Grama one: ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ.!

Grama one:

ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳು ಹಾಗು ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊರಕಿಸಿ ಕೊಡುವ ಸಲುವಾಗಿ ಗ್ರಾಮ ಒನ್ ಕೇಂದ್ರಗಳು(Grama one) ಎನ್ನುವ ಯೋಜನೆಯನ್ನು ಜಾರಿಗೆ ತರಲಾಯಿತು. ಹೆಚ್ಚಿನ ಹಣ ಹಾಗೂ ಸಮಯದ ವ್ಯರ್ಥವಿಲ್ಲದೆ ಮತ್ತು ಬಹುತೇಕ ಸೇವೆಗಳನ್ನು ಜನರು ಈ ಅನುಕೂಲತೆಯಿಂದ ತಮ್ಮ ಮನೆ ಬಾಗಿಲಿಗೆ ಪಡೆಯುತ್ತಿದ್ದಾರೆ.

ದಿನದಿಂದ ದಿನಕ್ಕೆ ಗ್ರಾಮ ಒನ್ ಕೇಂದ್ರಗಳು ಸಹಾ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಜನತೆಗೆ ಸಾಕಷ್ಟು ಅನುಕೂಲತೆ ಮಾಡಿಕೊಡುತ್ತಿವೆ. ಈಗಾಗಲೇ ರಾಜ್ಯದಾದ್ಯಂತ ಶೇಕಡವಾರು ಗ್ರಾಮಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ, ಇನ್ನುಳಿದ ಭಾಗಗಳಲ್ಲಿ ಶೀಘ್ರವೇ ಈ ಯೋಜನೆಗೆ ಚಾಲನೆ ನೀಡಲು ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ.

WhatsApp Group Join Now
Telegram Group Join Now

ಈ ಹಾದಿಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ತೀರ್ಥಹಳ್ಳಿ ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ ಮಾಡಿರುವುದರ ಬಗ್ಗೆ ಶಿವಮೊಗ್ಗ ಜಿಲ್ಲೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತಾದ ಕಂಪ್ಲೀಟ್ ವಿವರ ಹೀಗಿದೆ ನೋಡಿ.

ಈ ಸುದ್ದಿ ಓದಿ:-Central Bank: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಉದ್ಯೋಗಾವಕಾಶ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ.! ವೇತನ 30,000

ಸ್ಥಳ:-
* ತಲವಾಟ – 01
* ಎಸ್.ಎಸ್ ಮೋಗ್ – 01
* ಉಳ್ಳೂರು – 01
* ಹಾರೋಗೊಳಿಗೆ – 01
* ಅರಳಸುರುಳಿ – 01
* ಬಸವಾನಿ – 01
* ಹೆದ್ದೂರು – 01

ಅರ್ಜಿ ಸಲ್ಲಿಸುವುದಕ್ಕೆ ಅರ್ಹತೆಗಳು ಮತ್ತು ಕಂಡಿಶನ್ ಗಳು:-

1. ಮಾಹಿತಿ ತಂತ್ರಜ್ಞಾನ ರಹಿತ ಮೂಲ ಸೌಕರ್ಯದ ಅವಶ್ಯಕತೆಗಳು
* ಪ್ರಾಂಚೈನ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ವಿಶೇಷ ವಿಭಜನೆ ಪಾರ್ಟಿಷನ್ ಹೊಂದಿರಬೇಕು.
* ಒಂದು ಕೌಂಟರ್ ಉಳ್ಳ ಗ್ರಾಮ ಒನ್ ಕೇಂದ್ರಗಳು ಕನಿಷ್ಟ 100 ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು.

* ಬ್ರಾಂಡಿಂಗ್ ಮುದ್ರೆಗಳು (ಹೆಸರಿನ ಫಲಕ/ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್ ದ ಮನೋಗ್ರಾಂ, ಇತ್ಯಾದಿ) ಗ್ರಾಮ ಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿಯೇ ಇರಬೇಕು.
* ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು.

ಕೊಠಡಿಯ ನೆಲಹಾಸು ಟೈಲ್ಸ್ ಅಥವಾ ಗ್ರಾನೈಟ್‍ನಿಂದ ಕೂಡಿರಬೇಕು, RCC ಮೇಲ್ಛಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ/ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾಣವಾಗಿರಬೇಕು. ಯಾವುದೇ ಭಾಗದಲ್ಲೂ ನೀರು ಸೋರಿಕೆ ಕಂಡುಬರಬಾರದು, ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್‍ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶವೂ ಇರಬೇಕು.

ಈ ಸುದ್ದಿ ಓದಿ:-Power: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಸರ್ಕಾರದಿಂದ ಚಾಲನೆ.! ಇನ್ಮುಂದೆ ಬಿಲ್ ಕಟ್ಟುವ ಟೆನ್ಶನ್ ಬೇಡ.!

2. ಪೀಠೋಪಕರಣಗಳು
* ಕೌಂಟರ್ ಟೇಬಲ್
* ಆಪರೇಟರ್ ಕುರ್ಚಿ
* ಐಪ್ರಿಂಟರ್ ಟೇಬಲ್ (ಗ್ರಾಹಕರು ಕಾಯುವ ಕುರ್ಚಿ)
* CCTV ಕಣ್ಗಾವಲು ಮತ್ತು LCD TV

3. ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು
* ಡೆಸ್ಕ್‍ಟಾಪ್ / ಲ್ಯಾಪ್‍ಟಾಪ್
* ವಿವಿಧ ಕಾರ್ಯಕಾರಿ ಪ್ರಿಂಟರ್ & ಸ್ಕ್ಯಾನ್ಯರ್
* ಬಯೋಮೆಟ್ರಿಕ್ ಸ್ಕ್ಯಾನರ್
* ವೆಬ್ ಕ್ಯಾಮರಾ
* ವೈ-ಪೈ ರಿಸೀವರ್

*ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು (ISPS) ಕಾರಣ ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ವೃತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ಆ ವ್ಯವಸ್ಥೆ ಇರಬೇಕು.

ಅರ್ಹತಾ ಮಾನದಂಡಗಳು:-

* ದ್ವಿತೀಯ PUC / ಡಿಪ್ಲೊಮಾ / ITI / ಪದವಿ / ಸ್ನಾತಕೋತ್ತರ ಪದವಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು
*ಕಂಪ್ಯೂಟರ್ ಜ್ಞಾನ ಕಡ್ಡಾಯ
* ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯವಿರಬೇಕು.
* ಗ್ರಾಮಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
* ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವ ಸ್ಥಳದಲ್ಲಿರಬೇಕು

ಅರ್ಜಿ ಸಲ್ಲಿಸುವ ವಿಧಾನ:

* https://Karnatakaone.gov.in/Public/Gramaone ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು
* ಗ್ರಾಮಒನ್ ಫ್ರ್ಯಾಂಚೈಸ್ ಯೋಜನೆಗೆ ಅರ್ಜಿ ಶುಲ್ಕಕ್ಕೆ ರೂ. 100

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಸೆಪ್ಟೆಂಬರ್, 2024.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment