BESCOM
ಸರ್ಕಾರಿ ಹುದ್ದೆ ಹ ಪಡೆಯಬೇಕು ಎಂದು ಜೀವನದಲ್ಲಿ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಆದರೆ ನಾವು ಹೆಚ್ಚು ವಿದ್ಯಾಭ್ಯಾಸ ಮಾಡಿಲ್ಲ ಹೀಗಾಗಿ ನಮಗೆ ಸರ್ಕಾರಿ ಕೆಲಸ ಸೇರಿ ಸೇವೆ ಮಾಡುವ ಭಾಗ್ಯ ಇಲ್ಲ ಎಂದು ಅನೇಕರು ತಪ್ಪಾಗಿ ಭಾವಿಸಿರುತ್ತಾರೆ. ಕಡಿಮೆ ವಿದ್ಯಾಭ್ಯಾಸ ಹೊಂದಿದ್ದರೂ, ಇನ್ನಿತರ ಅರ್ಹತೆಗಳ ಮತ್ತು ಕೌಶಲ್ಯಗಳ ಆಧಾರದ ಮೇಲೆ ಅನೇಕ ಸರ್ಕಾರಿ ಹುದ್ದೆಗಳು ಸಿಗುತ್ತವೆ.
ಈ ಬಾರಿಯೂ ಕೂಡ ಅಂತಹದೇ ಒಂದು ಅವಕಾಶ ಸಿಗುತ್ತಿತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM recruitment) ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿ ಘೋಷಿಸಿದೆ. ಇದರಲ್ಲಿರುವ ಪ್ರಕಾರವಾಗಿ 10ನೇ ತರಗತಿ ಉತ್ತೀರ್ಣರಾಗಿರುವವರು ಕೂಡ ಬೆಸ್ಕಾಂ ನಲ್ಲಿ ಖಾಲಿ ಇರುವ ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಅಪ್ಲೈ ಮಾಡುವುದು ಹೇಗೆ? ಅರ್ಜಿ ಶುಲ್ಕ ಪ್ರಮುಖ ದಿನಾಂಕಗಳು ಇತ್ಯಾದಿ ವಿವರ ಹೇಗಿದೆ ನೋಡಿ.
ನೇಮಕಾತಿ ಸಂಸ್ಥೆ:- ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM)
ಉದ್ಯೋಗ ಸಂಸ್ಥೆ:- ಬೆಸ್ಕಾಂ (BESCOM)
ಹುದ್ದೆ ಹೆಸರು:- ಕಿರಿಯ ಪವರ್ ಮ್ಯಾನ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 935 ಹುದ್ದೆಗಳು
ಹುದ್ದೆಗಳ ವಿವರ:-
* ಕಲ್ಯಾಣ ಕರ್ನಾಟಕೇತರ ಹುದ್ದೆಗಳ ಸಂಖ್ಯೆ (NKK) – 618 ಹುದ್ದೆಗಳು
* ಕಲ್ಯಾಣ ಕರ್ನಾಟಕೇತರ ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆ – 288 ಹುದ್ದೆಗಳು
* ಕಲ್ಯಾಣ ಕರ್ನಾಟಕ ಮೀಸಲು ಹುದ್ದೆಗಳ ಸಂಖ್ಯೆ (KK) – 22 ಹುದ್ದೆಗಳು
* ಕಲ್ಯಾಣ ಕರ್ನಾಟಕ ಮೀಸಲು ಬ್ಯಾಕ್‌ಲಾಗ್ ಹುದ್ದೆಗಳ ಸಂಖ್ಯೆ – 7 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ:-
* SSLC / CBSE / ICSE ಮಂಡಳಿಯಿಂದ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
* ಬಾಹ್ಯ ಅಥವಾ ಮುಕ್ತ ವಿವಿ, ಮುಕ್ತ ಶಾಲೆಯ 10ನೇ ತರಗತಿ ಉತ್ತೀರ್ಣತೆಯನ್ನು ಪರಿಗಣಿಸಲಾಗುವುದಿಲ್ಲ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ಇನ್ನಿತರೆ ಅರ್ಹತೆಗಳು:-
* ಕನ್ನಡ ಭಾಷೆ ಓದುವ ಹಾಗೂ ಬರೆಯುವ ಜ್ಞಾನ ಹೊಂದಿರಬೇಕು
* ತೃಪ್ತಿಕರ ನೇತ್ರದೃಷ್ಟಿಯನ್ನು ಹೊಂದಿರಬೇಕು
* ತೃಪ್ತಿಕರ ದೇಹದಾರ್ಡ್ಯತೆ ಹೊಂದಿರಬೇಕು
ವಯೋಮಿತಿ ಸಡಿಲಿಕೆ:
* OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷಗಳು
* SC/ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* https://bescom.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿ ಮಾಡಿ ಅರ್ಜಿ ಪ್ರಕೃತಿ ಪ್ರತಿ ತಪ್ಪದೆ ಪಡೆದುಕೊಳ್ಳಿ
ಅರ್ಜಿ ಶುಲ್ಕ:-
* ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ರೂ.614.
* ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – ರೂ.614
* ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ – ರೂ.378.
* ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ವಿಧಾನ:-
* 8 ಮೀಟರ್ ಎತ್ತರದ ವಿದ್ಯುತ್ ಕಂಬ ಹತ್ತುವುದು
(ಕಡ್ಡಾಯ)
* 14 ಸೆಕೆಂಡ್‌ಗಳು 100 ಮೀಟರ್ ಓಟ
* ಸ್ಕಿಪ್ಪಿಂಗ್ : ಒಂದು ನಿಮಿಷಕ್ಕೆ 50 ಬಾರಿ
* ಶಾಟ್‌ಫುಟ್ (12 ಪೌಂಡ್‌ಗಳು) 8 ಮೀಟರ್ ಎಸೆತ (3 ಅವಕಾಶಗಳು)
* 800 ಮೀಟರ್ ಓಟ (3 ನಿಮಿಷಗಳು)
* ಈ ಮೇಲೆ ತಿಳಿಸಿದ ಪರೀಕ್ಷೆಗಳಲ್ಲಿ ಯಾವುದಾದರೂ ಮೂರು ಸಹನಾ ಶಕ್ತಿ ಪರೀಕ್ಷೆ ಉತ್ತೀರ್ಣರಾಗಬೇಕು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21.10.2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20.11.2024