Pension
ವಯಸ್ಸಾಗುತ್ತಿದ್ದಂತೆ ಮನುಷ್ಯರಿಗೆ ದುಡಿಯಲು ಶಕ್ತಿ ಇರುವುದಿಲ್ಲ, ಕೆಲಸವೂ ಕೂಡ ಸಿಗುವುದಿಲ್ಲ ಆದರೆ ಹಣದ ಅವಶ್ಯಕತೆ ಕೊನೆ ಉಸಿರು ಇರುವವರೆಗೂ ಕೂಡ ಇರುತ್ತದೆ. ವಯಸ್ಸಾದ ಬಳಿಕ ಕುಟುಂಬದ ಮೇಲೆ ಅವಲಂಬಿತರಾದರು ಸಂಪೂರ್ಣವಾಗಿ ಎಲ್ಲಾ ಅವಶ್ಯಕತೆಗಳಿಗೂ ಕೂಡ ಮತ್ತೊಬ್ಬರಿಗೆ ಹೊರೆ ಆಗುವುದು ಕೂಡ ಒಂದು ರೀತಿಯ ನೋ’ವನ್ನುಂಟು ಮಾಡುತ್ತದೆ.
ಅದರಲ್ಲೂ ನಮ್ಮ ದೇಶದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರ ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ. ಹೀಗಾಗಿ ಸರ್ಕಾರವು ಕೆಲವು ಕಲ್ಯಾಣ ಯೋಜನೆಗಳನ್ನು ರೂಪಿಸಿ ಹಿರಿಯ ನಾಗರಿಕರ (Senior Citizen) ಭದ್ರತೆ ಮತ್ತು ಆರೈಕೆ ಮಾಡುತ್ತಿದೆ. ಅದರಲ್ಲಿ ರಾಜ್ಯ ಸರ್ಕಾರದ ಯೋಜನೆಯಾದ ಸಂಧ್ಯಾ ಸುರಕ್ಷಾ ಯೋಜನೆ (Sandhya Suraksha Yojane) ಪ್ರಾಮುಖ್ಯತೆಯನ್ನು ನಾವಿಂದು ನೆನೆಯಲೇ ಬೇಕು.
ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಅಥವಾ ನಿವೃತ್ತಿಯ ನಂತರ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾಸಿಕವಾಗಿ ರೂ.1200 ಪಿಂಚಣಿ (Pension) ಸಿಗುತ್ತಿದೆ.
ಇದನ್ನು ಹೊರತುಪಡಿಸಿ ಕೂಡ ಸಾಕಷ್ಟು ಸರ್ಕಾರಿ ಸೇವೆಗಳಲ್ಲಿ ವಿನಾಯಿತಿ ಹಿರಿಯ ನಾಗರಿಕರಿಗೆ ಸಿಗುತ್ತಿದೆ. ಈ ಸಂಧ್ಯಾ ಸುರಕ್ಷಾ ಯೋಜನೆಯಡಿ ಸಿಗುತ್ತಿರುವ ರೂ.1200 ರೂಪಾಯಿಯನ್ನು ಪಡೆಯಲು ಅನೇಕರು ತಾವು ಅರ್ಹರಲ್ಲದಿದ್ದರೂ ಕೂಡ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ಪಡೆಯುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ಸಾಕಷ್ಟು ಹೊರೆ ಆಗುತ್ತಿದೆ ಎನ್ನುವ ಮಾತು ಕೂಡ ಇದೆ.
ಇತ್ತೀಚಿಗೆ ಸರ್ಕಾರವು ಕೂಡ ಇಂತಹ ನಕಲಿ ಫಲಾನುಭವಿಗಳನ್ನು ಕಂಡುಹಿಡಿದು ಕೂಡಲೇ ಯೋಜನೆಯಿಂದ ಅವರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿರುವುದಾಗಿ ಕೂಡ ತಿಳಿಸಿದೆ. ಇದರ ಜೊತೆಗೆ ಫಲಾನುಭವಿಗಳು ತಪ್ಪದೆ e-KYC ಮಾಡಿಸಿಕೊಳ್ಳಬೇಕು ಹಾಗೂ ಯೋಜನೆಗೆ ಅರ್ಹರಾಗಲು ವಿಧಿಸಿರುವ ನಿಯಮಗಳನ್ನು ತಿಳಿದುಕೊಂಡು ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ಕೂಡ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದೆ.
ಹೀಗಾಗಿ ಈ ಅಂಕಣದಲ್ಲಿ ನಾವು ಈ ಯೋಜನೆ ಹಣ ಪಡೆಯುವುದಕ್ಕೆ ಏನೆಲ್ಲಾ ಅರ್ಹತೆಗಳು ಇರಬೇಕು ಮತ್ತು ಯಾವ ದಾಖಲೆಗಳನ್ನು ಪರಿಶೀಲನೆ ಸಮಯದಲ್ಲಿ ಕೇಳುತ್ತಾರೆ ಎಂದು ತಿಳಿಸಿ ಕೊಡುತ್ತಿದ್ದೇವೆ. ಪಿಂಚಣಿ ನಿಮ್ಮ ಕೈ ತಪ್ಪಬಾರದು ಎಂದರೆ ಕೂಡಲೆ e-KYC ಮಾಡಿಸಿ ಒಂದು ವೇಳೆ ನಿಮಗೆ ಪಿಂಚಣಿ ಬರುವುದು ಸ್ಥಗಿತಗೊಂಡರೆ ಕೂಡಲೇ ತಹಶೀಲ್ದಾರ್ ಕಚೇರಿಗೆ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಿ.
ಸಂಧ್ಯಾ ಸುರಕ್ಷಾ ಯೋಜನೆ ಪಿಂಚಣಿ ಪಡೆಯಲು ಅರ್ಹತೆಗಳು:-
* ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರ ವಯಸ್ಸು 65 ಅಥವಾ 65 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
* ಸ್ಥಳೀಯ ಕಂದಾಯ ಇಲಾಖೆಯ ಪ್ರಮಾಣೀಕರಣಕ್ಕೆ ಒಳಪಟ್ಟು ಪಿಂಚಣಿದಾರರ ಅಥವಾ ಅವರ ಪತ್ನಿಯ ವಾರ್ಷಿಕ ಆದಾಯವು 32,000 ಮೀರುವಂತಿಲ್ಲ.(ಮಕ್ಕಳ ಆದಾಯವನ್ನು ಪೋಷಕರ ಪಿಂಚಣಿ ಯೋಜನೆಯಲ್ಲಿ ಸೇರಿಸಿರುವುದಿಲ್ಲ).
* ಬೇರೆ ಯಾವುದೇ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಪಿಂಚಣಿ ಪ್ರಯೋಜನ ಪಡೆಯುತ್ತಿದ್ದರೆ ಸಂಧ್ಯಾ ಸುರಕ್ಷಾ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್ ನಲ್ಲಿ ಇರುವ ವಯಸ್ಸನ್ನೇ ಪರಿಗಣಿಸುವುದರಿಂದ ಈ ದಾಖಲೆ ಇರಬೇಕು
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೂಡ ಸಲ್ಲಿಸಬೇಕು
* ನಿವಾಸ ದೃಢೀಕರಣ ಪತ್ರ
* ಸರ್ಕಾರಿ ವೈದ್ಯರು ನೀಡಿದ ವಯಸ್ಸಿನ ದೃಢೀಕರಣ ಪತ್ರ
* ಪರಿಶೀಲನೆಗೆ ಬಂದ ವೇಳೆ ನಿಮಗೆ ಪಿಂಚಣಿ ಅನುಮೋದನೆ ಮಾಡಿರುವ ಅಡ್ರೆಸ್ ಕಾಪಿ ಕೂಡ ಕೇಳಬಹುದು.