Gold
ಹೆಸರು ಕೇಳಿದ ತಕ್ಷಣ ಹೆಂಗಳೆಯರ ಮನಸಿನಲ್ಲಿ ಮಿಂಚಿನ ಸಂಚಾರ ಮೂಡಿಸುವಂತಹ ಲೋಹ ಎಂದರೆ ಅದು ಬಂಗಾರ. ಇದು ಆಭರಣವಾಗಷ್ಟೇ ಸೀಮಿತವಾಗದೆ ಇಂದು ಹೂಡಿಕೆ ವಿಚಾರದಲ್ಲಿ ಕೂಡ ಪ್ರಮುಖ ಇನ್ವೆಸ್ಟ್ಮೆಂಟ್ ಆಗಿರುವುದರಿಂದ ಚಿನ್ನದ ಮೇಲಿನ ಆಸಕ್ತಿ ಹೆಚ್ಚಾಗುತ್ತದೆ ಹೀಗಾಗಿ ಎಲ್ಲರಿಗೂ ಕೂಡ ಚಿನ್ನದ ಮೇಲೆ ಕಣ್ಣಿದೆ.
ಭಾರತದಲ್ಲಿ ಹಿಂದಿನಿಂದಲೂ ಬಡವ ಬಲ್ಲಿದ, ಶ್ರೀಮಂತ ಎನ್ನುವ ಯಾವುದೇ ವ್ಯತ್ಯಾಸವಿಲ್ಲದೆ ಎಲ್ಲರೂ ಬಂಗಾರದ ಮೇಲೆ ವ್ಯಾಮೋಹ ಹೊಂದಿದ್ದರು ಎನ್ನುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಆದರೆ ದಿನೇ ದಿನೇ ಈ ಬಂಗಾರದ ಬೆಲೆ ಗಗನಕ್ಕೇರಿ ಮಧ್ಯಮ ವರ್ಗದವರ ಪಾಲಿಗೆ ಆಕಾಶ ಕುಸುಮವಾಗುತ್ತಿದೆ.
ಕಳೆದ ಒಂದು ದಶಕದಲ್ಲಿ ಗಮನಿಸುವುದಾದರೂ ಬಂಗಾರದ ಬೆಲೆಯಲ್ಲಿ ಆದ ಅಜಗಜಾಂತರ ವ್ಯತ್ಯಾಸ ಗಮನಾರ್ಹ. ಆದರೆ ಸದ್ಯಕ್ಕಿಗ ಈ ಬಗ್ಗೆ ಒಂದು ಸಮಾಧಾನಕರ ಸುದ್ದಿ ಇದೆ. ಏನೆಂದರೆ 2024ರ ಮೇ ತಿಂಗಳಿನಿಂದ ಈಚೆಗೆ ಬಂಗಾರದ ಬೆಲೆ ನಿರಂತರ ಇಳಿಕೆ ಕಾಣುತ್ತಿದೆ. ಸೆಪ್ಟೆಂಬರ್ ತಿಂಗಳಿನ ಗೌರಿ ಗಣೇಶ ಹಬ್ಬದ ಈ ವಿಶೇಷ ಸಂದರ್ಭದಲ್ಲೂ ಮಳಿಗೆಗಳಿಂದಲೇ ವಿಶೇಷ ಆಫರ್ ಗಳು ಇದ್ದು, ಇದರ ನಡುವೆ ಬೆಲೆ ಕೂಡ ಕುಸಿತ ಕಂಡಿರುವುದು ಬಂಗಾರದ ಖರೀದಿಗೆ ಸುಸಮಯ ಎನಿಸಿದೆ.
ಈ ಸುದ್ದಿ ಓದಿ:- KVB Recruitment: ಕೆ.ವಿ.ಬಿ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ.!
ಸರ್ಕಾರದ ಮಟ್ಟದಲ್ಲೂ ಕೂಡ ಬೆಲೆ ನಿಯಂತ್ರಣದ ಕುರಿತಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಆ ಪ್ರಕಾರವಾಗಿ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ ಕೇಂದ್ರ ಸರ್ಕಾರದಿಂದ ಮುಂಬರುವ ಹಣಕಾಸು ನೀತಿಯಲ್ಲಿ ಫೆಡ್ ನೀತಿ ಪ್ರಕಾರವಾಗಿ ಇನ್ನಷ್ಟು ಬೆಲೆ ಕಡಿತಗೊಳ್ಳುತ್ತದೆ ಎಂದು ಊಹಿಸಲಾಗಿದೆ.
ಹಾಗಾದರೆ ಸದ್ಯಕ್ಕೆ ಈಗ ಬೆಂಗಳೂರಿನಲ್ಲಿ ಬಂಗಾರದ ಬೆಲೆ ಎಷ್ಟು ಗೊತ್ತಾ? ಈ ಬಗ್ಗೆ ಕುತೂಹಲವಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಬಂಗಾರದ ಬೇಟೆ ಮಾಡಬಯಸುವ ಸ್ನೇಹಿತರು ಮತ್ತು ಕುಟುಂಬದವರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಿ.
ಈ ಸುದ್ದಿ ಓದಿ:- Gadgets: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
ಸತತವಾಗಿ ಕಳೆದ ಒಂದು ವಾರದಿಂದ ಹೇಳಿಕೆ ಕಂಡಿರುವ 24 ಕ್ಯಾರೆಟ್ ಬಂಗಾರದ ಬೆಲೆ (ಬೆಂಗಳೂರಿನಲ್ಲಿ)
* 100 ಗ್ರಾ – ರೂ.7,28,4 00
* 10 ಗ್ರಾಂ – ರೂ.72,840
* 8 ಗ್ರಾಂ – ರೂ.58,272
* 1 ಗ್ರಾಂ – ರೂ.7,284
22 ಕ್ಯಾರೆಟ್ ಚಿನ್ನದ ಬೆಲೆಯು
* 100 ಗ್ರಾಂ – ರೂ.6,67,700
* 10 ಗ್ರಾಂ – ರೂ.66,700
* 8 ಗ್ರಾಂ – ರೂ.53,416
* 1 ಗ್ರಾಂ – ರೂ.6,670
18 ಕ್ಯಾರೆಟ್ ಬಂಗಾರದ ಬೆಲೆಯು
* 100 ಗ್ರಾಂ – ರೂ.5,46,300
* 10 ಗ್ರಾಂ – ರೂ.54630
* 8 ಗ್ರಾಂ – ರೂ.43,704
* 1 ಗ್ರಾಂ – ರೂ.5,463
ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ
ಮೈಸೂರು
18 ಕ್ಯಾರೆಟ್ – ರೂ.5,463
22 ಕ್ಯಾರೆಟ್ – ರೂ.6,677
24 ಕ್ಯಾರೆಟ್ – ರೂ.7,284
ಕೊಡಗು
18 ಕ್ಯಾರೆಟ್ – ರೂ.5,463
22 ಕ್ಯಾರೆಟ್ – ರೂ.6,677
24 ಕ್ಯಾರೆಟ್ – ರೂ.7,284
ಚಿಕ್ಕಮಗಳೂರು
18 ಕ್ಯಾರೆಟ್ – ರೂ.5,463
22 ಕ್ಯಾರೆಟ್ – ರೂ.6,677
24 ಕ್ಯಾರೆಟ್ – ರೂ.7,284
ಮಂಗಳೂರು
18 ಕ್ಯಾರೆಟ್ – ರೂ.5,463
22 ಕ್ಯಾರೆಟ್ – ರೂ.6,677
24 ಕ್ಯಾರೆಟ್ – ರೂ.7,284
ಮಂಡ್ಯ
18 ಕ್ಯಾರೆಟ್ -ರೂ.5,463
22 ಕ್ಯಾರೆಟ್ – ರೂ.6,677
24 ಕ್ಯಾರೆಟ್ – ರೂ.7,284
ದೇಶ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ:-
* ಮುಂಬೈ – ರೂ.6,677
* ದೆಹಲಿ – ರೂ.6,692
* ಕೊಲ್ಕತ್ತಾ – ರೂ.6,677
* ಕೇರಳ – ರೂ.6,677