Canara Bank: ಕೆನರಾ ಬ್ಯಾಂಕ್ ನ ಗ್ರಾಹಕರಿಗೆ ಸಿಹಿ ಸುದ್ದಿ.!

Canara Bank

ಹಣ ಉಳಿಸುವುದು ಹಾಗೂ ಉಳಿತಾಯ ಮಾಡಿರುವ ಹಣವನ್ನು ಹೂಡಿಕೆ ಮಾಡಿ ಬೆಳೆಸುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ನೀವು ಕೂಡ ಈ ಬಗ್ಗೆ ಆಸಕ್ತರಾಗಿದ್ದರೆ ನೀವು ಬ್ಯಾಂಕ್ ಹಾಗೂ ಬ್ಯಾಂಕೇತರ ಇತರ ಹಣಕಾಸು ಸಂಸ್ಥೆಗಳ ಹಲವಾರು ವಿಶೇಷ ಯೋಜನೆಗಳ ಪಡೆಯಬಹುದು.

ಆದರೆ ಸಾಮಾನ್ಯವಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ಲಾಭವನ್ನು ಎದುರು ನೋಡುವುದರ ಜೊತೆಗೆ ಹಣಕ್ಕೆ ಅಷ್ಟೇ ಭದ್ರತೆ ಇದೆಯೇ ಎಂದು ಕೂಡ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ಇಂತಹ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲದವರು ರಾಷ್ಟ್ರೀಕೃತ ಬ್ಯಾಂಕುಗಳ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಎನ್ನುವುದೇ ಹಣಕಾಸು ತಜ್ಞರ ಸಲಹೆ.

WhatsApp Group Join Now
Telegram Group Join Now

ಬ್ಯಾಂಕುಗಳಲ್ಲಿ ಕೂಡ ಹಲವು ವಿಶೇಷ ಯೋಜನೆಗಳಿರುತ್ತವೆ. ಅಂತೆಯೇ ಈ ಬಾರಿ ಪ್ರಸಕ್ತ ಸಾಲಿಗೆ ಅನ್ವಯ ಆಗುವಂತೆ ಕೆನರಾ ಬ್ಯಾಂಕ್ (Canara bank) 444 ದಿನಗಳ ನಿಶ್ಚಿತ ಠೇವಣಿ (FD Scheme) ಯೋಜನೆ ಘೋಷಿಸಿದೆ. ಈ ಯೋಜನೆಯ ವೈಶಿಷ್ಟತೆಗಳೇನು ಇಲ್ಲಿದೆ ನೋಡಿ ವಿವರ…

ಯೋಜನೆಯ ಹೆಸರು:- 444 ದಿನಗಳ ನಿಶ್ಚಿತ ಠೇವಣಿ ಯೋಜನೆ

* ಈ ಯೋಜನೆಯ ಮುಖ್ಯ ಆಕರ್ಷಣೆ ಏನೆಂದರೆ ಇದಕ್ಕೆ ವಿಧಿಸಲಾಗಿರುವ ಬಡ್ಡಿದರ. ಕೆನರಾ ಬ್ಯಾಂಕ್ ಈ ಯೋಜನೆ ಮೇಲಿನ ಹೂಡಿಕೆಗೆ 7.25% ಬಡ್ಡಿದರವು ಅನ್ವಯವಾಗುತ್ತದೆ.
* ಉದಾಹರಣೆಯೊಂದಿಗೆ ಇದನ್ನು ವಿವರಿಸುವುದಾದರೆ ನೀವೇನಾದರೂ ಈ ಯೋಜನೆಯಲ್ಲಿ ನಿಮ್ಮ ಬಳಿ ಇರುವ ರೂ.3ಲಕ್ಷ ಹಣವನ್ನು 444 ದಿನಗಳು ನಿಶ್ಚಿತ ಠೇವಣಿ ಇಟ್ಟರೆ ಯೋಜನೆಯ ಅಂತ್ಯದ ವೇಳೆ 7.25% ಬಡ್ಡಿರದ ಅನ್ವಯ ಒಟ್ಟು ರೂ.3,27,400 ಸಿಗುತ್ತದೆ.

* ಮತ್ತೊಂದು ಅನುಕೂಲತೆ ಏನೆಂದರೆ ಸಾಮಾನ್ಯವಾಗಿ ಎಲ್ಲ ಯೋಜನೆಗಳಂತೆ ಈ ಯೋಜನೆಯಲ್ಲಿಯೂ ಸಹ ಹಿರಿಯ ನಾಗರಿಕರಿಗೆ 0.50% ಹೆಚ್ಚು ಬಡ್ಡಿದರ ಸಿಗುತ್ತದೆ. ಆ ಪ್ರಕಾರ 60 ವರ್ಷ ತುಂಬಿದ ಹಿರಿಯ ನಾಗರಿಕರು ತಮ್ಮ ರೂ.3ಲಕ್ಷ ಹಣವನ್ನು 444 ದಿನಗಳ ಈ ನಿಶ್ಚಿತ ಠೇವಣಿ ಯೋಜನೆಯಡಿ ಹೂಡಿಕೆ ಮಾಡಿದರೆ ಮೆಚುರಿಟಿ ವೇಳೆ ಒಟ್ಟಿಗೆ ರೂ.3,29,361 ರೂಪಾಯಿಗಳನ್ನು ಪಡೆಯಬಹುದು.
* ಕನಿಷ್ಠ ರೂ.1000 ರಿಂದ ಹೂಡಿಕೆ ಮಾಡಬಹುದು, ಗರಿಷ್ಠ ಮಿತಿ ಇರುವುದಿಲ್ಲ.

* ಒಂದು ಬಾರಿ ಹೂಡಿಕೆ ಮಾಡಿದ ಮೇಲೆ ಮೆಚುರಿಟಿ ಅವಧಿಗೂ ಮುನ್ನ ಹಣ ಹಿಂಪಪಡೆಯಲು ಅವಕಾಶವಿಲ್ಲ. ಒಂದು ವೇಳೆ ಅನಿವಾರ್ಯ ಇದ್ದಲ್ಲಿ ಬ್ಯಾಂಕ್ ಕಂಡಿಷನ್ ಗಳ ಮೇಲೆ ಯೋಜನೆ ರದ್ದು ಮಾಡಲು ಅವಕಾಶವಿರುತ್ತದೆ.

ಈ ಸುದ್ದಿ ಓದಿ:- Gadgets: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!

* ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರುಗಳಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗುವುದು. ಒಂದು ವೇಳೆ ನೀವು ಖಾತೆ ಹೊಂದಿಲ್ಲದೆ ಇದ್ದದೆ ಖಾತೆ ತೆರೆದು ಅದೇ ದಿನ ಯೋಜನೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಯಾವುದೇ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.

* ಈಗಷ್ಟೇ ದುಡಿಯಲು ಆರಂಭಿಸಿ ಸ್ವಲ್ಪ ಹಣ ಉಳಿಸಿಕೊಂಡಿರುವ ಯುವ ಜನತೆ ಅಥವಾ ಗಂಡ, ತವರು ಮನೆ ಅಥವಾ ಮಕ್ಕಳಿಂದ ಒಂದು ಬಾರಿಗೆ ಹೆಚ್ಚು ಹಣವನ್ನು ಉಡುಗೊರೆಯಾಗಿ ಪಡೆದ ಗೃಹಿಣಿಯರು ಅಥವಾ ನನಿವೃತ್ತಿ ಹೊಂದಿರುವ ಹಿರಿಯ ನಾಗರಿಕರು ತಮ್ಮ ಕೆಲಸದ ನಿವೃತ್ತಿ ನಂತರ ಪಡೆದ ಮೊತ್ತ.

ಭವಿಷ್ಯದ ಕನಸು ದೊಡ್ಡದಿದ್ದು ಈಗ ಇರುವ ಹಣ ಸಾಲುತ್ತಿಲ್ಲ ಎಂದು ಸ್ವಲ್ಪ ಹಣ ಇಟ್ಟುಕೊಂಡು ಏನು ಮಾಡುವುದು ಎಂದು ಯೋಚಿಸುತ್ತಿರುವವರು ತಮ್ಮ ಹಣ ಸ್ವಲ್ಪ ದಿನಗಳವರೆಗೆ ಎಲ್ಲೂ ಹಾಳಾಗದಂತೆ ನೋಡಿಕೊಳ್ಳಲು ಈ ಯೋಜನೆಯ ಮೊರೆ ಹೋಗಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment