Today Gold Price:
ನಮ್ಮ ಕರ್ನಾಟಕದಲ್ಲಿ ಬಹುತೇಕ ಹೆಚ್ಚಿನ ಮಂದಿ ಪಾಲಿಸುವ ಪಂಚಾಂಗದ ಪ್ರಕಾರವಾಗಿ ಆಷಾಡ ಮಾಸ ಹತ್ತಿರವಾಗುತ್ತಿದೆ. ಸಾಮಾನ್ಯವಾಗಿ ನಮ್ಮ ಕರ್ನಾಟಕದಲ್ಲಿ ಆಷಾಢ ತಿಂಗಳಿನಲ್ಲಿ ಮದುವೆ ಹಾಗೂ ಶುಭ ಕಾರ್ಯಗಳು ಮುಹೂರ್ತ ಇರುವುದಿಲ್ಲ, ಹಿಂದೂಗಳು ಒಂದು ತಿಂಗಳು ಯಾವುದೇ ಫಂಕ್ಷನ್ ಮಾಡುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಚಿನ್ನದ ಬೆಲೆ ಇಳಿಕೆ ಆಗುತ್ತದೆ ಎನ್ನುವುದು ತಲಾ ತಲಾಂತರದಿಂದ ನಂಬಿಕೊಂಡು ಬಂದಿರುವ ನಂಬಿಕೆ.
ಈಗ ಚಿನ್ನ ಕೊಳ್ಳುವುದಕ್ಕೆ ಮದುವೆ ಅಥವಾ ಕಾರ್ಯಗಳೇ ನಡೆಯಬೇಕೆಂದು ಯಾರು ಕಾಯುವುದಿಲ್ಲ ಎನ್ನುವುದು ನಿಜವೇ ಆದರೂ ಈಗಿರುವ ಬಂಗಾರದ ಬೆಲೆಗೆ ಹೋಲಿಸಿಕೊಂಡರೆ ಸೀಸನ್ ಕಡಿಮೆ ಇರುವಾಗ ಬೆಲೆ ಕಡಿಮೆ ಆಗಿರುವುದರಿಂದ ಆಗ ಖರೀದಿಸುವುದೇ ಸೂಕ್ತ ಎಂದುಕೊಳ್ಳುತ್ತೇವೆ ಈ ರೀತಿ ಕಾಯುತ್ತಿರುವ ಎಲ್ಲರಿಗೂ ಕೂಡ ಒಂದು ಗುಡ್ ನ್ಯೂಸ್ ಇದೆ.
ಅದೇನೆಂದರೆ ನಿರೀಕ್ಷೆಯಂತೇ ಆಷಾಢ ಆರಂಭಕ್ಕೂ ಮುಂಚೆ ಇಂದಲೇ ಕಳೆದು ಒಂದು ವಾರದಿಂದ ಸತತವಾಗಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹೂಡಿಕೆ ಉದ್ದೇಶದಿಂದ ಖರೀದಿಸುತ್ತಿದ್ದರೂ ಅಥವಾ ನೀವೇ ಬಂಗಾರದ ಆಭರಣಗಳನ್ನು ಆಸೆಯಿಂದ ಖರೀದಿಸಬೇಕು ಅಂದುಕೊಂಡಿದ್ದರೂ ಎಲ್ಲದಕ್ಕೂ ಇದು ಸೂಕ್ತ ಸಮಯ ನಿರಂತರವಾಗಿ ಇಳಿಕೆ ಆಗುತ್ತಿರುವ ಚಿನ್ನದ ಬೆಲೆಯು ಕಳೆದ ಆರು ದಿನಗಳಲ್ಲಿ 10 ಗ್ರಾಂ ಗೆ ರೂ.1500 ವರೆಗೂ ಕೂಡ ಕುಸಿತ ಕಂಡಿದೆ.
ಹಾಗಾಗಿ ಇನ್ನು ತಡ ಮಾಡದೆ ಬೇಗ ಖರೀದಿಸಿ ಮತ್ತು ನಮ್ಮ ರಾಜ್ಯವು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ಪ್ರಮುಖ ಸಿಟಿಗಳಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ನೋಡಿ.
ದೇಶದ ಪ್ರಮುಖ ಸಿಟಿಗಳಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
* ಬೆಂಗಳೂರು – ರೂ.66,240
* ಚೆನ್ನೈ – ರೂ.66,840
* ಮುಂಬೈ – ರೂ.66,240
* ಕೇರಳ – ರೂ.66,240
* ಕೊಲ್ಕತ್ತಾ – ರೂ.66,240
* ಅಹಮದಾಬಾದ್ – ರೂ.66,290
* ನವದೆಹಲಿ – ರೂ.66,390
ದೇಶದ ವಿವಿಧ ನಗರಗಳಲ್ಲಿ 100ಗ್ರಾಂ ಬೆಳ್ಳಿಯ ಬೆಲೆ:-
* ಬೆಂಗಳೂರು – ರೂ.9,015
* ಚೆನ್ನೈ – ರೂ.9,440
* ಮುಂಬೈ – ರೂ.8,990
* ಕೊಲ್ಕತ್ತಾ – ರೂ.8,990
* ನವದೆಹಲಿ – ರೂ.8,990
ಬೆಂಗಳೂರು ನಗರದಲ್ಲಿ ಚಿನ್ನದ ಬೆಲೆ
* 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ – ರೂ.66,240
* 24 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.72,270
* ಬೆಳ್ಳಿ 1 Kg ಗೆ ರೂ.90,150
ಕರ್ನಾಟಕದಲ್ಲಿ ಒಂದು ಗ್ರಾಂ ಚಿನ್ನದ ಬೆಲೆ
* 18 ಕ್ಯಾರೆಟ್ ಆವರಣ ಚಿನ್ನದ ಬೆಲೆ – ರೂ.5420
* 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.6,624
* 24 ಕ್ಯಾರೆಟ್ ಆಭರಣ ಚಿನ್ನದ ಬೆಲೆ – ರೂ.7,227
ನಮ್ಮ ದೇಶದಲ್ಲಿ ಬಂಗಾರದ ಬೆಲೆಯು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವ್ಯತ್ಯಾಸವಿರುತ್ತದೆ ಅದರಲ್ಲೂ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಹಳ ವ್ಯತ್ಯಾಸವಿರುತ್ತದೆ. ಆಯಾ ರಾಜ್ಯಗಳಲ್ಲಿ ವಿಧಿಸುವ GST ಆಧಾರದ ಮೇಲೆ ಇದು ನಿರ್ಧಾರ ಆಗುತ್ತದೆ ಹಾಗೂ ವೇಸ್ಟೇಜ್, ಮೇಕಿಂಗ್ ಚಾರ್ಜಸ್, ಡಿಸೈನ್ ಗಳು ಇದೆಲ್ಲವೂ ಕೂಡ ಬಂಗಾರದ ಬೆಲೆಯನ್ನು ನಿರ್ಧರಿಸುತ್ತವೆ.
ಯಾವುದೇ ಬಂಗಾರದ ಆಭರಣ ಕೊಂಡುಕೊಳ್ಳುವ ಮುನ್ನ ಶುದ್ಧತೆ ಪರೀಕ್ಷೆಗೆ ಹೆಚ್ಚಿನ ಮಹತ್ವ ಕೊಡಿ. BIS ಹಾಲ್ ಮಾರ್ಕ್ ಚಿಹ್ನೆ ಹೊಂದಿರುವ ಬಂಗಾರವನ್ನೇ ಖರೀದಿಸಿ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಇತರರೊಂದಿಗೆ ಕೂಡ ಶೇರ್ ಮಾಡಿ.