Canara Bank
ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ( Canara Bank) ದೇಶದಾದ್ಯಂತ 9,000 ಕ್ಕಿಂತ ಹೆಚ್ಚು ಬ್ರಾಂಚ್ ಗಳನ್ನು ಹೊಂದಿದೆ. ಹೀಗಾಗಿ ಪ್ರತಿ ವರ್ಷ ಈ ಬ್ಯಾಂಕ್ ವತಿಯಿಂದ ಸಾವಿರಾರು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುತ್ತದೆ.
ಅಂತೆಯೇ 2024-25 ನೇ ಸಾಲಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬಯಸುವ ಈ ಕಾರಣಕ್ಕಾಗಿ ಹಣಕಾಸು ಸೇವೆ ಹಾಗೂ ಗ್ರಾಹಕರ ನಿರ್ವಹಣೆ ಇನ್ನಿತರ ಕೌಶಲ್ಯಗಳನ್ನು ಕಲಿತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಬೃಹತ್ ಅವಕಾಶ ಸಿಗುತ್ತಿದೆ.
ಅದೇನೆಂದರೆ, ಬರೋಬ್ಬರಿ 3000ಕ್ಕೂ ಹೆಚ್ಚು ಹುದ್ದೆಗಳಿಗೆ ಕೆನರಾ ಬ್ಯಾಂಕ್ ನೇಮಕಾತಿ ಮಾಡಿಕೊಳ್ಳುತ್ತಿದೆ. ಯಾರೆಲ್ಲಾ ಇದಕ್ಕೆ ಅರ್ಜಿ ಹಾಕಬಹುದು? ಅರ್ಜಿ ಸಲ್ಲಿಸುವುದು ಹೇಗೆ? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಈ ಬಗ್ಗೆ ಅಧಿಸೂಚನೆಯಲ್ಲಿರುವುದೇನು? ಇತ್ಯಾದಿ ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಈ ಸುದ್ದಿ ಓದಿ:- Subadra Yojana: ಸುಭದ್ರ ಯೋಜನೆ ಎಲ್ಲಾ ಮಹಿಳೆಯರಿಗೆ ಸರ್ಕಾರದಿಂದ 10,000 ಸಿಗಲಿದೆ.!
ನೇಮಕಾತಿ ಸಂಸ್ಥೆ & ಉದ್ಯೋಗ ಸಂಸ್ಥೆ:- ಕೆನರಾ ಬ್ಯಾಂಕ್
ಹುದ್ದೆ ಹೆಸರು:- ಅಪ್ರೆಂಟಿ ಶಿಪ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 3000
ಉದ್ಯೋಗ ಸ್ಥಳ:- ಭಾರತದಾದ್ಯಂತ ಕೆನರಾ ಬ್ಯಾಂಕ್ ವಿವಿಧ ಬ್ರಾಂಚ್ ಗಳಲ್ಲಿ
ವೇತನ ಶ್ರೇಣಿ:- ಉತ್ತಮ ಕೆಲಸದ ವಾತಾವರಣ, ತರಬೇತಿಯೊಂದಿಗೆ ಶಿಷ್ಯವೇತನ ಕೂಡ ಸಿಗುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಪೂರ್ತಿ ಗೊಳಿಸಬೇಕು.
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ – 20 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ – 28 ವರ್ಷಗಳು
* ಸರ್ಕಾರದ ನಿಯಮದ ಪ್ರಕಾರವಾಗಿ ಸೂಚಿಸಲಾಗುವ ವರ್ಗಗಳಿಗೆ ವಯೋಮಿತಿ ಸಡಲಿಕೆ ಕೂಡ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಮೊದಲಿಗೆ https://nats.education.gov.in/ ನಲ್ಲಿ ನೋಂದಣಿ ಆಗಿರಬೇಕು, ಈ ಪೋರ್ಟಲ್ ನಲ್ಲಿ ಪ್ರೊಫೈಲ್ ಹೊಂದಿರುವ ಅಭ್ಯರ್ಥಿಗಳಿಗಷ್ಟೇ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಸುದ್ದಿ ಓದಿ:- UPI Payment: ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್.!
* ನಂತರ ಈ ಅಭ್ಯರ್ಥಿಗಳು https://canarabank.com/pages/Recruitment ಈ ವೆಬ್ ಸೈಟ್ ಗೆ ಹೋಗಿ ಕೆನರಾ ಬ್ಯಾಂಕ್ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿ ಸಲ್ಲಿಸುವ ವಿಭಾಗಕ್ಕೆ ತೆರಳಿ ಕೇಳಲಾಗಿರುವ ಮಾಹಿತಿಯನ್ನು ಸೂಚನೆ ಪ್ರಕಾರವಾಗಿ ಸರಿಯಾಗಿ ನಮೂದಿಸಿ, ನಂತರ ನಿಮ್ಮ ವರ್ಗಕ್ಕೆ ಅನುಗುಣವಾದ ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಹಾಗೂ ಇ-ರಶೀದಿ ಪಡೆದುಕೊಳ್ಳಿ.
ಆಯ್ಕೆ ವಿಧಾನ:-
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು PUC ಅಥವಾ ಡಿಪ್ಲೋಮಾ ಮತ್ತು ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ ಆಯ್ದುಕೊಳ್ಳಲಾಗುವುದು, ರಾಜ್ಯವಾರು ಪಟ್ಟಿ ಬಿಡುಗಡೆ ಆಗುತ್ತದೆ.
* ನಂತರ ದಾಖಲೆಗಳ ಪರಿಶೀಲನೆ ಹಾಗೂ ನೇರ ಸಂದರ್ಶನ ಮತ್ತು ಭಾಷಾ ಪರೀಕ್ಷೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:-
* SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ
* ಉಳಿದ ಅಭ್ಯರ್ಥಿಗಳಿಗೆ ರೂ.500
* ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / UPI ಆಧಾರಿತ ಆಪ್/ IMPS ಯಾವುದೇ ವಿಧಾನದಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಬಹುದು
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21-09-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 04-10-2024