Land
ಸಾಕಷ್ಟು ರೈತರು ಸರ್ಕಾರಿ ಭೂಮಿಯಲ್ಲಿ ಕೃಷಿಯನ್ನು ಮಾಡುತ್ತಿರುತ್ತಾರೆ ಅಂತಹ ರೈತರು ಆ ಭೂಮಿಯನ್ನು ಸ್ವಂತವಾಗಿಸಿಕೊಳ್ಳಲು ಸರ್ಕಾರವು ಈಗ ಅರ್ಜಿಯನ್ನು ಆಹ್ವಾನ ಮಾಡಿದೆ. ಸುಮಾರು 1980 ನೇ ಇಸವಿಯಲ್ಲಿ ಅದು ಸ್ವಾತಂತ್ರ್ಯದ ನಂತರದ ಕಾಲವಾಗಿದ್ದು ದೇಶದಲ್ಲಿ ಆಗುತ್ತಿರುವ ಇಂತಹ ಹಲವು ಬದಲಾವಣೆಗಳ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಜಮೀನು ಇಲ್ಲದೆ ಇರುವವರಿಗೆ ಜಮೀನುಗಳನ್ನು ಸಾಗುವಳಿ ಮಾಡಿಕೊಳ್ಳುವ ಸಲುವಾಗಿ ಸರ್ಕಾರವು ತಳ ಎರಡು ಎಕರೆಗಳಂತೆ ವಿತರಣೆ ಮಾಡಲು ಆದೇಶ ಹೊರಡಿಸಿತು. ಇದರ ಪ್ರಯೋಜನವನ್ನು ಸಾಕಷ್ಟು ರೈತರು ಪಡೆದುಕೊಂಡರು ಇದೇ ಯೋಜನೆ ಮುಂದುವರೆದ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ಸೃಷ್ಟಿಸಿತು. ಸರ್ಕಾರಕ್ಕೆ ಎಲ್ಲ ರೈತರಿಗೂ ಜಮೀನು ಒದಗಿಸಲು ಸಾಧ್ಯವಾಗಲಿಲ್ಲ ಈ ಹಿನ್ನೆಲೆಯಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ರೈತರು ಸಾಗುವಳಿ ಮಾಡಿಕೊಂಡರು. ನಂತರ ಅಲ್ಲಿ ಜೀವನ ನಡೆಸಲು ಪ್ರಾರಂಭಿಸಿದರು.
ಬಗರ್ ಹುಕುಂ ಅಕ್ರಮ ಸಕ್ರಮ ನಿಯಮ ಜಾರಿ
ಅಕ್ರಮ ಸಕ್ರಮ ಯೋಜನೆ ಹಾಗೂ ಬಗೆರ್ ಹುಕುಂ ಯೋಜನೆಯ ಅಡಿಯಲ್ಲಿ ನಮೂನೆ 50, ನಮೂನೆ 53 ಮತ್ತು ನಮೂನೆ 57ರ ಪ್ರಕಾರ, ಸರ್ಕಾರಿ ಜಮೀನು (government land) ಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಜಮೀನು ಹಕ್ಕು ಪತ್ರ (Hakku Patra) ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ರಾಜ್ಯದಲ್ಲಿ ಸಾವಿರಾರು ರೈತರು (farmers) ಸ್ವಂತ ಜಮೀನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಕೆಲವರ ಬಳಿ ಅಪಾರವಾದ ಜಮೀನು ಇದ್ದರೆ ಇನ್ನು ಕೆಲವರು ತುಂಡು ಜಮೀನು ಇಲ್ಲದೆ ಖಾಲಿ ಕೈಲಿ ನಿಲ್ಲುವಂತೆ ಆಗಿದೆ, ಈ ನಡುವೆ ಅದೆಷ್ಟೋ ಜನ ಸರಕಾರಿ ಜಮೀನುಗಳಲ್ಲಿ ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇಂಥವರ ಬಳಿ ಸಾಗುವಳಿ ಮಾಡಲು ಜಮೀನು ಇದೆ ಆದರೆ, ಆ ಜಮೀನು ತಮ್ಮ ಹೆಸರಿಗೆ ಇಲ್ಲ ಎನ್ನುವ ಕೊರತೆ ಇದ್ದೇ ಇದೆ. ಇದೇ ಕಾರಣಕ್ಕೆ ತಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಹೆಸರಿಗೆ ಮಾಡಿಕೊಡುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದ್ದು ಆಗಿದೆ. ಇದೀಗ ಅಕ್ರಮ ಸಕ್ರಮಕ್ಕೆ ಸಲ್ಲಿಕೆ ಆಗಿರುವ ಅರ್ಜಿ ಪರಿಶೀಲನೆ (application verification) ನಡೆಸಿ ಅರ್ಹ ರೈತರಿಗೆ ಹಕ್ಕು ಪತ್ರ ನೀಡಲು ಸರ್ಕಾರ ಮುಂದಾಗಿದೆ.
ಹೌದು, ಬಗರಕುಂ ಯೋಜನೆಯ ಮೂಲಕ ಮುಂದಿನ ದಿನಗಳಲ್ಲಿ ಸಾಕಷ್ಟು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಾ ಬಂದಿರುವ ರೈತರಿಗೆ ಸರ್ಕಾರವು ಈಗ ಆ ಜಮೀನಿನ ಹಕ್ಕು ಪತ್ರ ನೀಡಲು ನಿರ್ಧರಿಸಿದೆ. ಯಾವ ರೈತರು 15 ವರ್ಷಗಳ ಅವಧಿಯಲ್ಲಿ ಉಳಿದ ಮಾಡುತ್ತಾನೋ ಅಂತವರಿಗೆ ಆ ಜಮೀನಿನ ಹಕ್ಕು ಪತ್ರ ನೀಡಿ ಆ ಜಮೀನು ಅವರದ್ದೇ ಎದ್ದು ತೀರ್ಮಾನಿಸಲು ನಿರ್ಧರಿಸಿದೆ. ರೈತರು ಎಷ್ಟೇ ವರ್ಷದಿಂದ ಸರ್ಕಾರದ ಜಮೀನಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದರು ಕೂಡ ಅವರಿಗೆ ಜಮೀನಿನ ಹಕ್ಕು ಪತ್ರ ನೀಡದೆ ಇದ್ದಲ್ಲಿ ಯಾವುದೇ ಯೋಜನೆಯ ಪ್ರಯೋಜನವು ಸರ್ಕಾರದಿಂದ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ವಂಚನೆಯನ್ನು ತಪ್ಪಿಸಲು ಕ್ರಮ
ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿರುವಂತೆ ಹಕ್ಕುಪತ್ರ ವಿತರಣೆಯ ಸಂದರ್ಭದಲ್ಲಿ ನಿಜವಾದ ಫಲಾನುಭವಿ ರೈತರಿಗೆ ಮಾತ್ರ ಹಕ್ಕು ಪತ್ರ ದೊರೆಯಬೇಕು ಎಂದು ಹೇಳಿದ್ದಾರೆ. ಈ ಹಿಂದೆಯೂ ಸಾಕಷ್ಟು ಜನ ಸಾಗುವಳಿ ಮಾಡದೆ ಇದ್ದರೂ ಕೂಡ ತಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳ ಬೇರೆ ಬೇರೆ ಗ್ರಾಮಗಳಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ನಕಲಿ ರೈತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ, ನಿಜವಾದ ಫಲಾನುಭವಿ ರೈತರಿಗೆ ವಂಚನೆ ಆಗಿ, ಅನರ್ಹರಿಗೆ ಹೆಚ್ಚು ಜಮೀನು ಹಕ್ಕು ಪತ್ರ ಸಿಗುವ ಸಾಧ್ಯತೆ ಇರುತ್ತದೆ. ಇಂತಹ ಮೋಸ ತಡೆಗಟ್ಟುವ ಸಲುವಾಗಿ ಸರ್ಕಾರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದೆ.
ಸಂಪೂರ್ಣ ಡಿಜಿಟಲೀಕರಣ
ಈ ಬಾರಿ ಹಕ್ಕು ಪತ್ರ ವಿತರಣೆಗೂ ಮುನ್ನ ಸಂಪೂರ್ಣ ಡಿಜಿಟಲ್ ಮಾಡಲು ಸರ್ಕಾರ ನಿರ್ಧರಿಸಿದೆ. ಅಂದರೆ ಅರ್ಹ ಫಲಾನುಭವಿ ರೈತರಿಗೆ ಹಕ್ಕು ಪತ್ರ ವಿತರಣೆ ಮಾಡುವುದನ್ನು ಡಿಜಿಟಲೈಸ್ ಮಾಡುವುದರ ಮೂಲಕ ಅರ್ಹರಿಗೆ ಮಾತ್ರ ಜಮೀನು ಸಿಗುವಂತೆ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟ ಹಾಗೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿರುವ ಸಚಿವರು, ಯಾವುದೇ ಪ್ರಭಾವಿ ವ್ಯಕ್ತಿಗಳ ಬೆದರಿಕೆಗೆ ಹೆದರಿ ಅಥವಾ ಇನ್ಯಾವುದೋ ಕಾರಣಕ್ಕೆ ರೈತರಿಗೆ ಮೋಸ ಆಗದೆ ಇರಲು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.
ಕೇವಲ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಕಾರಣಕ್ಕೆ ಅಂತಹ ಅರ್ಜಿಗಳನ್ನು ಅನುಮೋದನೆ ಮಾಡಬಾರದು, ಅದರ ಬದಲು ಸ್ಥಳಕ್ಕೆ ಭೇಟಿ ನೀಡಿ ನಿಜಕ್ಕೂ ಆ ರೈತ ಹಕ್ಕು ಪತ್ರ ಪಡೆದುಕೊಳ್ಳಲು ಅರ್ಹನೆ ಎಂಬುದನ್ನು ಪರಿಶೀಲಿಸಬೇಕು. ಬಳಿಕ, ಆನ್ಲೈನ್ ಮೂಲಕ ಮತ್ತು ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಬೇಕು. ಬಳಿಕವಷ್ಟೇ ಅರ್ಹ ಅನುಭವಿ ರೈತರಿಗೆ, ಭೂರಹಿತ ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಮಾಡಬೇಕು. ಅಕ್ರಮ ಸಕ್ರಮಕ್ಕಾಗಿ ಕಾಯುತ್ತಿರುವ ಸಾಗುವಳಿ ಮಾಡುತ್ತಿರುವ ರೈತರು ಬಹಳ ಮುಖ್ಯವಾಗಿ ಎಲ್ಲಾ ದಾಖಲೆಗಳನ್ನು ಸರಿಯಾಗಿ ಕೊಟ್ಟು ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸಿದ ನಂತರ ಎಲ್ಲವು ಸರಿಯಾಗಿದೆ ಎನ್ನುವುದು ಸರ್ಕಾರಕ್ಕೆ ಖಚಿತವಾದರೆ ಅಂತಹ ಜಮೀನಿಗೆ ಹಕ್ಕು ಪತ್ರ ನೀಡಲಾಗುತ್ತದೆ.
ರೈತರಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ವಿತರಣೆ ಬಗ್ಗೆ ರಾಜ್ಯ ಕಂದಾಯ ಇಲಾಖೆ ಚಿಂತನೆ ನಡೆಸಿದ್ದು 15 ವರ್ಷಗಳಿಗಿಂತ ಹೆಚ್ಚಿನ ಸಮಯದವರೆಗೆ ರೈತರು ಒಂದೇ ಭೂಮಿಯಲ್ಲಿ ಉಳುಮೆ ಮಾಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸುವ ರೈತರ ಅರ್ಜಿಗಳನ್ನು ಸರ್ಕಾರವು ತಂತ್ರಜ್ಞಾನ ಬಳಸಿ ಪರಿಶೀಲಿಸುತ್ತದೆ. ಈ ಅಂಶಗಳನ್ನು ಪರಿಶೀಲಿಸಿದ ನಂತರ ಡಿಜಿಟಲ್ ಹಕ್ಕು ಪತ್ರವನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಈಗ ಹಕ್ಕು ಪತ್ರ ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ನಿಜಕ್ಕೂ ಸಂತಸದ ವಿಚಾರ.