UPI Payment
ಭಾರತವು(India) ಡಿಜಿಟಲ್ ವಹಿವಾಟಿನಲ್ಲಿ(Digital transaction) ಕ್ರಾಂತಿಯನ್ನ ಸೃಷ್ಟಿಸಿದೆ. ಯುಪಿಐ ಪೇಮೆಂಟ್‌ಗಳು(UPI Payment) ಇಂದು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಜೇಬಿನಲ್ಲಿ ಹಣ (money) ಇಟ್ಟುಕೊಂಡು ವಹಿವಾಟು ನಡೆಸುತ್ತಿರುವ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಯುಪಿಐ(UPI) ಮೂಲಕ ವಹಿವಾಟುಗಳು (transaction)ಸುಲಭವಾಗುವುದರಿಂದ ಈಗ ಎಲ್ಲರನ್ನೂ ಇದನ್ನೇ ಬಳಸುತ್ತಿದ್ದಾರೆ.
ಇದಲ್ಲದೆ ಸರಳ ಮತ್ತು ಸುರಕ್ಷಿತ ಪೇಮೆಂಟ್ ವಿಧಾನ(Secure Payment Method) ಇದಾಗಿದೆ. ಮೊಬೈಲ್ ರೀಚಾರ್ಜ್(Mobile Recharge), ಕರೆಂಟ್ ಬಿಲ್(Current Bill), ವಾಟರ್ ಬಿಲ್ ಪಾವತಿಸುವಾಗ, ದಿನಸಿ ಸಾಮಾಗ್ರಿಗಳನ್ನು ಕೊಂಡುಕೊಳ್ಳುವಾಗ ವಹಿವಾಟುಗಳನ್ನು ನಿಮಿಷಗಳಲ್ಲಿ ನಡೆಸುವ ಕಾರಣ ಯುಪಿಐ ಬಳಕೆದಾರರು(UPI users) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.
ಯುಪಿಐ ಬಳಕೆದಾರರಿಗೆ ಬಹಳಷ್ಟು ಕ್ಯಾಶ್‌ಬ್ಯಾಕ್(Cashback) ಗಳು ಸಿಗುತ್ತವೆ. ಆದರೆ, ಅವುಗಳ ಸಮರ್ಪಕ ಬಳಕೆ ತಿಳಿದಿರಬೇಕಷ್ಟೇ. ಕೆಲವೊಮ್ಮೆ ಪ್ರತಿ ವಹಿವಾಟಿಗೆ ಉತ್ತಮ ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿಗಳನ್ನು ಸಿಗಬಹುದು. ಅದರಲ್ಲಿ ಬಹಳಷ್ಟು ಕ್ಯಾಶ್‌ಬ್ಯಾಕ್ ಆಗದಿರಬಹುದು. ಅನೇಕವು ಕೇವಲ ರಿಯಾಯಿತಿ ಕೂಪನ್‌ಗಳು ಮತ್ತು ವಿವಿಧ ವೋಚರ್‌ಗಳಾಗಿದ್ದು ಅವುಗಳು ನಮ್ಮ ಪ್ರಯೋಜನಕ್ಕೆ ಬಾರದೇ ಇರಬಹುದು.
ಆದರೆ, ನೀವು ಡಿಸಿಬಿ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ನಿಮಗೆ ಖಂಡಿತವಾಗಿಯೂ ಉತ್ತಮ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಖಚಿತಪಡಿಸಿಕೊಳ್ಳಬಹುದು. ಈ ಆಫರ್ ಗಳನ್ನು ಪಡೆಯಲು ಏನು ಮಾಡಬೇಕೆಂದು ಪರಿಶೀಲಿಸೋಣ;
DCB ಬ್ಯಾಂಕ್ ಹ್ಯಾಪಿ ಸೇವಿಂಗ್ಸ್ ಅಕೌಂಟ್
ಡಿಸಿಬಿ ಬ್ಯಾಂಕ್‌ನ ಹ್ಯಾಪಿ ಸೇವಿಂಗ್ಸ್ ಅಕೌಂಟ್ ಹೊಂದಿರುವವರಿಗೆ ಯುಪಿಐ ಪೇಮೆಂಟ್‌ಗಳ ಮೇಲೆ ಅದ್ಭುತವಾದ ಕ್ಯಾಶ್ ಬ್ಯಾಕ್ ಆಫರ್‌ಗಳಿವೆ. ಈ ಅಕೌಂಟ್‌ನಲ್ಲಿ ನೀವು ಮಾಡುವ ಪ್ರತಿ ಯುಪಿಐ ಪೇಮೆಂಟ್‌ಗೂ ನಿಮಗೆ ಕ್ಯಾಷ್‌ಬ್ಯಾಕ್ ಸಿಗುತ್ತದೆ. ಆದರೆ ಇದಕ್ಕಾಗಿ ಕನಿಷ್ಠ ರೂ.500 ಯುಪಿಐ ವಹಿವಾಟು ನಡೆಸಬೇಕು. ಈ ಮೂಲಕ ವರ್ಷಕ್ಕೆ ನೀವು ಗರಿಷ್ಠ 7,500 ರೂಪಾಯಿ ವರೆಗೆ ಕ್ಯಾಶ್ ಬ್ಯಾಕ್ ಗಳಿಸಬಹುದು.
7,500 ರೂಪಾಯಿ ಕ್ಯಾಶ್‌ಬ್ಯಾಕ್ ಪಡೆಯಿರಿ.!
ಹ್ಯಾಪಿ ಸೇವಿಂಗ್ಸ್ ಅಕೌಂಟ್ ಮೂಲಕ ಮಾಡಿದ ಪ್ರತಿ ತ್ರೈಮಾಸಿಕದಲ್ಲಿ ಮಾಡಿದ ವಹಿವಾಟಿನ ಆಧಾರದ ಮೇಲೆ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ತ್ರೈಮಾಸಿಕ ಅಂತ್ಯದ ನಂತರ ಆ ಕ್ಯಾಶ್‌ಬ್ಯಾಕ್ ಖಾತೆಗೆ ಜಮೆಯಾಗುತ್ತದೆ. ಹ್ಯಾಪಿ ಸೇವಿಂಗ್ಸ್ ಖಾತೆದಾರರು ತಿಂಗಳಿಗೆ ಗರಿಷ್ಠ ರೂ. 625 ಗಳಿಸಬಹುದು. ಒಟ್ಟಾರೆಯಾಗಿ ಖಾತೆದಾರರು ಒಂದು ವರ್ಷದಲ್ಲಿ ಗರಿಷ್ಠ 7,500 ರೂ ಕ್ಯಾಶ್ ಬ್ಯಾಕ್ ನ್ನು ಪಡೆಯುವ ಅವಕಾಶವಿದೆ.
ನೀವು DCB ಬ್ಯಾಂಕ್ ನೀಡುವ ಕ್ಯಾಶ್‌ಬ್ಯಾಕ್ ಅನ್ನು ಪಡೆಯಲು ಕನಿಷ್ಠಸರಾಸರಿ ತ್ರೈಮಾಸಿಕ ಬ್ಯಾಲೆನ್ಸ್ (AQB) ರೂ 10,000 ನಿರ್ವಹಿಸಬೇಕಾಗುತ್ತದೆ. ಸರಳ ಭಾಷೆಯಲ್ಲಿ, UPI ನಲ್ಲಿ ಕ್ಯಾಶ್‌ಬ್ಯಾಕ್ ಪಡೆಯಲು, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕನಿಷ್ಠ 25,000 ರೂ. ಉಳಿತಾಯವಿರಬೇಕು. ಇದನ್ನು ನೀವು ನಿರ್ವಹಿಸಲು ಯಶಸ್ವಿಯಾದರೆ,ಯಾವುದೇ ಶುಲ್ಕವಿಲ್ಲದೆ ಅನಿಯಮಿತ ವಹಿವಾಟುಗಳನ್ನು ಎಟಿಎಂ ಮೂಲಕ ಮಾಡಬಹುದಾಗಿದೆ.
ಕ್ಯಾಶ್‌ಬ್ಯಾಕ್ ಲೆಕ್ಕಾಚಾರ: ಕ್ಯಾಶ್‌ಬ್ಯಾಕ್ ಮೊತ್ತವನ್ನು ನಿಮ್ಮ ಯುಪಿಐ ಪೇಮೆಂಟ್‌ನ ಮೊತ್ತ ಮತ್ತು ಆಫರ್‌ನಲ್ಲಿ ಉಲ್ಲೇಖಿಸಲಾದ ಶೇಕಡಾವಾರು ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.
ನೀವು ಡಿಸಿಬಿ ಬ್ಯಾಂಕ್ ಹ್ಯಾಪಿ ಸೇವಿಂಗ್ಸ್ ಅಕೌಂಟ್‌ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಹತ್ತಿರದ ಡಿಸಿಬಿ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು ಅಥವಾ ಬ್ಯಾಂಕ್‌ನ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
UPI ಎಂದರೇನು?
UPI ಯ ಪೂರ್ಣ ರೂಪವು ಏಕೀಕೃತ ಪಾವತಿಗಳ ಇಂಟರ್ಫೇಸ್ ಆಗಿದೆ. ವರ್ಚುವಲ್ ಪಾವತಿ ವಿಳಾಸ (VPA) ಎಂದೂ ಕರೆಯಲ್ಪಡುವ UPI ಐಡಿಯು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಗಳನ್ನು ಸ್ವೀಕರಿಸಲು ಬಳಸಲಾಗುವ ವಿಶಿಷ್ಟಿ ಗುರುತಾಗಿದೆ. ಹಲವಾರು ಭದ್ರತಾ ವ್ಯವಸ್ಥೆಗಳ ಮೂಲಕ UPI ಖಾತೆಯನ್ನು ರಚಿಸಲಾಗುತ್ತದೆ. UPI ಮೂಲಕ ಹಣವನ್ನು ವರ್ಗಾಯಿಸಲು ಸ್ವೀಕರಿಸುವವರ ಬ್ಯಾಂಕ್ ಖಾತೆ ಸಂಖ್ಯೆ, IFS ಕೋಡ್ ಮುಂತಾದ ಯಾವುದೇ ಮಾಹಿತಿಯ ಅಗತ್ಯವಿಲ್ಲ.
ಸಾಂಪ್ರದಾಯಿಕ ಬ್ಯಾಂಕ್ ವಿವರಗಳ ಅಗತ್ಯವಿಲ್ಲದೇ ಈ UPI ಐಡಿ ವಹಿವಾಟುಗಳನ್ನು ಸರಳಗೊಳಿಸುತ್ತದೆ. ಇದಲ್ಲದೆ, ನೀವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಸುರಕ್ಷಿತ ವಹಿವಾಟುಗಳನ್ನು ಮಾಡಬಹುದಾಗಿದೆ. Google Pay, Phone Pay, Cred, Paytm ಮುಂತಾದ ಹಲವು UPI ಪಾವತಿ ಅಪ್ಲಿಕೇಶನ್‌ಗಳು ಪ್ರಸ್ತುತ ಬಳಕೆಯಲ್ಲಿದೆ.