Work From Home: SSLC ಪಾಸ್ ಆದವರಿಗೆ ಜಿಯೋ ಸಂಸ್ಥೆಯಿಂದ ವರ್ಕ್ ಫ್ರಮ್ ಹೋಂ ಕೆಲಸ.! ವೇತನ 30000/-

Work from home

ಕೊರೋನಾ ಬಂದು ಜಗತ್ತಿನ ಅರ್ಥ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಯಿತು. ಪ್ರತಿಯೊಂದು ಕುಟುಂಬಗಳ, ಪ್ರತಿಯೊಂದು ಗ್ರಾಮದ, ದೇಶದ ಲೆಕ್ಕಾಚಾರವೆಲ್ಲವೂ ಕೂಡ ಅಸ್ತ್ಯವ್ಯಸ್ತವಾಗಿ ಹೋಯಿತು. ಈ ಕರೋನವೆಂಬ ಕ್ರೂರಿ ಅದೆಷ್ಟು ಬಗೆಯಲ್ಲಿ ಕಾಡಿತ್ತು ಎಂದರೆ ಇದು ಮಹಾಮಾರಿಯೇ ಸರಿ ಇದೆಲ್ಲದರ ನಡುವೆ ಮಾಡಿದ ಉಪಕಾರವೆಂದರೆ ವರ್ಕ್ ಫ್ರಂ ಹೋಂ ಎನ್ನುವ ಕಾನ್ಸೆಪ್ಟ್ ಪರಿಚಯಿಸಿಕೊಟ್ಟಿತು.

ಅದುವರೆಗೂ ಆನ್ಲೈನ್ ಶಾಪಿಂಗ್, ಆನ್ಲೈನ್ ಟ್ರಾನ್ಸ್ಪಕ್ಷನ್ ಗಳ ಬಗ್ಗೆ ತಿಳಿದಿದ್ದ ಜನತೆ ಆನ್ಲೈನ್ ಕ್ಲಾಸ್ ಆನ್ಲೈನ್ ವರ್ಕ್ ಸೌಲಭ್ಯ ಕೂಡ ಪಡೆದುಕೊಂಡರು. ಈಗ ನಾವು ಇದಕ್ಕೆ ಎಷ್ಟು ಅಡ್ಜಸ್ಟ್ ಆಗಿ ಹೋಗಿದ್ದೇವೆ ಎಂದರೆ ತೀರ ಅನಿವಾರ್ಯತೆಯಿದ್ದ ಕೆಲಸಗಳಿಗಷ್ಟೇ ಆಚೆ ಹೋಗಲು ಮನಸ್ಸು ಬರುವುದು ಹೌದಲ್ಲವೇ?

WhatsApp Group Join Now
Telegram Group Join Now

ವರ್ಕ್ ಫ್ರಮ್ ಹೋಮ್ ಎಷ್ಟು ನಮ್ಮ ಭಾರವನ್ನು ಇಳಿಸಿತು ಎಂದರೆ ದೂರದ ಯಾವುದೋ ಪಟ್ಟಣದಲ್ಲೋ ವಿದೇಶದಲ್ಲೋ ಕೆಲಸಕ್ಕಿದ್ದ ಮನೆ ಮಕ್ಕಳು ಮನೆ ಅಂಗಳದಲ್ಲಿ ಕುಳಿತು ಕೆಲಸ ಮಾಡುವಂತಾಯ್ತು, ಮದುವೆ ಆದ ಮೇಲೆ ಕೆಲಸಕ್ಕೆ ಹೋಗಬಾರದೆಂದು ಕಂಡಿಷನ್ ಹೊಂದಿದ್ದ ಕುಟುಂಬಗಳು ಸೊಸೆಗೆ ಮನೆಯಲ್ಲೇ ಕಚೇರಿ ಕೆಲಸ ಮಾಡುವ ಅವಕಾಶವಿದ್ದರೆ ಅಡ್ಡಿ ಇಲ್ಲ ಎಂದು ಹೇಳಿಸಿತು.

ಈ ಸುದ್ದಿ ಓದಿ:- Gruhalakshmi Scheme: ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಬಿಗ್‌ ಶಾಕ್‌ ಇನ್ಮುಂದೆ ಈ ಮಹಿಳೆಯರಿಗೆ 2000 ಸಿಗಲ್ಲ.!

ಹೀಗೆ ನಾವಿರುವ ಸ್ಥಳದಲ್ಲಿಯೇ ನಮ್ಮ ಮನೆಯಲ್ಲಿಯೇ ಕುಳಿತು ಪ್ರತಿನಿತ್ಯ ಆನ್ಲೈನ್ ನಲ್ಲಿ ಕೆಲಸ ಮಾಡುತ್ತಾ ಹಣ ಗಳಿಸುವ ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ. ಆದರೆ ಹೀಗೆ ಕೆಲಸ ಮಾಡಲು IT-BTಯವರಿಗೆ ಮಾತ್ರ ಸಾಧ್ಯ, ನಾವೇನು ಇಂಜಿನಿಯರಿಂಗ್ MBA ಓದಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದು ಬೇಡ. 10th, PUC ಓದಿದ್ದರೂ ಸಾಕು ಕೆಲಸ ಮಾಡುವ ಅವಕಾಶವನ್ನು ಭಾರತದ ಪ್ರತಿಷ್ಠಿತ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಜಿಯೋ ಸಂಸ್ಥೆ ನೀಡುತ್ತಿದೆ. ಇದಕ್ಕೆ ಸಂಬಂಧಪಟ್ಟ ವಿವರ ಹೀಗಿದೆ ನೋಡಿ.

ಯಾರು ಅರ್ಹರು?

● ಭಾರತದಾದ್ಯಂತ ಇರುವ ಎಲ್ಲಾ ಯುವಕ ಯುವತಿಯರು ಕೂಡ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ● 18 ವರ್ಷ ಮೇಲ್ಪಟ್ಟ 10ನೇ ತರಗತಿ ಮತ್ತು 12ನೇ ತರಗತಿ ಬರೆಗೆ ವಿದ್ಯಾಭ್ಯಾಸ ಮಾಡಿದವರು ಅರ್ಜಿ ಸಲ್ಲಿಸಬಹುದು
● ಸುಮಾರು 27,000 ಕ್ಕಿಂತ ಹೆಚ್ಚು ಉದ್ಯೋಗಾವಕಾಶ ಸಿಗುತ್ತಿದೆ
● ಪಾರ್ಟ್ ಟೈಮ್ ಹಾಗೂ ಫುಲ್ ಟೈಮ್ ಜಾಬ್ ಗಳು ಲಭ್ಯವಿದೆ.

● ತಿಂಗಳಿಗೆ ರೂ.15,000 ದಿಂದ ರೂ.30,000 ದವರೆಗೆ ಆರಾಮವಾಗಿ ದುಡಿಯಬಹುದಾಗಿದೆ.
● ನೀವು ಎಲ್ಲಿಂದ ಈ ಹುದ್ದೆಗಳಿಗೆ ಅಪ್ಲೈ ಮಾಡುತ್ತಿರೋ ಆ ಭಾಗದ ಪ್ರಾದೇಶಿಕ ಭಾಷೆಯನ್ನು ಬಲ್ಲವರಾಗಿರಬೇಕು ಎನ್ನುವ ಕಂಡೀಶನ್ ಕೂಡ ಇದೆ
● ಒಂದು ವೇಳೆ ನೀವು ಮುಂದೆ ನಿಮ್ಮ ಹುದ್ದೆಯಲ್ಲಿ ಬಡ್ತಿ ಪಡೆಯುವುದಾದರೆ ಸ್ನಾತಕೋತ್ತರ ಪದವಿ ಪಡೆದಿರಬೇಕಾಗುತ್ತದೆ.

ಅಪ್ಲೈ ಮಾಡುವ ವಿಧಾನ:-

● ಆಸಕ್ತರು ನೇರವಾಗಿ https://careers.jio.com ಈ ವೆಬ್ ಸೈಟ್ ಗೆ ಭೇಟಿ ಕೊಡಿ
● ಜಾಬ್ ಅಪರ್ಚುನಿಟಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ
● ನಿಮ್ಮ ವಿದ್ಯಾರ್ಹತೆ ಹಾಗೂ ಆಸಕ್ತಿಗೆ ಅನುಕೂಲವಾಗಿ ನೀಡುವ ಹುದ್ದೆಗಳಲ್ಲಿ ಸೂಕ್ತವಾದದ್ದನ್ನು ಆಯ್ದುಕೊಳ್ಳಿ
● Apply now ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರೆಯಿರಿ.

● ನಿಮ್ಮ ವೈಯಕ್ತಿಕ ವಿವರಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇರುತ್ತದೆ. ಅವುಗಳನ್ನು ಭರ್ತಿಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸುವಿಕೆ ಪೂರ್ತಿಗೊಳಿಸಿ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ನೀಡಿ ಒಂದು ವೇಳೆ ನೀವು ಆಯ್ಕೆಯಾದರೆ, ಈ ಹುದ್ದೆ ಸಂಬಂಧಿತ ವಿವರಗಳು ಮೊಬೈಲ್ ಸಂದೇಶ ಅಥವಾ ಇ-ಮೇಲ್ ಮೂಲಕ ನಿಮಗೆ ತಲುಪುತ್ತವೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment