Today Gold Price
ನಮ್ಮ ಭಾರತ ದೇಶದಲ್ಲಿ ಬಡವರಿಂದ ಹಿಡಿದು ಬಿಲೇನಿಯರ್ ವರೆಗೂ ಕೂಡ ಪ್ರತಿಯೊಬ್ಬರಿಗೂ ಬಂಗಾರ ಎನ್ನುವುದು ಪ್ರಿಯವಾದ ವಿಷಯ. ಹೆಣ್ಣು ಮಕ್ಕಳು ಬಂಗಾರದ ಆಭರಣ ತಮ್ಮ ಸೌಂದರ್ಯ ಹೆಚ್ಚಿಸುತ್ತದೆ ಎಂದು ನಂಬಿದ್ದರೆ, ಮಧ್ಯಮ ವರ್ಗದ ಜನರು ಇದನ್ನು ಪ್ರತಿಷ್ಠೆಯೆಂದು ಭಾವಿಸಿದ್ದಾರೆ. ಇದನ್ನೆಲ್ಲ ಮೀರಿ ಮತ್ತೊಂದು ವರ್ಗ ಬಂಗಾರದ ಮೇಲೆ ಹೂಡಿಕೆ ಮಾಡುತ್ತ ಲಾಭ ಕಾಣುತ್ತಿದೆ.
ಹಾಗಾಗಿ ಪ್ರತಿನಿತ್ಯವೂ ಜನಸಾಮಾನ್ಯನ ಮಾತುಕತೆಯಲ್ಲಿ ಬಂದು ಹೋಗುವ ಒಂದು ಸಾಮಾನ್ಯ ವಿಚಾರ ಎಂದರೆ ಅದು ಬಂಗಾರ ಮತ್ತು ಬಂಗಾರದ ಬೆಲೆ ವ್ಯತ್ಯಾಸದ ವಿಚಾರ. ಚಿನ್ನದ ಬೆಲೆ ವ್ಯತ್ಯಾಸ ಎಂದ ಕೂಡಲೇ ಗ್ರಾಹಕನ ಎದೆ ಬಡಿತ ತುಸು ಹೆಚ್ಚಾಗುತ್ತದೆ. ಆದರೆ ಈ ಬಾರಿ ಈ ವಿಚಾರದ ಬಗ್ಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಹಲವು ದಿನಗಳ ಬಳಿಕ ಚಿನ್ನದ ಬೆಲೆ ಇಳಿಕೆ ಕಂಡಿದೆ. ಪ್ರಸ್ತುತವಾಗಿ ಚಿನ್ನದ ಬೆಲೆ ಎಷ್ಟಿದೆ? ಎಷ್ಟು ಇಳಿಕೆ ಕಂಡಿದೆ? ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟು? ಎನ್ನುವುದರ ಪೂರ್ತಿ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಷೇರು ಮಾರುಕಟ್ಟೆಯಲ್ಲಿ ಚಿನ್ನವು ಕೂಡ ಹೂಡಿಕೆ ಆಗಿರುವುದರಿಂದ ಪ್ರತಿನಿತ್ಯವೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ದಿನದಿಂದ ದಿನಕ್ಕೆ ಬಂಗಾರದ ಬೆಲೆ ಏರುಮುಖವಾಗಿಯೇ ಹೋಗುತ್ತಿದ್ದು, ಇದನ್ನು ಲಾಭದ ದೃಷ್ಟಿಯಲ್ಲಿ ನೋಡಿದರೆ ಅನುಕೂಲಕರವಾಗಿಯೇ ಇದ್ದರೂ ಬಂಗಾರ ಖರೀದಿ ವಿಚಾರದಿಂದ ನೋಡುವುದಾದರೆ ಚಿನ್ನದ ಬೆಲೆ ಏರಿಕೆ ಖಂಡಿತ ಬೇಸರ ತರುತ್ತಿದೆ.
ಆದರೆ ಬಹಳ ದಿನಗಳಾದ ನಂತರ ಬರೋಬ್ಬರಿ ರೂ.9,000 ವರೆಗೆ ಚಿನ್ನದ ಬೆಲೆಯು ಇಳಿಕೆ ಕಂಡಿದ್ದು ಇದು ಖರೀದಿದಾರರ ಮುಖದಲ್ಲಿ ಸಂತಸವನ್ನು ಕೂಡ ಮೂಡಿಸಿದೆ. ಎಲ್ಲೆಡೆ ಬಂಗಾರದ ಬೇಟೆ ಜೋರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸದ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ ಎನ್ನುವುದರ ಮಾಹಿತಿ ಹೀಗಿದೆ ನೋಡಿ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಂತಿದೆ:-
1. ಬೆಂಗಳೂರು:-
* 22 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.66,340
* 24 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.72,370
* 1 KG ಬೆಳ್ಳಿ ಬೆಲೆ – ರೂ.91,150
ಕರ್ನಾಟಕ:-
* 18 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.5,428
* 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.43,424
* 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.54280
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.6,634
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.53,072
* 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.66,340
* 24 ಕ್ಯಾರಟ್ ಅಪರಂಜಿ ಬಂಗಾರದ ಬೆಲೆ – ರೂ.7,237
* 24 ಕ್ಯಾರಟ್ ಅಪರಂಜಿ ಬಂಗಾರದ ಬೆಲೆ – ರೂ.57,896
* 24 ಕ್ಯಾರಟ್ ಅಪರಂಜಿ ಬಂಗಾರದ ಬೆಲೆ – ರೂ.72,370
ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ಗೆ):-
* ಬೆಂಗಳೂರು – ರೂ.64,340
* ಚೆನ್ನೈ – ರೂ.66,940
* ಮುಂಬೈ – ರೂ.64,340
* ಕೇರಳ – ರೂ.66,340
* ಕೊಲ್ಕತ್ತಾ – ರೂ.66,340
* ಅಹಮದಾಬಾದ್ – ರೂ.66,340
* ನವದೆಹಲಿ – ರೂ.66,490
ಚಿನ್ನದ ಬೆಲೆಯು ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ಇದು ಆಮದ ಸುಂಕ, ಮೇಕಿಂಗ್ ಶುಲ್,ಕ ರಾಜ್ಯ ತೆರಿಗೆ ನಿಯಾಂತಕಗಳ ಆಧಾರದ ಮೇಲೆ ಈ ರೀತಿ ವ್ಯತ್ಯಾಸವಾಗಿರುತ್ತದೆ. ಹಾಗಾಗಿ ಸಾಮಾನ್ಯವಾಗಿ ಚಿನ್ನದ ಬೆಲೆ ತಿಳಿಸುವಾಗ ಬೆಲೆಗಳನ್ನು ಕಂಪೇರ್ ಮಾಡಿಯೇ ತಿಳಿಸಲಾಗುತ್ತದೆ. ಮತ್ತು ಚಿನ್ನದ ಖರೀದಿ ವಿಚಾರದಲ್ಲಿ ತಿಳಿಸಲೇಬೇಕಾದ ಪ್ರಮುಖ ಸಂಗತಿ ಏನೆಂದರೆ.
ಚಿನ್ನ ಖರೀದಿ ಮಾಡುವ ಮುನ್ನ ಚಿನ್ನದ ಶುದ್ಧತೆ ಪರೀಕ್ಷೆ ಅತ್ಯಗತ್ಯ ಇಲ್ಲವಾದಲ್ಲಿ ನಾವು ಹೂಡಿಕೆ ಮಾಡಿದ ಅಷ್ಟು ಹಣ ನಷ್ಟವಾಗಿ ನೋವು ಅನುಭವಿಸಬೇಕಾಗುತ್ತದೆ ಹಾಗಾಗಿ ಚಿನ್ನ ಖರೀದಿ ಮಾಡುವ ಸಮಯದಲ್ಲಿ ತಪ್ಪದೆ ಪ್ರತಿಯೊಬ್ಬ ಗ್ರಾಹಕನು ಕೂಡ ತಮ್ಮ ಆಭರಣಗಳಿಗೆ ಅಂಗಡಿ ಸೀಲ್ ಜೊತೆ ಹಾಲ್ ಮಾರ್ಕ್ ಚಿನ್ಹೆ ಇದೆಯೇ ಗಮನಿಸಿ ಖರೀದಿಸಿ ಅಥವಾ BIS ಕೇರ್ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಚಿನ್ನದ ಶುದ್ಧತೆ ಎಷ್ಟಿದೆ ಎನ್ನುವುದನ್ನು ಆನ್ಲೈನಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಿ.