Today Gold Rate: ಚಿನ್ನದ ಬೆಲೆ ಭಾರಿ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯ.!

Today Gold Price

ಹಳದಿ ಲೋಹ ಬಂಗಾರವು ಎಲ್ಲರನ್ನೂ ಸೆಳೆಯುವ ಮಾಯೆಯಾಗಿದೆ. ಗೃಹಿಣಿಯರಿಗೆ ಆಭರಣಗಳ ಸೆಳೆತವಾದರೆ, ಶ್ರೀಮಂತರಿಗೆ ಹೂಡಿಕೆಯ ಭಾಗವಾಗಿದೆ. ಹೀಗಾಗಿ ಚಿನ್ನ ಎಂದ ಕೂಡಲೇ ಒಂದು ಕ್ಷಣ ಎಲ್ಲರ ಕಿವಿಯೂ ನೆಟ್ಟಗಾಗುತ್ತದೆ. ಅದರಲ್ಲೂ ನಮ್ಮ ಭಾರತ ದೇಶದಲ್ಲಿ ಚಿನ್ನದ ಮೇಲೆ ಕೊಂಚ ವ್ಯಾಮೋಹ ಹೆಚ್ಚೇ ಇರುತ್ತದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಒಬ್ಬ ಬಡ ಕುಟುಂಬದ ವ್ಯಕ್ತಿಯು ಕೂಡ ತನ್ನ ಹೆಂಡತಿ ಮಕ್ಕಳಿಗೆ ಸ್ವಲ್ಪವಾದರೂ ಚಿನ್ನ ಮಾಡಿಸಲು ಬಯಸುತ್ತಾನೆ.

ಚಿನ್ನಕ್ಕೆ ಇಷ್ಟು ಮೌಲ್ಯ ಬರಲು ಚಿನ್ನವನ್ನು ಮಾರಾಟ ಮಾಡಿದಾಗ ಕೂಡ ಲಾಭವಾಗದಿದ್ದರೂ ಖಂಡಿತ ನಷ್ಟವಾಗುವುದಿಲ್ಲ ಎನ್ನುವ ಸಮಾಧಾನ ಕೂಡ ಕಾರಣವಾಗಿದೆ. ಹೀಗೆ ಎಲ್ಲಾ ವರ್ಗದವರಿಗೂ ಪ್ರಿಯವಾದ ಈ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ, ಅದರಲ್ಲೂ ಕಳೆದ ಎರಡು ದಶಕದಲ್ಲಿ ಆಗಿರುವ ಬಂಗಾರದ ಬೆಲೆ ವೈಪರೀತ್ಯವು ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಸೃಷ್ಟಿಸಿದೆ. ಹೀಗಿದ್ದರೂ ಕೂಡ ಚಿನ್ನಕ್ಕೆ ಮಾರ್ಕೆಟ್ ಕಡಿಮೆ ಆಗಿಲ್ಲ ಇಂದಿಗೂ ಮದುವೆ ಮುಂಜಿ ಶುಭ ಕಾರ್ಯಗಳ ನೆಪವಾಗಿ ಹಬ್ಬ ಹರಿದಿನಗಳಿಗೆ ಭಾಗವಾಗಿ ಬಂಗಾರದ ಖರೀದಿಸುತ್ತಲೇ ಇರುತ್ತೇವೆ.

WhatsApp Group Join Now
Telegram Group Join Now

ಇನ್ನು ಕೆಲವೇ ದಿನಗಳಲ್ಲಿ ಆಷಾಢ ಶುರುವಾಗುತ್ತಿದೆ, ಸಾಮಾನ್ಯವಾಗಿ ಆಷಾಢದಲ್ಲಿ ಶುಭ ಕಾರ್ಯಗಳು ಕಡಿಮೆ ಇರುವುದರಿಂದ ಬಂಗಾರದ ಬೆಲೆ ಕಡಿಮೆ ಆಗುತ್ತದೆ ಎನ್ನುವ ನಿರೀಕ್ಷೆಯು ಸಹ ಇರುತ್ತದೆ. ಅದಕ್ಕೆ ತಕ್ಕ ಹಾಗೆ ಕಳೆದ ಒಂದು ವಾರದಿಂದ ಮಾತ್ರ ಬಂಗಾರದ ಬೆಲೆಯು ಮತ್ತು ಬೆಳ್ಳಿ ಬೆಲೆಯು ಕಡಿಮೆ ಆಗುತ್ತದೆ. ಇದು ಬಂಗಾರದ ಖರೀದಿಗೆ ಕಾಯುತ್ತಿರುವವರಿಗೆ ಬಹಳ ಲಾಭ ಕೊಡುವ ಸಂಗತಿಯಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಇಂದು ಬಂಗಾರದ ಬೆಲೆ ಎಷ್ಟಿದೆ? ಕರ್ನಾಟಕದಲ್ಲಿ ಇದರ ಬೆಲೆ ಎಷ್ಟಿದೆ? ಮತ್ತು ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ಹಾಗೂ ಬಂಗಾರದ ಬೆಲೆ ಎಷ್ಟು ಏನು ಎಂಬುದರ ವಿವರವನ್ನು ತಿಳಿಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಇಂತಿದೆ:-

1. ಬೆಂಗಳೂರು:-
* 22 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.66,240
* 24 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ – ರೂ.72,270
* 1 KG ಬೆಳ್ಳಿ ಬೆಲೆ – ರೂ.90,950

ಕರ್ನಾಟಕ:-

* 18 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.5,420
* 22ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.6,624
* 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) ಗ್ರಾಂ ಗೆ – ರೂ.7,222
* 8ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.43,360
* 10ಗ್ರಾಂ 18 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ.54,200
* 8 ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.52,922
* 10 ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.66,240
* 8 ಗ್ರಾಂ 24 ಕ್ಯಾರಟ್ ಆಭರಣ ಚಿನ್ನದ ಬೆಲೆ ಗ್ರಾಂ ಗೆ – ರೂ.57,776
* 10 ಗ್ರಾಂ 24 ಕ್ಯಾರಟ್ ಅಪರಂಜಿ ಬಂಗಾರದ ಬೆಲೆ – ರೂ.72,220

ದೇಶದ ವಿವಿಧ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ:-

* ಚೆನ್ನೈ – ರೂ.67,010
* ಮುಂಬೈ – ರೂ.66,240
* ಕೇರಳ – ರೂ.66,240
* ಕೊಲ್ಕತ್ತಾ – ರೂ.66,240
* ಅಹಮದಾಬಾದ್ – ರೂ.66,290
* ನವದೆಹಲಿ – ರೂ.66,390

ವಿವಿಧ ನಗರಗಳಲ್ಲಿ ಬೆಳ್ಳಿ ದರ(100 ಗ್ರಾಂ)

* ಬೆಂಗಳೂರು – ರೂ.9,095
* ಚೆನ್ನೈ – ರೂ.67,010
* ಮುಂಬೈ – ರೂ.66,240
* ಕೇರಳ – ರೂ.66,240
* ಕೊಲ್ಕತ್ತಾ – ರೂ.66,240
* ಅಹ್ಮದಾಬಾದ್ – ರೂ.66,290
* ನವದೆಹಲಿ – ರೂ.66,390

ಚಿನ್ನದ ಬೆಲೆಯು ಹೀಗೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಿರಲು ಇದು ಆಮದ ಸುಂಕ / ಮೇಕಿಂಗ್ ಸಿಲ್ಕ್ / ರಾಜ್ಯ ತೆರಿಗೆ ನಿಯಾಂತಕಗಳ ಮೇಲೆ ನಿರ್ಧಾರವಾಗಿರುತ್ತದೆ. ಇದರೊಂದಿಗೆ ಚಿನ್ನ ಖರೀದಿ ವಿಚಾರದಲ್ಲಿ ತಿಳಿಸಲೇಬೇಕಾದ ಪ್ರಮುಖ ಸಂಗತಿಯೊಂದಿದೆ. ಅದೇನೆಂದರೆ, ಚಿನ್ನ ಖರೀದಿ ಮಾಡುವ ಮುನ್ನ ಚಿನ್ನದ ಶುದ್ಧತೆ ಪರೀಕ್ಷೆ ಅತ್ಯಗತ್ಯ. ಹಾಗಾಗಿ ನಾವು ಹೂಡಿಕೆ ಮಾಡಿದ ಅಷ್ಟು ಹಣ ನಷ್ಟ ಅನುಭವಿಸಬೇಕಾಗುತ್ತದೆ ಹಾಗಾಗಿ ಚಿನ್ನ ಖರೀದಿ ಮಾಡುವ ಸಮಯದಲ್ಲಿ ತಪ್ಪದೆ ಪ್ರತಿಯೊಬ್ಬರೂ ಆಭರಣಗಳಿಗೆ ಅಂಗಡಿ ಸೀಲ್ ಜೊತೆ ಹಾಲ್ ಮಾರ್ಕ್ ಚಿನ್ನೆ ಗಮನಿಸಿ ಖರೀದಿಸಬೇಕು. ಈಗ ಬಿಐಎಸ್ ಕೇರ್ ಆಪ್ ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ನಿಮ್ಮ ಚಿನ್ನದ ಶುದ್ಧತೆ ಎಷ್ಟಿದೆ ಎನ್ನುವುದನ್ನು ಆನ್ಲೈನಲ್ಲಿ ಪರೀಕ್ಷಿಸಿ ತಿಳಿದುಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment