Arogya Sanjeevini:
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಕಳೆದ ಹಲವು ದಿನಗಳಿಂದ ಮೂರು ಮುಖ್ಯ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದರು ಹಾಗೂ ಶೀಘ್ರದಲ್ಲೇ ಇವುಗಳು ಜಾರಿಗೆ ಬರದಿದ್ದರೆ ಮುಷ್ಕರ ಕೈಕೊಳ್ಳುವ ನಿರ್ಧಾರದ ಬಗ್ಗೆಯೂ ಕೂಡ ಪ್ರಸ್ತಾಪ ಮಾಡಿದ್ದರು. ಇದೀಗ ಕಳೆದ ವಾರವಷ್ಟೇ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ವರದಿಯನ್ವಯ ವೇತನ ಪರಿಷ್ಕರಣೆ ಮಾಡಿ ಸಿಹಿ ಸುದ್ದಿ ನೀಡಿದ್ದಾರೆ.
ಇದಾದ ಬಳಿಕ ಮತ್ತೆರಡು ಮುಖ್ಯ ಬೇಡಿಕೆಗಳ ಬಗ್ಗೆ ಕೂಡ ರಾಜ್ಯ ಸರ್ಕಾರ ಗಮನಹರಿಸಿದ್ದು, ಮುಂದಿನ ತಿಂಗಳಿನಲ್ಲಿಯೇ ಸರ್ಕಾರಿ ನೌಕರರ ಮೂರನೇ ಬೇಡಿಕೆಯಾಗಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ (Karnataka Arogya Sanjeevini) ಯೋಜನೆ ಜಾರಿಗೆ ಬರುವ ಸುಳಿವು ಕೂಡ ಸಿಕ್ಕಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘವು ಪ್ರಕಟಣೆಯ ಮೂಲಕ ಈ ವಿಷಯ ಹಂಚಿಕೊಂಡಿದೆ.
ಜುಲೈ 23 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ವೃಂದ ಸಂಘಗಳ ಸಭೆ ನಡೆದಿತ್ತು, ಸಭೆಯಲ್ಲಿ ನಡೆದ ಮುಖ ವಿಷಯಗಳ ಹಾಗೂ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರಕಟಣೆ ಹೊರಡಿಸಿದ್ದಲ್ಲಿ ಸಿಎಂ ಹಾಗೂ ಡಿಸಿಎಂ ಸನ್ಮಾನ, ವೇತನ ಆಯೋಗ ಜಾರಿಗೆ ಬಂದದ್ದು ಮತ್ತು ಹಳೆ ಪಿಂಚಣಿ ವ್ಯವಸ್ಥೆ ಮರು ಸ್ಥಾಪಿಸಿ ಹೊಸ ಪಿಂಚಣಿ ವ್ಯವಸ್ಥೆ ಸ್ಥಗಿತಗೊಳಿಸಿದ್ದು (NPS)ಹೀಗೆ ಸರ್ಕಾರ ಕೈಗೊಂಡ ಪ್ರಮುಖ ವಿಷಯಗಳ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿತ್ತು.
ಮೂರನೇ ಬೇಡಿಕೆಯಾಗಿದ್ದ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ಕೂಡ ವಿಷಯ ಪ್ರಸ್ತಾಪಿಸಲಾಗಿದ್ದು ಸರ್ಕಾರ ಕೂಡಲೇ ಯೋಜನೆ ಜಾರಿಗೆ ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಆಗಸ್ಟ್ ತಿಂಗಳಲ್ಲಿಯೇ ಯೋಜನೆ ಜಾರಿಗೊಳಿಸಲು ನಿರ್ಧಾರಕ್ಕೆ ಬಂದಿರುವ ವಿಷಯದ ಬಗ್ಗೆ ಮತ್ತು ಸರ್ಕಾರ ಈ ಬಗ್ಗೆ ನೀಡಿರುವ ಭರವಸೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಮತ್ತು ಇದೇ ಕಾರಣದಿಂದಾಗಿ 27ನೇ ಜುಲೈ 2024ರಂದು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಕೆಲವು ದಿನಗಳಿಗೆ ಮುಂದೂಡುವ ಬಗ್ಗೆ ಕೂಡ ತಿಳಿಸಲಾಗಿದೆ.
ಇನ್ನು ಈ ಯೋಜನೆ ಬಗ್ಗೆ ಹೇಳುವುದಾದರೆ 2021 ಜೂನ್ ತಿಂಗಳಿನಲ್ಲಿ ಮಂಡಣೆಯಾಗಿದ್ದ ಕರ್ನಾಟಕ ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ ನಲ್ಲಿ (2021 Budget) ಯೋಜನೆ ಘೋಷಿಸಲಾಗಿತ್ತು ಆದರೆ ಕೊರೋನ ಸಮಯದಲ್ಲಿ (Corona) ಕಾರ್ಯನಿರ್ವಹಿಸುತ್ತಿದ್ದ ಸರಕಾರಿ ನೌಕರರಿಗೆ ಮಾತ್ರ ತಾತ್ಕಾಲಿಕವಾಗಿ ಈ ಯೋಜನೆಯನ್ನು ನೀಡಲಾಗಿತ್ತು ಮತ್ತು ಬಳಿಕ ಇದನ್ನು ತಡೆಹಿಡಿಯಲಾಗಿತ್ತು.
ಈ ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ನೌಕರರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದರು. ಅಂತಿಮವಾಗಿ CM ಸಿದ್ದರಾಮಯ್ಯ (CM Siddaramaih) ಸರ್ಕಾರವು ಇದಕ್ಕೆ ಅಷ್ಟು ಎಂದಿದೆ. ಈ ಯೋಜನೆ ಜಾರಿಗೆ ಬರುವುದರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದವರು ಸರ್ಕಾರಿ ಹಾಗೂ ಸರ್ಕಾರದಿಂದ ಸೌಲಭ್ಯ ಪಡೆಯುವಂತಹ ಆಸ್ಪತ್ರೆಗಳಲ್ಲಿ ಶುಲ್ಕ ರಹಿತ ಚಿಕಿತ್ಸೆ ಪಡೆಯಲಿದ್ದಾರೆ.
ಮಾ’ರ’ಣಾಂ’ತಿ’ಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆಗಳು, ಮಕ್ಕಳು ಹಾಗೂ ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ, ಸುಟ್ಟ ಗಾಯ, ಯುರೋಲಜಿ, ನರಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯನ್ನು ಈ ಯೋಜನೆ ಒಳಗೊಳ್ಳುತ್ತದೆ. ತುರ್ತು ಸಂದರ್ಭಗಳಲ್ಲಿ ನೋಂದಾಯಿತವಲ್ಲದ ಆರೋಗ್ಯ ಸಂಸ್ಥೆಗಳನ್ನು ಕೂಡ ಚಿಕಿತ್ಸೆ ಪಡೆದು ನಂತರ CGHC ದರಪಟ್ಟಿ ಅನ್ವಯ ಆಯಾ ಇಲಾಖೆಗಳಿಂದ ಮಂಜೂರಾತಿ ಪಡೆಯಬಹುದು ಎನ್ನುವ ಅನುಕೂಲತೆಯನ್ನು ಕೂಡ ನೀಡಲಾಗಿದೆ.