ವಾಟ್ಸಾಪ್ (Whatsapp) ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಬಳಕೆ ಮಾಡುವಂತಹ ಐದು ಪ್ರಸಿದ್ಧ ಆಪ್ ಗಳಲ್ಲಿ ಒಂದಾಗಿದೆ. ವಾಟ್ಸಪ್ ನಂತೆ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಜೊತೆ ಸಂವಹನ ನಡೆಸುವುದಕ್ಕೆ ಹಲವಾರು ವೇದಿಕೆಗಳು ಇದ್ದರೂ ಕೂಡ ಜನರು ವಾಟ್ಸಪ್ ಬಂದಾಗಿನಿಂದಲೂ ಕೂಡ ಇದಕ್ಕೆ ಬಹಳ ಒಗ್ ಹೋಗಿ ಇಂದಿಗೂ ಕೂಡ ವಾಟ್ಸಾಪ್ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಹೇಳಬಹುದು.
ನಮಗಂತೂ ಒಂದು ಕರೆ ಮಾಡುವುದಕ್ಕಿಂತ ಒಂದು ವಾಟ್ಸಪ್ ಮೆಸೇಜ್ ಹಾಕುವುದೇ ಬಹಳ ಸಲೀಸು ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಕೈಗೆ ತೆಗೆದುಕೊಂಡ ತಕ್ಷಣ ವಾಟ್ಸಪ್ ಇರುವ ಕಡೆಗೆ ಬೆರಳು ಕ್ಲಿಕ್ ಮಾಡುತ್ತದೆ. ಹೀಗಾಗಿ ಮಿಲಿಯನ್ ಗಟ್ಟಲೆ ಗ್ರಾಹಕರನ್ನು ಹೊಂದಿರುವ ವಾಟ್ಸಪ್ ಕೂಡ ಹೀಗೆ ಕಾಲ ಕಾಲಕ್ಕೆ ಹೊಸ ಹೊಸ ಫೀಚರ್ಸ್ ಕಟ್ಟಿಕೊಡುವ ಮೂಲಕ ತನ್ನ ಗ್ರಾಹಕರನ್ನು ಸಂತುಷ್ಟಿ ಪಡಿಸುತ್ತಿದೆ.
ಇಂತಹ ವಾಟ್ಸಪ್ ಬಳಕೆದಾರರಿಗೆ ಈಗ ವಾಟ್ಸಪ್ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಈಗಷ್ಟೇ ಮೆಟ ಏಐ (Meta AI) ಎನ್ನುವ ಫೀಚರ್ಸ್ ನೋಡಿ ದಿಲ್ ಖುಷ್ ಆಗಿದ್ದ ವಾಟ್ಸಪ್ ಗ್ರಾಹಕರು ಈಗ ನೀಡಿರುವ ಹೊಸ ಪಿಚ್ಚರ್ಸ್ ನ್ನುಇನ್ನಷ್ಟು ಮೆಚ್ಚಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದು.
ಹಾಗಾದರೆ ವಾಟ್ಸಪ್ ಬಳಕೆದಾರರಿಗೆ ಸಿಗುತ್ತಿರುವ ಆ ಹೊಸ ಅವಕಾಶ ಏನೆಂದು ಹೇಳುವುದಾದರೆ ನಾವು ನೀವೆಲ್ಲಾ ನಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ವಾಟ್ಸಪ್ ಮೆಸೇಜ್ ಮಾಡುತ್ತೇವೆ ವೈಯಕ್ತಿಕವಾಗಿ ಸಂದೇಶ ಕಳಿಸುವುದರ ಜೊತೆಗೆ ಎಲ್ಲರೂ ಒಟ್ಟಿಗೆ ಸೇರಿ ಹರಟುವುದಕ್ಕಾಗಿ ಅಥವಾ ಒಂದು ಮಾಹಿತಿ ಎಲ್ಲರಿಗೂ ತಲುಪಲಿ ಎನ್ನುವ ಕಾರಣಕ್ಕಾಗಿ.
ಕುಟುಂಬ ಬಳಗಕ್ಕೆ, ಸ್ನೇಹಿತರ ವಲಯಕ್ಕೆ, ಸಹೋದ್ಯೋಗಿಗಳ ಸಂಘ ಅಥವಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಒಟ್ಟಿಗೆ ಇತ್ಯಾದಿ ಗ್ರೂಪ್ ಕೂಡ ಮಾಡಿಕೊಂಡಿರುತ್ತೇವೆ. ಪರ್ಸನಲ್ ಸಂತೋಷದಿಂದ ಹಿಡಿದು ಪ್ರೊಫೆಷನಲ್ ವಿಷಯಗಳವರೆಗೆ ಇದು ಬಹಳ ಅನುಕೂಲ ಮಾಡಿಕೊಡುತ್ತಿದೆ ಎನ್ನುವುದು ಕೂಡ ನಿಜ.
ಇದನ್ನು ಹೊರತು ಪಡಿಸಿ ನಮಗೆ ಕೆಲವು ಆಸಕ್ತಿಗಳು ಕೂಡ ಇರುತ್ತವೆ. ಹೀಗಾಗಿ ಓದುಗರ ಬಳಗಕ್ಕೊಂದು ಗ್ರೂಪ್ ಅಥವಾ ಉದ್ಯೋಗ ಮಾಹಿತಿ ಪಡೆಯುವುದಕ್ಕೊಂದು ಗ್ರೂಪ್ ಹೀಗೆ ಈಗ ಪ್ರತಿಯೊಂದು ವಿಚಾರಕ್ಕೂ ಒಂದೊಂದು ಗ್ರೂಪ್ ಇದ್ದು ನಾವು ಸೇರಿಕೊಳ್ಳಲು ಇಚ್ಛಿಸದಿದ್ದ ಗ್ರೂಪ್ ಗೂ ಆಡ್ ಆಗಿರುವ ಅನುಭವವನ್ನು ಕೂಡ ಪಡೆದಿರುತ್ತೇವೆ.
ಕೆಲವೊಮ್ಮೆ ಇದರಿಂದ ನಮಗೆ ಅನುಕೂಲ ಆಗುವುದಕ್ಕಿಂತ ಹಲವು ಬಾರಿ ಇದರಿಂದ ಕಿರಿಕಿರಿಯೇ ಹೆಚ್ಚು. ನಮಗೆ ಬೇಡದ ಗ್ರೂಪ್ ಗಳಿಗೆ ನಾವು ಆಡ್ ಆಗಿ ಆ ಗ್ರೂಪ್ ಗಳಿಂದ ದಿನಕ್ಕೆ ಹತ್ತಾರು ಸಂದೇಶ ವಿನಿಮಯ ಸಾವಿರ ಚಾಟ್ ಗಳ ವಿಮರ್ಶೆ ನಡೆಯುತ್ತಾ ಪ್ರತಿ ಬಾರಿ ನೋಟಿಫಿಕೇಶನ್ ನಮ್ಮನ್ನು ಕಿರಿಕಿರಿ ಪಡಿಸುತ್ತಿರುತ್ತದೆ. ಈ ಸಮಸ್ಯೆಗೆ ವಾಟ್ಸಾಪ್ ಸಂಸ್ಥೆ ಈಗ ಪರಿಹಾರ ನೀಡಿದೆ.
ನೀವು ನೇರವಾಗಿ ವಾಟ್ಸಪ್ ಗೆ ಹೋಗಿ ಬಲಭಾಗದಲ್ಲಿರುವ ಮೂರು ಚುಕ್ಕೆ ಕ್ಲಿಕ್ ಮಾಡಿ ಸೆಟ್ಟಿಂಗ್ ನಲ್ಲಿ (Setting) ಪ್ರೈವಸಿ (Privacy) ವಿಭಾಗಕ್ಕೆ ತೆರಳಿ ಸ್ಕ್ರೋಲ್ ಮಾಡಿ ಗ್ರೂಪ್ (Group) ಎನ್ನುವ ಆಪ್ಷನ್ ಸಿಕ್ಕಾಗ ಕ್ಲಿಕ್ ಮಾಡಿ ನಿಮ್ಮನ್ನು ಯಾರು ಮಾತ್ರ ಗ್ರೂಪ್ ಗಳಿಗೆ ಆಡ್ ಮಾಡಬಹುದು ಎನ್ನುವ ಆಯ್ಕೆಯಲ್ಲಿ.
ನಿಮ್ಮ ಕಾಂಟಾಕ್ಟ್ ನಲ್ಲಿ (My contact) ಇರುವವರು ಅಥವಾ ಯಾರು ಬೇಕಾದರೂ (anyone) ಮಾಡಬಹುದು ಅಥವಾ ನಿಮ್ಮ ಕಾಂಟಾಕ್ಟ್ ಅಲ್ಲಿ ಇರುವವರಲ್ಲಿ ಕೆಲವರನ್ನು ಹೊರತುಪಡಿಸಿ (My contact except) ಎಂದಿರುವ ಆಪ್ಷನ್ ನಲ್ಲಿ ನಿಮಗೆ ಅನುಕೂಲವಾದದನ್ನು ಸೆಲೆಕ್ಟ್ ಮಾಡುವ ಮೂಲಕ ಸಾಧ್ಯವಾದಷ್ಟು ಮಟ್ಟಿಗೆ ಈ ಕಿರಿಕಿರಿಯನ್ನು ನಿರ್ಬಂಧಿಸಬಹುದಾಗಿದೆ.