ಸದ್ಯಕ್ಕೆ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯಗಳಲ್ಲಿ ಒಂದು ಎಂದರೆ ಹೊಸ ರೇಷನ್ ಕಾರ್ಡ್ ಗೆ (New Ration Card Update) ಅರ್ಜಿ ಸಲ್ಲಿಸಲು ಹಾಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಸಮಸ್ಯೆ ಆಗಿರುವುದು. ಯಾಕೆಂದರೆ ರಾಜ್ಯದಲ್ಲಿ ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಮಯದಲ್ಲಿ ನೀತಿ ಸಂಹಿತೆ ಕಾರಣದಿಂದ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವಿಕೆ ಹಾಗೂ ಅನುಮೋದನೆ ಆಗಿರುವ ಕಾರ್ಡುಗಳ ಹಂಚಿಕೆ ಕಾರ್ಯ ಹಾಗೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕಾರ್ಯ ಸ್ಥಗಿತಗೊಳಿಸಲಾಗಿತ್ತು ನಂತರ ಪರಿಣಾತ್ಮಕವಾಗಿ ಇದು ಜಾರಿಯಾಗಲ್ಲಿಲ್ಲ ಎಂದು ಜನರ ದೂರು.
ಅದರಲ್ಲೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಈ ಬಗ್ಗೆ ಒತ್ತಡ ಹೆಚ್ಚಿದೆ ಎಂದೇ ಹೇಳಬಹುದು. ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಕಾಯುತ್ತಿರುವವರು ಹಾಗೂ ರೇಷನ್ ಕಾರ್ಡ್ ಗಳ ಮಾಹಿತಿ ವ್ಯತ್ಯಾಸದಿಂದ ಸಮಸ್ಯೆಯಾಗಿ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲಾಗದೆ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕಾಗಿ ಕಾಯುತ್ತಿರುವ ಎಲ್ಲರಿಗೂ ಒಂದು ಪ್ರಮುಖವಾದ ಮಾಹಿತಿಯನ್ನು.
ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K.H ಮುನಿಯಪ್ಪರವರು (Minister K.H Muniyappa) ಇತ್ತೀಚೆಗೆ ನಡೆದ ಸುದ್ದಿಗೋಷ್ಠಿ ಯಲ್ಲಿ ನೀಡಿದ್ದಾರೆ. ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತದೆ ಆದರೆ ಕೆಲವರಿಗೆ ಮಾತ್ರ ಇದಕ್ಕೆ ಅವಕಾಶ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹಾಗೆಯೇ ಈಗಾಗಲೇ ರೇಷನ್ ಕಾರ್ಡ್ ಹೊಂದಿದ್ದು ತಿದ್ದುಪಡಿ ಸಮಸ್ಯೆಯಲ್ಲಿರುವವರಿಗೆ ಕೂಡ ಶೀಘ್ರದಲ್ಲಿಯೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಇದರೊಂದಿಗೆ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೇಷನ್ ಕಾರ್ಡ್ ವಿತರಣೆ ಕಾರ್ಯ ಕೂಡ ಮುಂದುವರಿಸಲಾಗುವುದು ಎನ್ನುವ ಮಾಹಿತಿ ನೀಡಿದ್ದಾರೆ.
ಈ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ ಇನ್ನಿತರ ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಹಾಗೂ ಶೈಕ್ಷಣಿಕ ಮತ್ತು ವೈದ್ಯಕೀಯ ಖರ್ಚು-ವೆಚ್ಚಗಳಲ್ಲಿ ರಿಯಾಯಿತಿ ಪಡೆಯಲು ರೇಷನ್ ಕಾರ್ಡ್ ಗಳ ಅಗತ್ಯವಿದೆ. ಕಳೆದೊಂದು ವರ್ಷದಿಂದ ಸಾಕಷ್ಟು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತಾದರೂ ಆ ಸಮಯದಲ್ಲಿ ಉಂಟಾದ ಜನದಟ್ಟಣೆ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಇನ್ನು ಲಕ್ಷಾಂತರ ರೇಷನ್ ಕಾರ್ಡ್ ಗಳು ತಿದ್ದುಪಡಿ ಆಗದೆ ಉಳಿದಿದೆ.
ಜನಸಾಮಾನ್ಯರಿಂದ ಈ ಕುರಿತಾಗಿ ಕೋರಿಕೆ ಹೆಚ್ಚಾದ ಮೇರೆಗೆ ಕೊನೆಗೂ ಸರ್ಕಾರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನ ಮಾಡಲು ನಿರ್ಧರಿಸಿದೆ. ಆ ಪ್ರಕಾರವಾಗಿ ಏನೆಲ್ಲಾ ಕಂಡಿಷನ್ ಗಳು ಇವೆ? ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳನ್ನು ನೀಡಬೇಕಾಗುತ್ತದೆ ಎನ್ನುವುದರ ವಿವರ ಹೀಗಿದೆ.
* ಹೊಸದಾಗಿ ಮದುವೆ ಆಗಿರುವ ದಂಪತಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಮದುವೆಯಾದ ನಂತರ ಪ್ರತ್ಯೇಕವಾಗಿ ಕುಟುಂಬ ಸ್ಥಾಪಿಸಲು ಇಚ್ಛಿಸುವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
* ಕುಟುಂಬ ವಿಭಾಗವಾಗಿರುವ ಕಾರಣ ಪ್ರತ್ಯೇಕ ವಾಸ ಇರುವ ಕುಟುಂಬಗಳು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಯಾವೆಲ್ಲ ತಿದ್ದುಪಡಿ ಮಾಡಿಸಬಹುದು ಎನ್ನುವುದರ ಪಟ್ಟಿ ಹೀಗಿದೆ :-
* ಹೆಸರಿನಲ್ಲಿ ಉಂಟಾಗಿರುವ ಲೋಪ ದೋಷಗಳ ತಿದ್ದುಪಡಿ
* ಕುಟುಂಬದ ಮುಖ್ಯಸ್ಥರ ಬದಲಾವಣೆ
* ರೇಷನ್ ಕಾರ್ಡ್ ಇ-ಕೆವೈಸಿ
* ಮರಣ ಹೊಂದಿರುವ ಸದಸ್ಯರ ಹೆಸರು ತೆಗೆಸುವುದು
* ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ ಮಾಡುವುದು
* ಇತ್ಯಾದಿ ತಿದ್ದುಪಡಿಗಳಿಗೆ ಅವಕಾಶವಿದೆ
ಬೇಕಾಗುವ ದಾಖಲೆಗಳು:-
* ಕುಟುಂಬದ ಮುಖ್ಯಸ್ಥೆಯ ಆದಾಯ ಪ್ರಮಾಣ ಪತ್ರ
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ ಮಾಹಿತಿ
* ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ
* ಎಲ್ಲ ಸದಸ್ಯರ ಭಾವಚಿತ್ರಗಳು
* ಇನ್ನಿತ್ಯಾದಿ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದಕ್ಕೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ
* ಸೂಚಿಸಿರುವ ಸೂಕ್ತ ದಾಖಲೆಗಳೊಂದಿಗೆ ಸರ್ಕಾರ ನಿಗದಿಪಡಿಸುವ ಸಮಯಕ್ಕೆ ಸರಿಯಾಗಿ ಹೋಗಿ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಳ್ಳಿ
* ಹತ್ತಿರದ CSC ಕೇಂದ್ರಗಳಿಂದ ಕೂಡ ಮಾಹಿತಿ ಮತ್ತು ನೆರವು ಪಡೆದುಕೊಳ್ಳಬಹುದು ಈ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿ ಬೇಕಿದ್ದರೂ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.