BSF Recruitment
ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಕೇಂದ್ರ ಸರ್ಕಾರದಡಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಬೇಕು ಈ ಮೂಲಕ ದೇಶ ಸೇವೆ ಮಾಡಬೇಕು ಎನ್ನುವ ಕನಸು ಹೊತ್ತಿರುವ ದೇಶದ ಎಲ್ಲಾ ಯುವ ಜನತೆಗೆ ದೇಶದ ಗಡಿ ಭದ್ರತಾ ವಿಭಾಗದಲ್ಲಿ (BSF) ಹುದ್ದೆ ಮಾಡುವಂತಹ ಅವಕಾಶ ದೊರೆಯುತ್ತಿದೆ.
ಎಂದಿನಂತೆ SSC ಬಿಎಸ್ಎಫ್ (BSF) ನಲ್ಲಿ ಖಾಲಿ ಇರುವ 15,000ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡುವ ಹೊಣೆ ಹೊತ್ತುಕೊಂಡಿದೆ. ಇದಕ್ಕಾಗಿ ಅಧಿಕೃತ ಅಧಿಸೂಚನೆ ಕೂಡ ಹೊರಡಿಸಿದ್ದು ಈ ನೋಟಿಫಿಕೇಶನ್ ನಲ್ಲಿ ಹುದ್ದೆ ವಿವರ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಸುವುದಕ್ಕೆ ನಿಗದಿಪಡಿಸಿರುವ ಮಾನದಂಡಗಳೇನು ಇತ್ಯಾದಿ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಲಾಗಿದೆ.
ಆಸಕ್ತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲೂ ಕೂಡ ನೇಮಕಾತಿ ಕುರಿತಾದ ಪ್ರಮುಖ ವಿಚಾರಗಳ ಬಗ್ಗೆ ತಿಳಿಸುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ವಾರ್ತೆಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- Central Bank: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಉದ್ಯೋಗಾವಕಾಶ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ವೇತನ 30,000
ನೇಮಕಾತಿ ಸಂಸ್ಥೆ:- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಉದ್ಯೋಗ ಸಂಸ್ಥೆ:- ದೇಶದ ಗಡಿ ಭದ್ರತಾ ಪಡೆ (BSF)
ಹುದ್ದೆ ಹೆಸರು:- ಕಾನ್ಸ್ಟೇಬಲ್ ಹುದ್ದೆಗಳು
ಹುದ್ದೆಗಳ ವಿವರ:-
* ಪುರುಷ ಕಾನ್ಸ್ಟೇಬಲ್ ಹುದ್ದೆಗಳು – 13,306
* ಮಹಿಳಾ ಕಾನ್ಸ್ಟೇಬಲ್ ಹುದ್ದೆಗಳು – 2,348
* ಈ ಹುದ್ದೆಗಳನ್ನು ವರ್ಗಗಳ ಅನುಸಾರವಾಗಿ ಕೂಡ ವಿಭಾಗಿಸಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ:- 15,654 ಹುದ್ದೆಗಳು
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸರ್ಕಾರದ ಕಡೆಯಿಂದ ಪ್ರತಿ ತಿಂಗಳ ಅತ್ಯುತ್ತಮ ವೇತನದೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ದೊರೆಯುತ್ತವೆ.
ಶೈಕ್ಷಣಿಕ ವಿದ್ಯಾರ್ಹತೆ:-
ಮಾನ್ಯತೆ ಪಡೆದ ಯಾವುದೇ ಶಾಲೆ ಅಥವಾ ಮಂಡಳಿಯಿಂದ SSLC ಪೂರ್ತಿಗೊಳಿಸಿರುವ ಯಾವುದೇ ಅರ್ಹ ಅಭ್ಯರ್ಥಿಯು ಈ ಹುದ್ದೆ ಪಡೆಯಲು ಅರ್ಜಿ ಸಲ್ಲಿಸಿ ಪ್ರಯತ್ನಿಸಬಹುದಾಗಿದೆ.
ಈ ಸುದ್ದಿ ಓದಿ:- Power: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಸರ್ಕಾರದಿಂದ ಚಾಲನೆ.! ಇನ್ಮುಂದೆ ಬಿಲ್ ಕಟ್ಟುವ ಟೆನ್ಶನ್ ಬೇಡ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 23 ವರ್ಷಗಳು
ವಯೋಮಿತಿ ಸಡಿಲಿಕೆ:-
* ಇತರೆ ಸರ್ಕಾರಿ ಹುದ್ದೆಗಳಿಗೆ ನಿಗದಿಪಡಿಸಿರುವ ಪ್ರಕಾರವಾಗಿ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಮೊದಲು ಆಸಕ್ತ ಅಭ್ಯರ್ಥಿಯು SSC ಅಧಿಕೃತ ವೆಬ್ಸೈಟ್ ಆದ SSC.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಬೇಕು.
* ನಂತರ ಸೂಚಿಸಿರುವ ಪ್ರಕಾರವಾಗಿ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಥವಾ ದಾಖಲೆಗಳ ಸಂಖ್ಯೆಗಳನ್ನು ನಮೂದಿಸಿ ಅರ್ಜಿ ಸಲ್ಲಿಕೆ ಯಶಸ್ವಿಗೊಳಿಸಿ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಬೇಕು
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಕಂಪ್ಯೂಟರ್ ಬೇಸ್ಡ್ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ
* ಈ ಸುತ್ತಿನಲ್ಲಿ ಆಯ್ಕೆ ಆದವರಿಗೆ ದೈಹಿಕ ಸಾಮರ್ಥ್ಯಹಾಗೂ ದೇಹಧಾಡ್ಯತೆ ಪರೀಕ್ಷೆ ನಡೆಸಲಾಗುತ್ತದೆ
* ಕೊನೆಯದಾಗಿ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಯನ್ನು ನೇರ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಗೆ ಒಳಪಡಿಸುವ ಮೂಲಕ ಅರ್ಹರನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- Aadhaar: ಆಧಾರ್ ಕಾರ್ಡ್ ಇದ್ದವರು ಸೆಪ್ಟೆಂಬರ್ 14 ರ ಒಳಗೆ ಈ ಕೆಲಸ ಮಾಡದಿದ್ದರೆ ದಂಡ ಗ್ಯಾರಂಟಿ.!
ಪ್ರಮುಖ ದಿನಾಂಕಗಳು:-
* ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಅಕ್ಟೋಬರ್, 2024
* ಪರೀಕ್ಷಾ ದಿನಾಂಕ ಜನವರಿ – ಫೆಬ್ರವರಿ, 2025 ರಲ್ಲಿ ನಿರೀಕ್ಷಿಸಲಾಗಿದೆ.