Yashashwini Card
ಕಳೆದ ವರ್ಷ ಯಶಸ್ವಿನಿ ಯೋಜನೆಯಡಿ ಕಾರ್ಡ್ ಪಡೆದವರು ಮತ್ತು ಹೊಸದಾಗಿ ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಹ ಫಲಾನುಭವಿಗಳು ಕೂಡಲೇ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯನ್ನು ಭೇಟಿ ಮಾಡಿ ಯಶಸ್ವಿನಿ ಕಾರ್ಡ ನವೀಕರಣ ಮಾಡಿಕೊಳ್ಳಬವುದು ಮತ್ತು ಹೊಸದಾಗಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು. ಯಾರೆಲ್ಲ ಅರ್ಜಿ ಸಲ್ಲಿಸಬವುದು? ಈ ಯೋಜನೆಯಡಿ ಯಾವೆಲ್ಲ ಸೌಲಭ್ಯ ಸಿಗಲಿದೆ? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿ ಈ ಅಂಕಣದಲ್ಲಿ ವಿವರಿಸಲಾಗಿದೆ.
ಯಶಸ್ವಿನಿ ಯೋಜನೆ ಹಿನ್ನೆಲೆ ಏನು?
ಈ ಹಿಂದೆ ಸಹಕಾರ ಇಲಾಖೆಯಲ್ಲಿ ಯಶಸ್ವಿನಿ ಯೋಜನೆಯನ್ನು 2003 ರಲ್ಲಿ ಪ್ರಾರಂಭಿಸಿದ್ದು, 2003-04 ರಿಂದ 2017-18 ರವರೆಗೆ ಜಾರಿಯಲ್ಲಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆಗೊಂಡಿದ್ದು, ದಿನಾಂಕ: 31-05-2018 ರಿಂದ ಈ ಯೋಜನೆಯು ಸ್ಥಗಿತಗೊಂಡಿದ್ದು, ದಿನಾಂಕ: 31-06-2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನಗೊಂಡಿರುತ್ತದೆ.
ರಾಜ್ಯದೆಲ್ಲೆಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022-23 ನೇ ಸಾಲಿನ ಆಯವ್ಯಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರುಜಾರಿಗೊಳಿಸಲು ತೀರ್ಮಾನಿಸಿ ರೂ. 300/- ಕೋಟಿಗಳ ಅವಕಾಶ ಕಲ್ಪಿಸಿ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿತ್ತು.
ಯಶಸ್ವಿನಿ ಯೋಜನೆಯು ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಂಡಿರುವ ಒಂದು ವಿಶೇಷ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿ ರೂ. 5.00 ಲಕ್ಷಕ್ಕೆ ನಿಗಧಿಪಡಿಸಿದೆ. ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ.
ಯಶಸ್ವಿನಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಅಗತ್ಯ ದಾಖಲಾತಿ ಸಮೇತ ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ(ಸೊಸೈಟಿ) ಶಾಖೆ ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲಾತಿ ಮಾಹಿತಿ
* ಪಡಿತರ ಚೀಟಿ ಪತಿ
* ಪ್ರತಿ ಸದಸ್ಯರ ಆಧಾರ್ ಕಾರ್ಡ್
* ಪ್ರತಿಯೊಬ್ಬರ ಎರಡು ಫೋಟೋ
* ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್ ಡಿ ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.
ಯಶಸ್ವಿನಿ ಯೋಜನೆಯ ಪಾವತಿ ವಂತಿಕೆದರ ವಿವರ
ಸಾಮನ್ಯ ವರ್ಗ: A) ನಗರವಾಸಿ-1000 ರೂ B) ಗ್ರಾಮಾಂತರ-500 ರೂ ಪರಿಶಿಷ್ಟ ಜಾತಿ/ಪಂಗಡದ ಸದಸ್ಯರಿಗೆ ಶುಲ್ಕ ಇರುವುದಿಲ್ಲ.
ಚಿಕಿತ್ಸೆಗಳ ವಿವರ
ಸರ್ಜಿಕಲ್ ಆಂಕೊಲಾಜಿ, ನಾಯಿ ಕಡಿತ, ಹಾವು ಕಡಿತ, ನರವೈಜ್ಞಾನಿಕ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮುಳುಗುವಿಕೆ, ಗ್ಯಾಸ್ಟ್ರೋಎಂಟರಾಲಜಿ, ನೇತ್ರವಿಜ್ಞಾನ, ಸಾಮಾನ್ಯ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ತೀವ್ರ ನಿಗಾ, ಜಂಟಿ ಬದಲಿ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಅಥವಾ ಹೃದಯ ಕಸಿ ರೋಗ ನಿರ್ಣಯದ ತನಿಖೆಗಳು, ಅನುಸರಣಾ ಚಿಕಿತ್ಸೆಗಳು.
ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ, ಸುಟ್ಟಗಾಯಗಳು, ಇಂಪ್ಲಾಂಟ್ಗಳು, ಕೃತಕ ಅಂಗಗಳು ಮತ್ತು ಚರ್ಮದ ಕಸಿ, ಕಿಮೊಥೆರಪಿ, ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಒಳರೋಗಿಗಳ ವೈದ್ಯಕೀಯ ಚಿಕಿತ್ಸೆ, ದಂತ ಶಸ್ತ್ರ ಚಿಕಿತ್ಸೆ, ಡಯಾಲಿಸಿಸ್, ರಸ್ತೆ ಅಪಘಾತಗಳು. ರಾಜ್ಯದ ಯಾವುದೇ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶ ಇರುತ್ತದೆ.
ಯಶಸ್ವಿನಿ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಹಾಗೂ ಈ ಯೋಜನೆಯಡಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು.
ಪ್ರಾರಂಭಿಕವಾಗಿ ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಗಳನ್ನು ಯಶಸ್ವಿನಿ ಯೋಜನೆಯಲ್ಲಿ ಅವಕಾಶವಿರುತ್ತದೆ. ಯಶಸ್ವಿನಿ ಸದಸ್ಯರು ಜನರಲ್ ವಾರ್ಡಿನಲ್ಲಿ ಸೌಲಭ್ಯ ಪಡೆಯುವಲ್ಲಿ ಅರ್ಹತೆ ಹೊಂದಿರುತ್ತಾರೆ.
ಯಶಸ್ವಿನಿ ಯೋಜನೆಯಡಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರವಳಿಕೆ ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್ ಫೀ ಇತ್ಯಾದಿ ವೆಚ್ಚ ಒಳಗೊಂಡಿರುತ್ತದೆ.
ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ. 200/- ಗಳ (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ನೆಟ್ ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸತಕ್ಕದ್ದಲ್ಲ. ಈ ಪೈಕಿ ರೂ. 100/-ಗಳನ್ನು ಯಶಸ್ವಿನಿ ಟ್ರಸ್ಟ್ ನ ವತಿಯಿಂದ ಪಾವತಿಸಲಾಗುತ್ತದೆ. ಸದಸ್ಯರು ಯಶಸ್ವಿನಿ ಕಾರ್ಡ್ ಪಡೆದ 15 ದಿನಗಳ ನಂತರ ಯಶಸ್ವಿನಿ ಕಾರ್ಡುದಾರರು ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ.
ಯಶಸ್ವಿನಿ ಕಾರ್ಡ್ಗೆ ಯಾರು ಅರ್ಹರು?
ರಾಜ್ಯದ ಯಾವುದೇ ಸಹಕಾರ ಸಂಘದ (ಗ್ರಾಮೀಣ ಮತ್ತು ನಗರ) ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಬೀಡಿ ಕಾರ್ಮಿಕರು, ನೇಕಾರರು, ನಿಗದಿತ ವಾರ್ಷಿಕ ವಂತಿಗೆ ಪಾವತಿಗೆ ಯಾವುದೇ ವಯೋಮಿತಿ ನಿರ್ಬಂಧ ಇಲ್ಲದೇ ಯಶಸ್ವಿನಿ ಯೋಜನೆ ಸದಸ್ಯರಾಗಬಹುದಾಗಿದೆ.
ಇವರಿಗೆ ಅನ್ವಯಿಸುವುದಿಲ್ಲ
ಸಹಕಾರ ಸಂಘಗಳ, ನಿಷ್ಕ್ರಿಯ ಸಹಕಾರ ಸಂಘಗಳ ಮತ್ತು ನೌಕರರ ಸಹಕಾರ ಸಂಘಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು.
ಮಾಸಿಕ 30 ಸಾವಿರ ರೂ.ಗಿಂತ ಹೆಚ್ಚು ಅಥವಾ ವಾರ್ಷಿಕ 3,60 ಲಕ್ಷ ರೂ. ಗಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಿರುವುದಿಲ್ಲ ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯನಾಗಲು ಅರ್ಹರಲ್ಲ. ಯೋಜನೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ 75 ವರ್ಷಗಳು. ಈ ವಯಸ್ಸಿನ ಕೆಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರು.