United India:
ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾಗಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ (UIIC) ಹುದ್ದೆ ಮಾಡುವುದು ಹೆಮ್ಮೆಯ ಸಂಗತಿ ಆಗಿದೆ. ನಿಮಗೂ ಈ ಬಗ್ಗೆ ಕನಸಿದ್ದರೆ ಕಂಪನಿ ವತಿಯಿಂದ ಬಿಗ್ ಆಫರ್ ಇದೆ. ಅದೇನೆಂದರೆ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಗೂ ತಮ್ಮಲ್ಲಿ ಖಾಲಿ ಇರುವ ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಕೇಲ್-1) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ಮಾಡಿದೆ.
ಇದರ ಸಂಬಂಧ ಅಧಿಕೃತ ಅಧಿಸೂಚನೆ ಕೂಡ ಬಿಡುಗಡೆಯಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವವರ ಅನುಕೂಲತೆಗಾಗಿ ಈ ಅಂಕಣದಲ್ಲಿ ಪ್ರಕಟಣೆಯಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ತಿಳಿಸಿಕೊಡಲಾಗಿದೆ. ಇದರ ವಿವರ ಇಂತಿದೆ ನೋಡಿ.
ನೇಮಕಾತಿ ಸಂಸ್ಥೆ:- ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ (UIIC)
ಉದ್ಯೋಗ ಸಂಸ್ಥೆ:- ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ (UIIC)
ಹುದ್ದೆ ಹೆಸರು:- ಅಡ್ಮಿನಿಸ್ಟ್ರೇಟಿವ್ ಆಫೀಸರ್ (ಸ್ಕೇಲ್-1 ಹುದ್ದೆಗಳು)
ಒಟ್ಟು ಹುದ್ದೆಗಳ ಸಂಖ್ಯೆ:- 200 ಹುದ್ದೆಗಳು
ಹುದ್ದೆಗಳ ವಿವರ:-
* ರಿಸ್ಕ್ ಮ್ಯಾನೇಜ್ಮೆಂಟ್ – 10
* ಫೈನಾನ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ – 20
* ಆಟೋಮೊಬೈಲ್ ಇಂಜಿನಿಯರ್ – 20
* ಕೆಮಿಕಲ್ ಇಂಜಿನಿಯರ್/ ಮೆಕಾಟ್ರಾನಿಕ್ಸ್ ಇಂಜಿನಿಯರ್ಸ್ – 10
* ಡಾಟಾ ಅನಾಲಿಟಿಕ್ಸ್ – 20
* ಕಾನೂನು – 20
* ಜೆನೆರಲಿಸ್ಟ್ – 100
ಉದ್ಯೋಗ ಸ್ಥಳ:- ಭಾರತದಾದ್ಯಂತ ವಿವಿಧ ಬ್ರಾಂಚ್ ಗಳಲ್ಲಿ
ವೇತನ ಶ್ರೇಣಿ:-
ರೂ.50,925 ರಿಂದ ರೂ.96,765
ಶೈಕ್ಷಣಿಕ ವಿದ್ಯಾರ್ಹತೆ:-
* ರಿಸ್ಕ್ ಮ್ಯಾನೇಜ್ಮೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬಿಇ / ಬಿ.ಟೆಕ್ / ಎಂಇ / ಎಂ.ಟೆಕ್ ಅಂಡ್ ಪಿಜಿ / ಪಿಜಿಡಿಎಂ ವಿದ್ಯಾಭ್ಯಾಸ ಹೊಂದಿರಬೇಕು
* ಫೈನಾನ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಿಎ / ಐಸಿಎಐ / ಐಸಿಡಬ್ಲ್ಯೂಎ / ಬಿ.ಕಾಂ / ಎಂ.ಕಾಂ. ವಿದ್ಯಾಭ್ಯಾಸ ಹೊಂದಿರಬೇಕು.
* ಆಟೋಮೊಬೈಲ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿಇ / ಬಿ.ಟೆಕ್ / ಎಂಇ / ಎಂ.ಟೆಕ್ (ಆಟೋಮೊಬೈಲ್ ) ವಿದ್ಯಾಭ್ಯಾಸ ಹೊಂದಿರಬೇಕು
* ಕೆಮಿಕಲ್ ಇಂಜಿನಿಯರ್/ ಮೆಕಾಟ್ರಾನಿಕ್ಸ್ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿ.ಟೆಕ್ / ಬಿಇ / ಎಂ.ಟೆಕ್ / ಎಂಇ (ಮೆಕಾನಿಕಲ್ / ಕೆಮಿಕಲ್) ವಿದ್ಯಾಭ್ಯಾಸ ಹೊಂದಿರಬೇಕು
* ಡಾಟಾ ಅನಾಲಿಟಿಕ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಾಟಾ ಅನಾಲಿಟಿಕ್ಸ್ ನಲ್ಲಿ ಪದವಿ / ಪಿಜಿ ವಿದ್ಯಾರ್ಹತೆ ಹೊಂದಿರಬೇಕು
* ಕಾನೂನು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾನೂನು ವಿಷಯದಲ್ಲಿ ಪದವಿ / ಪಿಜಿ ವಿದ್ಯಾರ್ಹತೆ ಪಡೆದಿರಬೇಕು
* ಜೆನೆರಲಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದಾದರೂ ಪದವಿ/ ಸ್ನಾತಕೋತ್ತರ ಪದವಿ ಪಡೆದವರು ಅರ್ಹರಿರುತ್ತಾರೆ
ವಯೋಮಿತಿ:-
* ಕನಿಷ್ಠ ವಯೋಮಿತಿ 18 ವರ್ಷಗಳು (03.09.2003ಕ್ಕಿಂತ ಮೊದಲು ಜನಿಸಿರಬೇಕು)
* ಗರಿಷ್ಠ ವಯೋಮಿತಿ 30 ವರ್ಷಗಳು (01.10.1994ರ ನಂತರ ಜನಿಸಿರಬೇಕು)
* ಸರ್ಕಾರಿ ನಿಯಮಗಳ ಅನುಗುಣವಾಗಿ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ
ಅರ್ಜಿ ಶುಲ್ಕ:-
* ಅಪ್ಲಿಕೇಶನ್ ಶುಲ್ಕವನ್ನು ಆನ್‌ಲೈನ್ ನಲ್ಲಿ UPI ಆಧಾರಿತ ಆಪ್ ಗಳ ಮೂಲಕ ಪಾವತಿ ಮಾಡಬಹುದು.
* ಸಾಮಾನ್ಯ ಅರ್ಹತೆ, OBC / EWS ಅಭ್ಯರ್ಥಿಗಳಿಗೆ ರೂ.1000.
* ST / ST / ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.250.
ಅರ್ಜಿ ಸಲ್ಲಿಸುವ ವಿಧಾನ:-
* https://uiic.co.in/recruitment/ ವೆಬ್ಸೈಟ್ ಗೆ ಭೇಟಿ ನೀಡಿ
* Apply Online ಕ್ಲಿಕ್ ಮಾಡಿ.
* ಅಗತ್ಯ ಮಾಹಿತಿಗಳನ್ನು ನೀಡಿ ರಿಜಿಸ್ಟ್ರೇಷನ್ ಆಗಿ ID & Password ಪಡೆಯಿರಿ
* ನಂತರ ಲಾಗಿನ್ ಆಗಿ ಅರ್ಜಿ ಫಾರಂ ಪ್ರತಿ ಮಾಡಿ ಸಬ್ಮಿಟ್ ಮಾಡಿ ಮತ್ತು ತಪ್ಪದೇ ಅರ್ಜಿ ಸ್ವೀಕೃತಿ ಪಡೆಯಿರಿ.
ಆಯ್ಕೆ ವಿಧಾನ:-
* ಆನ್ಲೈನ್ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15.10.2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 05.11.2024.