ ಇಂದು ಒಂದು ಸಿಹಿ ಸುದ್ದಿ ಸಿಕ್ಕಿದೆ.
ಹೌದು, ಹೊಸದಾಗಿ ಮದುವೆಯಾದ ದಂಪತಿಗಳು ಹೊಸದಾಗಿ ನೆಲೆಸಿರುವವರು ಮುಂತಾದವರು ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿದ್ದಾರೆ. ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶುಭ ಸುದ್ದಿ ನೀಡಿದೆ. ಹೌದು, ಪಡಿತರ ಚೀಟಿಗಾಗಿ ಜೂನ್ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೊಸ ಪಡಿತರ ಚೀಟಿಗೆ ಬೇಕಾದ ಅಗತ್ಯ ದಾಖಲೆಗಳು
– ಆಧಾರ್ ಕಾರ್ಡ್
– ಮತದಾರರ ಗುರುತಿನ ಚೀಟಿ
– ವಯಸ್ಸಿನ ಪ್ರಮಾಣಪತ್ರ
– ಚಾಲನಾ ಪರವಾನಗಿ ಫೋಟೋ
– ಮೊಬೈಲ್ ನಂಬರ್
– ಸ್ವಯಂ ಘೋಷಿತ ಅಫಿಡವಿಟ್
Online ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ.!
ಹಂತ 1: ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್ ಭೇಟಿ ನೀಡಿ ಹೋಗಿ, ಇ-ಸೇವೆಗಳು’ (E Service) ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 2: ಇ-ರೇಷನ್ ಕಾರ್ಡ್‌ನಿಂದ ಹೊಸ ಪಡಿತರ ಚೀಟಿಯನ್ನು (New Ration card) ಆಯ್ಕೆ ಮಾಡಿ, “ಹೊಸ ಪಡಿತರ ಚೀಟಿ ವಿನಂತಿ” (New ration card request) ಮೇಲೆ ಕ್ಲಿಕ್ ಮಾಡಿ, ನಂತರ ಹೊಸ ಪಡಿತರ ಚೀಟಿ ವಿನಂತಿಯ (New ration card request) ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ಬಿಪಿಎಲ್ ಕಾರ್ಡ್ ಗೆ(BPL Card) ಅರ್ಜಿ ಸಲ್ಲಿಸಲು ಆದ್ಯತಾ ಹೌಸ್‌ಹೋಲ್ಡ್ (PHH) ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಹೋಗಿ(GO) ಬಟನ್ ಅನ್ನು ಕ್ಲಿಕ್ ಮಾಡಿ. ನಂತರ OTP ಅಥವಾ ಫಿಂಗರ್‌ಪ್ರಿಂಟ್ (Fingerprint) ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಬೇಕು.
ಹಂತ 5: ಅರ್ಜಿದಾರರು OTP ಅನ್ನು ಆಯ್ಕೆ ಮಾಡಿದರೆ, ನೋಂದಾಯಿತ ಮೊಬೈಲ್ ಫೋನ್‌ಗೆ SMS ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ ‘ಹೋಗಿ'(GO) ಕ್ಲಿಕ್ ಮಾಡಬೇಕು. ಯಶಸ್ವಿ ಪರಿಶೀಲನೆಯ ನಂತರ ಆಧಾರ್ ಡೇಟಾವನ್ನು (Adhar details) ತೋರಿಸಲಾಗುತ್ತದೆ. ನಂತರ “ಸೇರಿಸು” (Add) ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಸಂಖ್ಯೆ ಕ್ರಿಯೇಟ್ ಆಗುತ್ತದೆ.
ಹಂತ 6: ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಪೂರ್ಣಗೊಳಿಸಿದ ನಂತರ ನಿಮ್ಮ ಅರ್ಜಿಯನ್ನು ಕಳುಹಿಸಲು “ಸಲ್ಲಿಸು”(Submit) ಮೇಲೆ ಕ್ಲಿಕ್ ಮಾಡಿ ಅರ್ಜಿ ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ತಿದ್ದುಪಡಿ ಮಾಡಿಸುವುದು ಎಲ್ಲಿ.?
ನೀವು ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಬಹುದು. ನಾವೇ ಸ್ವತಃ ಮೊಬೈಲ್ ಫೋನ್ ಮೂಲಕ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇದೆ. ಹಾಗಾಗಿ ಹತ್ತಿರದ ಸೈಬರ್ ಸೆಂಟರ್ ಸಿಎಸ್ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ದಯವಿಟ್ಟು ಭೇಟಿ ನೀಡಿ ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಈ ಸುದ್ದಿ ಓದಿ:- Gold: ಹಳೆ ಆಭರಣ ಕೊಟ್ಟು ಹೊಸ ಚಿನ್ನ ಖರೀದಿ ಮಾಡುವವರಿಗೆ ಹೊಸ ರೂಲ್ಸ್.!
ಇನ್ನೂ, ಕೆಲವರ ಪಡಿತರ ಚೀಟಿ ತಿದ್ದುಪಡಿಗೂ ಬಾಕಿ ಇದ್ದು, ಇದಕ್ಕೆ ಜುಲೈ ತಿಂಗಳಲ್ಲಿ ಆಹಾರ ಇಲಾಖೆ ಅನುಮತಿ ನೀಡಬಹುದು. ಈ ವೇಳೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ಸೇರ್ಪಡೆ ಇತ್ಯಾದಿಗಳನ್ನು ಅನುಮತಿಸಲಾಗಿದೆ.