Bank Service Charges
ಸಾಮಾನ್ಯ ಜನರ ತತ್‌ಕ್ಷಣದ ಹಣದ ಸಮಸ್ಯೆ ಪೂರೈಕೆಯಲ್ಲಿ ಬ್ಯಾಂಕ್‌ಗಳು ತಮ್ಮ ಪಾತ್ರವನ್ನು ಮುಖ್ಯವಾಗಿ ವಹಿಸುತ್ತವೆ. ಗ್ರಾಹಕರ ಬೇಡಿಕೆ ಪೂರೈಕೆಯೇ ಬ್ಯಾಂಕ್‌ಗಳ ಜವಾಬ್ದಾರಿಯಾಗಿರುತ್ತದೆ. ಈ ಬ್ಯಾಂಕ್‌ಗಳು ಕಾಲಕ್ಕೆ ತಕ್ಕಂತೆ ತಮ್ಮ ನಿಯಮಗಳನ್ನು ಬದಲಾಯಿಸುತ್ತಿರುತ್ತವೆ. ಅದರಂತೆಯೇ ಈಗ ಕೆಲವು ಬ್ಯಾಂಕ್‌ಗಳು ಅದೇ ಕೆಲಸ ಮಾಡಿವೆ. ಈ ಬಗ್ಗೆ ನಾವು ತಿಳಿದುಕೊಳ್ಳೋದು ಬಹಳ ಮುಖ್ಯವಾಗಿದೆ.
ಈ ಸುದ್ದಿ ಓದಿ:- PF Account: ಪಿಎಫ್ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್: ಕನಿಷ್ಠ ವೇತನ ಮಿತಿ 25,000 ಹೆಚ್ಚಳ
ದೇಶದ ವಿವಿಧ ಪ್ರಮುಖ ಬ್ಯಾಂಕು(Bank)ಗಳು ತಮ್ಮ ಗ್ರಾಹಕ(Customer)ರಿಗೆ ನೀಡುವ ವಿವಿಧ ಸೇವೆಗಳ ಮೇಲಿನ ಶುಲ್ಕ(fee)ಗಳಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಹೊಸ ನಿಯಮಗಳನ್ನು (Banking new rules) ಜಾರಿಗೆ ತಂದಿದೆ. ಈ ಹೊಸ ಬದಲಾವಣೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಯಾವಾಗ ಬದಲಾವಣೆಯಾಗಲಿವೆ ಎಂಬ ಮಾಹಿತಿಯನ್ನು ಇಲ್ಲಿ ತಿಳಿಯಿರಿ…
ICICI ಬ್ಯಾಂಕಿನ ಗ್ರಾಹಕರಿಗೆ ಬಿತ್ತು ಬರೆ
ದೇಶದಲ್ಲಿ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ICICI ಬ್ಯಾಂಕ್ ಕೂಡ ಒಂದು. ಆದ್ರೆ, ಇದೀಗ ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಹೌದು, ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ (Credit card) ಮೇಲೆ ಶುಲ್ಕಗಳನ್ನು ಪರಿಷ್ಕರಿಸಿ 100 ರೂಪಾಯಿ ಇದ್ದ ಶುಲ್ಕವನ್ನು ಇದೀಗ 200 ರೂಪಾಯಿಗೆ ಏರಿದ್ದು, ಐಸಿಐಸಿಐ ಬ್ಯಾಂಕಿನ ಗ್ರಾಹಕರಿಗೆ ಬರೆ ನೀಡಿದೆ. ಆದರೆ, ಇದೆ ಬ್ಯಾಂಕಿನ ಎದುರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್’ಗೆ ಈ ಶುಲ್ಕವು ಅನ್ವಯಿಸುವುದಿಲ್ಲ.
ಎಚ್‌ಡಿಎಫ್‌ಸಿ ಬ್ಯಾಂಕಿನ ವಹಿವಾಟುಗಳಿಗೂ ಕೂಡ ಶುಲ್ಕ
ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಆಗಸ್ಟ್ 01, 2024 ರಿಂದ ಅನ್ವಯವಾಗುವಂತೆ ಪೇಟಿಎಂ ಚೆಕ್, ಮೊಬಿಕ್ವಿಕ್ ಮತ್ತು ಫ್ರೀ ಚಾರ್ಜ್ ವೇದಿಕೆಗಳ ಮುಖಾಂತರ ಮಾಡಿದ ರೆಡ್ ಕಾರ್ಡಿನ ರೆಂಟುಗಳ ಪಾವತಿಗಳಿಗೆ ಹೊಸ ದರಗಳನ್ನು ಜಾರಿಗೆ ತಂದಿದ್ದು ಪ್ರತಿಯೊಂದು ವಹಿವಾಟುಗಳಿಗೆ 3,000 ರೂಪಾಯಿಗಳ ಮಿತಿಯ ವಹಿವಾಟಿನ ಮೇಲೆ ಪ್ರತಿ ಗ್ರಾಹಕರಿಗೆ 1% ಶುಲ್ಕ ಅನ್ವಯವಾಗಲಿದೆ.
SBI ಬ್ಯಾಂಕ್‌ನಲ್ಲಿ ಹೊಸ ನಿಯಮ
ಎಸ್‌ಬಿಐ (SBI) ಭಾರತದ ಅತಿದೊಡ್ಡ ಬ್ಯಾಂಕ್ ಆಗಿದೆ. ಇದು 22,000 ಶಾಖೆಗಳನ್ನು ಹೊಂದಿದೆ ಮತ್ತು 45 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸೇವೆ, ಸುಸ್ಥಿರತೆ, ನೈತಿಕತೆ ಮತ್ತು ಪಾರದರ್ಶಕತೆಯ ಬ್ಯಾಂಕಿನ ಮೂಲಭೂತ ತತ್ವಗಳು ನಾವೀನ್ಯತೆ ಮತ್ತು ಗ್ರಾಹಕ-ಕೇಂದ್ರಿತತೆಗೆ ಅದರ ಅವಿರತ ಬದ್ಧತೆಯನ್ನು ಚಾಲನೆ ಮಾಡುತ್ತವೆ.
ಇದು ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್(Commercial Bank) ಮತ್ತು ಅದರ ಆಧುನಿಕ ಹಣಕಾಸು ವ್ಯವಸ್ಥೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇದು ಮುಂಬೈ ಮೂಲದ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಿಗೆ ಭಾರತೀಯ ಬಹುರಾಷ್ಟ್ರೀಯ ಮತ್ತು ಶಾಸನಬದ್ಧ ಪ್ರಾಧಿಕಾರವಾಗಿದೆ. ಎಸ್‌ಬಿಐ ನಿಯಮಗಳನ್ನು ಜಾರಿಗೆ ತರಲಾಗಿದೆ.
ಅದು ಅವರ ಗ್ರಾಹಕರು ತಿಳಿದಿರಬೇಕು. ಎಸ್‌ಬಿಐ ಇತ್ತೀಚೆಗೆ ಮುಂದಿಟ್ಟಿರುವ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಇಲ್ಲಿ ತಿಳಿಸಲಾಗಿದೆ. ಹೌದು, ಜುಲೈ 15, 2024ರಿಂದ ಅನ್ವಯವಾಗುವಂತೆ ಸರ್ಕಾರದ ಸಂಬ೦ಧಿತ ವಹಿವಾಟುಗಳ ಮೇಲೆ ರಿವಾರ್ಡ್ ಪಾಯಿಂಟ್ ನೀಡುವುದನ್ನು ಸ್ಥಗಿತಗೊಳಿಸಲಾಗುವುದೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆ. ಈ ಒಂದು ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಜಾಲತಾಣದಲ್ಲಿ ಹಂಚಿಕೊAಡಿದೆ.
ಪೇಟಿಎಂ ವ್ಯಾಲೆಟ್ ಸ್ಥಗಿತ (Breakdown of Paytm Wallet)
ಇದೇ ತಿಂಗಳು ಅಂದರೆ ಜುಲೈ 20, 2024 ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವ ಗ್ರಾಹಕರ ವ್ಯಾಲೆಟ್‌ಗಳಲ್ಲಿ ಯಾವುದೇ ಬ್ಯಾಲೆನ್ಸ್ ಇರುವುದಿಲ್ಲವೋ ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ಕಾಲ ಪೇಟಿಎಂ ಬ್ಯಾಂಕ್ ಖಾತೆಯು ಯಾವುದೇ ರೀತಿಯ ವಹಿವಾಟುಗಳನ್ನು ಹೊಂದಿರದೇ ಇದ್ದಲ್ಲಿ ಅಂತಹ ಪೇಟಿಎಂ ವ್ಯಾಲೆಟ್‌ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಪೇಟಿಎಂ ಘೋಷಿಸಿದೆ.