Subadra Yojana:
ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ (Congress) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ದೇಶದಲ್ಲಿಯೇ ಮಾದರಿ ಯೋಜನೆ ಎನಿಸಿದೆ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಮತ್ತು ಲಿಂಗ ಸಮಾನತೆ ಸಾಧಿಸುವ ಉದ್ದೇಶ ಇಟ್ಟುಕೊಂಡು ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಗೃಹಲಕ್ಷ್ಮಿ ಯೋಜನೆ ಹೆಸರಿನಲ್ಲಿ ಜಾರಿಗೆ ತರಲಾಗಿದೆ.
ಕುಟುಂಬದ ಮುಖ್ಯಸ್ಥೆ ಯಾಗಿರುವ ಮಹಿಳೆಯ ಖಾತೆಗೆ ಪ್ರತಿ ತಿಂಗಳು dbt ಮೂಲಕ ಈ ಹಣ ತಲುಪಲಿದೆ ಮತ್ತು ಈ ಯೋಜನೆಗೆ ಒಂದು ವರ್ಷ ತುಂಬಿರುವ ಸಂಭ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚನೆಯಂತೆ ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯರು ತಾವು ಈ ಯೋಜನೆಯಿಂದ ಪಡೆದುಕೊಂಡ ಲಾಭಗಳ ಬಗ್ಗೆ ರೀಲ್ಸ್ ಮಾಡಿ ಸರ್ಕಾರದ ಗಮನಸೆಳೆದು ಬಹುಮಾನ ಗಿಟ್ಟಿಸುವ ಪ್ರಯತ್ನದಲ್ಲಿ ಇದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ಗ್ಯಾರಂಟಿ ಯೋಜನೆ ಘೋಷಣೆ ಆದಮೇಲೆ ಇದನ್ನು ಮಾದರಿಯಾಗಿರಿಸಿಕೊಂಡು ತೆಲಂಗಾಣದಲ್ಲಿ ಮಹಾಲಕ್ಷ್ಮಿ ಯೋಜನೆ ಘೋಷಣೆಯಾಗಿದ್ದು ಗೊತ್ತೇ ಇದೆ, ಇದಾದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇದೇ ಮಾದರಿಯ ಸುಭದ್ರ ಯೋಜನೆಯನ್ನು (Subhadra Scheme) ಕೂಡ ಘೋಷಿಸಿ.
ಈ ಸುದ್ದಿ ಓದಿ:- UPI Payment: ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್.!
ಈ ಯೋಜನೆ ಮೂಲಕ ವಾರ್ಷಿಕವಾಗಿ ಮಹಿಳೆಯರಿಗೆ ಎರಡು ಕಂತುಗಳಲ್ಲಿ ರೂ. 10,000 ವನ್ನು ಐದು ವರ್ಷಗಳವರೆಗೆ ನೀಡುವ ಭರವಸೆಯನ್ನು ನೀಡಿದ್ದಾರೆ. ಈ ಯೋಜನೆ ಕೂಡ ಮಹಿಳೆಯರ ಆರೋಗ್ಯ, ಪೌಷ್ಟಿಕಾಂಶ ಮತ್ತು ಶಿಕ್ಷಣದ ಅಗತ್ಯತೆ ಪೂರೈಸುವ ಗುರಿ ಹೊಂದಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಯಾರು ಅರ್ಹರು ಮತ್ತು ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಇತ್ಯಾದಿ ವಿವರ ಹೇಗಿದೆ ನೋಡಿ.
ಸೆಪ್ಟೆಂಬರ್ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಯೋಜನೆ ಘೋಷಣೆಯಾಗಿದೆ. ಒರಿಸ್ಸಾ ರಾಜ್ಯದ (Odisha) ಸರ್ಕಾರವು ಈ ಯೋಜನೆಯನ್ನು ಘೋಷಣೆ ಮಾಡಿ ಪ್ರಧಾನಿಗಳಿಂದ ಬಿಡುಗಡೆ ಮಾಡಿಸಿದೆ.
ಒರಿಸ್ಸಾ ರಾಜ್ಯದ ಆರಾಧ್ಯದೈವವಾಗಿರುವ ಪೂರಿ ಜಗನ್ನಾಥನ ಸಹೋದರಿ ಸುಭದ್ರ ಹೆಸರಿನಲ್ಲಿ ಈ ಯೋಜನೆಯನ್ನು ರಚಿಸಿ ರಾಜ್ಯದ ಎಲ್ಲಾ ಸಹೋದರಿಯರಿಗೆ ಅರ್ಪಿಸಿದೆ. ಒಡಿಸ್ಸಾದ ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಸ್ಮರಿಸಲು ಮತ್ತು ಮಹಿಳಾ ಶಕ್ತಿಯನ್ನು ಮಾನ್ಯತೆ ಮಾಡಲು ಯೋಜನೆಗೆ ಈ ಹೆಸರಿಡಲಾಗಿದೆ.
ಯೋಜನೆ ಕುರಿತ ಪ್ರಮುಖ ಸಂಗತಿಗಳು:-
* ಈ ಯೋಜನೆಯ ವಿಶೇಷತೆ ಏನೆಂದರೆ, ವಾರ್ಷಿಕವಾಗಿ ಎರಡು ಕಂತುಗಳಲ್ಲಿ ಅಂದರೆ ಮೊದಲ ಕಂತು ರಕ್ಷಾಬಂಧನದ ದಿನದಂದು ಹಾಗೂ ಎರಡನೇ ಕಂತು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನದಂದು ಎಲ್ಲಾ ಅರ್ಹ ಮಹಿಳೆಯರಿಗೆ DBT ಮೂಲಕ ಬ್ಯಾಂಕ್ ಖಾತೆಗೆ ತಲುಪುತ್ತದೆ.
* ಈ ಯೋಜನೆಯನ್ನು ಪಡೆಯಲು ಒರಿಸ್ಸಾ ರಾಜ್ಯದ 21 – 60 ವರ್ಷ ವಯಸ್ಸಿನ ಒಳಗಿನ ಮಹಿಳೆಯರು ಅರ್ಹರಾಗಿರುತ್ತಾರೆ
* ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಯೋಜನೆ ಮೀಸಲಾಗಿದ್ದು ಆದಾಯ ತೆರಿಗೆ ಪಾವತಿಸುವವರು ಸರ್ಕಾರಿ ಉದ್ಯೋಗಸ್ಥರ ಕುಟುಂಬದ ಮಹಿಳೆಯರು ಇತರೆ ಹಕ್ಕುಪತ್ರ ಯೋಜನೆಯಡಿ ಮಾನ್ಯತೆ ಪಡೆಯುವವರನ್ನು ಯೋಜನೆಯಿಂದ ಕೈ ಬಿಡಲಾಗಿದೆ.
* ಮಹಿಳೆಯರ ಸ್ವಾವಲಂಬನೆ ಹಾಗೂ ಸ್ವತಂತ್ರಕ್ಕೆ ಒತ್ತು ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ
* ಈ ಯೋಜನೆ ಪ್ರಯೋಜನ ಪಡೆಯಲು ಮಹಿಳೆಯರು ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು ಮತ್ತು ತಮ್ಮ ಗ್ರಹಣ ಕ್ಷೇತ್ರದಲ್ಲಿ ಮೌರ್ತು ನೋಂದಣಿ ಮಾಡಿಸಬೇಕು.
ಈ ಸುದ್ದಿ ಓದಿ:- Pan Card ಪಾನ್ ಕಾರ್ಡ್ ಇರುವವರಿಗೆ ಬಿಗ್ ಅಪ್ಡೇಟ್, ತಪ್ಪದೇ ಈ ನಿಯಮ ಪಾಲಿಸಲೇಬೇಕು…
* ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಯೋಜನೆಯನ್ನು ಮಹಿಳೆಯರಿಗೆ ತಲುಪಿಸುವ ಹೊಣೆಗಾರಿಕೆ ಹೊತ್ತಿದೆ
* ಇ-ಕೆವೈಸಿ ಮೂಲ ಹಣ ಖಾತೆ ತಲುಪುತ್ತದೆ, ಡೆಬಿಟ್ ಕಾರ್ಡ್ ಮೂಲಕ ಮಹಿಳೆಯರು ಹಣ ಪಡೆಯಬಹುದು.
* ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರು ಜನ ಅರ್ಹ ಮಹಿಳೆಯರಲ್ಲಿ ಹೆಚ್ಚು ಡಿಜಿಟಲ್ ವ್ಯವಹಾರ ನಡೆಸುವ ಮಹಿಳೆಗೆ ರೂ.500 ಹೆಚ್ಚುವರಿ ಬಹುಮಾನದ ಮೊತ್ತ ಕೂಡ ಸಿಗಲಿದೆ. ಡಿಜಿಟಲ್ ಪೇಮೆಂಟ್ ಬೆಂಬಲಿಸುವ ಉದ್ದೇಶದಿಂದ ಈ ಪ್ರೋತ್ಸಾಹದನ ನೀಡಲಾಗುತ್ತಿದೆ.