PM Kisan 18th Month installment : PM ಕಿಸಾನ್ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ.!

PM Kisan 18th Month installment

ರೈತ(farmer)ರಿಗೆ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರ(Central Govt)ವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ(Pradhan Mantri Kisan Samman Nidhi Yojana)ಯನ್ನ ನಡೆಸುತ್ತಿದೆ. ಇದರ ಅಡಿಯಲ್ಲಿ ಪ್ರತಿ ವರ್ಷ ರೈತರ ಖಾತೆಗೆ 6,000 ರೂಪಾಯಿ ಹಾಕಲಾಗುತ್ತಿದೆ ಈ ಹಣವನ್ನ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ಕಳುಹಿಸಲಾಗುತ್ತದೆ.

ಪ್ರತಿ ಕಂತಿನಲ್ಲೂ ಸರಕಾರ ರೈತ ಬಂಧುಗಳ ಖಾತೆಗೆ 2 ಸಾವಿರ ರೂಪಾಯಿ ನೀಡಲಾಗುತ್ತದೆ. ಈ ಯೋಜನೆಯಡಿ ಇದುವರೆಗೆ 17 ಕಂತುಗಳನ್ನ ಬಿಡುಗಡೆ ಮಾಡಲಾಗಿದೆ. ರೈತ ಭಾಂದವರು ಭವಿಷ್ಯದಲ್ಲಿ ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, ಅವರು ಕೆಲವು ಪ್ರಮುಖ ಕೆಲಸವನ್ನ ಮಾಡಬೇಕು. ಈ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ…

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಲಿಂಕ್

ದೇಶದ ಕೋಟ್ಯಂತರ ರೈತರು ಪ್ರಧಾನಮಂತ್ರಿ ಕಿಸಾನ್ ನಿಧಿ ಯೋಜನೆಯ ಪ್ರಯೋಜನವನ್ನ ಪಡೆಯುತ್ತಿದ್ದಾರೆ. ಇದೀಗ 18ನೇ ಕಂತಿಗೆ ರೈತರು ಕಾಯುತ್ತಿದ್ದಾರೆ. ವರದಿಗಳನ್ನ ನಂಬುವುದಾದರೆ, ಮುಂದಿನ ಕಂತು ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಬಹುದು. ಆದ್ರೆ, ಅದಕ್ಕೂ ಮೊದಲು ರೈತರು ಪ್ರಮುಖ ಕಾರ್ಯಗಳನ್ನ ಪೂರ್ಣಗೊಳಿಸ ಬೇಕಾಗುತ್ತದೆ.

ಈ ಸುದ್ದಿ ಓದಿ:- SBI Bank Recruitment: SBI ಬ್ಯಾಂಕ್ ನೇಮಕಾತಿ 1040 ಹುದ್ದೆಗೆ ಅರ್ಜಿ ಆಹ್ವಾನ.! ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 80,000/-

ನೀವು ಈ ಯೋಜನೆಯ ಲಾಭವನ್ನ ಪಡೆಯಲು ಬಯಸಿದ್ರೆ, ಖಂಡಿತವಾಗಿಯೂ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ. ನೀವು ಈ ಕೆಲಸವನ್ನ ಮಾಡದಿದ್ದರೆ, ನಿಮ್ಮ ಮುಂದಿನ ಕಂತು ಬಾರದೇ ಇರಬಹುದು. ಇದಲ್ಲದೆ, ನೀವು ಇನ್ನೂ ಇ-ಕೆವೈಸಿ ಮಾಡದಿದ್ದರೆ ಇಂದೇ ಮಾಡಿಸಿರಿ.

ಈ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ

ಯೋಜನೆಯ ಪ್ರಯೋಜನಗಳನ್ನ ಪಡೆಯಲು ರೈತರು ಅರ್ಜಿ ಸಲ್ಲಿಸುವಾಗ ನಮೂದಿಸಿದ ವಿವರಗಳನ್ನ ಪರಿಶೀಲಿಸಬೇಕು. ಅರ್ಜಿ ನಮೂನೆಯಲ್ಲಿ ಹೆಸರು, ಲಿಂಗ, ಆಧಾರ್ ಸಂಖ್ಯೆ, ಖಾತೆ ಸಂಖ್ಯೆ ಮುಂತಾದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ. ನೀವು ಅದನ್ನ ತಪ್ಪಾಗಿ ಭರ್ತಿ ಮಾಡಿದರೆ, ನೀವು ಯೋಜನೆಯ ಪ್ರಯೋಜನಗಳಿಂದ ವಂಚಿತರಾಗಬಹುದು. ಇನ್ನೂ ಭೂಮಿ ಪರಿಶೀಲನೆ ಮಾಡದ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.

ಈ ಸಂಖ್ಯೆಗಳ ಸಹಾಯ ಪಡೆಯಿರಿ

ಕಿಸಾನ್ ಯೋಜನೆಗೆ ಸಂಬಂಧಿಸಿದ ನವೀಕರಣಗಳಿಗಾಗಿ, ನೀವು ಅಧಿಕೃತ ವೆಬ್‌ಸೈಟ್ https://pmkisan.gov.in ನ ಸಹಾಯವನ್ನ ತೆಗೆದುಕೊಳ್ಳಬಹುದು. ರೈತರು ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಇ-ಕೆವೈಸಿ ಮಾಡಬಹುದು. ರೈತ ಬಂಧುಗಳು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಅವ್ರು ಸಹಾಯವಾಣಿ ಸಂಖ್ಯೆ 155261 ಗೆ ಸಹಾಯ ಮಾಡಬಹುದು. ಯೋಜನೆಗೆ ಸಂಬಂಧಿಸಿದ ವಿವರಗಳನ್ನ ತಿಳಿಯಲು, ರೈತರು 1800115526 ಸಂಪರ್ಕಿಸಬಹುದು.

ಇನ್ನೂ, ಇತ್ತೀಚೆಗೆ ತಿಳಿದುಬಂದಿರುವ ಮಾಹಿತಿಯ ವರದಿಯ ಪ್ರಕಾರ, ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana)ಯ ಹಣವನ್ನು ವರ್ಷಕ್ಕೆ 6,000 ರೂಪಾಯಿ ಬದಲಾಗಿ 8,000 ರೂಪಾಯಿ ನೀಡಲು ಚರ್ಚೆ ಕೂಡ ನಡೆಸಲಾಗುತ್ತಿದೆ ಎಂದು ಕೂಡ ತಿಳಿದು ಬಂದಿದೆ.

ಈ ಸುದ್ದಿ ಓದಿ:- Post Office Scheme: ಕೇವಲ 500 ರೂ. ಹೂಡಿಕೆ ಮಾಡಿ ಸಾಕು 4 ಲಕ್ಷ ಸಿಗುತ್ತೆ.!

ಈ ಕುರಿತಾಗಿ ಕೇಂದ್ರ ಕೃಷಿ ಸಚಿವಾಲಯ ರೈತ ಮುಖಂಡರು ಹಾಗೂ ತಜ್ಞರೊಂದಿಗೆ ಸಮಾಲೋಚನೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಪಿಎಂ ಕಿಸಾನ್ 18 ನೇ ಕಂತಿನ ಹಣ (pm kisan 18th installment) ಬಿಡುಗಡೆಯ ಬಗ್ಗೆ ಚರ್ಚೆಯು ನಡೆಯುತ್ತಿದೆ ಎಂದು ತಿಳಿದು ಬಂದಿದೆ ಅಂತ ಕೂಡ ಹೇಳಬಹುದು.

ಎಲ್ಲಾ ಮೂಲಗಳ ಬಂದಿರೋ ಮಾಹಿತಿ ಪ್ರಕಾರ, ಪಿಎಂ ಕಿಸಾನ್ (pm kisan 18th installment date) 18 ನೇ ಕಂತಿನ ಹಣ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಜಮಾ ಮಾಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ ಎಂದು ಮಾಹಿತಿಯು ದೊರಕಿದೆ. ಆದರೆ, ಬಿಡುಗಡೆಯ ಖಚಿತವಾದ ದಿನಾಂಕವನ್ನು ಇನ್ನೂ ಕೂಡ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment