VA Recruitment
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority)ವು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆ(Village Administrative Officer Post)ಗಳ ನೇಮಕಾತಿ(recruitment) ಸಂಬಂಧ, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ವೇಳಾಪಟ್ಟಿ(schedule) ಬಿಡುಗಡೆ ಮಾಡಿದೆ.
ಇದೀಗ ಈ ಹುದ್ದೆಗಳಿಗೆ ಅರ್ಜಿ(Application) ಸಲ್ಲಿಸಿರುವ ಅಭ್ಯರ್ಥಿಗಳಿಗೆ(candidates) ತಮ್ಮ ಅರ್ಜಿ ಸ್ಥಿತಿ(Application Status) ಮತ್ತು ಶುಲ್ಕ ಪಾವತಿ ಸ್ಥಿತಿ(Fee payment status) ತಿಳಿಯಲು ಸೂಚನೆ ನೀಡಿದ್ದು, ಅದಕ್ಕೆ ಸಂಬಂಧಪಟ್ಟ ಲಿಂಕ್(Link) ಸಹ ನೀಡಿದೆ. ಅಲ್ಲದೇ ಪೂರ್ಣವಾಗಿ ಅರ್ಜಿ ಸಲ್ಲಿಸಿ, ಶುಲ್ಕವು ಪಾವತಿಯಾಗಿ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಈ ಕುರಿತು ಡೀಟೇಲ್ಸ್ ಕೆಳಗಿನಂತಿದೆ.
ಅರ್ಜಿ ಸ್ಥಿತಿ, ಶುಲ್ಕ ಪಾವತಿ ಸ್ಥಿತಿ ಚೆಕ್ ಮಾಡಿಕೊಳ್ಳಲು ಸೂಚನೆ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಿಕೆಯ ಪ್ರಕ್ರಿಯೆ ಪೂರ್ಣಗೊಳಿಸಿರುವ ಅಭ್ಯರ್ಥಿಗಳ ಅರ್ಜಿ ಸ್ಥಿತಿ (Application Status)ನ್ನು ತಿಳಿಯಲು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಲಿಂಕ್ ನೀಡಲಾಗಿದೆ. ಪ್ರಕಟಿತ ಲಿಂಕ್‌ನಲ್ಲಿ ಅಭ್ಯರ್ಥಿಗಳ ಅರ್ಜಿಯು ಅಂಗೀಕೃತವಾಗದಿದ್ದಲ್ಲಿ.
ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ ಶುಲ್ಕ ಪಾವತಿಸಿರುವ ಬಗ್ಗೆ ಪೂರಕ ದಾಖಲೆಗಳನ್ನು ದಿನಾಂಕ 26.08.2024 ರೊಳಗೆ ಪ್ರಾಧಿಕಾರಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವಂತೆ ತಿಳಿಸಲಾಗಿದೆ. ಪೂರಕ ದಾಖಲೆಗಳಿಲ್ಲದ ಮನವಿಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಈ ಕೆಳಗಿನ ವಿಧಾನ ಅನುಸರಿಸಿ ಅರ್ಜಿ, ಶುಲ್ಕ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
– ಮೊದಲು ನೀವು ಕೆಇಎ ವೆಬ್‌ಸೈಟ್ https://cetonline.karnataka.gov.in/kea/indexnew ಗೆ ಭೇಟಿ ನೀಡಿ.
– ತೆರೆದ ಮುಖಪುಟದಲ್ಲಿ ಇತ್ತೀಚಿನ ಪ್ರಕಟಣೆಗಳು ಕಾಲಂ ಗಮನಿಸಿ.
– ದಿನಾಂಕ 20 ರಂದು ಪ್ರಕಟಿಸಿದ ‘ಗ್ರಾಮ ಆಡಳಿತ ಅಧಿಕಾರಿ – ಅರ್ಜಿ ಮತ್ತು ಶುಲ್ಕ ಸ್ಥಿತಿ ಲಿಂಕ್’ ಎಂದಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.
– ನಂತರ ತೆರೆಯುವ ಹೊಸ ಕೆಇಎ ವೆಬ್ ಪುಟದಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ, ಕ್ಯಾಪ್ಚಾ ಕೋಡ್ ನೀಡಿ.
– ‘Search’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ನಿಮ್ಮ ಅರ್ಜಿ ಸ್ಥಿತಿ, ಶುಲ್ಕ ಸ್ಥಿತಿ ಕುರಿತು ಮಾಹಿತಿ ಚೆಕ್ ಮಾಡಿಕೊಳ್ಳಿ.
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 29,09,2024 ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲು ವೇಳಾ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಈ ಸುದ್ದಿ ಓದಿ:- Post Office Schemes: ಮನೆಯಲ್ಲೇ ಕೂತು ತಿಂಗಳಿಗೆ 20,000 ಗಳಿಸುವ ಬೆಸ್ಟ್ ಹೂಡಿಕೆ ಪ್ಲ್ಯಾನ್ ಇಲ್ಲಿದೆ ನೋಡಿ.!
ಈ ಪರೀಕ್ಷೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರಲ್ಲಿ ನಿರ್ದೇಶಿಸಿರುವಂತೆ ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಿ 150 ಅಂಕಗಳಿಗೆ ಕನಿಷ್ಟ 50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಗೆ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ತಪ್ಪದೇ ಪರೀಕ್ಷೆಗೆ ಹಾಜರಾಗತಕ್ಕದ್ದು. ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಗೆ ಹಾಜರಾಗಿ ಅರ್ಹರಾಗುವ ಅಭ್ಯರ್ಥಿಗಳಿಗೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುವುದು.
ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಗೆ ಗೈರು ಹಾಜರಾದರೆ ಮತ್ತು ಹಾಜರಾಗಿ ಕನಿಷ್ಠ 50 ಅಂಕಗಳನ್ನು ಪಡೆಯದ ಅಭ್ಯರ್ಥಿಗಳಿಗೆ ದಿನಾಂಕ: 27.10.2024 ರಂದು ನಡೆಯಲಿರುವ ಪತ್ರಿಕೆ-1 ಮತ್ತು ಪತ್ರಿಕೆ-2 ರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ ಎಂದು ಕೆಇಎ ಪ್ರಕಟಣೆ ತಿಳಿಸಿದೆ.
ಈ ಸುದ್ದಿ ಓದಿ:- Indian Bank Recruitment:- ಇಂಡಿಯನ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ ವೇತನ:- 48,480/- ಆಸಕ್ತರು ಅರ್ಜಿ ಸಲ್ಲಿಸಿ.!
ವಿಎಒ – ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕಗಳು
– 29-09-2024 ಭಾನುವಾರ ಬೆಳಿಗ್ಗೆ 10-30 ರಿಂದ 12-30 ಗಂಟೆವರೆಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ.
– 27-10-2024 ಭಾನುವಾರ ಬೆಳಿಗ್ಗೆ 10-30 ರಿಂದ 12-30 ಗಂಟೆವರೆಗೆ ಪತ್ರಿಕೆ -1.
– 27-10-2024 ಭಾನುವಾರ ಮಧ್ಯಾಹ್ನ 02-30 ರಿಂದ 04-30 ಗಂಟೆವರೆಗೆ ಪತ್ರಿಕೆ -2.