Train
ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎನ್ನುವುದು ಎಲ್ಲರಿಗೂ ತಿಳಿದಿರಬೇಕು. ಸರ್ಕಾರಿ ಬಸ್ ಗಳೇ ಆಗಿರಲಿ ಅಥವಾ ರೈಲು ಪ್ರಯಾಣವೇ ಆಗಿರಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ದಂಡ ತಪ್ಪಿದ್ದಲ್ಲ ಉದಾಹರಣೆಗೆ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವಾಗ ಟಿಕೆಟ್ ಪಡೆಯದೆ ಕುಳಿತಿದ್ದರೆ ತಪಾಸಣೆ ವೇಳೆ ಸಿಕ್ಕಿ ಬಿದ್ದಾಗ ರೂ.500 ದಂಡ ಕಟ್ಟಬೇಕು.
ಈಗ ಕರ್ನಾಟಕ ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಇದ್ದರು ನಿಮ್ಮ ಬಳಿ ಇರುವ ದಾಖಲೆ ತೋರಿಸಿ ನೀವು ಶೂನ್ಯ ದರ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದರೆ ತಪಾಸಣೆ ವೇಳೆ ಸಿಕ್ಕಿ ಬಿದ್ದಾಗ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರು ನೀವು ಟಿಕೆಟ್ ಪಡೆಯದೆ ಇದ್ದ ಕಾರಣ ದಂಡ ಕಟ್ಟಬೇಕು ಎನ್ನುವುದು ಗೊತ್ತಿರಲಿ.
ಬಸ್ ಮತ್ರವಲ್ಲದೆ ರೈಲು ಪ್ರಯಾಣದಲ್ಲೂ ಕೂಡ ಅನೇಕರು ಟಿಕೆಟ್ ಪಡೆಯದೆ ಪ್ರಯಾಣಿಸುತ್ತಾರೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ವಂ’ಚಿ’ಸು’ವ ಸಲುವಾಗಿ ಈ ರೀತಿ ಮಾಡಿದರೆ ಇನ್ನು ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಯಾಣ ಅತಿ ಮುಖ್ಯವಾದದ್ದಾಗಿದ್ದರೆ ಸರತಿ ಸಾಲು ಉದ್ದವಾಗಿತ್ತು ಎಂದು ಅಥವಾ ಸಮಯ ಇರಲಿಲ್ಲ ಟ್ರೈನ್ ಬಂತು ಎಂದು ಟಿಕೆಟ್ ಇಲ್ಲದಿದ್ದರೂ ಟ್ರೈನ್ ಹತ್ತಿ ಹೋಗುತ್ತಾರೆ.
ಆದರೆ TTE ಬಂದು ಚೆಕ್ ಮಾಡಿದಾಗ ಸಿಕ್ಕಿ ಬಿದ್ದರೆ ಆಗ ದಂಡ ಕಟ್ಟಲೇಬೇಕು. ಗಂಟೆಗಟ್ಟಲೇ ಟಿಕೆಟ್ ಗಾಗಿ ಕ್ಯೂನಲ್ಲಿ ನಿಂತಿದ್ದರೂ ಟಿಕೆಟ್ ಸಿಗದೇ ಇದ್ದಾಗ ರೈಲು ಹತ್ತಿದ್ದು ಕೆಲವೊಮ್ಮೆ ಅವರ ತಪ್ಪೇ ಎನ್ನುವ ಪ್ರಶ್ನೆ ಮೂಡಬಹುದು ಆದರೆ ನಿಯಮವೇ ಹೀಗಿರುವಾಗ ಖಂಡಿತವಾಗಿಯೂ ದಂಡ ಕಟ್ಟಲೇ ಬೇಕಾಗುತ್ತದೆ, ಆದರೆ ಈಗ ಸರ್ಕಾರ ಇದಕ್ಕೊಂದು ಪರಿಹಾರ ನೀಡಿದೆ.
ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ ತನ್ನ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. ಭಾರತೀಯ ರೈಲ್ವೆಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳಡಿ ಸೇರಿಸಿರುವ ಹೊಸ ನಿಯಮದ ಪ್ರಕಾರ ಒಂದು ವೇಳೆ ಕೆಲವು ಅನಿವಾರ್ಯ ಸಂದರ್ಭದಲ್ಲಿ ನೀವು ಟಿಕೆಟ್ ಇಲ್ಲದೆ ರೈಲು ಹತ್ತಿದರು ದಂಡ ಕಟ್ಟಬೇಕಿಲ್ಲ.
ಆದರೆ ನಂತರ ನೀವು ಕೆಲವು ಕರ್ತವ್ಯಗಳನ್ನು ತಪ್ಪದೆ ನಿರ್ವಹಿಸಬೇಕು ಹೊಸ ನಿಯಮದ ಪ್ರಕಾರ ರೈಲಿನೊಳಗೂ ಟಿಕೆಟ್ ಪಡೆಯಬಹುದಾಗಿದೆ, ಯಾವುದಾದರೂ ಅನಿವಾರ್ಯ ಸಂದರ್ಭದಲ್ಲಿ ನೀವು ಸೂಕ್ತ ಕಾರಣವನ್ನು ಹೊಂದಿದ್ದರೆ ಆಗ ಟಿಕೆಟ್ ಇಲ್ಲದೆ ರೈಲು ಹತ್ತಿದ್ದರೆ ಚಿಂತೆ ಪಡಬೇಡಿ. ರೈಲು ಹತ್ತಿದ ಮೇಲೆ ನೀವೇ ಹೋಗಿ ಮೊದಲು TTE ಯನ್ನು ಸಂಪರ್ಕಿಸಿ ನಿಮ್ಮ ಪರಿಸ್ಥಿತಿಯ ಬಗ್ಗೆ ಅವರಿಗೆ ವಿವರಿಸಿ ಕೇವಲ 10 ರೂಪಾಯಿ ತಂಡವಾಗಿ ಸ್ವೀಕರಿಸಿ ಅವರು ನೀವು ತರಬೇಕಾದ ಸ್ಥಳದ ಟಿಕೆಟ್ ನೀಡುತ್ತಾರೆ.
TTE ಗೆ ನೀಡಿರುವ ಹ್ಯಾಂಡ್ ಹೆಲ್ಡ್ ಯಂತ್ರದ ಮೂಲಕ ಅವರು ನಿಮಗೆ ಟಿಕೆಟ್ ನೀಡುತ್ತಾರೆ.ಈ ಹ್ಯಾಂಡ್ ಹೆಲ್ಡ್ ಯಂತ್ರವನ್ನು ರೈಲ್ವೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯ ಸರ್ವರ್ ಸಂಪರ್ಕಿಸುತ್ತದೆ. ಪ್ರಯಾಣಿಕರು ಕೇಳಿದ ತಕ್ಷಣ ಯಂತ್ರದಲ್ಲಿ ಹೆಸರು ಮತ್ತು ಸ್ಥಳ ನಮೂದಿಸಿದರೆ ತಕ್ಷಣ ಟಿಕೆಟ್ ಬರುತ್ತದೆ.
ಆದರೆ ನೆನಪಿಡಿ ನೀವೇ ಮೊದಲಿಕೆ ಹೋಗಿ TTE ಯಿಂದ ಕೇಳಿ ಟಿಕೆಟ್ ಪಡೆಯಬೇಕು. ಒಂದು ವೇಳೆ TTE ಪರಿಶೀಲನೆಗೆ ಬಂದಾಗ ನೀವು ಕೇಳಿದರೆ ಪ್ರಯೋಜನವಿಲ್ಲ ಆ ಸಂದರ್ಭದಲ್ಲಿ ನೀವು 250 ರೂ. ದಂಡವನ್ನು ಕಟ್ಟಿ ನಂತರ ನೀವು ತಲುಪಬೇಕಾದ ಸ್ಥಳಕ್ಕೆ ಟಿಕೆಟ್ ಪಡೆಯಬೇಕಾಗುತ್ತದೆ.