ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಬಿಗ್ ಅಪ್ಡೇಟ್, ಈ ಕೆಲಸ ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗುತ್ತೆ.!

ರೇಷನ್ ಕಾರ್ಡ್ (Ration Card) ಸದ್ಯಕ್ಕೆ ದೇಶದಲ್ಲಿ ಆಧಾರ್ ಕಾರ್ಡ್ ನಷ್ಟೇ (Aadhar Card) ಮುಖ್ಯವಾದ ಒಂದು ದಾಖಲೆಯಾಗಿದೆ. ರೇಷನ್ ಕಾರ್ಡ್ ನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವು ವಿತರಣೆ ಮಾಡುತ್ತದೆ. ಆಹಾರ ಇಲಾಖೆಯು ಕುಟುಂಬದ ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ಕಾರ್ಡ್ ವಿತರಿಸುತ್ತದೆ ಎಂದೇ ಹೇಳಬಹುದು.

ಯಾಕೆಂದರೆ ನಮ್ಮ ದೇಶದಲ್ಲಿ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ಮತ್ತು AAY ಕಾರ್ಡ್ ವಿತರಿಸಿ ಸೂಕ್ತ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ. ರೇಷನ್ ಕಾರ್ಡ್ ಮೂಲಕ ಉಚಿತ ಪಡಿತರ, ಕಡಿಮೆ ದರದಲ್ಲಿ ಪಡಿತರ, ವೈದ್ಯಕೀಯ ಹಾಗೂ ಶೈಕ್ಷಣಿಕ ಶುಲ್ಕಗಳಲ್ಲಿ ರಿಯಾಯಿತಿ ಹಾಗೂ ಸರ್ಕಾರದ ಅನೇಕ ಸಬ್ಸಿಡಿಗಳು ಮತ್ತು ಸರ್ಕಾರದ ಇನ್ನಿತರ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು.

WhatsApp Group Join Now
Telegram Group Join Now

ಇಷ್ಟೆಲ್ಲಾ ಅನುಕೂಲತೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸಿಗುತ್ತದೆ ಎನ್ನುವುದು ತಿಳಿದಾಗ ಸಹಜವಾಗಿ ಉಳ್ಳವರು ಕೂಡ ಸತ್ಯಾಂಶ ಮರೆಮಾಚಿ BPL ಕಾರ್ಡ್ ಪಡೆದಿರುತ್ತಾರೆ. ಪ್ರತಿವರ್ಷವು ಆಹಾರ ಇಲಾಖೆಯಿಂದ ಇವುಗಳನ್ನು ಗುರುತಿಸಿ ರದ್ದು ಪಡಿಸುವ ಕಾರ್ಯ ನಡೆಯುತ್ತಾ ಇರುತ್ತದೆ.

ಆದರೆ ಈ ಕಾರ್ಯವು ಇಲಾಖೆಗೂ ತಲೆಬಿಸಿ ಮತ್ತು ಅನರ್ಹರು ಈ ರೀತಿ ಅನುಕೂಲತೆಗಳನ್ನು ಪಡೆದಾಗ ಅಸಲಿ ಫಲಾನುಭವಿಗಳಿಗೆ ವಂಚನೆಯೂ ಆಗುತ್ತದೆ. ಇದಕ್ಕೆಲ್ಲ ಪರ್ಮನೆಂಟ್ ಸೊಲ್ಯೂಷನ್ ಹುಡುಕುವ ಕಾರಣದಿಂದ ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇತ್ಯಾದಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ರೇಷನ್ ಕಾರ್ಡ್ ಗೂ ಅಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಇದರ ಮೂಲಕ ಒಂದಕ್ಕಿಂತ ಹೆಚ್ಚು ಕಾರ್ಡುಗಳಲ್ಲಿ ಸದಸ್ಯತ್ವ ಪಡೆದಿರುವವರು ಅಥವಾ ಕುಟುಂಬವು ಒಂದಕ್ಕಿಂತ ಹೆಚ್ಚು ಕಾರ್ಡ್ ಗಳನ್ನು ಪಡೆದಿದ್ದರೆ ಅಥವಾ ಸರ್ಕಾರಿ ಉದ್ಯೋಗಿಗಳು ಆದಾಯ ತೆರಿಗೆ ಪಾವತಿಸುವ ಕುಟುಂಬದ ಸದಸ್ಯರುಗಳು BPL ರೇಷನ್ ಕಾರ್ಡ್ ಗಳನ್ನು ಪಡೆದಿದ್ದರೆ ನಿಖರ ಮಾಹಿತಿ ತಿಳಿಯುತ್ತದೆ. ಇದಲ್ಲದೆ ಸದಸ್ಯನೊಬ್ಬನ ಗುರುತಿಸುವಿಕೆ ಆಧಾರ್ ಕಾರ್ಡ್ ಗಳಿಗೆ ರೇಷನ್ ಕಾರ್ಡ್ ಲಿಂಕ್ ಮಾಡಿದಾಗ ಸರಿಯಾಗಿ ತಿಳಿಯುತ್ತದೆ.

ಸರಕಾರದ ಯೋಜನೆಗಳನ್ನು ಒಂದೇ ಕುಟುಂಬವು ಪದೇ ಪದೇ ಪಡೆಯುವುದು ತಪ್ಪುತ್ತದೆ. ಹೀಗಾಗಿ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿ, ಜೂನ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಮಾಹಿತಿ ಕೊರತೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣ ಅನೇಕರಿಗೆ ಇನ್ನು ತಮ್ಮ ರೇಷನ್ ಕಾರ್ಡ್ ಗಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಆಗಿಲ್ಲ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸದ್ಯಕ್ಕೆ ರಾಜ್ಯದಲ್ಲಿ ರಾಜ್ಯ ಸರ್ಕಾರ ನೀಡಿರುವ ಕೊಡುಗೆಯಾದ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಬೇಕು ಎಂದರು ಕೂಡ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕಿರುವುದು ಮುಖ್ಯವಾಗುತ್ತದೆ. ಹಾಗಾಗಿ ಇನ್ನು ಯಾರೆಲ್ಲಾ ರೇಷನ್ ಕಾರ್ಡಿಗೆ ಆಧಾರ್ ಲಿಂಕ್ ಮಾಡಿಲ್ಲ ಕೂಡಲೇ ಆಧಾರ್‌ ಲಿಂಕ್ ಮಾಡಿಸಿ.

ಈ ವಿಚಾರ ಬಗ್ಗೆ ಒಂದು ಬಿಗ್ ಅಪ್ ಡೇಟ್ ಇದೆ. ಅದೇನೆಂದರೆ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ ಈ ವಿಚಾರವಾಗಿ ನೀಡಿದ್ದ ಕಾಲಾವಕಾಶವನ್ನು ಇನ್ನಷ್ಟು ವಿಸ್ತರಿಸಿ ಹೆಚ್ಚಿನ ಅನುಕೂಲತೆ ಮಾಡಿಕೊಟ್ಟಿದೆ. ಜೂನ್ 30ರ ಬದಲಾಗಿ ಸೆಪ್ಟೆಂಬರ್ 30 ರವರೆಗೂ ಸಮಯ ವಿಸ್ತರಿಸಲಾಗಿದೆ. ಎಲ್ಲ ರೇಷನ್ ಕಾರ್ಡ್ ಬಳಕೆದಾರರು ಕಡ್ಡಾಯವಾಗಿ ಈ ದಿನಾಂಕದೊಳಗೆ ಪ್ರಕ್ರಿಯೆ ಪೂರ್ತಿಗೊಳಿಸಬೇಕು ಇಲ್ಲವಾದಲ್ಲಿ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ. ಆದ್ದರಿಂದ ತಡ ಮಾಡದೆ ಸರ್ಕಾರದ ಈ ನಿಯಮದಂತೆ ರೇಷನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ (Ration card – Aadhar link) ಮಾಡಿಸಿ.

ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವ ವಿಧಾನ:-

* ಮೊದಲಿಗೆ ನಮ್ಮ ನಿಮ್ಮ ರಾಜ್ಯದ ಅಧಿಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್ ಗೆ ಭೇಟಿ ನೀಡಬೇಕು.
* ಸಕ್ರಿಯ ಕಾರ್ಡ್ ನೊಂದಿಗೆ ಆಧಾರ್ ಲಿಂಕ್ ಎನ್ನುವ ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
* ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಸಬ್ಮಿಟ್ ಕೊಡಿ.
* ಆಧಾರ್ ನಲ್ಲಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ
* ಆಧಾರ್ ಪಡಿತರ ಲಿಂಕ್ ಪುಟದಲ್ಲಿ OTPಯನ್ನು ನಮೂದಿಸಿ.
* ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಗ್ರಾಮ ಒನ್ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೂಡ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment