Voter Card
ಇಂದು ನಾವು ಕುಂತಲ್ಲೇ ಜಗತ್ತನ್ನು ನೋಡಬಹುದು. ಇದೆಲ್ಲವೂ ನಮ್ಮ ಅಂಗೈಲಿರುವ ಮೊಬೈಲ್‌ನಿಂದಲೇ ಸಾಧ್ಯ. ಇಂದು ನಮ್ಮ ದೇಶ ಡಿಜಿಟಲೀಕರಣದತ್ತ (digitalisation) ಸಾಗಿದೆ. ನಾವು ಯಾವುದೇ ರೀತಿಯ ವ್ಯವಹಾರವನ್ನು ಮಾಡಲು ಕೂಡ ಪೇಪರ್ ಲೆಸ್ (paperless) ಹಾಗೂ cashless ವ್ಯವಹಾರ ಮಾಡಲು ಸಾಧ್ಯವಿದೆ. ಇದರಿಂದ ದೇಶ ಅಭಿವೃದ್ಧಿಯತ್ತಾ ಸಾಗುತ್ತಿದೆ.
ಇಂದು ಕೈಯಲ್ಲಿ ಮೊಬೈಲ್ ಇದ್ದರೆ ಎಲ್ಲವೂ ಅದರಲ್ಲೇ ಇರುತ್ತದೆ ಮೊಬೈಲ್ನಲ್ಲಿ ಡಿಜಿಲಾಕರ್ನಂತಹ ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ, ಅಲ್ಲಿ ಎಲ್ಲಾ ಮುಖ್ಯವಾದ ದಾಖಲೆಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಸ್ಟಡೀಸ್ ಸರ್ಟಿಫಿಕೇಟ್ಸ್, ಇನ್ಶೂರೆನ್ಸ್ ಪಾಲಿಸಿಗಳು, ವೆಹಿಕಲ್ಗೆ ಸಂಬಂಧಪಟ್ಟ ದಾಖಲೆಗಳು ಹೀಗೆ ಹಲವು ಮುಖ್ಯ ಡಾಕ್ಯುಮೆಂಟ್ಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬಹುದು.
ಹೌದು, ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಸಹಾಯದಿಂದ ಕೆಲವೇ ಕ್ಷಣಗಳಲ್ಲಿ ಅರ್ಜಿ ಹಾಕುವುದರಿಂದ ಹಿಡಿದು ಅಗತ್ಯ ಇರುವ ದಾಖಲೆಗಳನ್ನು ಪಡೆದುಕೊಳ್ಳುವುದಕ್ಕೂ ಕೂಡ ಆನ್ಲೈನ್ ಬಳಕೆ ಮಾಡಲಾಗುತ್ತದೆ. ಆನ್ಲೈನಲ್ಲಿ ನಮಗೆ ಬೇಕಾಗಿರುವ ಎಲ್ಲಾ ಮಾಹಿತಿಗಳು ಸಿಗುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕೆಲಸಗಳು ಕೂಡ ಆನ್ಲೈನ್ ಮೂಲಕವೇ ಆಗುತ್ತಿರುವುದು ವಿಶೇಷವಾಗಿದೆ.
ಯಾಕಂದ್ರೆ, ಸರ್ಕಾರಿ ಕೆಲಸ ಅಂದ್ರೆ ವಿಳಂಬ ಎನ್ನುವ ನಂಬಿಕೆ ಎಲ್ಲರಲ್ಲೂ ಇತ್ತು. ಈಗ ಈ ಕಲ್ಪನೆ ಬದಲಾಗಿದೆ ನೀವು ಯಾವುದಾದರೂ ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕುವುದರಿಂದ ಹಿಡಿದು ಗುರುತಿನ ಚೀಟಿ ಪಡೆದುಕೊಳ್ಳುವುದಕ್ಕೂ ಕೂಡ ಆನ್ಲೈನ್ ಮೂಲಕ ಸಾಧ್ಯವಿದೆ.
ಅದರಂತೆ ಈಗ ಎಲೆಕ್ಷನ್ ಟೈಂ ಇರುವುದರಿಂದ ಸರಿಯಾದ ಅಧಿಕೃತ ವೋಟರ್ ಐಡಿಯನ್ನು ನಮ್ಮ ಬಳಿ ಇಟ್ಟುಕೊಳ್ಳವುದು ತುಂಬಾ ಮುಖ್ಯ. ಈಗ ಮೊಬೈಲ್ನಲ್ಲಿ ಕೇವಲ 5 ನಿಮಿಷದಲ್ಲಿ ಡಿಜಿಟಲ್ ವೋಟರ್ ಐಡಿಯನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಿರೋದು ಇಷ್ಟೇ. ಮೊದಲಿಗೆ ಭಾರತೀಯ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ https://eci.gov.in/e-epic/ ಗೆ ಭೇಟಿ ನೀಡಿ.
ಹೊಸ ಮತದಾರರ ಹೆಸರನ್ನು ನೋಂದಾಯಿಸಲು ಈ ಪೋರ್ಟಲ್ನ್ನು ಬಳಸಬಹುದು. ಚುನಾವಣಾ ID ಯಲ್ಲಿನ ವಿಳಾಸವನ್ನು ಅಪ್ಡೇಟ್ ಮಾಡಲು/ ಬದಲಾಯಿಸಲು ಮತ್ತು ಡಿಜಿಟಲ್ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಲು ಈ ಪೋರ್ಟಲ್‌ಗೆ ಭೇಡಿ ನೀಡಬಹುದು. ಇದನ್ನು e-EPIC ಎಂದೂ ಸಹ ಕರೆಯುತ್ತಾರೆ.
ಇದು PDF ಫಾರ್ಮ್ಯಾಟ್ನಲ್ಲಿರುತ್ತದೆ ಮತ್ತು ಡಿಜಿಲಾಕರ್‌ನಲ್ಲಿ ಸಂಗ್ರಹಿಸಬಹುದು ನೀವು ಇದೇ ಮೊದಲು ಈ ಪೋರ್ಟಲ್ ಬಳಸುತ್ತಿದ್ದರೆ, ಫೋನ್ ನಂಬರ್ ಮೂಲಕ ರಿಜಿಸ್ಟರ್ ಆಗಿ. ಒಮ್ಮೆ ನೀವು ಪೋರ್ಟಲ್‌ಗೆ ಎಂಟ್ರಿ ಕೊಟ್ಟಾಗ, ಡೌನ್‌ಲೋಡ್ ಇ-ಎಪಿಕ್ (Download e-EPIC) ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ EPIC ಸಂಖ್ಯೆಯನ್ನು ಅಲ್ಲಿ ನಮೂದಿಸಿ, ಇದು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ಪ್ರಿಂಟ್ ಆಗಿರುವ 10-ಅಂಕಿಯ ವಿಶಿಷ್ಟ ID ಆಗಿದೆ.
ಇ-ಎಪಿಕ್ ಅಥವಾ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಲು, ನಿಮ್ಮ ಮೊಬೈಲ್ ನಂಬರ್ ಕಡ್ಡಾಯವಾಗಿ ನಿಮ್ಮ ವೋಟರ್ ಐಡಿಗೆ ಲಿಂಕ್ ಆಗಿರಲೇಬೇಕು. ಆಗಿಲ್ಲವಾದರೆ, ಮೊಬೈಲ್ ನಂಬರ್ ಲಿಂಕ್ನ್ನೂ ಅದೇ ವೆಬ್‌ಸೈಟ್‌ನಲ್ಲಿ ಮಾಡಬಹುದು. ನಿಮ್ಮ ಮೊಬೈಲ್ ನಂಬರ್ನ್ನು ವೋಟರ್ ಐಡಿಗೆ ಲಿಂಕ್ ಮಾಡಲು, ಭಾರತೀಯ ಚುನಾವಣಾ ಆಯೋಗದ ಪೋರ್ಟಲ್‌ನ ಮುಖಪುಟಕ್ಕೆ (https://www.nvsp.in/) ಹೋಗಿ.
ಹೋಂ ಪೇಜ್ನಲ್ಲಿ ಕಾಣುವ ಫಾರ್ಮ್‌ಗಳ ಮೇಲೆ ಕ್ಲಿಕ್ ಮಾಡಿ. ಮುಂದೆ, ಫಾರ್ಮ್ 8 ಅನ್ನು ಕ್ಲಿಕ್ ಮಾಡಿ ಮತ್ತು ನೀವು ಕುಟುಂಬದ ಸದಸ್ಯರ ವೋಟರ್ ಐಡಿಯನ್ನು ಡೌನ್‌ಲೋಡ್ ಮಾಡಬೇಕೆಂದರೆ ಸೆಲ್ಪ್ / ಫ್ಯಾಮಿಲಿ ಆಯ್ಕೆಯನ್ನು ಆರಿಸಿ.
ಏನಿದು ಡಿಜಿಟಲ್ ವೋಟರ್ ಐಡಿ?
ಮತದಾನ ಪ್ರತಿಯೊಬ್ಬರ ಹಕ್ಕು. ಮತದಾನ ಮಾಡಲು ವೋಟರ್ ಐಡಿ ಎನ್ನುವುದು ಕಡ್ಡಾಯ. ಇನ್ನೇನು ಲೋಕಸಭಾ ಎಲೆಕ್ಷನ್ ಕೂಡ ಹತ್ತಿರ ಬರುತ್ತಿದೆ, ನಿಮಗೆ ವೋಟರ್ ಐಡಿ ಅಗತ್ಯ ಇದ್ದೇ ಇದೆ. 18 ವರ್ಷ ಆದವರು ಹೊಸ ವೋಟರ್ ಐಡಿ ಪಡೆದುಕೊಳ್ಳಬೇಕಿದ್ದರೆ ಅಥವಾ ನಿಮ್ಮ ಬಳಿ ಇರುವ ವೋಟರ್ ಐಡಿಯನ್ನು ಡಿಜಿಟಲ್ ಮಾಡಿಸಿಕೊಳ್ಳಬೇಕಿದ್ದರೆ, ನೀವು ಚುನಾವಣಾ ಆಯೋಗದ ಕಚೇರಿಗೂ ಭೇಟಿ ನೀಡಬೇಕಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಡಿಜಿಟಲ್ ವೋಟರ್ ಐಡಿ ಗೆ ಅಪ್ಲೈ ಮಾಡಿ.
ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳುವುದು ಹೇಗೆ?
* ಭಾರತ ಸರ್ಕಾರದ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಆರಂಭಿಸಿರುವ Voter helpline app ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ಒಂದು ಮೊಬೈಲ್ ನಲ್ಲಿ ಒಂದು ಅಪ್ಲಿಕೇಶನ್ ಮೂಲಕ ನಾಲ್ಕು ಜನ ಡಿಜಿಟಲ್ ವಾಟರ್ ಐಡಿ ಪಡೆದುಕೊಳ್ಳಲು ಅಪ್ಲೈ ಮಾಡಬಹುದು.
* ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿ.
* ವೋಟರ್ ರಿಜಿಸ್ಟ್ರೇಷನ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. * ಈಗ ನ್ಯೂ ವೋಟರ್ ರಿಜಿಸ್ಟ್ರೇಷನ್ (new Voter ID registration) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
* ನಂತರ ಮೊಬೈಲ್ ಸಂಖ್ಯೆಯನ್ನು ಹಾಕಿ. ಈಗ ನಿಮ್ಮ ಮೊಬೈಲ್‌ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ.
* ನೀವು ಲಾಗಿನ್ ಆದ ನಂತರ ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುತ್ತಿದ್ದಿರೋ ಅಥವಾ ಈಗಾಗಲೇ ವೋಟರ್ ಐಡಿ ಇದ್ದು ಡಿಜಿಟಲ್ ಮಾಡಿಕೊಳ್ಳಲು ಬಯಸುತ್ತಿದ್ದೀರೋ ಎನ್ನುವ ಆಯ್ಕೆಯನ್ನು ಮಾಡಿಕೊಂಡು ಅದಕ್ಕೆ ಅನುಸಾರವಾಗಿ ಇರುವ ಮಾಹಿತಿಗಳನ್ನು ಭರ್ತಿ ಮಾಡಬೇಕು..
* ಈಗಾಗಲೇ ವೋಟರ್ ಐಡಿ ಇದ್ರೆ ವೋಟರ್ ಐಡಿಯಾ ಸಂಖ್ಯೆ, ಆಧಾರ್ ಕಾರ್ಡ್ ಕೂಡ ಬೇಕು. ನೀವು ನಿಮ್ಮ ಪಾಲಕರ ವೋಟರ್ ಐಡಿ ಡಿಜಿಟಲ್ ಮಾಡುವುದಿದ್ದರೆ, ಅದಕ್ಕೆ ರೇಷನ್ ಕಾರ್ಡ್ ಹಾಗೂ ಮೊದಲಾದ ಗುರುತಿನ ಪುರಾವೆಯನ್ನು ಸಲ್ಲಿಸಬೇಕು.
* ಈ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮೊಬೈಲ್ ನಲ್ಲಿ ಅಪ್ಲಿಕೇಶನ್ ಹಾಕಿ ನಂತರ ಡಿಕ್ಲರೇಷನ್ ನಲ್ಲಿ ಎಲ್ಲಾ ಮಾಹಿತಿಗಳು ಸರಿ ಇವೆ ಎನ್ನುವುದನ್ನು ಡಿಕ್ಲಾಯರ್ ಮಾಡಿ. ಇಷ್ಟು ಮಾಡಿದ್ರೆ ನೀವು ಸುಲಭವಾಗಿ ಡಿಜಿಟಲ್ ವೋಟರ್ ಐಡಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.