Vishwakarma
ಇದೀಗ ಕೇಂದ್ರ ಸರ್ಕಾರವು ಸಾಮಾನ್ಯ ಜನರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ವಿಶ್ವಕರ್ಮಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023 ಸೆಪ್ಟೆಂಬರ್ 17ರಂದು ಜಾರಿಗೊಳಿಸಿದರು. ಇದರಿಂದ ಪಿಎಂ ವಿಶ್ವಕರ್ಮ ಯೋಜನೆಯು ( PM Vishvakarma Scheme) ದೇಶದ ಕೋಟ್ಯಂತರ ಕುಶಲಕರ್ಮಿಗಳ ಮುಖದಲ್ಲಿ ನಗುವನ್ನು ಅರಳಿಸಿದೆ.
ಹೌದು, ಪಿಎಂ ವಿಶ್ವಕರ್ಮ ಯೋಜನೆಯಿಂದ ನಿಮಲ್ಲಿ ಯಾವ ಸ್ಕಿಲ್ ( Skill) ಇದೆಯೋ ಅದನ್ನು ಗುರಿತಿಸಿ ಅದಕ್ಕೆ ತರಬೇತಿ ಕೊಟ್ಟು ಹಾಗೂ ತರಬೇತಿಗೆ ಹೋಗುವಾಗ ನಿಮಗೆ ಶಿಷ್ಯ ವೇತನವನ್ನು ಕೂಡ ಕೊಟ್ಟು ಈ ಒಂದು ಯೋಜನೆಯನ್ನು ಉಪಯೋಗಿಸಿಕೊಂಡು ನೀವು ವ್ಯವಹಾರ (Business) ಮಾಡಲು ಸಾಧ್ಯವಾಗುತ್ತದೆ.
ಈ ಯೋಜನೆ ಅಡಿಯಲ್ಲಿ ನಿಮಗೆ ವ್ಯವಹಾರ ಮಾಡಲು 3 ಲಕ್ಷದವರೆಗೆ ಸಾಲವನ್ನು ( Loan) ನೀಡುತ್ತಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ದೇಶದ ಸಾಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡುವ ಜೊತೆಗೆ, ಕುಶಲಕರ್ಮಿಗಳ ಅಭ್ಯುದಯಕ್ಕೆ ನೆರವು ಕಲ್ಪಿಸುವ ನಿಟ್ಟಿನಲ್ಲಿ 13 ಕೋಟಿಯನ್ನು ಮೀಸಲಿರಿಸಿದ ಒಂದು ಉತ್ತಮ ಯೋಜನೆ ಇದಾಗಿದೆ.
ದೇಶದಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಅವರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಯೋಜನೆಯ ಮೂಲ ಗುರಿಯಾಗಿದೆ.
ಪಿಎಂ ವಿಶ್ವಕರ್ಮ ಯೋಜನೆಯ ಪ್ರಯೋಜನಗಳು
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ( PM Vishw karma yojana) ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು, ಅಕ್ಕಸಾಲಿಗ, ಕಮ್ಮಾರ, ಕ್ಷೌರಿಕ ಮತ್ತು ಚಮ್ಮಾರರಂತಹ ಬೇರೆ ಬೇರೆ ಸಾಂಪ್ರದಾಯಿಕ ಕೌಶಲ್ಯ ಹೊಂದಿರುವ ಜನರು ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಪಡೆಯಬಹುದು.
ಈ ಯೋಜನೆಯಡಿಯಲ್ಲಿ 3 ಲಕ್ಷದವರೆಗೆ ಯಾವುದೇ ಆಧಾರವಿಲ್ಲದೆ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು. ಮತ್ತು ಜನರಿಗೆ ಮೊದಲ ಹಂತದಲ್ಲಿ 1 ಲಕ್ಷದವರೆಗೆ ಮತ್ತು ಎರಡನೇ ಹಂತದಲ್ಲಿ 2 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ ಮತ್ತು ಅದು ಕೂಡ ಕೇವಲ 5 % ರಿಯಾಯಿತಿ ಬಡ್ಡಿದರದಲ್ಲಿ ನೀಡಲಾಗುತ್ತದೆ.
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು?
* ಅರ್ಜಿ ಸಲ್ಲಿಸಲು ಬಯಸುವವರು 18 ವೃತ್ತಿಗಳಲ್ಲಿ ಯಾವುದಾದರೂ ಒಂದರಲ್ಲಿ ಸ್ವಯಂ ಉದ್ಯೋಗಿಯಾಗಿರಬೇಕು.
* 18 ವರ್ಷ ಮೇಲ್ಪಟ್ಟವರಾಗಿರಬೇಕು.
* ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ನೊಂದಣಿಗೆ ಅರ್ಹರಾಗಿರುತ್ತಾರೆ.
* ಕುಟುಂಬದಲ್ಲಿ ಯಾವುದೇ ಸದಸ್ಯರು ಸರ್ಕಾರಿ ಕೆಲಸದಲ್ಲಿರಬಾರದು.
* ಕಳೆದ 5 ವರ್ಷಗಳಲ್ಲಿ ಪಿಎಂ ಇಜಿಪಿ/ಮುದ್ರಾ ಮತ್ತು ಪಿಎಂ-ಸ್ವನಿಧಿ ಸಾಲಗಳನ್ನು ಪಡೆದಿರಬಾರದು.
* ಮುದ್ರಾ ಮತ್ತು ಪಿಎಂ-ಸ್ವನಿಧಿ ಯೋಜನೆಗಳಲ್ಲಿ ಸಾಲ ಪಡೆದು ಪೂರ್ಣ ಮರುಪಾವತಿ ಮಾಡಿದ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ
* ಆಧಾರ್ ಕಾರ್ಡ್
* ಮತದಾರರ ಗುರುತಿನ ಚೀಟಿ
* ಪಾನ್ ಕಾರ್ಡ್
* ನಿವಾಸದ ಪ್ರಮಾಣ ಪತ್ರ
* ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
* ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
* ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳು
* ಆದಾಯ ಮತ್ತು ಜಾತಿ ಪ್ರಮಾಣ ಪತ್ರ
* ಬ್ಯಾಂಕ್ ಖಾತೆ ವಿವರಗಳು
ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಆಧಾರ್ ಜೋಡಿತ ಮೊಬೈಲ್ ಸಂಖ್ಯೆ, ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಂಡು, ಈ ಯೋಜನೆಯಡಿ ನೋಂದಾಯಿತ ಕುಶಲಕರ್ಮಿಗಳಿಗೆ ಸವಲತ್ತು, ಸೌಲಭ್ಯ ಪಡೆಯಬಹುದಾಗಿದೆ.
ಮೊದಲು ಅರ್ಜಿ ಸಲ್ಲಿಸಲು ಪಿಎಂ ವಿಶ್ವಕರ್ಮ ಯೋಜನೆಯ ಅಧಿಕೃತ ವೆಬ್ ಸೈಟ್ ( Website) ಆದ https://pmvishwakarma.gov.in ಸೈಟ್ ಗೆ ಭೇಟಿ ನೀಡಿ. ನಂತರ ಈ ಕೆಳಗಿನ ಹಂತಗಳನ್ನ ಪೂರ್ಣಗೊಳಿಸುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹಂತ 1: ಮೊಬೈಲ್ ಮತ್ತು ಆಧಾರ್ ( Adhar) ಪರಿಶೀಲನೆ ಮಾಡಿ.
ಹಂತ 2: ಕುಶಲಕರ್ಮಿಗಳ ನೋಂದಣಿ ಫಾರ್ಮ್ ಭರ್ತಿ ಮಾಡಿ.
ಹಂತ 3: ಪಿಎಂ ವಿಶ್ವಕರ್ಮ ಯೋಜನೆಯ ಡಿಜಿಟಲ್ ಐಡಿ ( Digital I’d) ಮತ್ತು ಪ್ರಮಾಣಪತ್ರವನ್ನು ( Certificate) ಡೌನ್‌ಲೋಡ್ ಮಾಡಿ.
ಹಂತ 4: ಸ್ಟೀಮ್ ಘಟಕಗಳಿಗೆ ಅನ್ವಯಿಸಿ.
ಯಾವ್ಯಾವ ಕುಶಲ ಕರ್ಮಿಗಳಿಗೆ ಅವಕಾಶ: ವಿಶ್ವ ಕರ್ಮ ಯೋಜನೆಯಡಿ 18 ಸಾಂಪ್ರದಾಯಿಕ ಕರಕುಶಲ ಕರ್ಮಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಬಡಗಿ, ಕಮ್ಮಾರಿಕೆ, ಕಲ್ಲು ಕೆಲಸ, ಬೀಗ ತಯಾರಕರು, ಅಕ್ಕಸಾಲಿಗ, ಕುಂಬಾರಿಕೆ, ಶಿಲ್ಪಿಗಳು, ಚಮ್ಮಾರಿಕೆ, ಶೂ ತಯಾರಿಕೆ, ಗಾರೆ ಕೆಲಸ, ಬಿದಿರು ಕೆಲಸ,ಪೊರಕೆ ತಯಾರಿಕೆ, ಚಾಪೆ ತಯಾರಿಕೆ, ತೆಂಗಿನ ನಾರಿನ ನೇಯ್ಗೆ, ಗೊಂಬೆ, ಆಟಿಕೆ ತಯಾರಕರು, ಕೌÒರಿಕರು, ಹೂಮಾಲೆ ತಯಾರಕರು, ದೋಬಿ, ದರ್ಜಿ, ಟೈಲರ್, ಮೀನಿನ ಬಲೆ ತಯಾರಕರು ಹಾಗೂ ದೋಣಿ ತಯಾರಕರು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.
ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ
ಅಂತಿಮಗೊಂಡ ಕರಕುಶಲ ಕರ್ಮಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಲಾಗುವುದು. ಈ ಹಂತದಲ್ಲಿ ಫಲಾನುಭವಿಗಳಿಗೆ ತರಬೇತಿ ಅವಧಿಯಲ್ಲಿ 500 ರೂ.ಗಳ ಶಿಷ್ಯವೇತನ ನೀಡಲಾಗುವುದು. ತರಬೇತಿಯ ನಂತರ ಆಯಾ ಕರಕುಶಲ ಕರ್ಮಿಗಳಿಗೆ ಉಪಯೋಗವಾಗುವ ರೀತಿಯ ಉಪಕರಣ ಕಿಟ್ ವಿತರಿಸಲಾಗುವುದು.
ಆನಂತರ ಮೊದಲ ಹಂತದಲ್ಲಿ 1 ಲಕ್ಷ ರೂ. ಬ್ಯಾಂಕ್ ಸಾಲವನ್ನು ಶೇ.5ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಈ ಸಾಲವನ್ನು ಫಲಾನುಭವಿಗಳು ಕರಕೌಶಲ್ಯ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಂಡು 18 ತಿಂಗಳೊಳಗಾಗಿ ಮರು ಪಾವತಿಸಿದರೆ ಮತ್ತೇ ಒಂದು ಲಕ್ಷದ ಜತೆಗೆ ಎರಡು ಲಕ್ಷ ಸೇರಿಸಿ ಒಟ್ಟು ಮೂರು ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುವುದು.