Formula
ಈ ಪ್ರಪಂಚದಲ್ಲಿ ಅತ್ಯಂತ ವಿಷಕಾರಿ ಸಂಗತಿ ಎಂದರೆ ಅದು ಸಾಲವೇ ಇರಬೇಕು. ಯಾಕೆಂದರೆ ಸಾಲ ಎನ್ನುವುದು ಚಕ್ರವ್ಯೂಹದ ತರಹ ಒಮ್ಮೆ ಇದರ ಸುಳಿಗೆ ಸಿಕ್ಕಿ ಬಿದ್ದರೆ ಎಲ್ಲರಿಗೂ ಹೊರಬರಲು ಸಾಧ್ಯವಿಲ್ಲ. ತಮ್ಮ ತಪ್ಪಿನಿಂದಲೋ ಅಥವಾ ದುರ್ಬುದ್ದಿಯಿಂದಲೋ ಸಾಲದ ಸುಳಿಗೆ ಸಿಕ್ಕಿ, ತಾವು ಹಾಳಾಗುವುದು ಮಾತ್ರವಲ್ಲದೇ ತಮ್ಮನ್ನೇ ನಂಬಿದ್ದ ಕುಟುಂಬದ ತಲೆ ಮೇಲೆ ಕೂಡ ದೊಡ್ಡ ಹೊರೆಹೊರೆಸಿ ಹೋದವರ ಉದಾಹರಣೆ ನಮ್ಮ ದೇಶದಲ್ಲಿ ಸಾಕಷ್ಟು ಸಿಗುತ್ತದೆ.
ನಾವೇ ನಮ್ಮ ಹಳ್ಳಿಗಳಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಸಂಬಂಧಿಕರ ಸ್ನೇಹಿತರ ಬಳಗದಲ್ಲಿ ಹೀಗೆ ಸಾಲದ ಸುಳಿಗೆ ಸಿಲುಕಿ ಆ’ತ್ಮ’ಹ’ತ್ಯೆ ಮಾಡಿಕೊಂಡವರ, ಊರು ಬಿಟ್ಟು ಹೋದವರ, ಮನೆ ಮಠ ಮಾರಿಕೊಂಡು ಬೀದಿಗೆ ಬಿದ್ದವರನ್ನು ನೋಡಿ ಅವರ ಕುಟುಂಬದ ಖುಷಿ ಹಾಳಾಗುವುದಕ್ಕೆ ಸಾಲವೇ ಕಾರಣವಾಯಿತು ಎಂದು ಮಾತನಾಡುವುದನ್ನು ಕೇಳಿರುತ್ತೇವೆ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆ ಬೃಹತ್ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 35,400/-
ಹಾಗಾದರೆ ಈ ಸಾಲದ ಸುಳಿಕೆ ನಾವು ಸಿಲುಕಿಕೊಳ್ಳಲೇಬಾರದು ಎನ್ನುವುದಾದರೆ ಹೇಗಿರಬೇಕು ಗೊತ್ತಾ? ಎನ್ನುವುದಕ್ಕೆ ಪ್ರಮುಖವಾದ ಒಂದಿಷ್ಟು ಸಲಹೆಗಳನ್ನು ಈ ಲೇಖನದ ಮೂಲಕ ಕೊಡಲು ಇಚ್ಚಿಸುತ್ತಿದ್ದೇನೆ.
* ಯಾವ ಕಾರಣಕ್ಕಾಗಿ ಸಾಲ ಮಾಡುತಿದ್ದೇವೆ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು:- ಪ್ರತಿಯೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ ಕೆಲವರು ಉಳಿತಾಯ ಮಾಡಿದ್ದರೆ ಕೆಲವರಿಗೆ ತಿಳಿಯದೇ ಹಣದ ಅಗತ್ಯತೆ ಉಂಟಾಗಬಹುದು. ಆ ಸಮಯದಲ್ಲಿ ಅವರ ಬಳಿ ಹಣ ಇರದೇ ಇರಬಹುದು ಆಗ ಸಾಲ ಮಾಡಬೇಕಾಗುತ್ತದೆ ಈ ರೀತಿ ಸಾಲ ಮಾಡುವಾಗ ಒಂದು ಬಾರಿ ಮಾತ್ರ ಅಲ್ಲದೆ 10 ಬಾರಿ ಯೋಚಿಸಿ ಮುಂದುವರಿಯಬೇಕು
* ನಾವು ಪಡೆದುಕೊಳ್ಳುತ್ತಿರುವುದು ಒಳ್ಳೆ ಸಾಲವೇ ಅಥವಾ ಕೆಟ್ಟ ಸಾಲವೇ ಎನ್ನುವ ವಿವೇಚನೆ ಇರಬೇಕು:- ಸಾಲ ಮಾಡುವುದೇ ತಪ್ಪು ಎನ್ನುವುದಕ್ಕಿಂತ ಪಡೆದ ಸಾಲ ಒಳ್ಳೆಯದಕ್ಕೋ ಅಥವಾ ಸ್ವಾರ್ಥಕ್ಕೋ ಎನ್ನುವುದು ಸ್ಪಷ್ಟವಾಗಿರಬೇಕು. ಯಾಕೆಂದರೆ ಸಾಲ ಮಾಡಿ ಫಾರಿನ್ ಟ್ರಿಪ್ ಹೋಗುವ, ದುಬಾರಿ ಕಾರು ಖರೀದಿಸುವ ಅಥವಾ ವಿಪರೀತ ಗ್ರಾಂಡ್ ಆಗಿ ಮದುವೆ ಆಗುವ ಅವಶ್ಯಕತೆ ಇರುವುದಿಲ್ಲ. ಯಾವುದೇ ಕಾರಣಕ್ಕೂ ಈ ಕೆಟ್ಟ ಸಾಲ ಮಾಡಬೇಡಿ.
ಈ ಸುದ್ದಿ ಓದಿ:- ಅಂಚೆ ಕಛೇರಿಯ ಈ ಯೋಜನೆಯಲ್ಲಿ, 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗಲಿದೆ.! ಡಬಲ್ ಲಾಭ
ಇನ್ನು ಒಳ್ಳೆಯ ಸಾಲ ಎನ್ನುವುದಾದರೆ ನೀವು ಗಳಿಕೆ ಮಾಡುವುದಕ್ಕಾಗಿ ಸಾಲ ಮಾಡಿದ್ದೀರಿ ಅಂದರೆ ಸಾಲ ಪಡೆದ ಹಣವನ್ನು ಅದರ ಬಡ್ಡಿಯ ಅಧಿಕ ಭಾಗ ಲಾಭ ಬರುವಂತೆ ದುಡಿಸಿಕೊಳ್ಳಲು ಪ್ಲಾನ್ ಮಾಡಿದ್ದೀರಾ ಎಂದರೆ ಅದು ಒಳ್ಳೆಯ ಸಾಲವಾಗಿರುತ್ತದೆ. ಶೈಕ್ಷಣಿಕ ಸಾಲ, ಮನೆ ಕಟ್ಟುವ ಸಾಲ ಇವುಗಳಿಂದ ಹಣಬರುವುದರಿಂದ ಈ ಸಾಲಗಳಿಗೆ ಸಮಸ್ಯೆ ಇರುವುದಿಲ್ಲ
* ಪಡೆದುಕೊಳ್ಳುತ್ತಿರುವ ಸಾಲವನ್ನು ತೀರಿಸುವ ಸಾಮರ್ಥ್ಯ ಇದೆಯೇ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು:- ಆದರೆ ಸಾಮರ್ಥ್ಯ ಇದೆ ಎಂದು ಮನಸ್ಸಿಗೆ ಬಂದಷ್ಟು ಸಾಲ ಮಾಡಲು ಸಾಧ್ಯವಿಲ್ಲ. ನಮಗೆ ಬರುವ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮತ್ತು ವೈಯಕ್ತಿಕ ಖರ್ಚು-ವೆಚ್ಚ ನೋಡಿಕೊಂಡು ಸರಿಯಾಗಿ ನಮ್ಮ ಬಡ್ಡಿ ಅಥವಾ EMI ಅಥವಾ ಸಾಲದ ಕಂತುಗಳಿದ್ದರು ಅದನ್ನು ಸರಿಯಾದ ಮಾರ್ಗದಲ್ಲಿ ತೀರಿ.ಸುವ ಸಾಮರ್ಥ್ಯ ಇದೆಯೇ ಎನ್ನುವುದನ್ನು ಮೊದಲು ನೋಡಿ ನಂತರ ಸಾಲದ ವಿಷಯಕ್ಕೆ ಹೋಗಬೇಕು.
ಈ ಸುದ್ದಿ ಓದಿ:- ವರ್ಷಕ್ಕೆ 50 ಲಕ್ಷ ಗಳಿಸಬಹುದಾದ ಬಿಸಿನೆಸ್, ಹಳ್ಳಿಯಲ್ಲಿ ಇರುವವರು ಹೆಣ್ಣು ಮಕ್ಕಳು ಯಾರು ಬೇಕಾದರೂ ಇದರ ಫ್ರಾಂಚೈಸಿ ಪಡೆಯಬಹುದು.!
* ತಕ್ಷಣಕ್ಕೆ ಸಿಗುವ ಸಾಲದ ಆಕರ್ಷಣೆ ಎಂದಿಗೂ ಒಳ್ಳೆಯದಲ್ಲ ಈಗ ಆನ್ಲೈನ್ ಆಪ್ ಗಳ ಹಾವಳಿ ಜೋರಾಗಿದೆ. ಸಾಲ ಕೊಡುವುದಕ್ಕೆ ಕೂಡ ಕರೆ ಮಾಡಿ ಸಜೆಶನ್ ನೀಡುವವರು ಇದ್ದಾರೆ. ಆದರೆ ತಕ್ಷಣಕ್ಕೆ ಸಾಲ ಸಿಗುತ್ತದೆ ಎಂದು ಯಾವುದೇ ಕಾರಣಕ್ಕೂ ಬಡ್ಡಿ ಎಷ್ಟೇ ಇದ್ದರೂ ಸಾಲ ತೆಗೆದುಕೊಳ್ಳಲು ಒಪ್ಪಿಕೊಳ್ಳಬೇಡಿ. ಅವಶ್ಯಕತೆ ಇಲ್ಲದಿದ್ದರೂ ಸಾಲ ಪಡೆದುಕೊಳ್ಳಲು ಒಪ್ಪಬೇಡಿ ಈ ವಿಚಾರವಾಗಿ ಇನ್ನಷ್ಟು ಇಂಪಾರ್ಟೆಂಟ್ ಸಲಹೆಗಳನ್ನು ಪಡೆಯಲು ವಿಡಿಯೋವನ್ನು ಕೊನೆಯವರೆಗೂ ನೋಡಿ.