Power
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (Gescom) 2024-25 ನೇ ಸಾಲಿನ ಸುಮಾರು 200 ಕ್ಕೂ ಹೆಚ್ಚು ಶಿಶಿಕ್ಷು ತರಬೇತಿದಾರರು (Apprenticeship) ಹುದ್ದೆಗಳಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಿದೆ. ಈ ಸಂಬಂಧ ವಿವರಣೆಯುಳ್ಳ ನೋಟಿಫಿಕೇಶನ್ ಅನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ಹಂಚಿಕೊಂಡಿದೆ.
ರಾಜ್ಯದಲ್ಲಿರುವ ಯುವ ಪ್ರತಿಭೆಗಳಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಈ ಅಂಕಣದಲ್ಲಿ ಗೆಸ್ಕಾಂ ನೋಟಿಫಿಕೇಶನ್ ಕುರಿತಾದ ಪ್ರಕಟ ಸಂಗತಿಗಳ ಬಗ್ಗೆ ಮಾಹಿತಿಕೊಳ್ಳುತ್ತಿದ್ದೇವೆ ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಹಂಚಿಕೊಳ್ಳಿ.
ನೇಮಕಾತಿ ಸಂಸ್ಥೆ:- ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (Gescom)
ಹುದ್ದೆ ಹೆಸರು:- ಶಿಶಿಕ್ಷು ತರಬೇತಿದಾರರು
ಹುದ್ದೆಗಳ ವಿವರ:-
* 11 ತಿಂಗಳ ಅವಧಿಗೆ ಶಿಶಿಕ್ಷು ತರಬೇತಿದಾರರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಸುದ್ದಿ ಓದಿ:- Gadgets: ಹಳೆ ಟಿವಿ, ಕಂಪ್ಯೂಟರ್, ಮೊಬೈಲ್, ಚಾರ್ಜರ್ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್.!
ಒಟ್ಟು ಹುದ್ದೆಗಳ ಸಂಖ್ಯೆ:- 221 ಹುದ್ದೆಗಳು
ಉದ್ಯೋಗ ಸ್ಥಳ:- ಗುಲ್ಬರ್ಗಾ
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.5,500 ಸ್ಟೈ ಫಂಡ್ ಸಿಗುತ್ತದೆ
ಶೈಕ್ಷಣಿಕ ವಿದ್ಯಾರ್ಹತೆ:–
* ರಾಷ್ಟ್ರೀಯ ಶಿಶಿಕ್ಷು ತರಬೇತಿ ಯೋಜನೆಯಡಿ NCVT ಪ್ರಮಾಣ ಪತ್ರ ಹಾಗೂ ರಾಜ್ಯ ವೃತ್ತಿ ಪ್ರಮಾಣ ಪತ್ರ SCVT ಪ್ರಮಾಣ ಪತ್ರ ಹೊಂದಿದ್ದವರು ಇದರೊಂದಿಗೆ
* 10ನೇ ತರಗತಿ ಉತ್ತೀರ್ಣರಾಗಿದ್ದು, ನಂತರ ITI ವಿದ್ಯಾಭ್ಯಾಸ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಕನಿಷ್ಠ 15 ಮೇಲ್ಪಟ್ಟವರಾಗಿರಬೇಕು
* ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷಗಳು
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷ
ಪ್ರಮುಖ ಸಂಗತಿಗಳು:-
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.
* ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ
* ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
* ಈಗಾಗಲೇ ಒಂದು ಸಲ ವೃತ್ತಿ ತರಬೇತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಮತ್ತೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ.
* ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳು ಕಲಬುರಗಿಯಲ್ಲಿ ವಾಸವಿರಬೇಕು ಮತ್ತು ಊಟ / ವಸತಿ ಹಾಗೂ ಇತರ ವ್ಯವಸ್ಥೆಯಲ್ಲಿ ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳಬೇಕು
* ತರಬೇತಿ ಸಮಯದಲ್ಲಿ ಸಂಸ್ಥೆಯ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಶಿಸ್ತಿನಿಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ:-
* ತಮ್ಮ ವೈಯುಕ್ತಿಕ ಹಾಗೂ ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಪಟ್ಟ ವಿವರವರನ್ನು ಅಭ್ಯರ್ಥಿಗಳಲ್ಲಿ ಬರೆದು ಅಥವಾ ಟೈಪಿಂಗ್ ಮಾಡಿ ಪ್ರಿಂಟ್ ಪಡೆದು ಇದರೊಂದಿಗೆ ಈ ಕೆಳಗೆ ತಿಳಿಸುವ ದಾಖಲೆ ಪ್ರತಿಗಳನ್ನು ಲಗತ್ತಿಸಿ ಕಡೆ ದಿನಾಂಕದ ಒಳಗೆ ಈ ಕೆಳಕಂಡ ವಿಳಾಸಕ್ಕೆ ತಲುಪಿಸಬೇಕು.
* ಅರ್ಜಿ ಲಕೋಟೆಯ ಮೇಲೆ 2024-25ನೇ ಸಾಲಿನ ಶಿಶಿಕ್ಷು ಆಯ್ಕೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.
* ವಿಳಾಸ:-
‘ಪ್ರಧಾನ ವ್ಯವಸ್ಥಾಪಕರು,
ನಿಗಮ ಕಚೇರಿ,
ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ,
ಜೆಸ್ಕಾಂ,
ಕಲಬುರಗಿ
ಸಲ್ಲಿಸಬೇಕಾದ ದಾಖಲೆ ಪ್ರತಿಗಳು:-
* SSLC & ITI ಪಾಸ್ ಅಂಕಪಟ್ಟಿ ಜೆರಾಕ್ಸ್ ಪ್ರತಿ
* ವರ್ಗಾವಣೆ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ
* ಜಾತಿ ಪ್ರಮಾಣ ಪತ್ರ
* ಮೆಡಿಕಲ್ ಸರ್ಟಿಫಿಕೇಟ್
* ಇತ್ತೀಚಿನ ಎರಡು ಭಾವಚಿತ್ರ
* ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (NCVT) ಪಡೆದ ಅಭ್ಯರ್ಥಿಗಳಿಗೆ ಹಾಗೂ ರಾಜ್ಯ ವೃತ್ತಿ ಪ್ರಮಾಣ ಪತ್ರದ (SCVT) ಪ್ರತಿಗಳು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 14 ಸೆಪ್ಟೆಂಬರ್, 2024 ರ ಸಂಜೆ 05-30 ರ ಒಳಗೆ ಅರ್ಜಿ ಸಲ್ಲಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* https://Gescom.karnataka.gov.in ಈ ವೆಬ್ಸೈಟ್ ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ
* ಈ ಮೇಲೆ ತಿಳಿಸಿದ ಕಛೇರಿ ವಿಳಾಸಕ್ಕೆ ಭೇಟಿ ಕೊಟ್ಟು ಕೂಡ ಮಾಹಿತಿ ಪಡೆದುಕೊಳ್ಳಬಹುದು.