UPI ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮಾಡೋಕೆ ಲಿಮಿಟ್ ಫಿಕ್ಸ್.! ಈ ಲಿಮಿಟ್ ಕ್ರಾಸ್ ಮಾಡಿದರೆ ಕಟ್ ಆಗುತ್ತದೆ ಹೆಚ್ಚು ಹಣ.!

UPI

ಇತ್ತೀಚಿನ ದಿನಗಳಲ್ಲಿ UPI ಆಧಾರಿತ ಅಪ್ಲಿಕೇಶನ್ಗಳ ಮೂಲಕ ಹಣಕಾಸಿನ ವಹಿವಾಟು ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಆಂಡ್ರಾಯ್ಡ್ ಫೋನ್ ಬಂದ ಮೇಲೆ ಆನ್ಲೈನ್ ಶಾಪಿಂಗ್ ಮತ್ತು ಆನ್ಲೈನ್ ಪೇಮೆಂಟ್ ಪ್ರಕ್ರಿಯೆಗಳು ಹೆಚ್ಚಾಗಿ ಜರುಗುತ್ತಿದೆ ಎಂದು ಹೇಳಬಹುದು.

ಇದೇ ಸಮಯಕ್ಕೆ ನೋಟಿನ ಅಮಾನ್ಯೀಕರಣವಾಗಿದ್ದು ಹಾಗೂ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ಒಬ್ಬರು ಮುಟ್ಟಿದ ವಸ್ತುವನ್ನು ಮತ್ತೊಬ್ಬರು ಮುಟ್ಟಲು ಉಂಟಾಗಿದ್ದ ಭಯಬೀತ ವಾತಾವರಣ UPI ಆಧಾರಿತ ಆಪ್ ಗಳ ಬಳಕೆಗೆ ಇನ್ನಷ್ಟು ಜನ ಮಾರು ಹೋಗುವುದಕ್ಕೆ ಅನುಕೂಲವಾಯಿತು ಎಂದೇ ಹೇಳಬಹುದು.

WhatsApp Group Join Now
Telegram Group Join Now

ಪರಿಣಾಮವಾಗಿ ಈಗ ಡಿಜಿಟಲ್ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆದಿದ್ದು, ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದರ ಪ್ರಯೋಜನ ಹೆಚ್ಚಿನ ಮಟ್ಟದಲ್ಲಿ ಆಗಿದೆ. ಪರಿಣಾಮವಾಗಿ ತರಕಾರಿ ತಳ್ಳುಗಾಡಿ ವ್ಯಾಪಾರಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಮಾಡುವ ವ್ಯಾಪಾರದವರೆಗೆ ನಾವು ಆನ್ಲೈನ್ ಪೇಮೆಂಟ್ (Online Payment) ಮಾಡಬಹುದಾದ ಅನುಕೂಲತೆ ಸಿಕ್ಕಿದೆ.

ಯಾರು ಯಾರ ಖಾತೆಗೆ ಬೇಕಾದರೂ ಯಾವ ಸಮಯದಲ್ಲಾದರೂ ನೇರವಾಗಿ ಹಣ ವರ್ಗಾಯಿಸಬಹುದು, ಖಾತೆ ಸಂಖ್ಯೆ ಗೊತ್ತಿಲ್ಲದಿದ್ದವರು ಮೊಬೈಲ್ ಸಂಖ್ಯೆ ಮೂಲಕವೇ ಹಣ ಕಳುಹಿಸಬಹುದು. ಹೀಗಾಗಿ ಊಟ ಆರ್ಡರ್ ಮಾಡುವುದರಿಂದ ಕಾಲೇಜ್ ಫೀಸ್ ಕಟ್ಟುವವರಿಗೆ ಈಗ ಎಲ್ಲವೂ ಆನ್ಲೈನ್ ಪೇಮೆಂಟ್ ಮೂಲಕವೇ ನಡೆಯುತ್ತಿದೆ.

ಇದುವರೆಗೂ ಕೂಡ UPI App ಗಳಲ್ಲಿ ನಾವು ಮಾಡುವ ಹಣದ ವಹಿವಾಟಿಗೆ ಯಾವುದೇ ರೀತಿಯ ಶುಲ್ಕ ಕಟ್ಟಬೇಕಾದ ಅವಶ್ಯಕತೆ ಇರಲಿಲ್ಲ ಆದರೆ ಈಗ ಬಳಕೆದಾರರು ಹೆಚ್ಚಾದ ಮೇಲೆ ಸಾಮಾನ್ಯಕ್ಕಿಂತ ಹೆಚ್ಚು ಹಣಕಾಸಿನ ವಹಿವಾಟು ಮಾಡುವವರಿಗೆ ಶುಲ್ಕ ಹೇರುತ್ತಿವೆ ಇದರ ಕುರಿತಾದ ಮಾಹಿತಿ ಹೀಗಿದೆ ನೋಡಿ.

NPCI 2016 ರಲ್ಲಿ ಈ ಡಿಜಿಟಲ್ ಪಾವತಿ ವಿಧಾನವನ್ನು ಪರಿಚಯಿಸಿತು. ಸದ್ಯ ಎಲ್ಲೆಡೆ UPI ಪಾವತಿ ವಿಧಾನ ಚಾಲನೆಯಲ್ಲಿದೆ, UPI ಅಡಿಯಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಹಲವು ಅಪ್ಲಿಕೇಶನ್ ಗಳು ಈ ಸೇವೆಯನ್ನು ಒದಗಿಸುತ್ತಿದೆ. ಇದೀಗ ಈ ಸೇವೆಗಳ ಮೇಲೆ ಮಿತಿ ಹಾಗೂ ಕೆಲ ಬಳಕೆಗೆ ಶುಲ್ಕ ವಿಧಿಸಲಾಗುತ್ತಿದ್ದು NPCI ಪ್ರಕಾರ ನೀವು ಒಂದು ದಿನಕ್ಕೆ UPI ಬಳಕೆ ಮಾಡಿ ರೂ. 1 ಲಕ್ಷ ರೂ. ವರೆಗೆ ವರ್ಗಾವಣೆ ಮಾಡಬಹುದಾಗಿದೆ. 

ವರ್ಗಾವಣೆ ಮಾಡುವ ಮಿತಿಯು ಬ್ಯಾಂಕ್ ನಿಂದ ಬ್ಯಾಂಕ್ ಗೆ ವರ್ಗಾವಣೆ ಮಾಡುವುದಾದರೆ ರೂ.25,000 ‌‌‌‌‌‌‌‌‌‌‌‌‌‌ವರ್ಗಾವಣೆ ಮಾಡಬಹುದಾಗಿದೆ ಮತ್ತು ಕೆಲವು ಬ್ಯಾಂಕ್‌ ಗಳಲ್ಲಿ ದಿನದ ಬದಲಾಗಿ ತಿಂಗಳ ಮಿತಿ ನಿಗದಿಯಾಗಿದೆ ಮತ್ತು ಆಸ್ಪತ್ರೆಯಲ್ಲಿನ ವೈದ್ಯಕೀಯ ಶುಲ್ಕ, ಶೈಕ್ಷಣಿಕ ಶುಲ್ಕ ಪಾವತಿಸಲು 5 ಲಕ್ಷ ರೂ.ಗಳ ಮಿತಿಯನ್ನು ಇದೆ.

NPCI ಈಗ ನಿರ್ಧಿಷ್ಟ ವ್ಯಾಪಾರಿ ವರ್ಗಕ್ಕೆ ಮಿತಿಯನ್ನು ಹೆಚ್ಚಿಸಲು ದೇಶದಲ್ಲಿರುವ ಎಲ್ಲ ಬ್ಯಾಂಕ್ ಗಳು ಮತ್ತು UPI ಸೇವೆ ಒದಗಿಸುತ್ತಿರುವ ಸಂಸ್ಥೆಗಳಿಗೆ ನಿರ್ದೇಶನವನ್ನು ನೀಡಿದೆ. ಈ ಪ್ರಕಾರವಾಗಿ ಇಂಟೆರ್ ಚೇಂಜ್ ಶುಲ್ಕವು ಹೆಚ್ಚಾಗುತ್ತಿದೆ. ಇದು ಜನರಿಗೆ ಹೊರೆಯಾಗಿದೆ. ಈ ವಿಚಾರವಾಗಿ ಸಾರ್ವಜನಿಕರು ಅಸಮಾಧಾನ ಇದೆ ಆದರೂ ಜನರಿಗೆ ಇದರ ಬಳಕೆ ಅನಿವಾರ್ಯವಾದ ಕಾರಣ ಒಲ್ಲದ ಮನಸಿನಿಂದಲೇ ಬಳಕೆ ಮಾಡುತ್ತಿದ್ದಾರೆ.

ಇಂಟರ್ ಚೆಂಜ್ ಶುಲ್ಕವು ವ್ಯಾಪಾರ ವಹಿವಾಟನ್ನು ಪ್ರಕ್ರಿಯೆಗೊಳಿಸುವಾಗ ಗ್ರಾಹಕರು ವ್ಯಾಪಾರಿಗಳಿಗೆ ಪಾವತಿಸಬೇಕಾದ ಶುಲ್ಕವಾಗಿದೆ. ಸದ್ಯಕ್ಕೆ ವಿವಿಧ ಸೇವೆಗಳಲ್ಲಿ ಇಂಟರ್ ಚೆಂಜ್ ಶುಲ್ಕವು ಶೇ.೦.5ರಿಂದ ಶೇ. 1.1 ನಿಗಧಿಯಾಗಿದೆ. ಈ ಎಲ್ಲ ಇಂಟರ್ ಚೆಂಜ್ ಶುಲ್ಕಗಳು ಜನವರಿ 1 ರಿಂದ ಜಾರಿಗೆ ಬರುತ್ತಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment