Aadhaar
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UDAI) ಎಂಬ ಸರ್ಕಾರದ ಅಧೀನ ಸಂಸ್ಥೆಯು ಭಾರತದ ಎಲ್ಲಾ ನಾಗರಿಕರಿಗೂ 12 ಅಂಕಿಗಳುಳ್ಳ ಆಧಾರ್ ಸಂಖ್ಯೆ ಹಾಗೂ ಈ ಆಧಾರ್ ಸಂಖ್ಯೆ, ಭಾವಚಿತ್ರ, ಹೆಸರು, ಹುಟ್ಟಿದ ದಿನಾಂಕ, ವಯಸ್ಸು, ಲಿಂಗ, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಒಳಗೊಂಡ ಆಧಾರ್ ಕಾರ್ಡ್ ವಿತರಣೆ ಮಾಡುತ್ತದೆ ಮತ್ತು ಕಾಲಕಾಲಕ್ಕೆ ಆಧಾರ್ ಕಾರ್ಡ್ ಕುರಿತಾಗಿ ಕೆಲವು ಪ್ರಮುಖ ನಿಯಮಗಳನ್ನು ತೆಗೆದುಕೊಂಡು ಈ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದೆ.
ಈಗ ಆಧಾರ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎಂದರೆ ಸರ್ಕಾರ ಹಾಗೂ ಖಾಸಗಿ ಸಂಘ ಸಂಸ್ಥೆ ಕಛೇರಿ ಕಾರ್ಯದಲ್ಲೆಲ್ಲಾ ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ ನ್ನು ಕೇಳಲಾಗುತ್ತಿದೆ. ಇಷ್ಟು ಪ್ರಮುಖವಾದ ದಾಖಲೆ ಬಗ್ಗೆ UIDAI ಕಳೆದ ವರ್ಷ ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವಂತೆ ಮತ್ತೊಂದು ಸೂಚನೆ ಕೊಟ್ಟಿದೆ.
ಅದೇನೆಂದರೆ ಯಾರು ಕಳೆದ 10 ವರ್ಷದಿಂದ ತಮ್ಮ ಆಧಾರ್ ಕಾರ್ಡ್ ಒಮ್ಮೆ ಕೂಡ ಅಪ್ಡೇಟ್ ಮಾಡಿಸಿಲ್ಲ ಅಂತಹ ನಿವಾಸಿಗಳು ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ವಿವರಗಳನ್ನು ನವೀಕರಿಸಲು ವಿನಂತಿಸಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಉಚಿತವಾಗಿ ಪೂರ್ಣಗೊಳಿಸಲು ಅವಕಾಶ ನೀಡಿ, ಕಳೆದೊಂದು ವರ್ಷದಿಂದ ಸಾಕಷ್ಟು ಬಾರಿ ಸಮಯಾವಕಾಶವನ್ನು ಕೊಟ್ಟು ಈಗ ಕೊನೆ ಗಡುವಾಗಿ ಸೆಪ್ಟೆಂಬರ್ 14, 2024ನೇ ದಿನಾಂಕವನ್ನು ನಿಗದಿಪಡಿಸಿದೆ.
ಈ ಸುದ್ದಿ ಓದಿ:- Ration Card: BPL ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್.!
ಕಳೆದ ಹತ್ತು ವರ್ಷಗಳಿಂದ ವ್ಯಕ್ತಿಯೊಬ್ಬನ ಮುಖ ಚಹರೆ ಹಾಗೂ ಬಯೋಮೆಟ್ರಿಕ್ ಮಾಹಿತಿಗಳು ಸಾಕಷ್ಟು ಬದಲಾಗಿರುತ್ತದೆ ಹಾಗೂ ಮೊಬೈಲ್ ಮತ್ತು ವಿಳಾಸ ಸಂಬಂಧಿತ ಮಾಹಿತಿಗಳ ಬದಲಾಗಿರುತ್ತದೆ. ಹೀಗಾಗಿ ಸರ್ಕಾರದ ಬಳಿ ನಿಖರ ಡಾಟಾ ಉಳಿಯಲಿ ಎನ್ನುವುದು ಈ ನಿಯಮದ ಉದ್ದೇಶವಾಗಿದೆ. ಒಂದು ವೇಳೆ ಉಚಿತವಾಗಿ ನೀಡಿರುವ ಈ ಸಮಯದ ಒಳಗಡೆ ಇದು ಪೂರ್ತಿಯಾಗದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರೂಂ.50 ದಂಡ ಸಮೇತವಾಗಿ ಇದನ್ನು ಪೂರ್ತಿಗೊಳಿಸುವ ಸಂದರ್ಭ ಬರುವುದಕ್ಕೆ ಕೂಡ ಎಚ್ಚರಿಸಿದೆ.
ಆನ್ಲೈನ್ ನಲ್ಲಿ ಆಧಾರ್ ಅಪ್ಡೇಟ್ ಮಾಡುವ ವಿಧಾನ:-
* https://ssup.uidai.gov.in/ssup/ ವೆಬ್ಸೈಟ್ ಗೆಷಭೇಟಿ ನೀಡಿ
* ನಿಮ್ಮ ಆಧಾರ್ ಸಂಖ್ಯೆ ಮತ್ತು OTP ಬಳಸಿ ಪೋರ್ಟಲ್‌ಗೆ Login ಆಗಿ
* ಆಧಾರ್‌ನಲ್ಲಿ ವಿಳಾಸವನ್ನು ನವೀಕರಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನೀವು ನಿರ್ವಹಿಸಲು ಬಯಸುವ ಆನ್‌ಲೈನ್ ಆಧಾರ್ ಅಪ್‌ಡೇಟ್‌ನ ಪ್ರಕಾರವನ್ನು ಆಯ್ಕೆಮಾಡಿ-ಡಾಕ್ಯುಮೆಂಟ್ ಆಧಾರಿತ ವಿಳಾಸ ನವೀಕರಣ ಅಥವಾ ಕುಟುಂಬದ ಮುಖ್ಯಸ್ಥ (HOF) ಆಧಾರಿತ ವಿಳಾಸ ನವೀಕರಣ ಎಂಬ ಆಯ್ಕೆಗಳು ಇರುತ್ತವೆ.
* ಅಗತ್ಯ ವಿವರಗಳನ್ನು ನಮೂದಿಸಿ, ನವೀಕರಣಕ್ಕಾಗಿ ಮೂಲ ಪೋಷಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
* ಸೇವಾ ವಿನಂತಿ ಸಂಖ್ಯೆ SRN ನ್ನು ಸ್ವೀಕರಿಸುತ್ತೀರಿ, ಇದು ಅಪ್‌ಡೇಟ್ ವಿನಂತಿಯನ್ನು ಟ್ರ್ಯಾಕ್ ಮಾಡಲು ಭವಿಷ್ಯದಲ್ಲಿ ಸಹಾಯಮಾಡುತ್ತದೆ.
* ಸಾಮಾನ್ಯವಾಗಿ 30 ದಿನಗಳಲ್ಲಿ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ, ನಂತರ, ನಿಮ್ಮ ಆಧಾರ್ ಕಾರ್ಡ್‌ನ ನವೀಕರಿಸಿದ ಆವೃತ್ತಿಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅದನ್ನು ಪ್ರಿಂಟ್ ಪಡೆಯಬಹುದು.
* ಆಫ್ ಲೈನ್ನಲ್ಲಿ ಪ್ರಕ್ರಿಯ ಪೂರ್ತಿಗೊಳಿಸಲು ಹತ್ತಿರದ ಆಧಾರ್ ನೋಂದಣಿ ಕೇಂದ್ರ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಈ ಮೇಲೆ ತಿಳಿಸಿದ ದಾಖಲೆಗಳ ಜೊತೆಗೆ ಭೇಟಿ ನೀಡಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.