Gold Price:
ಬೆಳ್ಳಿ ಹಾಗೂ ಬಂಗಾರ ಪ್ರಿಯರಿಗೆ ಚಿನ್ನ ಖರೀದಿ ಮಾಡುವುದಕ್ಕೆ ಇದು ಸಕಾಲ. ಯಾಕೆಂದರೆ ನಿರಂತರವಾಗಿ ಕಳೆದ 10-15 ದಿನಗಳಿಂದ ಬೆಳ್ಳಿ ಮತ್ತು ಬಂಗಾರದ ಬೆಲೆಯು ಗಣನೀಯವಾಗಿ ಕುಸಿತ ಕಾಣುತ್ತಿದೆ. ಕಳೆದ ಒಂದು ದಶಕದಲ್ಲಿಯೇ ಅತಿ ಹೆಚ್ಚಿನ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಕುಸಿತ ಕಾಣುತ್ತಾ ಬರುತ್ತಲಿರುವುದು ಆಭರಣ ಪ್ರಿಯ ಮಹಿಳೆಯ ಸಂತೋಷವನ್ನು ದುಪ್ಪಟ್ಟು ಮಾಡಿದೆ ಎಂದೇ ಹೇಳಬಹುದಾಗಿದೆ.
ಯಾಕೆಂದರೆ ಕಳೆದ ಒಂದು ತಿಂಗಳಿನಲ್ಲಿ ಇದ್ದ ಬೆಲೆಗೆ ಹೋಲಿಸಿಕೊಂಡರೆ 10ಗ್ರಾಂ ಬಂಗಾರದ ಬೆಲೆಯು ಸುಮಾರು ರೂ.4,000 ದಷ್ಟು ಕಡಿಮೆ ಆಗಿದೆ ಮತ್ತು ಬೆಳ್ಳಿಯ ಬೆಲೆಯೂ ಕೂಡ ಹೀಗೆ ದಾಖಲೆ ಮಟ್ಟದಲ್ಲಿ ವ್ಯತ್ಯಾಸವಾಗಿದೆ. ಹಾಗಾಗಿ ನೀವೇನಾದರೂ ಹೂಡಿಕೆ ಉದ್ದೇಶದಿಂದ ಬಂಗಾರ ಖರೀದಿಸುತ್ತಿದ್ದರೆ ಅಥವಾ ನೀವೇ ನಿಮ್ಮ ಮನೆಯ ಶುಭ ಕಾರ್ಯಗಳಿಗೆ ಬಂಗಾರ ಖರೀದಿಸಲು ಪ್ಲಾನ್ ಮಾಡಿದ್ದರೆ.
ಅಥವಾ ಮತ್ತೊಬ್ಬರಿಗೆ ಬಂಗಾರದ ಉಡುಗೊರೆಯನ್ನು ಮುಂದಿನ ದಿನಗಳಲ್ಲಿ ಕೊಡಬೇಕಾದ ಸಂದರ್ಭ ಇದ್ದರೆ ಬೆಲೆ ಕಡಿಮೆ ಇರುವ ಈ ಸಮಯದಲ್ಲಿಯೇ ತರಿಸುವುದು ಉತ್ತಮವಾಗಿದೆ ಎಂಬ ಸಲಹೆಯನ್ನು ನೀಡುತ್ತಾ ಆಸಕ್ತರಿಗೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ದೇಶದ ಪ್ರಮುಖ ನಗರಗಳಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ ಎನ್ನುವ ಪಟ್ಟಿಯನ್ನು ಕೂಡ ಈ ಲೇಖನದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.
ಇದರೊಂದಿಗೆ ಬಂಗಾರ ಖರೀದಿಸುವವರು ಆರಿಸಿಕೊಳ್ಳುವ ಡಿಸೈನ್ ಗಳು ಮತ್ತು ಅವರು ಆರ್ಡರ್ ಮಾಡುವ ತೂಕದ ಆಧಾರದ ಮೇಲೆಯೂ ಮೇಕಿಂಗ್ ಚಾರ್ಜಸ್ ವೇಸ್ಟೇಜ್ ಕೂಡ ಬಂಗಾರದ ಬೆಲೆ ವ್ಯತ್ಯಾಸ ತರುತ್ತದೆ ಮತ್ತು ಆಯಾ ರಾಜ್ಯದಲ್ಲಿ ವಿಧಿಸಲಾಗುವ ಅಬಕಾರಿ ಸುಂಕ, GST ಇತ್ಯಾದಿಗಳು ಕೂಡ ಬಂಗಾರದ ಬೆಲೆ ನಿರ್ಧರಿಸುವ ಅಂಶಗಳಾಗಿವೆ ಎನ್ನುವುದನ್ನು ಅಂಶ ಗಮನದಲ್ಲಿ ಇರಲಿ.
ಮತ್ತು ಇದರೊಂದಿಗೆ ಎಷ್ಟೇ ಚಿಕ್ಕ ಗಾತ್ರದ ಬಂಗಾರ ಖರೀದಿಸಿದರೂ ಕೂಡ ಚಿನ್ನದ ಪರಿಶುದ್ಧತೆ ಬಗ್ಗೆ BIS ಸಂಸ್ಥೆ ನೀಡುವ ಹಾಲ್ಮಾರ್ಕ್ ಚಿನ್ಹೆ ಇದೆಯೇ ಎನ್ನುವುದನ್ನು ದೃಡಪಡಿಸಿಕೊಂಡೇ ಮುಂದುವರೆಯಿರಿ ಇದಕ್ಕಾಗಿ ಸರ್ಕಾರದ BIS app ಕೂಡ ಬಳಸಿಕೊಳ್ಳಿ.
ಇಂದು ದೇಶದ ಪ್ರಮುಖ ಸಿಟಿಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
* ಬೆಂಗಳೂರು – ರೂ.66,900
* ಚೆನ್ನೈ – ರೂ.67,590
* ಮುಂಬೈ – ರೂ.66,900
* ಕೇರಳ – ರೂ.66,900
* ಕೊಲ್ಕತ್ತಾ – ರೂ.66,900
* ಅಹಮದಾಬಾದ್ – ರೂ.67,040
* ನವದೆಹಲಿ – ರೂ.67,810
ಇಂದು ದೇಶದ ವಿವಿಧ ನಗರಗಳಲ್ಲಿ 1Kg ಬೆಳ್ಳಿಯ ಬೆಲೆ:-
* ಬೆಂಗಳೂರು – ರೂ.9,260
* ಚೆನ್ನೈ – ರೂ.9,780
* ಮುಂಬೈ – ರೂ.9,330
* ಕೊಲ್ಕತ್ತಾ – ರೂ.9,330
* ನವದೆಹಲಿ – ರೂ.9,330
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ
* 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ – ರೂ.66,900
* 24 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.73,080
* ಬೆಳ್ಳಿ 1 Kg ಗೆ ರೂ.92,600
ಕರ್ನಾಟಕದಲ್ಲಿ 1 ಗ್ರಾಂ ಚಿನ್ನದ ಬೆಲೆ
* 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.5,481
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.6,699
* 24 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.7,308