Annabhagya: ಅನ್ನಭಾಗ್ಯ ಫಲಾನುಭವಿಗಳಿಗೆ ಹಣದ ಬದಲು ಸಿಗಲಿದೆ ದಿನಸಿ ಕಿಟ್ ವಿತರಣೆ.!

Annabhagya

ಪಡಿತರ ಚೀಟಿದಾರರಿಗೆ(ration card holders) ಗುಡ್ ನ್ಯೂಸ್ (Good news) ಎಂಬಂತೆ ಇನ್ಮುಂದೆ ಅನ್ನಭಾಗ್ಯ ಯೋಜನೆ(Annabhagya Yojana)ಯ ಹಣ(money)ದ ಬದಲು ಆಹಾರದ ಕಿಟ್ (Food kit) ನೀಡಲು ರಾಜ್ಯ ಸರ್ಕಾರ(State Govt) ನಿರ್ಧರಿಸಿದೆ ಈ ಕುರಿತು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ(Food Minister KH Muniappa) ಘೋಷಣೆ ಮಾಡಿದ್ದಾರೆ.

ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದರು. ಎಣ್ಣೆ(Oil), ಬೇಳೆ, ಕಾಳು(gram) ಒಳಗೊಂಡಂತಹ ದಿನಸಿ ಕಿಟ್ ನೀಡಲು ಸರ್ಕಾರ ನಿರ್ಧರಿಸಿದೆ.

WhatsApp Group Join Now
Telegram Group Join Now

ಹೌದು, ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯದಲ್ಲಿ ಈವರೆಗೂ ರಾಜ್ಯ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನು ಜನರಿಗೆ ನೀಡುತ್ತಿಲ್ಲ. ಅದರ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ಫಲಾನುಭವಿಗೆ 170 ರೂಪಾಯಿಯನ್ನು ಸರ್ಕಾರ ನೀಡುತ್ತಿದೆ.

ಆದರೆ, ಈಗ ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯ ಜೊತೆಗೆ ದಿನಸಿ ಕಿಟ್ ನೀಡುವ ಯೋಜನೆ ರೂಪಿಸಿದೆ. ಹಣದ ಬದಲು ದಿನಸಿ ಕಿಟ್ ನೀಡಲು ಆಹಾರ ಇಲಾಖೆ ಯೋಜನೆ ರೂಪಿಸಿದೆ. ಮುಂದಿನ ದಿನಗಳಲ್ಲಿ ದಿನಸಿ ಕಿಟ್‌ ನೀಡುವ ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ.

ಫಲಾನುಭವಿಗಳಿಗೆ ಹಣ ನೀಡುವ ಪ್ರಕ್ರಿಯೆ ಮುಂದುವರಿಸುವುದು ಸೂಕ್ತವಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಕಾರಕ್ಕೆ ಸಲಹೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 170 ರೂಪಾಯಿ ಬದಲು ದಿನಸಿ ಕಿಟ್ ನೀಡುವುದು ಸೂಕ್ತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಈಗಾಗಲೇ ನೀಡುತ್ತಿರುವ ನಗದು ಬದಲು ದಿನಸಿ ಕಿಟ್ ನೀಡಲು ಪ್ಲಾನ್ ಆಫ್ ಅ್ಯಕ್ಷನ್ ರೂಪಿಸಲಾಗಿದೆ. ಅನ್ನಭಾಗ್ಯದ ಹಣ ಡಿಬಿಟಿ ಫಲಾನುಭವಿಗಳ ಖಾತೆಗೆ ಸರಿಯಾಗಿ ಸಮಯಕ್ಕೆ ಜಮಾ ಆಗದಿರುವ ಹಿನ್ನೆಲೆ ಅನ್ನಭಾಗ್ಯದ ಹಣದ ಬದಲು ಆಹಾರದ ಕಿಟ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ. ಫಲಾನುಭವಿಗಳಿಗೆ ಹಣ ನೀಡುವ ಪ್ರಕ್ರಿಯೆ ಮುಂದುವರಿಸುವುದು ಸೂಕ್ತವಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಕಾರಕ್ಕೆ ಸಲಹೆ ಬಂದಿರುವ ಹಿನ್ನೆಲೆ ಹಣದ ಬದಲು ದಿನಸಿ ಕಿಟ್ ನೀಡುವುದು ಸೂಕ್ತ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಅಕ್ಕಿಯ ಕೊರತೆಯಿಂದ ಪ್ರತಿ ಕೆಜಿಗೆ 34 ರೂ ನಂತೆ ಫಲಾನುಭವಿಗೆ ರಾಜ್ಯ ಸರ್ಕಾರ 170 ರೂಪಾಯಿ ನೀಡುತ್ತಿದೆ. ಈಗ ಕೇಂದ್ರ ಸರ್ಕಾರ ತಮ್ಮ ಬಳಿ ಅಕ್ಕಿ ದಾಸ್ತಾನು ಇದ್ದು, ಬೇಕಾದಲ್ಲಿ ಖರೀದಿ ಮಾಡಬಹುದು ಎಂದು ಹೇಳಿದೆ. ಪ್ರತಿ ಕೆಜಿಗೆ 28 ರೂಪಾಯಿಯಂತೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಆದರೆ, ರಾಜ್ಯ ಸರ್ಕಾರ ಅಕ್ಕಿ ಖರೀದಿ ಮಾಡಲು ಹಿಂದೇಟು ಹಾಕಿದೆ. ಅಕ್ಕಿಯ ಬದಲು ದಿನಸಿ ಕಿಟ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಎಣ್ಣೆ, ಬೇಳೆ ಕಾಳು ಸೇರಿದಂತೆ ದಿನಸಿ ಕಿಟ್ ಕೊಡಲು ಸರ್ಕಾರ ಯೋಜನೆ ರೂಪಿಸಿದೆ.

ರಾಜ್ಯದಲ್ಲಿ ಸದ್ಯ 1.16 ಕೋಟಿ ಪಡಿತರ ಚೀಟಿದಾರರು ಇದ್ದಾರೆ. 4.8 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 5 ಕೆಜಿ ಅಕ್ಕಿಯ ಜೊತೆಗೆ 170 ರೂ ನಗದು ಹಣವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. 2023 ರ ಜುಲೈ 10 ರಿಂದ ಜಾರಿಯಾಗಿರುವ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment