UPI
ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇದೆಲ್ಲವೂ ಕೂಡ ಈಗ ಪ್ರತಿಯೊಬ್ಬ ಜನಸಾಮಾನ್ಯನ ಮೊಬೈಲ್ ನಲ್ಲಿರುವ ಅತ್ಯಂತ ಪ್ರಮುಖವಾದ ಅಪ್ಲಿಕೇಶನ್ ಗಳಾಗಿವೆ. ಭಾರತದಲ್ಲಿರುವ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಪ್ರತಿನಿತ್ಯವೂ ಇವುಗಳನ್ನು ಬಳಕೆ ಮಾಡುತ್ತಾರೆ ಮತ್ತು ದಿನವೊಂದಕ್ಕೆ ಕೋಟಿಗಟ್ಟಲೆ ಹಣಕಾಸಿನ ವಹಿವಾಟು ಈ UPI ಆಧಾರಿತ ಆಪ್ ಗಳ ಮೂಲಕ ನಡೆಯುತ್ತಿದೆ.
ಇಷ್ಟೆಲ್ಲಾ ಪ್ರಾಮುಖ್ಯತೆ ಇದ್ದಮೇಲೆ ಇವುಗಳ ಸುರಕ್ಷತೆಗೂ ಕೂಡ ಅಷ್ಟೇ ಆದ್ಯತೆ ಕೊಡಬೇಕಾದದ್ದು, ಮತ್ತು ಕಾಲಕಾಲಕ್ಕೆ ಇದನ್ನು ಇನ್ನಷ್ಟು ಬಿಗಿಗೊಳಿಸಬೇಕಾದದ್ದು ಅನಿವಾರ್ಯ ಈ ಹಿಂದಿಗಿಂತಲೂ ಹೆಚ್ಚಿನ ಭದ್ರತೆಯನ್ನು ಕೂಡ ಒದಗಿಸಬೇಕಾದ ಜವಾಬ್ದಾರಿಯಿಂದ NPI ಈ ಬಗ್ಗೆ ಒಂದು ಮಹತ್ವದ ಯೋಜನೆ ಹಾಕಿಕೊಂಡಿದೆ.
ಒಂದು ವೇಳೆ ಇದು ಜಾರಿಯಾದರೆ ಈ ಹಿಂದಿಗಿಂತಲೂ ಹೆಚ್ಚಿನ ತೂಕ ಆಪ್ ಗಳಿಗೆ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಇದರ ಕುರಿತ ಕಂಪ್ಲೀಟ್ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ. ನಾವು ನಮ್ಮ ಮೊಬೈಲ್ ಗಳಿಗೆ ಖಂಡಿತವಾಗಿಯೂ ಲಾಕ್ ಇಡುತ್ತೇವೆ. ಕೆಲವರು ಫೇಸ್ ಐ ಡಿ ಇಟ್ಟುಕೊಂಡರೆ ಇನ್ನೂ ಕೆಲವರು ಬಯೋಮೆಟ್ರಿಕ್ ಪ್ರಿಂಟ್ ಕೊಟ್ಟು ಆಪ್ ಲಾಕ್ ಅಥವಾ ಸ್ಕ್ರೀನ್ ಲಾಕ್ ಇಟ್ಟುಕೊಂಡಿರುತ್ತಾರೆ.
ಈ ಸುದ್ದಿ ಓದಿ:- PM Vishwakarma: ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಯೋಜನೆಯಡಿ ಮಹಿಳೆ & ಪುರುಷ ಇಬ್ಬರಿಗೂ ಸಿಗಲಿದೆ 5 ಲಕ್ಷ ನೆರವು.!
ಆದರೆ UPI ಆಪ್ ಬಳಕೆ ಮಾಡುವಾಗ ಹಣಕಾಸಿನ ವಹಿವಾಟು ನಡೆಸುವ ಸಮಯದಲ್ಲಿ ಪಿನ್ ಕೋಡ್ ಕೊಟ್ಟು ಹಣ ಕಳುಹಿಸುವುದನ್ನು ದೃಢೀಕರಿಸುವ ವಿಧಾನವನ್ನೇ ಅನುಸರಿಸಲಾಗುತ್ತಿದೆ. ಈಗಾಗಲೇ ಈ ಆಪ್ ಗಳ ಬಳಕೆಗೆ ಜನ ಒಗ್ಗಿಕೊಂಡು ವರ್ಷಗಳೇ ಕಳೆದಿದ್ದರೂ ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಬಳಕೆದಾರದ ಸಂಖ್ಯೆ ಹಾಗೂ ವಹಿವಾಟಾಗುತ್ತಿರುವ ಮೊತ್ತವೂ ಕೂಡ ದೊಡ್ಡ ಮಟ್ಟದಾಗುತ್ತಿರುವುದರಿಂದ ಇನ್ನಷ್ಟು ಸುರಕ್ಷೆ ಒದಗಿಸುವ ಉದ್ದೇಶದಿಂದ ಬದಲಾವಣೆ ತರಲು ಚಿಂತಿಸಲಾಗುತ್ತಿದೆ.
ಕೆಲವು ಪ್ರಕರಣಗಳಲ್ಲಿ ಈ ಡಿಜಿಟಲ್ ಪಿನ್ ಕೋಡ್ ಕೊಟ್ಟು ಲಾಕ್ ಇಡುವ ಪ್ರಕ್ರಿಯೆ ಹೆಚ್ಚು ಸುರಕ್ಷಿತವಾಗಿಲ್ಲ ಎನ್ನುವ ದೂರು ಕೂಡ ಕೇಳಿ ಬಂದಿದೆ. ಪರಿಚಿತರು ಅಥವಾ ಆಪ್ತರು ಪಿನ್ ಕೋಡ್ ಬಳಸಿದ್ದನ್ನು ನೋಡಿ ಅಥವಾ ಕ್ಯಾಮರಗಳಲ್ಲಿ ರೆಕಾರ್ಡ್ ಆಗಿರುವುದನ್ನು ಕಂಡು ನಂತರ ಪುಸಲಾಯಿಸಿ ಅಥವಾ ಮೊಬೈಲ್ ಕಳ್ಳತನ ಮಾಡಿ ವಂಚಿಸುತ್ತಿದ್ದ ಘಟನೆಗಳ ಬಗ್ಗೆಯೂ ಕೇಳಿದ್ದೇವೆ.
ಸ್ಮಾರ್ಟ್ ಫೋನ್ ಗಳಲ್ಲಿ ಇರುವ ಬಯೋಮೆಟ್ರಿಕ್ ಫೀಚರ್ ಮೂಲಕ ಹಣಕಾಸಿನ ವಹಿವಾಟನ್ನು ಧೃಡೀಕರಿಸುವ ಅಥವಾ ಫೇಸ್ ಐ ಡಿ ಮೂಲಕ ಇದನ್ನು ದೃಢೀಕರಿಸುವ ಅನುಕೂಲತೆ ಸಿಕ್ಕಲ್ಲಿ ಇದರಿಂದ ಆಗುವ ಉಪಯೋಗ ಅಷ್ಟಿಷ್ಟಲ್ಲ ಹಾಗಾಗಿ ಪೇಮೆಂಟ್ ಕಾರ್ಪೊರೇಷನ್ (NPI) ಸಂಬಂಧಿತ ಸಂಸ್ಥೆಗಳ ಜೊತೆ ಇದರ ಬಗ್ಗೆ ಚರ್ಚಿಸುತ್ತಿದೆ.
ಈ ಸುದ್ದಿ ಓದಿ:- Railway Jobs: ರೈಲ್ವೇ ಇಲಾಖೆಯಲ್ಲಿ 7951 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ವೇತನ:- 35,400/-
ಒಂದು ವೇಳೆ ಈ ಯೋಜನೆ ಯಶಸ್ವಿ ಆದರೆ ಆಂಡ್ರಾಯ್ಡ್ ಫೋನ್ ಗಳಲ್ಲಿ ಇರುವ ಫಿಂಗರ್ ಪ್ರಿಂಟ್ ಫೀಚರ್ ಅಥವಾ ಐಫೋನ್ ಗಳ ಫೇಸ್ ಐ ಡಿ ಫೀಚರ್ ಬಳಸಿ ನಮ್ಮ ಹಣಕಾಸಿನ ವಹಿವಾಟನ್ನು ದೃಢೀಕರಿಸಬಹುದು ಇದರಿಂದ ಅಸಾಧ್ಯದ ಮಟ್ಟಿಗೆ ನಮ್ಮ ವಹಿವಾಟುಗಳಿಗೆ ಸುರಕ್ಷತೆ ಸಿಗಲಿದೆ.
ಪ್ರತಿನಿತ್ಯವೂ ಕೇಳಿ ಬರುತ್ತಿರುವ ವಂಚನೆ ಪ್ರಕರಣಗಳಿಗೆ ಕಡಿವಾಣ ಕೂಡ ಬೀಳಲಿದೆ ಹಾಗಾಗಿ ಸಾಧ್ಯವಾದಷ್ಟು ಶೀಘ್ರವಾಗಿ ಫೋನ್ ಪೇ ಗೂಗಲ್ ಪೇ ಪೇಟಿಎಂ ಇತ್ಯಾದಿ ಸಂಸ್ಥೆಗಳು ಈ UPI ಆಧಾರಿತ ಆಪ್ ಗಳಿಗೆ ಬಯೋಮೆಟ್ರಿಕ್ ಸಿಸ್ಟಮ್ ಮೂಲಕ ಧೃಡೀಕರಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲಿ ಎಂದು ಬಹುತೇಕರ ಆಶಯ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕೂಡ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.