PF Withdraw: ಯಾವ್ಯಾವ ಸಂದರ್ಭಗಳಲ್ಲಿ ನೀವು PF ಹಣ ಹಿಂಪಡಯಬಹುದು.? ಇಲ್ಲಿದೆ ಮಾಹಿತಿ

PF Withdraw

ಸರ್ಕಾರಿ ನೌಕರರು(Government employees) ಮತ್ತು ಖಾಸಗಿ ನೌಕರ(Private employee)ರರು ಅವರಿಗೆ ಬರುವ ಸಂಬಳದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಇಲ್ಲಿ ಕೆಲವು ನಿಯಮ(Rules)ಗಳನ್ನು ಅಳವಡಿಸಲಾಗಿರುತ್ತದೆ. ಹಾಗಾಗಿ, ಈ ನಿಯಮಗಳ ಬಗ್ಗೆ ಖಂಡಿತವಾಗಿ ನೀವು ತಿಳಿದಿರಬೇಕು. ಇಲ್ಲದಿದ್ದರೆ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೆ

ಹೆಚ್ಚಿನ ಜನರು ಮನೆಯಲ್ಲಿ ಕೆಲವು ಅಗತ್ಯಗಳನ್ನು ಹೊಂದಿರುತ್ತಾರೆ ಆ ಅಗತ್ಯಗಳಿಗೆ ಕಾಲಕಾಲಕ್ಕೆ ಹಣ ಹೊಂದಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ಅವರು ತಮ್ಮ ಪಿಎಫ್ ಖಾತೆ(PF account)ಯಿಂದ ಹಣವನ್ನು ಹಿಂಪಡೆಯಲು ಬಯಸುತ್ತಾರೆ. ಆದರೆ, ಈ ನಿಯಮಗಳ ಬಗ್ಗೆ ನಿಮಗೆ ಅರಿವಿಲ್ಲದಿದ್ದರೆ ನಿಮ್ಮ ಹಣವನ್ನು ಹಿಂಪಡೆಯಲು ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

WhatsApp Group Join Now
Telegram Group Join Now

ಆದ್ದರಿಂದ ನೀವು ಈ ನಿಯಮದ ಬಗ್ಗೆ ತಿಳಿದುಕೊಳ್ಳಬೇಕು. ನಿಮ್ಮ ಪಿಎಫ್ ಹಣವನ್ನು ನೀವು ಯಾವ ಉದ್ದೇಶಗಳಿಗಾಗಿ ಹಿಂಪಡೆಯಬಹುದು? ಅದಕ್ಕೆ ನಿಯಮಗಳೇನು? ಎಂಬುದರ ಬಗ್ಗೆ ಇಂದಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ.!

ಈ ಸುದ್ದಿ ಓದಿ:- Income Tax Return Filing: ಇನ್ಮುಂದೆ ʻWhatsAppʼ ಮೂಲಕವೂ ʻITRʼ ಸಲ್ಲಿಸಬಹುದು.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

ಭವಿಷ್ಯ ನಿಧಿ(provident fund)ಯಡಿ ಪ್ರತಿ ತಿಂಗಳು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರ ವೇತನದಿಂದ ನಿರ್ದಿಷ್ಟ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಈ ಮೊತ್ತವನ್ನು ನೌಕರರ ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಪಿಎಫ್ ಖಾತೆಗಳಲ್ಲಿ ಠೇವಣಿ ಇಡುವ ಹಣವನ್ನು ನಿವೃತ್ತಿಯವರೆಗೂ ಇಟ್ಟುಕೊಂಡರೆ ಬಡ್ಡಿ ಹೆಚ್ಚಾಗಿರುತ್ತದೆ. ಆದರೆ, ಕೆಲವರಿಗೆ ಕೆಲವು ಅಗತ್ಯಗಳಿರುತ್ತವೆ.

ಇದರಿಂದಾಗಿ ಪಿಎಫ್ ಹಣವನ್ನು ಮೊದಲೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ, EPFO ​​ನಿಯಮಗಳ ಪ್ರಕಾರ, PF ಹಣವನ್ನು ಮೂರು ರೀತಿಯ ಅಗತ್ಯಗಳಿಗಾಗಿ ಮಾತ್ರ ಹಿಂಪಡೆಯಬಹುದು. 58 ವರ್ಷ ವಯಸ್ಸನ್ನು ತಲುಪಿದ ನಂತರ ನೀವು ನಿಮ್ಮ ಪಿಎಫ್ ಖಾತೆಯಿಂದ ಬಡ್ಡಿಯೊಂದಿಗೆ ಹಣವನ್ನು ಹಿಂಪಡೆಯಬಹುದು.

ನೀವು ಸಂಸ್ಥೆಯಲ್ಲಿ ಕೆಲಸ ಮಾಡಿದ 2 ತಿಂಗಳು ಕೆಲಸವಿಲ್ಲದಿದ್ದರೆ ನೀವು ಪಿಎಫ್ ಹಣವನ್ನು ತೆಗೆದುಕೊಳ್ಳಬಹುದು. ನಿವೃತ್ತಿಯ ಸಮಯದಲ್ಲಿ ಉದ್ಯೋಗಿ ಕಳೆದು ಹೋದರೆ ನಾಮಿನಿಯು ಪಿಎಫ್ ಖಾತೆಯಿಂದ ಪಿಎಫ್ ಹಣವನ್ನು ಪಡೆಯಬಹುದು. ಇವುಗಳಲ್ಲದೆ, ಇತರ ಉದ್ದೇಶಗಳಿಗಾಗಿಯೂ ಪಿಎಫ್ ಹಣವನ್ನು ಹಿಂಪಡೆಯಬಹುದು.

ಈ ಸುದ್ದಿ ಓದಿ:- Bank accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದೀರಾ.? ಆಗಿದ್ರೆ ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಆದರೆ ಇಪಿಎಫ್‌ಒ ವಿಧಿಸಿರುವ ಕೆಲವು ನಿಯಮಗಳನ್ನು ಅನುಸರಿಸಿದರೆ ಮಾತ್ರ ಪಿಎಫ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯ. ಮದುವೆಯ ಖರ್ಚಿಗೆ ಪಿಎಫ್ ಖಾತೆಯಿಂದ ಹಣ ಡ್ರಾ ಮಾಡಬಹುದು. ಆದರೆ, ಕೆಲವು ನಿಯಮಗಳಿವೆ. ಮದುವೆಯ ಖರ್ಚಿಗೆ ಹಣ ಬೇಕೆಂದಿರುವವರು ಕನಿಷ್ಠ 7 ವರ್ಷ ದುಡಿದಿರಬೇಕು. ಇದು ಒಂದು ಕಂಪನಿ, ಎರಡು ಅಥವಾ ಮೂರು ಕಂಪನಿಗಳಲ್ಲಿ ಆಗಿರಬಹುದು.

ಕನಿಷ್ಠ ಏಳು ವರ್ಷ ಕೆಲಸ ಮಾಡಿರಬೇಕು. ಪಿಎಫ್ ಹಣದ ಸಂಪೂರ್ಣ ಮೊತ್ತವನ್ನು ಮದುವೆಯ ವೆಚ್ಚಕ್ಕಾಗಿ ಕ್ಲೈಮ್ ಮಾಡಲಾಗುವುದಿಲ್ಲ ಎಂಬುದನ್ನು ಗಮನಿಸಿ. ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗಳಿಂದ ಗಳಿಸಿದ ದೀರ್ಘಾವಧಿಯ ಬಡ್ಡಿಯ ಶೇಕಡಾ 50 ರಷ್ಟು ಮಾತ್ರ ಮರಳಿ ಪಡೆಯಬಹುದು. ಈ ಮದುವೆಯ ವೆಚ್ಚಗಳ ಹೊರತಾಗಿ, ನೀವು ನಿಮ್ಮ ಕುಟುಂಬ ಸದಸ್ಯರು, ಒಡಹುಟ್ಟಿದವರು ಮತ್ತು ಮಕ್ಕಳ ಮದುವೆಗಳಿಗಾಗಿ PF ಖಾತೆಗಳಿಂದ PF ಹಣವನ್ನು ಹಿಂಪಡೆಯಬಹುದು.

ಗೃಹ ಸಾಲ ಮರುಪಾವತಿ

ಗೃಹ ಸಾಲ ತೀರಿಸಲು ತೊಂದರೆಗಳಿದ್ದರೆ ಅದರ ಸ್ವಲ್ಪ ಭಾಗವನ್ನು ತೀರಿಸಲು ನೀವು ನಿಮ್ಮ ಪಿ.ಎಫ್. ಹಣ ಬಳಸಿಕೊಳ್ಳಬಹುದು. ಈ ಸೌಲಭ್ಯ ಬಳಸಿಕೊಳ್ಳಲು, ನಿಮ್ಮ ಪಿ.ಎಫ್. ಖಾತೆಗೆ ಕನಿಷ್ಠ 10 ವರ್ಷ ಆಗಿರಬೇಕು. ಆಗ ನೀವು, ನಿಮ್ಮ ಮಾಸಿಕ ವೇತನದ 36 ಪಟ್ಟು ಹೆಚ್ಚಿನ ಮೊತ್ತವನ್ನು ಹಿಂಪಡೆಯಬಹುದು.

ಕೆಲವು ಸಂದರ್ಭಗಳಲ್ಲಿ, ನೀವು ನಿಮ್ಮ ಪಿ.ಎಫ್‌. ಖಾತೆಯಿಂದ ಯಾವುದೇ ಸಮಯದಲ್ಲಿ ಬೇಕಾದರೂ ಹಣವನ್ನು ಹಿಂಪಡೆಯಬಹುದು. ಉದಾಹರಣೆಗೆ, ನೀವೇನಾದರೂ ಗಂಭೀರ ಕಾಯಿಲೆಯಿಂದ ನರಳುತ್ತಿದ್ದಲ್ಲಿ ಉದ್ಯೋಗದ ಸಮಯದಲ್ಲಿ ಶಾಶ್ವತ ದೈಹಿಕ ಅಸಮರ್ಥತೆಗೆ ಒಳಗಾದಲ್ಲಿ ಅಥವಾ ನೀವು ಕೆಲಸ ಮಾಡುವ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಹಠಾತ್ತಾಗಿ ನಿಲ್ಲಿಸಿಬಿಟ್ಟರೆ, ನೀವು ನಿಮ್ಮ ಪಿ.ಎಫ್. ಹಣವನ್ನು ಹಿಂಪಡೆಯಬಹುದು.

ಈ ಸುದ್ದಿ ಓದಿ:- Scholarship: ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌.! ರಾಜ್ಯ ಸರ್ಕಾರದಿಂದ ಆರ್ಥಿಕ ಸಹಾಯಧನ.!

ಅಂತಹ ಪ್ರಕರಣವೊಂದರಲ್ಲಿ, ನಿಮ್ಮ ಸೇವಾವಧಿಯನ್ನು ಪರಿಗಣಿಸುವುದಿಲ್ಲ. ವಾಸ್ತವದಲ್ಲಿ, ನೈಸರ್ಗಿಕ ವಿಕೋಪಗಳು ನಿಮ್ಮ ಉದ್ಯೋಗದ ಮೇಲೆ ಪರಿಣಾಮ ಬೀರಿದರೆ ನಿಮ್ಮ ಆ ಸಂದರ್ಭದಲ್ಲಿ ನಿಯಮಗಳು ಲೆಕ್ಕಕ್ಕೆ ಬರುವುದಿಲ್ಲ ಹಣ ಸುಲಭವಾಗಿ ಸಿಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment